Goli idli Recipe : ಇದು ಗೋಲಿ ಇಡ್ಲಿ, ಇಲ್ಲಿದೆ ರೆಸಿಪಿ

ರಾತ್ರಿಯಾಗುತ್ತಿದ್ದಂತೆ ನಾಳೆ ಬೆಳಗ್ಗೆ ತಿಂಡಿಗೆ ಏನು ಮಾಡ್ಲಿ ಎನ್ನುವುದು ಎಲ್ಲಾ ಗೃಹಿಣಿಯರ ಪ್ರಶ್ನೆಯಾಗಿರುತ್ತದೆ. ದಿನನಿತ್ಯ ಅದೇ ದೋಸೆ, ಇಡ್ಲಿ, ಚಿತ್ರಾನ್ನ, ಉಪ್ಪಿಟ್ಟು ತಿಂದು ಬೋರ್ ಆಗಿರುತ್ತದೆ. ಹೀಗಾದಾಗ ಮನೆಯಲ್ಲಿರುವ ಈ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ರುಚಿಕರವಾದ ಗೋಲಿ ಇಡ್ಲಿಯನ್ನು ಟ್ರೈ ಮಾಡಬಹುದು. ಹಾಗಾದ್ರೆ ಈ ಸಿಂಪಲ್ ಗೋಲಿ ಇಡ್ಲಿ ರೆಸಿಪಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Goli idli Recipe : ಇದು ಗೋಲಿ ಇಡ್ಲಿ, ಇಲ್ಲಿದೆ ರೆಸಿಪಿ
ಗೋಲಿ ಇಡ್ಲಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 09, 2024 | 4:45 PM

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ರವೆ ಇಡ್ಲಿ, ಗೋಧಿ ಹಿಟ್ಟಿನ ಇಡ್ಲಿ, ಮಲ್ಲಿಗೆ ಇಡ್ಲಿ, ಅವಲಕ್ಕಿ ಹಾಕಿ ಹೀಗೆ ವಿವಿಧ ರೀತಿಯ ಇಡ್ಲಿ ರೆಸಿಪಿಯನ್ನು ಸವಿದ್ದಿರಬಹುದು. ಅದಲ್ಲದೇ ಈಗಂತೂ ಇಡ್ಲಿಯಲ್ಲಿ ನಾನಾ ರೀತಿಯ ವೆರೈಂಟಿಗಳು ಬಂದಿದ್ದು, ಅದರಲ್ಲಿ ಒಂದು ಈ ಗೋಲಿ ಇಡ್ಲಿ. ನೋಡುವುದಕ್ಕೆ ರಸಗುಲ್ಲಾದಂತಿದ್ದು, ಮೃದುವಾಗಿರುವ ಈ ತಿನಿಸು ಮಸಾಲೆಯ ಸುವಾಸನೆಯಿಂದಾಗಿ ಒಮ್ಮೆ ತಿಂದರೆ ಮತ್ತೆ ತಿನ್ನಬೇಕೇನಿಸುತ್ತದೆ. ಮಾಡುವುದಕ್ಕೂ ಸ್ವಲ್ಪ ಸಮಯ ತೆಗೆದುಕೊಳ್ಳುವ ಈ ತಿಂಡಿಯನ್ನು ಎಲ್ಲರೂ ಇಷ್ಟ ಪಟ್ಟೆ ಇದನ್ನು ಸವಿಯುತ್ತಾರೆ.

ಗೋಲಿ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು:

* ಅಕ್ಕಿ ಹಿಟ್ಟು

* ಶುಂಠಿ

* ಕರಿಬೇವು

* ಎಣ್ಣೆ

* ಇಂಗು

* ಉದ್ದಿನ ಬೇಳೆ

* ಕಡಲೆ ಬೇಳೆ

* ಹಸಿ ಮೆಣಸು

* ತುಪ್ಪ

ಇದನ್ನೂ ಓದಿ: ಕೇರಳದ ಸ್ಪೆಷಲ್ ಹಬ್ಬದೂಟ ‘ಓಣಂ ಸದ್ಯ’, ಬೆಂಗಳೂರಿನ ಈ ತಾಣಗಳಲ್ಲಿ ಸಿಗುತ್ತೆ ವಿಶಿಷ್ಟ ಭೋಜನ

ಗೋಲಿ ಇಡ್ಲಿ ಮಾಡುವ ವಿಧಾನ:

* ಸ್ಟವ್ ಮೇಲೆ ಒಂದು ಪಾತ್ರೆಯನ್ನಿಟ್ಟು ಅರ್ಧ ಗ್ಲಾಸ್ ನೀರು ಹಾಕಿ, ಆ ನೀರಿಗೆ ಉಪ್ಪು ತುಪ್ಪ ಹಾಕಿ ಚೆನ್ನಾಗಿ ಕುದಿಯಲು ಬಿಡಿ.

* ಬಳಿಕ ಅದಕ್ಕೆ ಒಂದೂವರೆ ಬಟ್ಟಲು ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ ಈ ಹಿಟ್ಟು ಹುಡಿ ಹುಡಿಯಾಗುವವರೆಗೂ ಬೇಯಿಸಿಕೊಳ್ಳಿ.

* ಸ್ವಲ್ಪ ಸಮಯ ತಣ್ಣಗಾಗಲು ಬಿಟ್ಟು ನಂತರ ಮೃದುವಾದ ಹಿಟ್ಟನ್ನು ಮಾಡಿಕೊಳ್ಳಿ. ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಹಬೆಯಲ್ಲಿ ಬೇಯಿಸಿಕೊಳ್ಳಿ.

* ತದನಂತರದಲ್ಲಿ ಸ್ಟವ್ ಮೇಲೆ ಒಂದು ಪಾತ್ರೆಯನ್ನಿಟ್ಟು ಎಣ್ಣೆ ಹಾಕಿ ಕಾಯುತ್ತಿದ್ದಂತೆ ಸಾಸಿವೆ, ಬೇಳೆ, ಉದ್ದಿನ ಬೇಳೆ, ಇಂಗು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.

* ಆ ಬಳಿಕ ಇದಕ್ಕೆ ಹಸಿ ಮೆಣಸು, ಶುಂಠಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಈಗಾಗಲೇ ಬೇಯಿಸಿಕೊಂಡ ಇಡ್ಲಿಯನ್ನು ಹಾಕಿ ಕೈಯಾಡಿಸಿದರೆ ರುಚಿಕರವಾದ ಗೋಲಿ ಇಡ್ಲಿ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್