ಪ್ರಪಂಚ ಎಷ್ಟೇ ಮುಂದುವರೆದರೂ, ವಿಜ್ಞಾನ ಎಷ್ಟೇ ಬೆಳೆದಿದ್ದರೂ ಈಗಲೂ ಕೂಡ ಅದೆಷ್ಟೋ ಸಂಗತಿಗಳು ನಮ್ಮ ಊಹೆಗೂ ಮೀರಿದ್ದಾಗಿರುತ್ತವೆ, ನಮ್ಮನ್ನ ಅಚ್ಚರಿಗೆ ನೂಕುತ್ತವೆ. ಸಮುದ್ರ ಅನೇಕ ರಹಸ್ಯಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಆಗೊಮ್ಮೆ ಈಗೊಮ್ಮೆ, ಸಾಮಾಜಿಕ ಜಾಲತಾಣದಲ್ಲಿ ಸಮುದ್ರದ ಮೇಲ್ಮೈಯಲ್ಲಿ ವಾಸಿಸುವ ಬೃಹತ್ ಜೀವಿಗಳ ವಿಡಿಯೋಗಳು ಮತ್ತು ಫೋಟೋಗಳು ಜನರನ್ನು ವಿಸ್ಮಯಗೊಳಿಸುತ್ತವೆ. ಮೂಕರನ್ನಾಗಿಸುತ್ತವೆ. ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದು ಪೂರ್ಣವಾಗಿ ಬೆಳೆದ ನೀಲಿ ತಿಮಿಂಗಿಲದ ಹೃದಯ(Blue Whale Heart) ಎಷ್ಟು ದೊಡ್ಡದಾಗಿದೆ ಎಂಬುದನ್ನು ತೋರಿಸುತ್ತದೆ.
ನೀಲಿ ತಿಮಿಂಗಿಲಗಳು ಭೂಮಿಯ ಮೇಲೆ ಇರುವ ಅತಿದೊಡ್ಡ ಜೀವಿಗಳಲ್ಲಿ ಒಂದಾಗಿದೆ. ಗೋಯೆಂಕಾ ಅವರು ನೀಲಿ ತಿಮಿಂಗಿಲದ ಹೃದಯದ ಫೋಟೋ ಹಂಚಿಕೊಂಡಿದ್ದಾರೆ. ಹಾಗೂ ಇದು 181 ಕೆಜಿ ತೂಕ ಇದೆ. ಇದು 1.2 ಮೀಟರ್ ಅಗಲ ಮತ್ತು 1.5 ಮೀಟರ್ ಎತ್ತರವನ್ನು ಹೊಂದದಿದೆ. ಇದರ ಹೃದಯ ಬಡಿತ 3.2 ಕಿಮೀಗಿಂತ ಹೆಚ್ಚು ದೂರದವರೆಗೂ ಕೇಳಿಸುತ್ತದೆ ಎಂದು ಬರೆದುಕೊಂಡಿದ್ದಾರೆ. 2014 ರಲ್ಲಿ ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ತೊಳೆದು ಪ್ರದರ್ಶಿಸಲ್ಪಟ್ಟ ನೀಲಿ ತಿಮಿಂಗಿಲದ ಹೃದಯದ ಚಿತ್ರ ಇದಾಗಿದೆ. ಇದು ಸಂಶೋಧನೆಗೆ ಉತ್ತಮ ಸ್ಥಿತಿಯಲ್ಲಿದ್ದು ಕೆನಡಾದ ಟೊರೊಂಟೊದಲ್ಲಿನ ರಾಯಲ್ ಒಂಟಾರಿಯೊ ಮ್ಯೂಸಿಯಂನಲ್ಲಿ ವಿಜ್ಞಾನಿಗಳು ಸಂರಕ್ಷಿಸಿದ್ದಾರೆ. ವಿಶ್ವದ ಅತಿ ದೊಡ್ಡ ಹೃದಯದ ಚಿತ್ರಗಳನ್ನು ಗೋಯೆಂಕಾ ಹಂಚಿಕೊಂಡಿದ್ದಾರೆ.
This is the preserved heart of a blue whale which weighs 181 kg. It measures 1.2 meters wide and 1.5 meters tall and its heartbeat can be heard from more than 3.2 km away. ? ? pic.twitter.com/hutbnfXlnq
— Harsh Goenka (@hvgoenka) March 13, 2023
ಗೋಯೆಂಕಾ ಅವರು ಮಾರ್ಚ್ 13ರಂದು ಚಿತ್ರವನ್ನು ಪೋಸ್ಟ್ ಮಾಡಿದ್ದು 164k ವೀಕ್ಷಣೆ ಪಡೆದಿದೆ. ಪೋಸ್ಟ್ ನೋಡಿದವರು ಆಶ್ಚರ್ಯಕರ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಾಗೂ ಇಷ್ಟು ದೊಡ್ಡ ಹೃದಯವನ್ನು ಪರಿಪೂರ್ಣವಾಗಿ ಸಂರಕ್ಷಿಸಿರುವ ಬಗ್ಗೆ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದು ಪ್ರಶಂಸಿಸಿದ್ದಾರೆ.
“ಅದ್ಭುತ ಆದರೆ ನಿಜ. ಪ್ರಕೃತಿಯೇ ಸರ್ವಶ್ರೇಷ್ಠ” ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. “Whoaaaaaa ಬ್ರಹ್ಮಾಂಡವು ಸಸ್ಯಗಳಿಂದ ಪ್ರಾಣಿಗಳಿಂದ ಮನುಷ್ಯರಿಗೆ ತನ್ನದೇ ಆದ ಸೃಜನಶೀಲತೆಯನ್ನು ಹೊಂದಿದೆ. ಇರುವೆಯಿಂದ ತಿಮಿಂಗಿಲದವರೆಗೆ ಎಷ್ಟು ಸುಂದರವಾಗಿ ರಚಿಸಲಾಗಿದೆ, ”ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
Amazing but real. Nature is supreme.
— Anil Seth (@AnilSet11541728) March 13, 2023
Whoaaaaaaa universe has its own creativity from plants to animals to humans . From an ant to a whale how beautifully created ????????????????
— saroj mehta (@mehta_saroj) March 13, 2023
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:49 am, Wed, 15 March 23