Hair Care Tips: ಕೂದಲು ಸಮಸ್ಯೆಗೆ ಇಲ್ಲಿದೆ ಪರಿಹಾರ..! ಮನೆಯಲ್ಲೇ ತಯಾರಿಸಿ ನೈಸರ್ಗಿಕ ತೆಂಗಿನೆಣ್ಣೆ ಶಾಂಪೂ

ನೈಸರ್ಗಿಕವಾಗಿ ಮನೆಯಲ್ಲಿ ತಯಾರಿಸಿದ ಕೂದಲು ಉತ್ಪನ್ನಗಳನ್ನು ಬಳಸುವುದು ಉತ್ತಮ. ತೆಂಗಿನ ಎಣ್ಣೆಯಿಂದ ವಿಶೇಷವಾದ ಶಾಂಪೂವನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂದು ತಿಳಿಯಿರಿ.

Hair Care Tips: ಕೂದಲು ಸಮಸ್ಯೆಗೆ ಇಲ್ಲಿದೆ ಪರಿಹಾರ..! ಮನೆಯಲ್ಲೇ ತಯಾರಿಸಿ ನೈಸರ್ಗಿಕ ತೆಂಗಿನೆಣ್ಣೆ ಶಾಂಪೂ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 25, 2022 | 7:00 AM

ಹೆಚ್ಚುತ್ತಿರುವ ಮಾಲಿನ್ಯ, ಧೂಳು, ಕೊಳಕು, ಜಂಕ್​ ಆಹಾರಗಳ ಸೇವನೆಯಿಂದಾಗಿ ಕೂದಲಿಗೆ (Hair)  ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಇದರ ಜೊತೆಗೆ ಕೆಮಿಕಲ್ ಯುಕ್ತ ಉತ್ಪನ್ನಗಳು ಕೂಡ ಕೂದಲಿನ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ನೀವು ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು ಬಯಸಿದರೆ, ನೀವು ಮೊದಲು ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ತ್ಯಜಿಸಬೇಕು. ನೈಸರ್ಗಿಕವಾಗಿ ಮನೆಯಲ್ಲಿ ತಯಾರಿಸಿದ ಕೂದಲು ಉತ್ಪನ್ನಗಳನ್ನು ಬಳಸುವುದು ಉತ್ತಮ. ತೆಂಗಿನ ಎಣ್ಣೆಯಿಂದ ವಿಶೇಷವಾದ ಶಾಂಪೂವನ್ನು ಹೇಗೆ ತಯಾರಿಸಬೇಕೆಂದು ನಾವು ತಿಳಿದುಕೊಳ್ಳೋಣ. ಇದನ್ನು ಬಳಸುವುದರಿಂದ ಕೂದಲು ಮೃದುವಾಗಿ ಮತ್ತು ಬಲವಾಗಿ ಬೆಳೆಯುತ್ತದೆ.

ಇದನ್ನೂ ಓದಿ: Photo Gallery: ಜಗಳ ಮಾಡದೆ ನಿಮ್ಮವರಿಗೆ ಹೇಳಬೇಕಾಗಿರುವುದನ್ನು ಹೇಳುವುದು ಹೇಗೆ?

ತೆಂಗಿನ ಎಣ್ಣೆಯಿಂದ ಶಾಂಪೂ ಮಾಡುವುದು ಹೇಗೆ? ಪದಾರ್ಥಗಳು 

1. ಕ್ಯಾಸ್ಟೈಲ್ 1 ಕಪ್

2. 3/4 ಕಪ್ ನೀರು

3. ಟೇಬಲ್ ಉಪ್ಪು – 2 ಟೀಸ್ಪೂನ್

4. ತೆಂಗಿನ ಎಣ್ಣೆ – 2 ಟೀಸ್ಪೂನ್

5. ಜೊಜೊಬಾ ಎಣ್ಣೆ – 2 ಟೀಸ್ಪೂನ್

ಇದನ್ನೂ ಓದಿ: Pregnancy Tips: ಗರ್ಭಾವಸ್ಥೆಯಲ್ಲಿ ಈ ಆಹಾರಗಳನ್ನು ತಿಂದರೆ ಗರ್ಭಪಾತದ ಅಪಾಯ ಹೆಚ್ಚು

ತಯಾರಿಸುವ ವಿಧಾನ:

1. ಮೊದಲು ಮೈಕ್ರೋವೇವ್ ಸೇಫ್ ಬೌಲ್​​ನಲ್ಲಿ ನೀರು ಹಾಕಿ.

2. ಈಗ ಅದನ್ನು ಮೈಕ್ರೋವೇವ್​ನಲ್ಲಿ ಅರ್ಧ ನಿಮಿಷ ಇಡಿ.

3. ನಂತರ ಅದರಲ್ಲಿ ಕ್ಯಾಸ್ಟೈಲ್ ಸೋಪ್ ಸೇರಿಸಿ.

4. ಅದರ ನಂತರ ನಿಧಾನವಾಗಿ ಮಿಶ್ರಣ ಮಾಡಿ. ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ.

5. ಅದರ ನಂತರ ಉಪ್ಪು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

6. ಈಗ ಅದಕ್ಕೆ ಎಲ್ಲಾ ಬಗೆಯ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ.

7. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಬಾಟಲಿಯಲ್ಲಿ ಸಂಗ್ರಹಿಸಿ.

8. ಈ ಶಾಂಪೂವನ್ನು ಯಾವಾಗ ಬೇಕಾದರೂ ಕೂದಲಿಗೆ ಹಚ್ಚಬಹುದು.

9. ಈ ಶಾಂಪೂ ಹಚ್ಚಿದ ನಂತರ ಬೇರೆ ಯಾವುದೇ ಶಾಂಪೂ ಬಳಸಬೇಡಿ. ಆದಾಗ್ಯೂ, ತೆಂಗಿನ ಎಣ್ಣೆಯಿಂದ ನಿಮಗೆ ಅಲರ್ಜಿ ಇದ್ದರೆ, ಈ ಶಾಂಪೂ ಬಳಸುವುದನ್ನು ತಪ್ಪಿಸುವುದು ಉತ್ತಮ.

Published On - 7:00 am, Mon, 25 July 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ