ಮಧ್ಯಾಹ್ನ ಊಟ ಮಾಡಿದ ನಂತರ ಆವರಿಸುವ ಆಲಸ್ಯವನ್ನು ಹೊಡೆದೋಡಿಸಲು ಈ ಸಲಹೆಯನ್ನು ಪಾಲಿಸಿ
ಮಧ್ಯಾಹ್ನ ಊಟ ಮಾಡಿದ ನಂತರ ನಿದ್ದೆಯ ಭಾವ ಕಾಡುವುದು, ಆಲಸ್ಯವು ಆವರಿಸುವುದು ಸಾಮಾನ್ಯ. ಈ ಕಾರಣದಿಂದಾಗಿ ಮಧ್ಯಾಹ್ನದ ಹೊತ್ತು ಸರಿಯಾಗಿ ಕೆಲಸ ಮಾಡಲು ಸಹ ಆಗುವುದಿಲ್ಲ. ಹೀಗಿರುವಾಗ ಈ ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮ ಉತ್ಪಾದಕತೆಯನ್ನು ಹೆಚ್ಚಿಸಬಹುದು, ನಿಮ್ಮ ಮನಸ್ಸನ್ನು ತಾಜಾವಾಗಿರಿಸಬಹುದು.

ಮಧ್ಯಾಹ್ನ ಊಟ ಮಾಡಿದ ನಂತರ ನಿದ್ದೆಯ ಭಾವ ಆವರಿಸುವುದು, ಉದಾಸೀನತೆ, ಆಲಸ್ಯ (sluggishness) ಕಾಡುವುದು ಹೊಸದೇನಲ್ಲ. ಈ ಸಮಯದಲ್ಲಿ, ಆಹಾರವು ಜೀರ್ಣವಾಗುವ ಮತ್ತು ದೇಹವು ವಿಶ್ರಾಂತಿ ಸ್ಥಿತಿಯಲ್ಲಿರುವ ಕಾರಣ ಆಲಸ್ಯ ಭಾವ ಕಾಡುತ್ತದೆ. ಈ ಆಲಸ್ಯದ ಕಾರಣದಿಂದಾಗಿ ಕೆಲಸದ ಮೇಲೆ ಗಮನಹಸರಿಸಲು ಕಷ್ಟವಾಗುತ್ತದೆ. ಹೀಗಿರುವಾಗ ಮಧ್ಯಾಹ್ನ ಊಟದ ನಂತರ ಕಾಡುವ ಈ ಆಲಸ್ಯವನ್ನು ಹೊಡೆದೋಡಿಸಲು ಈ ಸಿಂಪಲ್ ಸಲಹೆಯನ್ನು ಪಾಲಿಸಿ.
ಮಧ್ಯಾಹ್ನದ ಊಟದ ನಂತರ ಕಾಡುವ ಆಲಸ್ಯವನ್ನು ಹೋಗಲಾಡಿಸುವುದು ಹೇಗೆ?
ಹಗುರವಾದ ಆಹಾರ ಸೇವಿಸಿ: ಮೊದಲು, ನಿಮ್ಮ ಊಟದ ಮೇಲೆ ಗಮನ ಹರಿಸಬೇಕು. ಹಗುರ ಮತ್ತು ಸಮತೋಲಿತ ಆಹಾರವನ್ನೇ ಸೇವನೆ ಮಾಡಿ. ಊಟದ ಜೊತೆಗೆ ತುಪ್ಪದ ಸಂಯೋಜನೆ ಹಾಗೂ ಸ್ವಲ್ಪ ಪ್ರಮಾಣದ ಮೊಸರು ಇರಲಿ. ಹೆಚ್ಚು ಮಸಾಲೆಯುಕ್ತ ಅಥವಾ ಸಕ್ಕರೆಯುಕ್ತ ಆಹಾರವನ್ನು ಸೇವಿಸಬೇಡಿ. ಇದರಿಂದ ನಿಮ್ಮ ಶಕ್ತಿ ಬೇಗನೆ ಕ್ಷೀಣಿಸಬಹುದು.
ಊಟದ ನಂತರ 10-15 ನಿಮಿಷಗಳ ಕಾಲ ನಡೆಯಿರಿ: ಊಟದ ನಂತರ 10-15 ನಿಮಿಷಗಳ ನಡಿಗೆ ಅಭ್ಯಾಸವು ಆಲಸ್ಯವನ್ನು ದೂರಮಾಡುತ್ತದೆ. ಆದಷ್ಟು ನಿಧಾನವಾಗಿ ನಡೆಯಿರಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಹೀಗೆ ಈ ಸಣ್ಣ ಚಟುವಟಿಕೆಯು ದೇಹವನ್ನು ಕ್ರಿಯಾಶೀಲವಾಗಿಸುತ್ತದೆ ಮತ್ತು ನಿದ್ರೆ ಭಾವವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಲು ಸಹಕಾರಿ ಈ ಎರಡು ಯೋಗಾಸನ
ಗಿಡಮೂಲಿಕೆ ಪಾನೀಯ ಸೇವಿಸಿ: ನಿದ್ರೆಯನ್ನು ಹೋಗಲಾಡಿಸಲು ಕೆಫೀನ್ ಸೇವಿಸುವುದನ್ನು ಬಿಡಿ. ಇದರ ಬದಲು ಜೀರಿಗೆ ನೀರು ಅಥವಾ ಬೆಚ್ಚಗಿನ ಪುದೀನಾ ನೀರನ್ನು ಕುಡಿಯಬಹುದು. ಇದು ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ, ಚಯಾಪಚಯ ಕ್ರಿಯೆಯನ್ನು ಸ್ಥಿರಗೊಳಿಸುತ್ತದೆ. ಜೊತೆಗೆ ಇದು ನಿಮ್ಮ ಮನಸ್ಸನ್ನು ರಿಫ್ರೆಶ್ ಮಾಡಿ, ಆಲಸ್ಯವನ್ನು ಹೋಗಲಾಡಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




