World Standards Day 2024: ಭಾರತೀಯ ಮಾನಕ ಬ್ಯೂರೋ ಇತಿಹಾಸ ಹಾಗೂ ಈ ಸಂಸ್ಥೆಯೂ ಹೇಗೆ ಕಾರ್ಯನಿರ್ವಹಿಸುತ್ತದೆ?
ಪ್ರತಿ ವರ್ಷ ಅಕ್ಟೋಬರ್ 14 ರಂದು ವಿಶ್ವ ಗುಣಮಟ್ಟ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಡೇ ಎಂದೂ ಕರೆಯಲಾಗುತ್ತದೆ, ಗ್ರಾಹಕರು, ನೀತಿ ನಿರೂಪಕರು ಮತ್ತು ವ್ಯವಹಾರಗಳಿಗೆ ಪ್ರಮಾಣೀಕರಣದ ಮೌಲ್ಯದ ಬಗ್ಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ. ಹಾಗಾದ್ರೆ ವಿಶ್ವ ಮಾನದಂಡಗಳ ದಿನ ಪ್ರಾರಂಭವಾದದ್ದು ಹೇಗೆ? ಏನಿದರ ವಿಶೇಷತೆ? ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ವಸ್ತುವಿನ ಪ್ರಮಾಣ ಎಷ್ಟಿದೆ ಎಂಬುದಕ್ಕಿಂತ ಅದರ ಗುಣಮಟ್ಟ ಹೇಗಿದೆ ಎಂಬುದು ಮುಖ್ಯ. ಹೀಗಾಗಿ ದೈನಂದಿನ ಬದುಕಿನಲ್ಲಿ ಖರೀದಿಸುವ ವಸ್ತುಗಳಲ್ಲಿ ವಸ್ತುವಿನ ಗುಣಮಟ್ಟದ ಬಗ್ಗೆ ಗಮನ ಕೊಡುತ್ತೇವೆ. ಆದರೆ ಲವರು ಹೆಚ್ಚು ಹಣ ಕೊಟ್ಟು ಸಾಕಷ್ಟು ವಸ್ತುಗಳನ್ನು ಖರೀದಿಸುತ್ತಾರೆ. ಈ ವೇಳೆಯಲ್ಲಿ ಗುಣಮಟ್ಟದ ಬಗ್ಗೆ ಯೋಚನೆ ಮಾಡುವುದಿಲ್ಲ. ಕಡಿಮೆ ಬೆಲೆಗೆ ಸಿಕ್ಕರಂತೂ ವಸ್ತುಗಳನ್ನು ಕೊಳ್ಳುವುದಕ್ಕೆ ಮುಗಿ ಬೀಳುತ್ತಾರೆ. ಹೀಗಾಗಿ ಜನ ಸಾಮಾನ್ಯರಲ್ಲಿ ವಸ್ತುವಿನ ಗುಣ ಮಟ್ಟದ ಬಗ್ಗೆ ಅರಿವು ಮೂಡಿಸಲು ಹಾಗೂ ಗ್ರಾಹಕರಿಗೆ ನ್ಯಾಯ ಒದಗಿಸುವ ಸಲುವಾಗಿ ಅಕ್ಟೋಬರ್ 14 ರಂದು ವಿಶ್ವ ಮಾನದಂಡಗಳ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಮಾನದಂಡಗಳ ದಿನದ ಇತಿಹಾಸ
* ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್ (ISO) ಅನ್ನು 67 ತಾಂತ್ರಿಕ ವಿವಿಧ ವಿಷಯಗಳಲ್ಲಿ ಪರಿಣತಿ ಹೊಂದಿರುವ ತಜ್ಞರನ್ನು ಒಳಗೊಂಡ ಸಮಿತಿಗಳೊಂದಿಗೆ 1947 ರಲ್ಲಿ ವಿಶ್ವ ವಿಶ್ವ ಮಾನದಂಡಗಳ ದಿನವನ್ನು ಸ್ಥಾಪಿಸಲಾಯಿತು. 1946 ರಂದು 25 ದೇಶಗಳ ಪ್ರತಿನಿಧಿಗಳು ಲಂಡನ್‌ನಲ್ಲಿ ಮೊದಲ ಬಾರಿಗೆ ಒಟ್ಟು ಸೇರಿದರು. ಮೊದಲ ಸಭೆಯ ಸವಿನೆನಪಿಗಾಗಿ ವಿಶ್ವ ಮಾನದಂಡಗಳ ದಿನವನ್ನು ಆಚರಿಸಲು ಮುಂದಾಯಿತು. ಅದಲ್ಲದೇ, ಗುಣಮಟ್ಟಕ್ಕೆ ಒತ್ತು ನೀಡುವುದಕ್ಕಾಗಿ ಅಂತಾರಾಷ್ಟ್ರೀಯ ಸಂಸ್ಥೆ ರಚಿಸಲು ನಿರ್ಧರಿಸಿದರು. ಆದರೆ ಒಂದು ವರ್ಷದ ಬಳಿಕ ಐಎಸ್‌ಒ ಆಗಿ ರೂಪುಗೊಂಡಿತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 14 ರಂದು ವಿಶ್ವ ಮಾನದಂಡಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ಮಾನದಂಡಗಳ ಮಹತ್ವ ಹಾಗೂ ಆಚರಣೆ
ವಿಶ್ವ ಮಾನದಂಡಗಳ ದಿನದಂದು ನಿಯಂತ್ರಕರು, ಉದ್ಯಮಿ ಮತ್ತು ಗ್ರಾಹಕರಿಗೆ ಗುಣಮಟ್ಟದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ಮಾನದಂಡಗಳು ಗ್ರಾಹಕರ ಶ್ರಮದ ಹಣಕ್ಕೆ ನ್ಯಾಯ ಒದಗಿಸಲು ನೆರವಾಗುತ್ತವೆ. ಈ ದಿನದಂದು ವಸ್ತುವಿನ ಗುಣಮಟ್ಟ ಹೇಗಿದೆ, ಬಳಸುತ್ತಿರುವ ವಸ್ತುಗಳ ತಯಾರಿಗೆ ಅನುಸರಿಸಬೇಕಾದ ಮಾನದಂಡಗಳೇನು? ಎಂಬ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ
ಇದನ್ನೂ ಓದಿ; ವಿಪತ್ತು ಸಂಭವಿಸುವ ಮುನ್ನ ಹಾಗೂ ನಂತರದಲ್ಲಿ ಈ ಕೆಲಸ ಮಾಡಿ ಜೀವ ಉಳಿಸಿ
ಭಾರತೀಯ ಮಾನಕ ಬ್ಯೂರೋದ ಇತಿಹಾಸ ಹಾಗೂ ಕಾರ್ಯನಿರ್ವಹಣೆ ಹೇಗೆ?
ಭಾರತ ಸರ್ಕಾರದ ಆಶ್ರಯದಲ್ಲಿರುವ ಅಂಗಸಂಸ್ಥೆಯಾಗಿದೆ ಇದನ್ನು ಭಾರತೀಯ ಮಾನಕ ಬ್ಯೂರೋ ಕಾಯ್ದೆ,1986 ರಲ್ಲಿ ಸ್ಥಾಪಿಸಲಾಯಿತು. ಆದರೆ 1986, ಡಿಸೆಂಬರ್ 23 ರಂದು ಜಾರಿಗೆ ಬಂದಿತು. ಬಿಐಎಸ್, ಮತ್ತು ಪ್ರಮಾಣೀಕರಣ, ಗುರುತು ಸರಕುಗಳ ಗುಣಮಟ್ಟದ ಪ್ರಮಾಣೀಕರಣದ ಚಟುವಟಿಕೆಗಳ ಸಾಮರಸ್ಯದ ಅಭಿವೃದ್ಧಿಗಾಗಿ ಭಾರತದ ರಾಷ್ಟ್ರೀಯ ಪ್ರಮಾಣಿತ ಸಂಸ್ಥೆಯೂ ಇದಾಗಿದೆ. ಬಿಐಎಸ್ ರಾಷ್ಟ್ರೀಯ ಆರ್ಥಿಕತೆಗೆ ಹಲವಾರು ರೀತಿಯಲ್ಲಿ ಪತ್ತೆಹಚ್ಚುವಿಕೆ ಮತ್ತು ಸ್ಪಷ್ಟವಾದ ಪ್ರಯೋಜನಗಳನ್ನು ಒದಗಿಸುತ್ತಿದೆ. ಸುರಕ್ಷಿತ ವಿಶ್ವಾಸಾರ್ಹ ಗುಣಮಟ್ಟದ ಸರಕುಗಳನ್ನು ಒದಗಿಸುವುದು. ಗ್ರಾಹಕರಿಗೆ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುವುದು. ರಫ್ತು ಮತ್ತು ಆಮದುಗಳ ಬದಲಿಯನ್ನು ಉತ್ತೇಜಿಸುವುದು. ಪ್ರಮಾಣೀಕರಣ, ಪ್ರಮಾಣೀಕರಣ ಮತ್ತು ಪರೀಕ್ಷೆಯ ಮೂಲಕ ಪ್ರಭೇದಗಳ ಪ್ರಸರಣದ ಮೇಲೆ ನಿಯಂತ್ರಣ ಸಾಧಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ