ಮುಖದ ಅಂದ ಹೆಚ್ಚಿಸುವ ದಂತದ ಆರೈಕೆ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ನೀವು ನಕ್ಕರೆ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದೇ ಈ ಹಲ್ಲುಗಳು. ಆದರೆ ಕೆಲವರಿಗೆ ನಗುವುದಕ್ಕೂ ಮುಜುಗರವಾಗುವುದಿದೆ. ಇನ್ನು ಕೆಲವೊಬ್ಬರಿಗೆ ಬಾಯಿ ತೆರೆದು ನಗುವುದಕ್ಕೂ ಹಿಂದೆ ಮುಂದೆ ನೋಡುತ್ತಾರೆ. ಇದಕ್ಕೆ ಕಾರಣ ಹಲ್ಲುಗಳ ಆರೈಕೆಯು ಕಳಪೆಯಾಗಿರುವುದು. ಹಲ್ಲುಗಳ ಆರೈಕೆಯ ಬಗ್ಗೆ ಗಮನ ಕೊಡದಿದ್ದರೆ ಹಲ್ಲುಗಳು ಬೇಗನೇ ಹಾಳಾಗುತ್ತವೆ. ಹೀಗಾಗಿ ಹಲ್ಲಿನ ಆರೈಕೆಯ ವಿಚಾರದಲ್ಲಿ ಈ ಟಿಪ್ಸ್ ಗಳನ್ನು ಅನುಸರಿಸಿ.
ನಿಮ್ಮ ಮುಖವು ಎದ್ದು ಕಾಣುವುದೇ ಈ ದಾಳಿಂಬೆಯಂತಹ ಹಲ್ಲುಗಳಿಂದ. ಒಂದು ವೇಳೆ ಬಾಯಲ್ಲಿ ಹಲ್ಲುಗಳೇ ಇಲ್ಲದೇ ಹೋದರೆ ನಿಮ್ಮ ಮುಖದ ಸೌಂದರ್ಯವು ಕೂಡ ಹಾಳಾಗುತ್ತದೆ. ಆದರೆ ಹೆಚ್ಚಿನವರು ಮುಖದ ಸೌಂದರ್ಯಕ್ಕೆ ಕೊಡುವ ಮಹತ್ವವನ್ನು ಹಲ್ಲುಗಳ ಆರೈಕೆಗೆ ನೀಡುವುದಿಲ್ಲ. ಹೀಗಾಗಿಯೇ ಕೆಲವರಲ್ಲಿ ಹಲ್ಲುಗಳು ಬೇಗನೆ ಹಾನಿಗೊಳಗಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ಹಲ್ಲು ಹುಳ ಹಲ್ಲುನೋವು, ಒಸಡಿನಿಂದ ರಕ್ತ ಬರುವುದು, ಒಸಡಿನ ಕ್ಯಾನ್ಸರ್ ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಹಲ್ಲಿನ ಆರೈಕೆಯತ್ತ ಗಮನ ಕೊಟ್ಟರೆ ಹಲ್ಲುಗಳನ್ನು ಉಳಿಸಿಕೊಳ್ಳಬಹುದು.
ಹಲ್ಲುಗಳ ಆರೈಕೆಯಲ್ಲಿ ಈ ಸಲಹೆಗಳನ್ನು ಅನುಸರಿಸಿ:
*ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು : ಫ್ಲೋರೈಡ್ ಮುಕ್ತ ಟೂತ್‌ಪೇಸ್ಟ್ ಬಳಸಿ ದಿನಕ್ಕೆ ಎರಡು ಬಾರಿಯಾದರೂ ನಿಮ್ಮ ಹಲ್ಲುಜ್ಜಿ. ಹಲ್ಲುಜ್ಜುವಾಗ ಹಲ್ಲುಗಳ ಹಿಂಭಾಗ ಮತ್ತು ನಿಮ್ಮ ನಾಲಿಗೆ ಸೇರಿದಂತೆ ಎಲ್ಲಾ ಮೇಲ್ಮೈಗಳನ್ನು ಚೆನ್ನಾಗಿ ತೊಳೆಯಿರಿ. ಬ್ರೆಷ್ ನಿಂದ ಒಸಡುಗಳನ್ನು ಬಿರುಸಿನಿಂದ ಉಜ್ಜಬೇಡಿ, ಇದರಿಂದ ಒಸಡಿನಲ್ಲಿ ರಕ್ತ ಬರುವ ಸಾಧ್ಯತೆಯಿರುತ್ತದೆ.
*ಪರಿಕರಗಳ ಆಯ್ಕೆ ಸರಿಯಾಗಿರಲಿ : ನೀವು ಬಳಸುವ ಪರಿಕರಗಳು ಒಸಡುಗಳು ದಂತಕವಚಕ್ಕೆ ಹಾನಿಯಾಗದಂತೆ ಮೃದುವಾದ ಗುಣಮಟ್ಟದ ಟೂತ್ ಬ್ರಷ್ ಅನ್ನು ಬಳಸಿ. ಹಲ್ಲುಜ್ಜುವ ಬ್ರಷ್ ಅನ್ನು ಪ್ರತಿ 3-4 ತಿಂಗಳಿಗೊಮ್ಮೆ ಬದಲಾಯಿಸಿಕೊಳ್ಳಿ.
* ಆಗಾಗ ದಂತ ತಪಾಸಣೆ ಮಾಡಿಸುತ್ತಿರಿ: ನಿಯಮಿತ ದಂತ ತಪಾಸಣೆ ಮಾಡಿ ಹಲ್ಲುಗಳನ್ನು ಶುಚಿಗೊಳಿಸುತ್ತಾ ಇರಿ. ಇದರಿಂದ ನಿಮ್ಮ ಹಲ್ಲುಗಳನ್ನು ಶುಚಿಯಾಗುವುದಲ್ಲದೆ ಕಾಯಿಲೆಯಿಂದ ಹಲ್ಲುಗಳನ್ನು ರಕ್ಷಿಸಿಕೊಳ್ಳಬಹುದು.
* ಹಲ್ಲಿನ ಜೊತೆಗೆ ನಾಲಿಗೆಯನ್ನು ನಿರ್ಲಕ್ಷಿಸಬೇಡಿ: ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಬ್ಯಾಕ್ಟೀರಿಯಾಗಳು ನಾಲಿಗೆಯ ಮೇಲ್ಮೈಯಲ್ಲಿ ಸಂಗ್ರಹವಾಗುವ ಕಾರಣ, ಬಾಯಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
* ಆಹಾರದ ಮೇಲೆ ಗಮನವಹಿಸಿ: ಬಾಯಿಯ ಆರೋಗ್ಯವನ್ನು ಕಾಪಾಡುವ ಆಹಾರವನ್ನು ಸೇವಿಸಿ. ಹಲ್ಲಿನ ಕೊಳೆತ ಮತ್ತು ಸವೆತಕ್ಕೆ ಕಾರಣವಾಗುವ ಸಕ್ಕರೆ ಮತ್ತು ಆಮ್ಲೀಯ ಆಹಾರಗಳು ಮತ್ತು ಪಾನೀಯಗಳನ್ನು ಮಿತವಾಗಿ ಸೇವಿಸಿ.
ಇದನ್ನೂ ಓದಿ: ಮಕ್ಕಳ ಮೂಗಿನಲ್ಲಿ ಇದ್ದಕ್ಕಿದ್ದಂತೆ ರಕ್ತ ಸುರಿಯಲು ಕಾರಣವೇನು ಗೊತ್ತಾ?
-ಧೂಮಪಾನ ಮತ್ತು ಅತಿಯಾದ ಆಲ್ಕೋಹಾಲ್ ಸೇವನೆಯಿಂದ ದೂರವಿರಿ : ಧೂಮಪಾನ ಅಥವಾ ಅತಿಯಾದ ಮದ್ಯಪಾನದಂತಹ ಅಭ್ಯಾಸಗಳು ವಸಡು ಕಾಯಿಲೆ, ಬಾಯಿಯ ಕ್ಯಾನ್ಸರ್ ಮತ್ತು ಇತರ ಹಲ್ಲಿನ ಸಮಸ್ಯೆಗಳಿಗೆ ತಂದೊಡ್ಡಬಲ್ಲದು.
*ಮೌತ್‌ವಾಶ್ ಬಳಸುವುದನ್ನು ಮರೆಯದಿರಿ: ನಿಮ್ಮ ದಿನಚರಿಯಲ್ಲಿ ಆಂಟಿಮೈಕ್ರೊಬಿಯಲ್ ಅಥವಾ ಫ್ಲೋರೈಡ್ ಮುಕ್ತ ಮೌತ್‌ವಾಶ್ ಅನ್ನು ಬಳಸಿ. ಮೌತ್ ವಾಶ್ ಗಳು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಕಾರಿಯಾಗಿದೆ.
*ಹೈಡ್ರೇಟೆಡ್ ಆಗಿರುವತ್ತ ಗಮನ ಕೊಡಿ: ದಿನವಿಡೀ ಸಾಕಷ್ಟು ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನೀರು ಬ್ಯಾಕ್ಟೀರಿಯಾಗಳನ್ನು ತೊಳೆಯಲು ಸಹಾಯ ಮಾಡುವುದಲ್ಲದೆ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Sat, 20 January 24