ನೀವು ಆತ್ಮೀಯರಿಗೆ ಸಾಲ ಕೊಟ್ಟ ಹಣವನ್ನು ವಾಪಸ್‌ ಪಡೆಯಲು ಈ ಸಲಹೆ ಪಾಲಿಸಿ

ಅನೇಕ ಬಾರಿ ಕಷ್ಟದಲ್ಲಿರುವ ಸ್ನೇಹಿತರು, ಬಂಧುಗಳಿಗೆ ಸಾಲದ ರೂಪದಲ್ಲಿ ಹಣವನ್ನು ನೀಡುವ ಮೂಲಕ ನಮ್ಮ ಕೈಲಾದಷ್ಟು ಆರ್ಥಿಕ ನೆರವನ್ನು ನೀಡುತ್ತೇವೆ. ಕೆಲವೊಂದು ಬಾರಿ ಸ್ನೇಹಿತರು ನಾವು ಸಾಲದ ರೂಪದಲ್ಲಿ ಕೊಟ್ಟ ಹಣವನ್ನು ಮರಳಿ ಕೊಡುವುದಿಲ್ಲ. ಇಂತಹ ಸಂದರ್ಭದಲ್ಲಿ ಅನೇಕರು ಹಣವನ್ನು ವಾಪಸ್‌ ಕೇಳಲು ಹಿಂಜರಿಯುತ್ತಾರೆ. ಹೀಗಿರುವಾಗ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಸಂಬಂಧ ಹಾಳಾಗದ ರೀತಿಯಲ್ಲಿ ನಿಮ್ಮ ಹಣವನ್ನು ವಾಪಸ್‌ ಪಡೆಯಿರಿ.

ನೀವು ಆತ್ಮೀಯರಿಗೆ ಸಾಲ ಕೊಟ್ಟ ಹಣವನ್ನು ವಾಪಸ್‌ ಪಡೆಯಲು ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Apr 23, 2026 | 8:01 PM

ಕೆಲವೊಂದು ಬಾರಿ ನಾವು ಆರ್ಥಿಕ ಸಂಕಷ್ಟದಲ್ಲಿರುವ ಸಂಬಂಧಿಕರು, ಸ್ನೇಹಿತರಿಗೆ ಸಾಲದ ರೂಪದಲ್ಲಿ ಹಣವನ್ನು (money) ನೀಡುತ್ತೇವೆ. ಆರ್ಥಿಕ ಸಹಾಯ ಮಾಡುತ್ತೇವೆ. ಆದರೆ ಕೆಲವೊಂದು ಬಾರಿ  ಸಾಲ ತೆಗೆದುಕೊಂಡ ಸ್ನೇಹಿತರು ನಾವು ನೀಡಿದಂತಹ ಹಣವನ್ನು ಮರಳಿ ಕೊಡಲು ಮರೆತುಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಹಲವರು ಸಂಬಂಧ ಎಲ್ಲಿ ಹಾಳಾಗಿಬಿಡುತ್ತದೋ ಎಂಬ ಕಾರಣಕ್ಕೆ ತಮ್ಮ ಹಣವನ್ನು ಮರಳಿ ಕೊಡಿ ಎಂದು ಕೇಳಲು ಹಿಂಜರಿಯುತ್ತಾರೆ. ನೀವು ಕೂಡ ಇದೇ ರೀತಿ ಸಾಲ ಕೊಟ್ಟ ಹಣವನ್ನು ವಾಪಸ್‌ ಕೇಳಲು ಹಿಂಜರಿಯುತ್ತಿದ್ದೀರಾ ಅಥವಾ ಸಾಲ ಕೊಟ್ಟ ಹಣವನ್ನು ಮರಳಿ ಕೇಳುವುದು ಹೇಗೆ ಎಂಬುದು ತಿಳಿದಿಲ್ವಾ? ಹಾಗಿದ್ರೆ ಈ ಸಿಂಪಲ್‌ ಟ್ರಿಕ್ಸ್‌ ಪಾಲಿಸುವ ಮೂಲಕ ಸುಲಭವಾಗಿ ನಿಮ್ಮ ಹಣವನ್ನು ಮರಳಿ ಪಡೆಯಿರಿ.

ನೀವು ಸಾಲ ಕೊಟ್ಟ ಹಣವನ್ನು  ಆತ್ಮೀಯರಿಂದ ಮರಳಿ ಪಡೆಯುವುದು ಹೇಗೆ?

ನಿಮ್ಮ ಕಷ್ಟಗಳ ಬಗ್ಗೆ ಒತ್ತಿ ಹೇಳಿ: ನೀವು ಸ್ನೇಹಿತರಿಂದ ಹಣವನ್ನು ಮರಳಿ ಪಡೆಯಲು ನಿಮ್ಮ ಅಗತ್ಯಗಳನ್ನು ಬಹಿರಂಗವಾಗಿ ವಿವರಿಸಿ. ನೀವು ಕಷ್ಟದಲ್ಲಿದ್ದೀರಿ ಆದ ಕಾರಣ ತುರ್ತಾಗಿ ಹಣದ ಅವಶ್ಯಕತೆಯಿದೆ ಎಂದು ಅವರಿಗೆ ತಿಳಿಸಿ. ಹಣದ ವಹಿವಾಟಿನ ಬಗ್ಗೆ ನಿಮ್ಮ ಸ್ನೇಹಿತನೊಂದಿಗೆ ಫೋನ್ ಮೂಲಕ ಅಲ್ಲ, ಮುಖಾಮುಖಿಯಾಗಿ ಚರ್ಚಿಸಿ. ಈ ಟ್ರಕ್ಸ್‌ ನಿಮ್ಮ ಸ್ನೇಹಿತ ನಿಮ್ಮ ಹಣವನ್ನು ವಾಪಸ್‌ ನೀಡುವಂತೆ ಮಾಡುತ್ತದೆ.

ಪ್ರಾಮಾಣಿಕತೆಯಿಂದ ಹಣವನ್ನು ಕೇಳಿ: ಯಾವುದೇ ಕಾರಣಕ್ಕೂ ಕೊಟ್ಟ ಹಣವನ್ನು ವಾಪಸ್‌ ಕೇಳಲು ಹಿಂಜರಿಯಬೇಡಿ, ಪ್ರಾಮಾಣಿಕವಾಗಿ ನನಗೆ ಹಣದ ಅವಶ್ಯಕತೆಯಿದೆ, ದಯವಿಟ್ಟು ಹಣವನ್ನು ಮರಳಿ ಕೊಡಿ ಎಂದು ಕೇಳಿ. ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿವರಿಸಿ. ಈ ಮೂಲಕ ಸಂಬಂಧ ಹಾಳಾಗದ ರೀತಿಯಲ್ಲಿ ನಿಮ್ಮ ಹಣವನ್ನು ನೀವು ವಾಪಸ್‌ ಪಡೆಯಬಹುದು.

ಕಂತುಗಳನ್ನು ಹೊಂದಿಸಿ: ನೀವು ಸ್ನೇಹಿತರಿಗೆ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡಿದರೆ, ಮತ್ತು ನಿಮ್ಮ ಸ್ನೇಹಿತರಿಗೆ ಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಲು ಸಾಧ್ಯವಾಗದಿದ್ದರೆ, ನೀವು ಸಾಲವನ್ನು ಮರುಪಾವತಿಸಲು ಕಂತುಗಳನ್ನು ಹೊಂದಿಸಬಹುದು. ತಿಂಗಳು ತಿಂಗಳು ಇಎಮ್‌ಐ ರೂಪದಲ್ಲಿ ಸಾಲದ ಮೊತ್ತವನ್ನು ಪಾವತಿಸುವಂತೆ ಮಾಡಬಹುದು. ಇದು ಸಂಬಂಧವನ್ನು ಹಾಳಾಗದಂತೆಯೂ ನೋಡಿಕೊಳ್ಳುತ್ತದೆ ಮತ್ತು ನಿಮ್ಮ ಸ್ನೇಹಿತರಿಗೆ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲು ಸಹಕಾರಿಯಾಗಿದೆ.

ಇದನ್ನೂ ಓದಿ: ಚಿಂತೆಯೆಲ್ಲಾ ಬಿಟ್ಟು ಸಂತೋಷದಿಂದ ಜೀವನ ನಡೆಸಲು ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು

ಕುಟುಂಬ ಅಥವಾ ಇತರ ಸ್ನೇಹಿತರಿಂದ ಸಹಾಯ ಪಡೆಯಿರಿ: ನಿಮ್ಮ ಸ್ನೇಹಿತ ನಿಮ್ಮ ಹಣವನ್ನು ವಾಪಸ್‌ ನೀಡಲು ಒಲ್ಲೆ ಎನ್ನುತ್ತಿದ್ದರೆ, ಹಣವನ್ನು ಎರವಲು ಪಡೆದ ಸ್ನೇಹಿತನ ಕುಟುಂಬದೊಂದಿಗೆ ಮಾತನಾಡಿ, ಅಥವಾ ನಿಮ್ಮ ಫ್ರೆಂಡ್ಸ್‌, ಕುಟುಂಬದ ಮೂಲಕ ನಿಮ್ಮ ಸ್ನೇಹಿತನ ಮನವೊಲಿಸಲು ಪ್ರಯತ್ನಿಸಿ. ಈ ಮೂಲಕವೂ ಹಣವನ್ನು ವಾಪಸ್‌ ಕೇಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us