AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಂತೆಯೆಲ್ಲಾ ಬಿಟ್ಟು ಸಂತೋಷದಿಂದ ಜೀವನ ನಡೆಸಲು ಈ ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು

ಇಂದಿನ ಈ ಒತ್ತಡದ ಜೀವನಶೈಲಿಯಲ್ಲಿ ಸಂತೋಷವನ್ನು ಕಂಡುಕೊಳ್ಳುವುದೇ ಹೆಚ್ಚಿನವರಿಗೆ ಸವಾಲಿನ ಸಂಗತಿಯಾಗಿದೆ. ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲ ಎಂದು ಬಹುತೇಕರು ಪ್ರತಿನಿತ್ಯ ಚಿಂತೆ ಮಾಡುತ್ತಾ ಕುಳಿತುಬಿಡುತ್ತಾರೆ. ಹೀಗೆ ಚಿಂತಿಸಿದರೆ ಫಲವಿಲ್ಲ, ಬದಲಿಗೆ ಜೀವನದಲ್ಲಿ ಕೆಲವು ಸರಳ ವಿಷಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂತೋಷದ ಜೀವನವನ್ನು ನಡೆಸಬಹುದು.

ಚಿಂತೆಯೆಲ್ಲಾ ಬಿಟ್ಟು ಸಂತೋಷದಿಂದ ಜೀವನ ನಡೆಸಲು ಈ ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Apr 23, 2026 | 4:42 PM

Share

ಹಣವಿದ್ದರೆ ಸಂತೋಷದಿಂದ ಜೀವನ (happy life) ಸಾಗಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ವಾಸ್ತವ ಏನೆಂದರೆ ಹಣವೊಂದರಿಂದಲೇ ಸಂತೋಷದಿಂದಿರಲು ಸಾಧ್ಯವಿಲ್ಲ, ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಬದಲಿಗೆ ನಮ್ಮಲ್ಲೇ ನಾವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಸಂತೋಷವನ್ನು ಕಂಡುಕೊಳ್ಳಬಹುದು. ಇಂದಿನ ಈ ಬ್ಯುಸಿ ಜೀವನದಲ್ಲಿ ಹೆಚ್ಚಿನವರು ಚಿಂತೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಈ ಚಿಂತೆಯಿಂದ ನೆಮ್ಮದಿ ಹಾಳಾಗುವುದಂತೂ ಖಂಡಿತ. ಹಾಗಾಗಿ ಈ ಕೆಲವೊಂದು ಸರಳ ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂತೋಷದ ಜೀವನವನ್ನು ನಡೆಸಿ.

ಸಂತೋಷವಾಗಿರಲು ಏನು ಮಾಡಬೇಕು?

ಅನುಪಯುಕ್ತ ವಾದಗಳಿಂದ ದೂರವಿರಲು ಕಲಿಯಿರಿ: ಸಂತೋಷವಾಗಿರಲು, ಅರ್ಥಹೀನ ವಾದಗಳಿಂದ ದೂರವಿರಿ. ಈ ಅರ್ಥಹೀನ ವಾದಗಳು  ಸಮಯ ವ್ಯರ್ಥ ಮಾಡುತ್ತದೆ ಮತ್ತು ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತದೆ. ವಾದಿಸುವ ಬದಲು ಯಾವಾಗಲೂ ಅರ್ಥಪೂರ್ಣ ಚರ್ಚೆಗಳಿಗೆ ಆದ್ಯತೆ ನೀಡಿ. ಈ ರೀತಿಯ ಮನೋಭಾವ ಸಂತೋಷದಿಂದ ಜೀವನ ನಡೆಸಲು ಸಹಕಾರಿ.

ನೀವು ಹೇಗಿದ್ದೀರೋ ಹಾಗೆಯೇ ಇರಿ:  ಇತರರನ್ನು ಮೆಚ್ಚಿಸಲು ಬದುಕುವ ಅವಶ್ಯಕತೆಯಿಲ್ಲ. ಇತರರನ್ನು ಮೆಚ್ಚಿಸುವ ಭರದಲ್ಲಿ ನೀವು ಅನವಶ್ಯಕವಾಗಿ ಒತ್ತಡವನ್ನು ನಿಮ್ಮ ಮೈ ಮೇಲೆ ಎಳೆದುಕೊಳ್ಳುತ್ತೀರಿ. ಹಾಗಾಗಿ ಯಾರನ್ನು ಮೆಚ್ಚಿಸುವ ಸಲುವಾಗಿ ಜೀವನ ನಡೆಸಬೇಡಿ, ನಿಮಗಾಗಿ ಜೀವಿಸಿ. ಇದರಿಂದ ಖಂಡಿತವಾಗಿಯೂ ನೀವು ಸಂತೋಷದಿಂದ ಜೀವನ ನಡೆಸಲು ಸಾಧ್ಯ.

ಜನರ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಡಿ: ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಿ. ನಾವು ಈ ಕೆಲಸ ಮಾಡಿದರೆ ಯಾರು ಏನೆನ್ನುತ್ತಾರೋ, ಜನ ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೋ ಎಂದು ತಲೆ ಕೆಡಿಸುತ್ತಾ ಕುಳಿತರೆ ನೀವು ಚಿಂತೆಯಲ್ಲೇ ಇರುತ್ತಾರೆಯೇ ವಿನಃ ಸಂತೋಷದಿಂದ ಜೀವನ ನಡೆಸಲು ಸಾಧ್ಯವಿಲ್ಲ. ಖುಷಿಯಾಗಿರಬೇಕೆಂದರೆ ನೀವು ನೀವಾಗಿರಿ, ಇತರರು ಏನೆನ್ನುತ್ತಾರೆ ಎಂಬ ಬಗ್ಗೆ ಚಿಂತಿಸುವುದನ್ನು ಬಿಡಿ.

ಇದನ್ನೂ ಓದಿ: ಸುಡು ಬಿಸಿಲಿಗೆ ಬಸವಳಿದ ಮೂಕ ಜೀವಿಗಳಿಗೆ ರೀತಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ

ಸಕಾರಾತ್ಮಕವಾಗಿ ಯೋಚಿಸಿ: ನಕಾರಾತ್ಮಕ ಆಲೋಚನೆಗಳು ನಮ್ಮ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುತ್ತದೆ. ಹಾಗಾಗಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ, ಮುಖ್ಯವಾಗಿ ಇತರರ ಬಗ್ಗೆ ತಲೆ ಕೆಡಿಸುವುದನ್ನು ನಿಲ್ಲಿಸಿ, ನಿಮ್ಮ ಬಗ್ಗೆ ಮಾತ್ರ ಯೋಚಿಸಿ, ಈ ಸ್ವ ಪ್ರೀತಿ ಮತ್ತು ಸಕಾರಾತ್ಮಕ ಆಲೋಚನೆ ನಿಮಗೆ ಸಂತೋಷವನ್ನು ನೀಡುತ್ತದೆ.  ಒಟ್ಟಾರೆಯಾಗಿ ಜನರ ಅಭಿಪ್ರಾಯಗಳ ಮೇಲೆ ಸಮಯ ವ್ಯರ್ಥ ಮಾಡುವ ಬದಲು, ನಿಮ್ಮ ಇಚ್ಛೆಯಂತೆ ನಿಮ್ಮ ಜೀವನವನ್ನು ಸಂತೋಷದಿಂದ ಬದುಕಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us