Anger Management: ಸಣ್ಣ ಸಣ್ಣ ಮಾತಿಗೂ ಕೋಪ ಮಾಡಿಕೊಳ್ಳುತ್ತಿದ್ದೀರಾ? ಶಾಂತವಾಗಿರಲು ಈ ವಿಧಾನಗಳನ್ನು ಅನುಸರಿಸಿ

TV9 Digital Desk

| Edited By: shruti hegde

Updated on: Sep 09, 2021 | 9:45 AM

ಒತ್ತಡವು ಮಿತಿ ಮೀರಿದಾಗ, ಅದು ಖಿನ್ನತೆಗೆ ಬದಲಾಗುತ್ತದೆ. ಖಿನ್ನತೆಯಿಂದಾಗಿ, ವ್ಯಕ್ತಿಯು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. 

Anger Management: ಸಣ್ಣ ಸಣ್ಣ ಮಾತಿಗೂ ಕೋಪ ಮಾಡಿಕೊಳ್ಳುತ್ತಿದ್ದೀರಾ? ಶಾಂತವಾಗಿರಲು ಈ ವಿಧಾನಗಳನ್ನು ಅನುಸರಿಸಿ
ಸಾಂಕೇತಿಕ ಚಿತ್ರ

ಒಂದು ಕಾಲದಲ್ಲಿ  ಎಲ್ಲರೂ ಒಟ್ಟಾಗಿ ಗಂಟೆಗಳ ಕಾಲ ಕೂತು ಮಾತನಾಡಿ ತಮ್ಮ ಸುಖ ದುಖಃಗಳನ್ನು ಹಂಚಿಕೊಳ್ಳುತ್ತಿದ್ದರು. ತಮ್ಮೊಳಗಿನ ನೋವು ಆ ಮೂಲಕ ಹೊರಹಾಕುತ್ತಿದ್ದರು. ಆದರೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಎಲ್ಲವೂ ಬದಲಾಗಿದೆ. ಅವಿಭಕ್ತ ಕುಟುಂಬಗಳು ಛಿದ್ರವಾಗಿವೆ. ಸಂಬಂಧಗಳು ಮೊಬೈಲ್ ಫೋನ್‌ಗಳಿಗೆ ಸೀಮಿತವಾಗಿವೆ. ಆಫೀಸ್​, ವ್ಯವಹಾರಗಳು, ಕುಟುಂಬದೊಂದಿಗೆ ಸ್ವಲ್ಪ ಸಮಯವನ್ನು ಕಳೆಯಲು ಬಿಡದಂತೆ ಆಗಿದೆ. ಹೀಗಾಗಿಯೇ ಪರಸ್ಪರ ಒಡನಾಟ ಕಡಿಮೆ. ಇದು ನಿಧಾನವಾಗಿ ಸಿಟ್ಟು, ಒತ್ತಡ, ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. 

ಒತ್ತಡವು ಮಿತಿ ಮೀರಿದಾಗ, ಅದು ಖಿನ್ನತೆಗೆ ಬದಲಾಗುತ್ತದೆ. ಖಿನ್ನತೆಯಿಂದಾಗಿ, ವ್ಯಕ್ತಿಯು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.  ಇದು ಸನ್ನಿವೇಶಗಳನ್ನು ಹದಗೆಡಿಸುತ್ತದೆ. ಅಲ್ಲದೆ ಮನಸ್ಸಿನಲ್ಲಿ ಕೋಪವನ್ನು ಉಂಟು ಮಾಡುತ್ತದೆ. ಹೀಗಾಗಿ ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಈ ನಾಲ್ಕು ಮಾರ್ಗಗಳನ್ನು ಅನುಸರಿಸಲು ವೈದ್ಯರು ಶಿಫಾರಸ್ಸು ಮಾಡಿದ್ದಾರೆ.

ವಿಶ್ರಾಂತಿ ಪಡೆಯಿರಿ  ದಿನವಿಡೀ ಸಮಯ ಸಿಕ್ಕಾಗ, ನೀವು ಸ್ವಲ್ಪ ಹೊತ್ತು ಕುಳಿತು ಡೈರಿ ಬರೆಯಿರಿ. ನಿಮ್ಮ ಮನಸ್ಸಿನಲ್ಲಿರುವ ಪ್ರತಿಯೊಂದು ಒಳ್ಳೆಯ ಮತ್ತು ಕೆಟ್ಟ ವಿಷಯದ ದಿನಚರಿಯನ್ನು ಇದರಲ್ಲಿ ಸೇರಿಸಿ.  ನಿಮಗೆ ತೊಂದರೆ ಕೊಡುವ ವಿಷಯಗಳ ಬಗ್ಗೆ ತಪ್ಪದೆ ಬರೆಯಿರಿ. ನಿಮ್ಮ ಭಾವನೆಗಳನ್ನು ಹೊರಹಾಕುವ ಮೂಲಕ, ಮನಸ್ಸನ್ನು ನಿರಾಳವಾಗಿಸಿ. ಇದು ಕೋಪವನ್ನು ನಿವಾರಿಸುತ್ತದೆ. ಅಲ್ಲದೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ಇಂಪಾದ ಹಾಡು ಕೇಳಿ ಒತ್ತಡವನ್ನು ಕಡಿಮೆ ಮಾಡಲು ಸಂಗೀತ ಅತ್ಯುತ್ತಮ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ದಿನನಿತ್ಯ ಮನಸ್ಸಿಗೆ ಖುಷಿ ನೀಡುವ ಒಂದಷ್ಟು ಹಾಡುಗಳನ್ನು ಕೇಳಿ. ಇನ್ನು ಸಮಯ ಸಿಕ್ಕರೆ  ನೃತ್ಯ ತರಗತಿಗೆ ಸೇರಿಕೊಳ್ಳಿ. ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ನೃತ್ಯವು ಕೆಲಸ ಮಾಡುತ್ತದೆ. ಸಂಗೀತ, ಗಿಟಾರ್, ಯಾವುದೇ ಇತರ ವಾದ್ಯಗಳನ್ನು ಕಲಿಯಲು ಪ್ರಯತ್ನಿಸಿ. ಸಮಯ ಕಡಿಮೆಯಿದ್ದರೆ ವಾರಕ್ಕೊಮ್ಮೆ ಸಂಗೀತ ಅಭ್ಯಾಸ ತೆಗೆದುಕೊಂಡು ಮನೆಗೆ ಬಂದು ಪ್ರತಿದಿನ ಅಭ್ಯಾಸ ಮಾಡಿ. ಇದರೊಂದಿಗೆ, ಅನಗತ್ಯ ವಿಷಯಗಳು ನಿಮ್ಮ ಮನಸ್ಸಿಗೆ ಬರುವುದಿಲ್ಲ. ನಿಮ್ಮ ಮನಸ್ಸು ಶಾಂತವಾಗಿರುತ್ತದೆ.

ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಮಾತನಾಡಿ ಒತ್ತಡವನ್ನು ತಗ್ಗಿಸುವಲ್ಲಿ ಇದು ಬಹಳ ಮುಖ್ಯ. ಅತ್ಯಂತ ಪರಿಣಾಮಕಾರಿ ಮಾರ್ಗ. ಏನಾದರೂ ನಿಮಗೆ ನೋವುಂಟು ಮಾಡಿದಾಗ, ನಿಮ್ಮ ಸಮಸ್ಯೆಯನ್ನು ನೀವು ನಂಬುವ ಯಾರಿಗಾದರೂ ಹೇಳಿ. ಅವರಿಂದ ಸಲಹೆ ಪಡೆಯಿರಿ. ಅವರ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ಇದರಿಂದ ನಿಮ್ಮ ಮಾನಸಿಕ ಸ್ಥಿತಿ ಸುಧಾರಿಸುತ್ತದೆ.

ಧ್ಯಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಧ್ಯಾನವು ನಮ್ಮಲ್ಲಿರುವ ಒತ್ತಡವನ್ನು ನಿವಾರಿಸುತ್ತದೆ. ಬೆಳಿಗ್ಗೆ ಎದ್ದ ನಂತರ ನಿಮಗೆ ಧ್ಯಾನ ಮಾಡಲು ಸಾಧ್ಯವಾಗದಿದ್ದರೆ, ಸಂಜೆ ಅಥವಾ ರಾತ್ರಿಯಲ್ಲಿ ಸ್ವಲ್ಪ ಹೊತ್ತು ಧ್ಯಾನ ಮಾಡಿ. ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ಸ್ಥಿರವಾಗಿರುತ್ತದೆ. ಮನಸ್ಸಿನ ಶಾಂತಿಯನ್ನು ಪಡೆಯುತ್ತದೆ. ಎಲ್ಲಾ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಮಾಡಲು ಇದು ಸಹಕಾರ ನೀಡುತ್ತದೆ.

ಇದನ್ನೂ ಓದಿ: Digestive System: ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಈ 5 ವಿಧಾನಗಳನ್ನು ಅನುಸರಿಸಿ

Health Benefits: ಕಿಡ್ನಿ ಸಮಸ್ಯೆ ಉಂಟಾದ ಮೇಲೆ ಪರಿಹಾರ ಹುಡುಕುವ ಬದಲು, ಪ್ರತಿದಿನ ಡಿಟಾಕ್ಸ್​ ಮಾಡಿ ಕುಡಿಯಿರಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada