Soy Milk: ಸೋಯಾ ಹಾಲನ್ನು ಯಾರು ಸೇವನೆ ಮಾಡಬೇಕು, ಯಾರು ಮಾಡಬಾರದು?

ಸೋಯಾ ಹಾಲಿನಲ್ಲಿ ಕ್ಯಾಲೊರಿಗಳು ತುಂಬಾ ಕಡಿಮೆ ಇದ್ದು ಪ್ರೋಟೀನ್ ಅಧಿಕವಾಗಿರುತ್ತದೆ. ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುತ್ತದೆ. ಸೋಯಾ ಹಾಲಿನಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಸ್ಯಾಚುರೇಟೆಡ್ ಕೊಬ್ಬುಗಳು ಸಹ ತುಂಬಾ ಕಡಿಮೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪರದಾಡುತ್ತಿರುವವರಿಗೆ, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಹೆಣಗಾಡುತ್ತಿರುವವರಿಗೆ ಇದು ಅತ್ಯುತ್ತಮ ಎಂದೇ ಹೇಳಬಹುದು. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು? ಯಾಕಾಗಿ ಇದರ ಸೇವನೆ ಮಾಡಬೇಕು? ಯಾರು ಸೇವನೆ ಮಾಡಬಾರದು? ಇಲ್ಲಿದೆ ಸಂಪೂರ್ಣ ಮಾಹಿತಿ.

Soy Milk: ಸೋಯಾ ಹಾಲನ್ನು ಯಾರು ಸೇವನೆ ಮಾಡಬೇಕು, ಯಾರು ಮಾಡಬಾರದು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 3:35 PM

ಸೋಯಾ ಹಾಲಿನ ಬಗ್ಗೆ ನೀವು ಕೇಳಿರಬಹುದು. ಇದು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದಲ್ಲದೆ ಇದರಲ್ಲಿ ದೇಹಕ್ಕೆ ಅಗತ್ಯವಿರುವ ಪ್ರಮುಖ ಅಮೈನೋ ಆಮ್ಲವಿದೆ. ಸೋಯಾ ಹಾಲಿನಲ್ಲಿ ಕ್ಯಾಲೊರಿಗಳು ತುಂಬಾ ಕಡಿಮೆ ಇದ್ದು ಪ್ರೋಟೀನ್ ಅಧಿಕವಾಗಿರುತ್ತದೆ. ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುತ್ತದೆ. ಸೋಯಾ ಹಾಲಿನಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಸ್ಯಾಚುರೇಟೆಡ್ ಕೊಬ್ಬುಗಳು ಸಹ ತುಂಬಾ ಕಡಿಮೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪರದಾಡುತ್ತಿರುವವರಿಗೆ, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಹೆಣಗಾಡುತ್ತಿರುವವರಿಗೆ ಇದು ಅತ್ಯುತ್ತಮ ಎಂದೇ ಹೇಳಬಹುದು. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು? ಯಾಕಾಗಿ ಇದರ ಸೇವನೆ ಮಾಡಬೇಕು? ಯಾರು ಸೇವನೆ ಮಾಡಬಾರದು? ಇಲ್ಲಿದೆ ಸಂಪೂರ್ಣ ಮಾಹಿತಿ.

ತೂಕ ಇಳಿಕೆಗೆ ಸಹಕಾರಿ

ಸಾಮಾನ್ಯವಾಗಿ ಋತುಬಂಧದ ಸಮಯದಲ್ಲಿ ಅನೇಕ ಮಹಿಳೆಯರು ಆಸ್ಟಿಯೊಪೊರೋಸಿಸ್ ನಿಂದ ಬಳಲುತ್ತಾರೆ. ಅಂತವರು ಸೋಯಾ ಹಾಲನ್ನು ಕುಡಿಯುವುದರಿಂದ ಸಮಸ್ಯೆಯನ್ನು ತಡೆಯಬಹುದು. ಅಲ್ಲದೆ ಇದರಲ್ಲಿ ಕೊಬ್ಬು ಕಡಿಮೆ ಇದ್ದು ಪ್ರೋಟೀನ್ ಮತ್ತು ಫೈಬರ್ ಅಂಶದಿಂದ ಸಮೃದ್ಧವಾಗಿರುವುದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಹಾರವಾಗಿದೆ. ಸೋಯಾ ಹಾಲಿನಲ್ಲಿ ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್ ಗಳಿರುವುದರಿಂದ ಕೂದಲು ಆರೋಗ್ಯವಾಗಿ ಬೆಳೆಯಲು ಇದು ತುಂಬಾ ಉಪಯುಕ್ತವಾಗಿದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಸೋಯಾ ಹಾಲು ಚರ್ಮ ಯಾವಾಗಲೂ ತೇವಾಂಶದಿಂದ ಕೂಡಿರಲು ಸಹಾಯ ಮಾಡುವುದಲ್ಲದೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಕ್ಯಾಲ್ಸಿಯಂ ಅಂಶ ಅಧಿಕವಾಗಿರುವ ಸೋಯಾ ಹಾಲಿನ ನಿಯಮಿತ ಸೇವನೆಯು ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. ನೀವು ಪ್ರತಿದಿನ ಈ ಹಾಲನ್ನು ಕುಡಿದರೆ, ಅದು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಅದಲ್ಲದೆ ಇದರಲ್ಲಿ ಫೈಬರ್ ಅಂಶ ಇರುವುದರಿಂದ ಇದು ರಕ್ತಹೀನತೆ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರವನ್ನು ನೀಡುತ್ತದೆ. ಸೋಯಾ ಹಾಲಿನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದಲ್ಲದೆ, ಸೋಯಾ ಹಾಲು ಕುಡಿಯುವುದರಿಂದ ಮಧುಮೇಹ ರೋಗಿಗಳಿಗೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಈ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ 12 ಇರುವುದರಿಂದ ಪ್ರತಿದಿನ ಇದನ್ನು ಕುಡಿಯುವುದರಿಂದ ದೇಹದ ದೌರ್ಬಲ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಇದಲ್ಲದೆ, ದೇಹವು ಶಕ್ತಿಯುತವಾಗುತ್ತದೆ.

ಇದನ್ನೂ ಓದಿ: ಭಾರತೀಯ ಮಾನಕ ಬ್ಯೂರೋ ಇತಿಹಾಸ ಹಾಗೂ ಈ ಸಂಸ್ಥೆಯೂ ಹೇಗೆ ಕಾರ್ಯನಿರ್ವಹಿಸುತ್ತದೆ?

ಯಾರು ಸೇವನೆ ಮಾಡಬಾರದು?

ಸೋಯಾ ಹಾಲು ಅಮೃತಕ್ಕೆ ಸಮಾನವಾದರೂ ಕೂಡ ಇದನ್ನು ಕೆಲವರು ಸೇವನೆ ಮಾಡಬಾರದು. ಅಂಡಾಶಯಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಈ ಹಾಲನ್ನು ಕುಡಿಯಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ಅಲರ್ಜಿ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಹೆಚ್ಚಿನ ಪ್ರಮಾಣದ ಈಸ್ಟ್ರೊಜೆನ್ ಅನ್ನು ಹೊಂದಿರುತ್ತದೆ. ಹಾಗಾಗಿ ದೇಹದಲ್ಲಿ ಹಾರ್ಮೋನುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಈ ಹಾಲನ್ನು ಹೆಚ್ಚು ಕುಡಿಯಬೇಡಿ. ಇದನ್ನು ಸೇವನೆ ಮಾಡುವ ಮೊದಲು ಆರೋಗ್ಯ ತಜ್ಞರನ್ನು ಸಂಪರ್ಕಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಹೆಬ್ಬಾಳದಲ್ಲಿ ಪ್ರತಿನಿತ್ಯ ಆಗುವ ಟ್ರಾಫಿಕ್ ಜಾಮ್​ಗಳಿಗೆ ಕೊನೆ ಯಾವತ್ತು?
ಹೆಬ್ಬಾಳದಲ್ಲಿ ಪ್ರತಿನಿತ್ಯ ಆಗುವ ಟ್ರಾಫಿಕ್ ಜಾಮ್​ಗಳಿಗೆ ಕೊನೆ ಯಾವತ್ತು?
ಮುಡಾ ಆರೋಪಿ ಸಿದ್ದರಾಮಯ್ಯ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ: ಕೃಷ್ಣ
ಮುಡಾ ಆರೋಪಿ ಸಿದ್ದರಾಮಯ್ಯ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ: ಕೃಷ್ಣ
ಮಧ್ಯಾಹ್ನವಾದರೂ ತುಮಕೂರು-ಶಿರಾ ಹೆದ್ದಾರಿಯಲ್ಲಿ ಕ್ಲಿಯರ್​ ಆಗದ ಟ್ರಾಫಿಕ್​​​
ಮಧ್ಯಾಹ್ನವಾದರೂ ತುಮಕೂರು-ಶಿರಾ ಹೆದ್ದಾರಿಯಲ್ಲಿ ಕ್ಲಿಯರ್​ ಆಗದ ಟ್ರಾಫಿಕ್​​​
ಸಂಡೂರು ಅಭ್ಯರ್ಥಿ ಆಯ್ಕೆ ಜಮೀರ್ ಅಹ್ಮದ್ ನೀಡುವ ಸಲಹೆ ಅಂತಿಮವಾಗುವ ಸಾಧ್ಯತೆ
ಸಂಡೂರು ಅಭ್ಯರ್ಥಿ ಆಯ್ಕೆ ಜಮೀರ್ ಅಹ್ಮದ್ ನೀಡುವ ಸಲಹೆ ಅಂತಿಮವಾಗುವ ಸಾಧ್ಯತೆ
ಸಿಎಂರನ್ನೂ ವಿಚಾರಣೆಗೆ ಒಳಪಡಿಸಿ: ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮನವಿ
ಸಿಎಂರನ್ನೂ ವಿಚಾರಣೆಗೆ ಒಳಪಡಿಸಿ: ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮನವಿ
ಮಳೆಯಿರಲಿ ಅಥವಾ ಬಿಸಿಲು; ಪ್ರೀ-ವೆಡ್ಡಿಂಗ್ ಶೂಟ್ ಮಾತ್ರ ಆಗಲೇಬೇಕು!
ಮಳೆಯಿರಲಿ ಅಥವಾ ಬಿಸಿಲು; ಪ್ರೀ-ವೆಡ್ಡಿಂಗ್ ಶೂಟ್ ಮಾತ್ರ ಆಗಲೇಬೇಕು!
ಮಳೆಗೆ ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಕಾರಣವೇ?
ಮಳೆಗೆ ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಕಾರಣವೇ?
ಮೈಸೂರು: ಮಹಿಳಾ ಪೊಲೀಸ್​ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ
ಮೈಸೂರು: ಮಹಿಳಾ ಪೊಲೀಸ್​ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ