AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesh Chaturthi 2025: ಬಲಮುರಿ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜಿಸಲ್ಲ ಯಾಕೆ ಗೊತ್ತಾ?

ಗಣೇಶನ ಹಬ್ಬಕ್ಕೆ ಇನ್ನೇನೂ ಒಂದೆರಡು ದಿನಗಳಷ್ಟೇ ಬಾಕಿಯಿವೆ. ಈಗಾಗಲೇ ಗಣಪತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಮಾರುಕಟ್ಟೆಯ ತುಂಬೆಲ್ಲಾ ವಿವಿಧ ರೂಪದ ಹಾಗೂ ಗಾತ್ರದ ಗಣೇಶನ ಮೂರ್ತಿಗಳು ರಾರಾಜಿಸುತ್ತಿದೆ. ಆದರೆ ಬಲಮುರಿ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜಿಸಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇದರ ಹಿಂದಿನ ಕಾರಣವೇನು ಗೊತ್ತಾ? ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

Ganesh Chaturthi 2025: ಬಲಮುರಿ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜಿಸಲ್ಲ ಯಾಕೆ ಗೊತ್ತಾ?
ಬಲಮುರಿ ಗಣೇಶ
ಸಾಯಿನಂದಾ
|

Updated on:Aug 25, 2025 | 5:38 PM

Share

ಗಣೇಶ, ವಿಘ್ನ ವಿನಾಶಕ, ಏಕದಂತ ಹೀಗೆ ನಾನಾ ಹೆಸರುಗಳಿಂದ ಕರೆಯುವ ಗಣೇಶನ ಹಬ್ಬಕ್ಕೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದೆ. ಈ ಬಾರಿ ಆಗಸ್ಟ್ 27 ರಂದು ಗಣೇಶ ಚತುರ್ಥಿಯನ್ನು (Ganesh Chaturthi) ಆಚರಿಸಲಾಗುತ್ತಿದ್ದು, ಈಗಾಗಲೇ ಮಾರುಕಟ್ಟೆಯ ತುಂಬೆಲ್ಲಾ ವಿವಿಧ ವಿನ್ಯಾಸಗಳನ್ನೊಳಗೊಂಡ ಗಣಪತಿಯ ಮೂರ್ತಿಗಳು ಬಂದಿವೆ. ಆದರೆ ಈ ಗಣೇಶನನ್ನು ಮನೆಗೆ ತಂದು ಪ್ರತಿಷ್ಠಾಪನೆ ಮಾಡುವ ಮುನ್ನ ಯಾವ ರೀತಿ ಗಣೇಶನನ್ನು ತರುವುದು ಎಂದು ಯೋಚಿಸುವುದು ಸಹಜ. ಬಹುತೇಕರು ಎಡಮುರಿ ಗಣೇಶನ ಮೂರ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಬಲಮುರಿ ಗಣೇಶನ (Balamuri Ganesh) ಮೂರ್ತಿಯನ್ನು ಮನೆಯಲ್ಲಿ ಇಡುವುದು ಬಹಳ ವಿರಳ. ಹೆಚ್ಚಿನವರು ಬಲಮುರಿ ಗಣೇಶನ ಮೂರ್ತಿಯನ್ನು ತರಲು ಹಿಂದೇಟು ಹಾಕುತ್ತಾರೆ. ಇದರ ಹಿಂದೆ ಈ ಕೆಲವು ಕಾರಣಗಳು ಇವೆ. ಹಾಗಾದ್ರೆ ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಬಲಮುರಿ ಗಣೇಶನ ಮೂರ್ತಿಯ ವಿಶೇಷತೆ

ಬಲಮುರಿ ಗಣೇಶನ ಮೂರ್ತಿಯಲ್ಲಿ ಸೊಂಡಿಲು ಬಲಗಡೆಗೆ ಇದ್ದು, ಈ ಮೂರ್ತಿಯನ್ನು ಕುಣಿಕೆ, ರತ್ನಗಳು ಮುಂತಾದ ವಸ್ತುಗಳಿಂದ ಅಲಂಕರಿಸಲಾಗುತ್ತದೆ. ಬಲಮುರಿ ಗಣೇಶನು ದಕ್ಷಿಣಾಭಿಮುಖಿಯಾಗಿದ್ದು, ಇದು ಯಮನ ದಿಕ್ಕು ಎನ್ನಲಾಗಿದೆ. ಈ ಗಣಪತಿ ಮೂರ್ತಿಯೂ ಸೂರ್ಯ ನಾಡಿಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಶಕ್ತಿಯುತ ಶಕ್ತಿಯ ಹರಿವು ಹೊಂದಿದೆ.

ಇದನ್ನೂ ಓದಿ
Image
ಈ ಬಾರಿಯ ಗಣೇಶ ಚತುರ್ಥಿಗೆ ಮನೆಯಲ್ಲಿಯೇ ತಯಾರಿಸಿ ಪರಿಸರ ಸ್ನೇಹಿ ಗಣಪ
Image
ಗಣೇಶನಿಗೆ ಬೆಸ ಸಂಖ್ಯೆಯಲ್ಲಿ ಗರಿಕೆ ಅರ್ಪಿಸುವುದು ಏಕೆ?
Image
ಗಣಪತಿಗೆ ಯಾವ ರೀತಿಯ ನೈವೇದ್ಯಗಳನ್ನು ಮಾಡಬೇಕು, ಯಾವುದನ್ನು ಮಾಡಬಾರದು?
Image
ಶ್ರೀಕೃಷ್ಣ ಜನ್ಮಾಷ್ಟಮಿಗೆ ಮಡಕೆ ಹೊಡೆಯುವುದು ಯಾಕೆ? ಇದೇ ನೋಡಿ ಕಾರಣ

ಬಲಮುರಿ ಗಣೇಶನನ್ನು ಪೂಜಿಸದಿರಲು ಇದು ಕಾರಣ

ಯಾರ ಮನೆಯಲ್ಲಿ ಬಲಮುರಿ ಗಣೇಶನನ್ನು ಪೂಜಿಸಲಾಗುತ್ತದೆಯೋ ಅಂತಹವರು ಕಠಿಣ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಮೂರ್ತಿಯ ಪೂಜೆಯನ್ನು ಮಾಡುವಾಗಲೂ ಬಹಳ ಎಚ್ಚರಿಕೆಯಿಂದ, ಶ್ರದ್ಧೆ ಭಕ್ತಿಯಿಂದ ಸರಿಯಾದ ವಿಧಿವಿಧಾನಗಳನ್ನು ಅನುಸರಿಸಬೇಕು. ಪೂಜೆಯ ವೇಳೆಯಲ್ಲಿ ಸಣ್ಣ ತಪ್ಪು ತಪ್ಪುಗಳು ಕೂಡ ದೊಡ್ಡ ಸಮಸ್ಯೆಗಳನ್ನು ಉಂಟುಮಾಡಬಹುದು.

ಈ ವಿಗ್ರಹಗಳನ್ನು ತಂತ್ರ-ಮಂತ್ರ ವಿಧಾನಗಳು, ಯಾಗ ಮತ್ತು ವಿಶೇಷ ಮಂತ್ರಗಳ ಪಠಣಗಳಂತಹ ಆಚರಣೆಗಳು ಹಾಗೂ ವಿಶೇಷ ಪೂಜಾ ವಿಧಾನಗಳನ್ನು ಪಾಲಿಸಬೇಕು. ಈ ಗಣೇಶನ ಬಲಮುರಿ ರೂಪವನ್ನು ಆಕ್ರಮಣಕಾರಿ ಶಕ್ತಿಯ ಪ್ರತೀಕವಾಗಿದೆ. ಶಾಸ್ತ್ರದಲ್ಲಿ ಉಲ್ಲೇಖವಿರುವಂತೆ ಬಲಮುರಿ ಗಣೇಶನನ್ನು ಪ್ರತಿನಿತ್ಯ ಪೂಜಿಸಲು ಯೋಗ್ಯವಲ್ಲವಂತೆ . ಇದು ಅನಾಹುತಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ:Ganesh Chaturthi 2025: ಮನೆಯಲ್ಲಿ ಗಣೇಶ ಮೂರ್ತಿಯನ್ನು ತಯಾರಿಸುವ ವೇಳೆ ಪಾಲಿಸಬೇಕಾದ ನಿಯಮಗಳಿವು

ಗಣೇಶ ಮೂರ್ತಿ ತಯಾರಕರು ಈ ಬಲಮುರಿ ಗಣೇಶನ ಮೂರ್ತಿಗಳನ್ನು ತಯಾರಿಸಲು ಯೋಚನೆ ಮಾಡುತ್ತಾರೆ. ಈ ಮೂರ್ತಿ ತಯಾರಿಸುವವರಿಗೆ ತೊಡಕಾಗುತ್ತದೆ, ಸಂಕಷ್ಟಗಳು ಬರುತ್ತದೆ ಎನ್ನುವ ಬಲವಾದ ನಂಬಿಕೆಯಿದೆ. ಆದರೆ, ಅದನ್ನು ಯಾರು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುತ್ತಾರೋ ಅವರಿಗೆ ಒಳಿತಾಗುತ್ತದೆ ಎನ್ನಲಾಗುತ್ತದೆ. ಈ ಎಲ್ಲಾ ಕಾರಣಗಳಿಂದಲೂ ಗಣೇಶನ ಮೂರ್ತಿ ತಯಾರಕರು ಈ ಬಲಮುರಿ ಗಣೇಶ ಮೂರ್ತಿಗಳನ್ನು ತಯಾರಿಸಲು ಸಿದ್ದರಿರುವುದಿಲ್ಲ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Mon, 25 August 25