AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bone Health: ಮೂಳೆಯ ಆರೋಗ್ಯ ಕಾಪಾಡಿಕೊಳ್ಳಲು ಆಹಾರದಲ್ಲಿ ಅಗಸೆ ಬೀಜ ಸೇರಿಸಿ

ವಯಸ್ಸಾಗುವುದು ನೀವು ನಿಯಂತ್ರಿಸಲಾಗದ ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ, ನೀವು ಏನು ತಿನ್ನುತ್ತೀರಿ ಎಂಬುದು ಖಂಡಿತವಾಗಿಯೂ ನಿಮ್ಮ ಕೈಯಲ್ಲಿದೆ. ಅಗಸೆ ಬೀಜಗಳಂತಹ ಕೆಲವು ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ನಿಮ್ಮ ಮೂಳೆಯ ಆರೋಗ್ಯಕ್ಕೆ ಮುಖ್ಯವಾಗಿದೆ. ಅಗಸೆ ಬೀಜಗಳಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Bone Health: ಮೂಳೆಯ ಆರೋಗ್ಯ ಕಾಪಾಡಿಕೊಳ್ಳಲು  ಆಹಾರದಲ್ಲಿ ಅಗಸೆ ಬೀಜ ಸೇರಿಸಿ
ಸಾಂದರ್ಭಿಕ ಚಿತ್ರImage Credit source: Pinterest
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Jan 04, 2024 | 10:20 AM

ವಯಸ್ಸಾದಂತೆ, ಸ್ನಾಯುಗಳ (Muscles) ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಸಮಯ ಕಳೆದಂತೆ, ನಿರಂತರ ವೃದ್ಧಾಪ್ಯದಲ್ಲಿ ನಿಮ್ಮ ಮೂಳೆಗಳು ದುರ್ಬಲವಾಗುತ್ತವೆ, ಇದು ಸಹಜ ಪ್ರಕ್ರಿಯೆ. ವಯಸ್ಸಾಗುವುದು ದುರ್ಬಲ ಮೂಳೆಗಳಿಗೆ ಒಂದು ಕಾರಣವಾದರೆ, ಪೌಷ್ಠಿಕಾಂಶದ ಕೊರತೆಯಂತಹ ಇತರ ಅಂಶಗಳು ಮತ್ತೊಂದು ಕಾರಣವಾಗಿದೆ. ವಯಸ್ಸಾಗುವುದು ನೀವು ನಿಯಂತ್ರಿಸಲಾಗದ ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ, ನೀವು ಏನು ತಿನ್ನುತ್ತೀರಿ ಎಂಬುದು ಖಂಡಿತವಾಗಿಯೂ ನಿಮ್ಮ ಕೈಯಲ್ಲಿದೆ. ಅಗಸೆ ಬೀಜಗಳಂತಹ ಕೆಲವು ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ನಿಮ್ಮ ಮೂಳೆಯ ಆರೋಗ್ಯಕ್ಕೆ ಮುಖ್ಯವಾಗಿದೆ. ಅಗಸೆ ಬೀಜಗಳಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಮೂಳೆಯ ಆರೋಗ್ಯಕ್ಕೆ ಅಗಸೆ ಬೀಜಗಳ ಪ್ರಯೋಜನಗಳು?

1. ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ:

ಅಗಸೆ ಬೀಜಗಳು ಆಲ್ಫಾ -ಲಿನೋಲೆನಿಕ್ ಆಮ್ಲದ (ಎಎಲ್ಎ) ಅತ್ಯುತ್ತಮ ಮೂಲವಾಗಿದೆ, ಇದು ಒಂದು ರೀತಿಯ ಆರೋಗ್ಯಕರ ಒಮೆಗಾ -3 ಕೊಬ್ಬಿನಾಮ್ಲವಾಗಿದೆ. ಜನರಲ್ ಆಫ್ ಫುಡ್ ಬಯೋಕೆಮಿಸ್ಟ್ರಿಯಲ್ಲಿ ಪ್ರಕಟವಾದ ಅಧ್ಯಯನವು ಕೊಬ್ಬಿನಾಮ್ಲಗಳು ಒಟ್ಟಾರೆ ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಮೂಳೆಗೆ ಸಂಬಂಧ ಪಟ್ಟ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕಂಡು ಹಿಡಿದಿದೆ. ಇದು ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಮೂಳೆ ನಷ್ಟದಿಂದ ಕಾಪಾಡುತ್ತದೆ ಎಂದು ತೋರಿಸಿಕೊಟ್ಟಿದೆ. ಈ ಸಣ್ಣ ಬೀಜಗಳಲ್ಲಿ ಮೆಗ್ನೀಸಿಯಮ್, ರಂಜಕ, ಫೈಬರ್ ಕೂಡ ಸಮೃದ್ಧವಾಗಿದೆ, ಇದು ಮೂಳೆಯ ಆರೋಗ್ಯವನ್ನು ಉತ್ತೇಜಿಸಲು ಅವಶ್ಯಕವಾಗಿದೆ.

ಇದನ್ನೂ ಓದಿ: ಆಹಾರದಲ್ಲಿ ಅತ್ಯಗತ್ಯವಾಗಿರುವ ಚಕ್ರಮೊಗ್ಗಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿದೆಯಾ?

2. ಲಿಗ್ನಾನ್ ಸಮೃದ್ಧವಾಗಿದೆ:

ಅಗಸೆ ಬೀಜಗಳು ಲಿಗ್ನಾನ್ ಎಂಬ ಒಂದು ರೀತಿಯ ಸಸ್ಯ ಪಾಲಿಫಿನಾಲ್ಗಳಿಂದ ಸಮೃದ್ಧವಾಗಿದೆ. ಫಾರ್ಮಾಸ್ಯುಟಿಕಲ್ಸ್ನಲ್ಲಿ ಪ್ರಕಟವಾದ ಅಧ್ಯಯನವು ಅಗಸೆ ಬೀಜಗಳಲ್ಲಿ ಈ ಸಂಯುಕ್ತ ಇರುವುದನ್ನು ಕಂಡು ಹಿಡಿದಿದೆ. ಲಿಗ್ನಾನ್ ಗಳು ಫೈಬರ್ ನಲ್ಲಿ ಸಾಮಾನ್ಯ ಸಂಯುಕ್ತಗಳಾಗಿವೆ, ಮತ್ತು ಅವು ಫೈಬರ್ ನ ಪ್ರಯೋಜನಗಳ ಜೊತೆಗೆ ದೇಹಕ್ಕೆ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ. ಹೀಗಾಗಿ, ಇದು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಕೂಡ ಸಹಾಯ ಮಾಡುತ್ತದೆ ಮತ್ತು ಋತುಬಂಧದ ನಂತರ ಮಹಿಳೆಯರಲ್ಲಿ ಮೂಳೆ ಸಾಂದ್ರತೆಯ ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಮಾತ್ರವಲ್ಲ, ವಯಸ್ಸು ಹೆಚ್ಚಾದಂತೆ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ.

3. ಫೈಬರ್ ಸಮೃದ್ಧವಾಗಿದೆ:

ಫೈಬರ್, ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಅಗತ್ಯ ಖನಿಜಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ಇದು ನಿಮ್ಮ ಮೂಳೆಗಳನ್ನು ಬಲಗೊಳಿಸುತ್ತದೆ. ಜೊತೆಗೆ ಮೂಳೆಯ ಆರೋಗ್ಯಕ್ಕೆ ಈ ಪೋಷಕಾಂಶಗಳು ಅತ್ಯಗತ್ಯ. ದೇಹದಲ್ಲಿ ಇವುಗಳ ಸರಿಯಾದ ಪ್ರಮಾಣ ಇದ್ದಲ್ಲಿ ಮೂಳೆಗಳು ದುರ್ಬಲವಾಗುವುದಿಲ್ಲ. ಆಹಾರದಲ್ಲಿ ಫೈಬರ್ ಗುಣಮಟ್ಟವನ್ನು ಹೆಚ್ಚಿಸಲು ಅಗಸೆ ಬೀಜಗಳು ಅತ್ಯುತ್ತಮ ಆಯ್ಕೆ ಎಂದು ಸಾಬೀತಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:19 am, Thu, 4 January 24