
ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸುವಂತಹ ಗಣೇಶ ಚತುರ್ಥಿ (Ganesh Chaturthi) ಹಬ್ಬವನ್ನು ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದಂದು ಆಚರಿಸಲಾಗುತ್ತದೆ. ಈ ಬಾರಿಯ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಹಬ್ಬವನ್ನು ಸಡಗರದಿಂದ ಆಚರಿಸಲು ಸಿದ್ಧತೆಯೂ ನಡೆಯುತ್ತಿದೆ. ಸಾರ್ವಜನಿಕವಾಗಿ ಮಾತ್ರವಲ್ಲದೆ ಅನೇಕ ಜನರು ತಮ್ಮ ಮನೆಯಲ್ಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗುತ್ತದೆ. ಹಾಗಾಗಿ ಈ ಹಬ್ಬದಂದು ಮನೆಯನ್ನು ಭರ್ಜರಿಯಾಗಿ ಅಲಂಕರಿಸುವುದು ರೂಢಿ. ಹೀಗಿರುವಾಗ ಈ ಬಾರಿಯ ಹಬ್ಬಕ್ಕೆ ಮನೆ ಹಾಗೂ ದೇವರ ಮನೆಯನ್ನು ಯಾವ ರೀತಿ ಅಲಂಕರಿಸಿದರೆ (decoration ideas) ಸೂಕ್ತ ಎಂದು ಪ್ಲಾನ್ ಮಾಡ್ತಿದ್ದೀರಾ? ನಿಮಗಾಗಿ ಇಲ್ಲಿದೆ ಸಿಂಪಲ್ ಮತ್ತು ಆಕರ್ಷಕವಾಗಿರುವ ಡೆಕೋರೇಷನ್ ಐಡಿಯಾಗಳು.
ಗಣೇಶ ಹಬ್ಬದ ಸಿಂಪಲ್ ಡೆಕೋರೇಷನ್ ಐಡಿಯಾಗಳನ್ನು DIY ಆರ್ಟಿಸ್ಟ್ ಹರ್ಷಿಕಾ ರೆಡ್ಡಿ ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಐಡಿಯಾಗಳನ್ನು ಬಳಸಿಕೊಂಡು ನೀವು ಕೂಡ ಸುಂದರವಾಗಿ ಮನೆಯನ್ನು ಅಲಂಕರಿಸಿ.
ಡೆಕೋರೇಷನ್ ಐಡಿಯಾ 1: ಗಣೇಶನ ಮೂರ್ತಿಯನ್ನು ಕೂರಿಸಲು ಮಂಟಪ ಮಾಡುತ್ತೀರಿ ಎಂದಾದರೆ, ನೀವು ಗಣೇಶ ಕೂರಿಸುವ ಜಾಗದಲ್ಲಿ ಬ್ಯಾಕ್‌ಡ್ರಾಪ್ ತಯಾರಿಸಲು ಪಾಟ್‌ನಲ್ಲಿ ಎರಡು ಕಂಬಗಳನ್ನಿಟ್ಟು, ಅದಕ್ಕೆ ಕೆಂಪು, ಹಸಿರು ಇಲ್ಲವೇ ಹಳದಿ ಬಣ್ಣದ ಸೀರೆಯನ್ನು ಕಟ್ಟಿಕೊಳ್ಳಿ. ನಂತರ ಅದಕ್ಕೆ ಎರಡೂ ಬದಿಯಿಂದಲೂ ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವಂತಹ ಚೆಂಡು ಹೂವು, ಮಲ್ಲಿಗೆ ಹೂವಿನಂತಹ ಪ್ಲಾಸ್ಟಿಕ್ ಹೂವುಗಳನ್ನು ಅಲಂಕರಿಸಿ, ನೀವು ಬೇಕಾದರೆ, ನೈಜ್ಯ ಕೆಸರಿ ಮತ್ತು ಹಳದಿ ಬಣ್ಣದ ಹೂವುಗಳನ್ನು ಬಳಸಬಹುದು. ಈ ಸಿಂಪಲ್ ಡೆಕೋರೇಷನ್ ವಿಡಿಯೋ ಕೆಳಗಿದೆ ನೋಡಿ.
ಡೆಕೋರೇಷನ್ ಐಡಿಯಾ 2: ನೀವು ಗಣೇಶನ ಸಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೀರಿ ಎಂದಾದರೆ, ಬಾಳೆ ಎಲೆಯನ್ನು ಬಳಸಿ ಸಿಂಪಲ್ ಹಾಗೂ ಸುಂದರವಾಗಿರುವಂತಹ ಡೆಕೋರೇಷನ್ ಮಾಡಬಹುದು. ಮೊದಲಿಗೆ ಮೂರು ಬಾಳೆ ಎಲೆಯನ್ನು ತೆಗೆದುಕೊಂಡು, ಅದಕ್ಕೆ ಬಿಳಿ ಬಣ್ಣದ ಡ್ರಾಯಿಂಗ್ ಪೆನ್ನಿನಿಂದ ರಂಗೋಲಿಯ ಡಿಸೈನ್ ಬಿಡಿಸಿ. ನಂತರ ಒಂದು ಡೆಕೋರೇಷನ್ ಸ್ಪಾಂಜ್ ತೆಗೆದುಕೊಂಡು, ಅದರಲ್ಲಿ ಮೂರು ಬಾಳೆ ಎಲೆಯನ್ನು ಇಟ್ಟು, ಬಳಿಕ ಅದಕ್ಕೆ ಗುಲಾಬಿ, ಸೇವಂತಿಗೆ, ಡೇಲಿಯಾ ಹೀಗೆ ನಿಮ್ಮಿಷ್ಟದ ಹೂವನ್ನು ಇಟ್ಟು, ಬಳಿಕ ಅಲ್ಲಿಯೇ ಇನ್ನೊಂದು ಸ್ಪಾಂಜ್ ಇಟ್ಟು ಅದನ್ನು ಬಾಳೆ ಎಲೆಯಿಂದ ಕವರ್ ಮಾಡಿ ಅದರಲ್ಲಿ ನಿಮ್ಮ ಪುಟ್ಟ ಗಣಪನನ್ನು ಕೂರಿಸಿ.
ಡೆಕೋರೇಷನ್ ಐಡಿಯಾ 3: ನೀವು ಪುಟ್ಟದಾಗ ಗಣೇಶನನ್ನು ಮನೆಯಲ್ಲಿ ಕೂರಿಸುತ್ತೀರಿ ಎಂದಾದರೆ, ಮಂಟಪವನ್ನು ತೆಂಗಿನ ಗರಿಯಿಂದ ಸುಲಭವಾಗಿ ಅಲಂಕಾರ ಮಾಡಬಹುದು. ಅದಕ್ಕಾಗಿ ಈ ಕೆಳಗೆ ತೋರಿಸಿರುವಂತೆ ತೆಂಗಿನ ಗರಿಗಳನ್ನು ಕಟ್ ಮಾಡಿ ಇಟ್ಟುಕೊಂಡು, ಅದನ್ನು ಡೆಕೋರೇಷನ್ ಸ್ಪಾಂಜ್‌ನಲ್ಲಿ ಜೋಡಿಸಿ. ಅಕ್ಕಪಕ್ಕದಲ್ಲಿ ಎರಡು ಪುಟ್ಟ ಕಲಶಗಳನ್ನಿಟ್ಟು ಅದರಲ್ಲಿ ಹೂವನ್ನಿಟ್ಟು ಅಲಂಕರಿಸಿ, ಮಧ್ಯದಲ್ಲಿ ಗಣೇಶನ ವಿಗ್ರಹವನ್ನು ಇಡಿ.
ಇದನ್ನೂ ಓದಿ: ಬಲಮುರಿ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜಿಸಲ್ಲ ಯಾಕೆ ಗೊತ್ತಾ?
ಡೆಕೋರೇಷನ್ ಐಡಿಯಾ 4: ಗಣೇಶನನ್ನು ಕೂರಿಸುವಾಗ ಸುಂದರವಾಗಿರುವಂತಹ ಬ್ಯಾಕ್‌ಡ್ರಾಪ್ ಅಲಂಕಾರವನ್ನು ಮಾಡಬೇಕು ಎಂದಿದ್ದರೆ, ತಾಳೆ ಗರಿಯನ್ನು ಬಳಸಿಕೊಂಡು ಪರಿಸರ ಸ್ನೇಹಿ ಅಲಂಕಾರವನ್ನು ಮಾಡಬಹುದು. ಇದಕ್ಕಾಗಿ ಮೊದಲು ಒಂದು ಫ್ರೆಶ್ ತಾಳೆಗರಿಯನ್ನು ತೆಗೆದುಕೊಂಡು ಅದನ್ನು ಡೆಕೋರೇಷನ್ ಸ್ಪಾಂಜ್‌ನಲ್ಲಿ ಹಾಕಿ, ಅದಕ್ಕೆ ಸೇವಂತಿಗೆ ಅಥವಾ ಇನ್ನಾವುದೇ ಹೂವುಗಳನ್ನು ಇಟ್ಟು ಅಲಂಕರಿಸಬೇಕು. ಜೊತೆಗೆ ಅಕ್ಕಪಕ್ಕದಲ್ಲಿ ಎರಡು ಕಲಶಗಳನ್ನಿಟ್ಟು ಅದರಲ್ಲಿ ಹೂವುಗಳನ್ನಿಟ್ಟು ಚೆಂದವಾದ ಬ್ಯಾಕ್‌ಡ್ರಾಪ್ ರೆಡಿ ಮಾಡಿ, ಗಣಪತಿಯನ್ನು ಕೂರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ