Glycerin Benefits: ನಿಮ್ಮ ಚರ್ಮ ಫಳಫಳ ಹೊಳೆಯಬೇಕೇ?; ಒಮ್ಮೆ ಗ್ಲಿಸರಿನ್ ಹಚ್ಚಿ ನೋಡಿ
Beauty Tips : ಗ್ಲಿಸರಿನ್ ನೈಸರ್ಗಿಕ ಉತ್ಪನ್ನವಾಗಿದೆ. ಆದರೂ ಕೆಲವೊಬ್ಬರಿಗೆ ಇದರಿಂದ ಅಲರ್ಜಿಯಾಗುವ ಸಾಧ್ಯತೆಯೂ ಇರುತ್ತದೆ. ಗ್ಲಿಸರಿನ್ ಬಳಸುವಾಗ ನಿಮಗೆ ಕೆಂಪು ಗುಳ್ಳೆ, ತುರಿಕೆಗಳಾದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ.
ಬೇಸಿಗೆಯಲ್ಲಿ ದೇಹದ ಚರ್ಮ ಶುಷ್ಕವಾಗುತ್ತದೆ. ಹೀಗಾಗಿ, ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಚರ್ಮದ ಕಾಂತಿಯನ್ನು ಕಾಪಾಡಲು ಗ್ಲಿಸರಿನ್ (Glycerin) ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಗ್ಲಿಸರಾಲ್ ಎಂದೂ ಕರೆಯಲ್ಪಡುವ ಗ್ಲಿಸರಿನ್ ಸಸ್ಯಜನ್ಯ ಎಣ್ಣೆಗಳು ಅಥವಾ ಪ್ರಾಣಿಗಳ ಕೊಬ್ಬಿನಿಂದ ಪಡೆದ ನೈಸರ್ಗಿಕ ಸಂಯುಕ್ತವಾಗಿದೆ. ಇದು ಟ್ರಾನ್ಸ್ಪರೆಂಟ್ ಆಗಿದ್ದು, ಬಣ್ಣರಹಿತ, ವಾಸನೆ ರಹಿತವಾದ ಒಂದು ದ್ರವವಾಗಿದೆ. ಗ್ಲಿಸರಿನ್ ಒಂದು ಹ್ಯೂಮೆಕ್ಟಂಟ್ ಆಗಿದೆ. ಚರ್ಮದ ಆರೈಕೆಯ ಉತ್ಪನ್ನಗಳಲ್ಲಿ ಗ್ಲಿಸರಿನ್ ಬಳಸಲಾಗುತ್ತದೆ. ಗ್ಲಿಸರಿನ್ನಿಂದ ಚರ್ಮಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಗ್ಲಿಸರಿನ್ ಬಳಸುವುದು ಹೇಗೆ?: ಗ್ಲಿಸರಿನ್ ನೈಸರ್ಗಿಕ ಉತ್ಪನ್ನವಾಗಿದೆ. ಆದರೂ ಕೆಲವೊಬ್ಬರಿಗೆ ಇದರಿಂದ ಅಲರ್ಜಿಯಾಗುವ ಸಾಧ್ಯತೆಯೂ ಇರುತ್ತದೆ. ಗ್ಲಿಸರಿನ್ ಬಳಸುವಾಗ ನಿಮಗೆ ಕೆಂಪು ಗುಳ್ಳೆ, ತುರಿಕೆಗಳಾದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ಗ್ಲಿಸರಿನ್ ಬಳಸುವ ಮೊದಲು ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ನಂತರ ಹತ್ತಿ ಪ್ಯಾಡ್ ಮೇಲೆ ಗ್ಲಿಸರಿನ್ ಹಾಕಿ ಅದನ್ನು ನಿಮ್ಮ ಮುಖದ ಮೇಲೆ ನಿಧಾನವಾಗಿ ರಬ್ ಮಾಡಿ. ಹಾಗೇ ಗ್ಲಿಸರಿನ್ ಅನ್ನು ಕೆಲವು ನಿಮಿಷಗಳ ಕಾಲ ನಿಮ್ಮ ಚರ್ಮ ಹೀರಿಕೊಳ್ಳಲು ಬಿಡಿ. ನಂತರ ಗ್ಲಿಸರಿನ್ ಅನ್ನು ನೀರಿನಿಂದ ನಿಧಾನವಾಗಿ ತೊಳೆಯಿರಿ.
ಇದನ್ನೂ ಓದಿ: Beauty Tips: ಕಿತ್ತಳೆ ಸಿಪ್ಪೆಯಿಂದ ಈ ವಿಶೇಷ ಫೇಸ್ ಪ್ಯಾಕ್ ಮಾಡಿ; ಮುಖದ ಕಾಂತಿ ಹೆಚ್ಚಿಸಿಕೊಳ್ಳಿ!
ಒಂದು ಚಮಚ ಗ್ಲಿಸರಿನ್‌ಗೆ 2 ಚಮಚ ರೋಸ್ ವಾಟರ್ ಬೆರೆಸಿ. ಇದನ್ನ ಕಾಟನ್ ಬಾಲ್‌ನಲ್ಲಿ ಅದ್ದಿ ಮುಖಕ್ಕೆ ಹಚ್ಚಿ. 10 ನಿಮಿಷದ ನಂತರ ಉಗುರು ಬಿಸಿ ನೀರಿನಲ್ಲಿ ವಾಶ್ ಮಾಡಿದರೆ ಮುಖಕ್ಕೆ ಮಾಯಿಶ್ಚರೈಸರ್ ಸಿಗುತ್ತದೆ. ನಿಮ್ಮ ಚರ್ಮ ಸ್ಮೂತ್ ಆಗಬೇಕೆಂದರೆ ಮುಖಕ್ಕೆ ಗ್ಲಿಸರಿನ್ ಹಚ್ಚಿ. ಇದರಿಂದ ಸ್ಕಿನ್ ಫ್ರೆಶ್ ಮತ್ತು ತಾರುಣ್ಯದಿಂದ ಕಾಣುತ್ತದೆ. ಗ್ಲಿಸರಿನ್ ಸ್ಕಿನ್ ಬಿಳುಪು ಹೆಚ್ಚಲು ಸಹಾಯ ಮಾಡುತ್ತದೆ. ಅದಕ್ಕಾಗಿ ನೀವು ಗ್ಲಿಸರಿನ್‌ನ್ನು ಕಾಟನ್‌ನಲ್ಲಿ ಅದ್ದಿ ಮುಖ ಮತ್ತು ಕುತ್ತಿಗೆಗೆ ಹಚ್ಚಬೇಕು. ನಿದ್ರೆ ಮಾಡುವ ಮುನ್ನ ಇದನ್ನು ಹಚ್ಚಿ. ಇದರಿಂದ ಚರ್ಮ ಬಿಳುಪಾಗುತ್ತದೆ. ನಿಮ್ಮ ಕೋಲ್ಡ್ ಕ್ರೀಮ್ ಮತ್ತು ಬಾಡಿ ಲೋಷನ್‌ಗೆ ಸ್ವಲ್ಪ ಗ್ಲಿಸರಿನ್ ಮಿಕ್ಸ್ ಮಾಡಿ ಕೈ, ಕಾಲು, ಮುಖಕ್ಕೆ ಹಚ್ಚಿ. ಇದರಿಂದ ಕ್ರೀಮ್ ಹೆಚ್ಚು ಸಮಯ ಉಳಿಯುತ್ತದೆ. ಇದುನಿಮ್ಮ ತ್ವಚೆಯನ್ನು ಫ್ರೆಶ್ ಆಗಿರಿಸುತ್ತದೆ.
ಇದನ್ನೂ ಓದಿ: Skin Care Tips: ಬೇಸಿಗೆಯಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಗ್ಲಿಸರಿನ್ ಒಂದು ಪಾರದರ್ಶಕ ವಸ್ತುವಾಗಿದ್ದು, ಇದು ಯಾವುದೇ ವಾಸನೆಯನ್ನು ಹೊಂದಿರುವುದಿಲ್ಲ. ಗ್ಲಿಸರಿನ್ ಅನ್ನು ಮಾಯಿಶ್ಚರೈಸರ್, ಕ್ಲೆನ್ಸರ್ ಮತ್ತು ಸೀರಮ್ ಆಗಿ ಬಳಸಬಹುದು. ಗ್ಲಿಸರಿನ್ ಅನ್ನು ನಾರ್ಮಲ್, ಒಣ ಮತ್ತು ಎಣ್ಣೆಯುಕ್ತ ಚರ್ಮದವರೆಲ್ಲರೂ ಬಳಸಬಹುದು. ಇದು ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಹೊಳಪನ್ನು ನೀಡುತ್ತದೆ. ಹಾಗೇ, ಚರ್ಮ ರೋಗಗಳ ಅಪಾಯವು ಕಡಿಮೆಯಾಗುತ್ತದೆ.
ಸೌಂದರ್ಯದ ಕುರಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ