ಕರೀನಾ ಕಪೂರ್ ತಮ್ಮ ಕೂದಲ ಆರೈಕೆಗೆ ಏನು ಬಳಸುತ್ತಾರೆ ಗೊತ್ತಾ?

|

Updated on: Jan 20, 2024 | 7:04 PM

ಕರೀನಾ ಕಪೂರ್ ಅಡುಗೆ ಮನೆಯಲ್ಲಿರುವ ವಸ್ತುಗಳನ್ನೇ ತಮ್ಮ ಕೂದಲ ಆರೈಕೆಗೆ ಬಳಸುತ್ತಾರಂತೆ. ತನ್ನ ಕೂದಲ ರಕ್ಷಣೆಗಾಗಿ ಎಣ್ಣೆ ಮಸಾಜ್ ಮತ್ತು ಹೇರ್ ಮಾಸ್ಕ್ ಬಳಸುವುದನ್ನು ಅವರು ಮಿಸ್ ಮಾಡುವುದಿಲ್ಲವಂತೆ.

ಕರೀನಾ ಕಪೂರ್ ತಮ್ಮ ಕೂದಲ ಆರೈಕೆಗೆ ಏನು ಬಳಸುತ್ತಾರೆ ಗೊತ್ತಾ?
ಕರೀನಾ ಕಪೂರ್
Follow us on

ಸೆಲೆಬ್ರಿಟಿಗಳ ಮೇಕಪ್, ಬ್ಯೂಟಿ ಕೇರ್, ಕೂದಲಿನ ಆರೈಕೆ, ಅವರು ಬಳಸುವ ಉತ್ಪನ್ನಗಳ ಬಗ್ಗೆ ಸಾಮಾನ್ಯ ಜನರಿಗೆ ಕುತೂಹಲ ಇದ್ದೇ ಇರುತ್ತದೆ. ಸೆಲೆಬ್ರಿಟಿಗಳು ಬ್ರಾಂಡೆಡ್ ಬ್ಯೂಟಿ ಕೇರ್ ಪ್ರಾಡಕ್ಟ್​ಗಳನ್ನೇ ಬಳಸುತ್ತಾರೆ ಎಂಬುದು ಹಲವರ ನಂಬಿಕೆ. ಆದರೆ, ಕೆಲವರು ತಮ್ಮ ಕೂದಲು, ಚರ್ಮದ ಆರೈಕೆಗೆ ನೈಸರ್ಗಿಕ ವಸ್ತುಗಳನ್ನು ಬಳಸಲು ಹೆಚ್ಚು ಇಷ್ಟಪಡುತ್ತಾರೆ. ಅವರಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಕೂಡ ಒಬ್ಬರು. ಬೇಬೋ ಎಂದೇ ಅಭಿಮಾನಿಗಳಿಂದ ಕಡೆಯಲ್ಪಡುವ ಕರೀನಾ ಕಪೂರ್ ಖಾನ್ ಹೇರ್​ ಕೇರ್​ಗೆ ಬಳಸುವ ವಸ್ತು ಯಾವುದು? ಎಂಬ ರಹಸ್ಯ ಇಲ್ಲಿದೆ.

ಕರೀನಾ ಕಪೂರ್ ಅಡುಗೆ ಮನೆಯಲ್ಲಿರುವ ವಸ್ತುಗಳನ್ನೇ ತಮ್ಮ ಕೂದಲ ಆರೈಕೆಗೆ ಬಳಸುತ್ತಾರಂತೆ. ತನ್ನ ಕೂದಲ ರಕ್ಷಣೆಗಾಗಿ ಎಣ್ಣೆ ಮಸಾಜ್ ಮತ್ತು ಹೇರ್ ಮಾಸ್ಕ್ ಬಳಸುವುದನ್ನು ಅವರು ಮಿಸ್ ಮಾಡುವುದಿಲ್ಲವಂತೆ.

ಇದನ್ನೂ ಓದಿ: ಕೂದಲು ಬೇಗ ಬೆಳೆಯಲು ಈ 9 ಗಿಡಮೂಲಿಕೆಗಳನ್ನು ಬಳಸಿ

ಕರೀನಾ ಕಪೂರ್ ಕೂದಲಿಗೆ ಬಾದಾಮಿ ಎಣ್ಣೆಯ ಮಸಾಜ್ ಮಾಡಿಕೊಳ್ಳುತ್ತಾರೆ. ಅವರು ಬಳಸುವ ಈ ಎಣ್ಣೆಯನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಿಕೊಳ್ಳಬಹುದು. ಬಾದಾಮಿ ನಿಮ್ಮ ಕೂದಲಿಗೆ ಸೂಪರ್ ಹೀರೋಗಳಿದ್ದಂತೆ. ಅದು ನಿಮ್ಮ ಕೂದಲನ್ನು ಸಾಕಷ್ಟು ಹೈಡ್ರೇಟ್ ಆಗಿಡುತ್ತದೆ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ. ಅದು ನಿಮ್ಮ ಕೂದಲನ್ನು ಬಲವಾಗಿ ಮತ್ತು ಆರೋಗ್ಯಕರವಾಗಿ ಮಾಡುತ್ತದೆ.

ಬಾದಾಮಿಯು ನಿಮ್ಮ ನೆತ್ತಿಗೆ ಹೆಚ್ಚಿನ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ ಮತ್ತು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ನಿಮ್ಮ ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ ಮಾಡಲಾಗುವ ಈ ಹೇರ್ ಕೇರ್ ಪ್ರಾಡಕ್ಟ್​ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್‌ನೆಸ್ ರಹಸ್ಯವೇನು?

3 ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು 1 ಚಮಚ ಬಾದಾಮಿ ಎಣ್ಣೆ ತೆಗೆದುಕೊಳ್ಳಿ. 1 ಕಪ್ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಮತ್ತು ಬಾದಾಮಿ ಎಣ್ಣೆಯನ್ನು ಸೇರಿಸಿ. ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ತಣ್ಣಗಾದ ನಂತರ ನಿಮ್ಮ ನೆತ್ತಿ ಮತ್ತು ಕೂದಲಿಗೆ ಅದನ್ನು ಹಚ್ಚಲು ಪ್ರಾರಂಭಿಸಿ. ಬಳಿಕ 45 ನಿಮಿಷದಿಂದ 2 ಗಂಟೆಗಳವರೆಗೆ ಹಾಗೆಯೇ ಬಿಟ್ಟು, ನಂತರ ತಲೆಗೂದಲನ್ನು ಶಾಂಪೂವಿನಿಂದ ತೊಳೆಯಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ