Kannada News Lifestyle Here are some tips on how to teach kids to express anger in a healthy way
ಮಕ್ಕಳಿಗೆ ಆರೋಗ್ಯಕರ ರೀತಿಯಲ್ಲಿ ಕೋಪವನ್ನು ವ್ಯಕ್ತಪಡಿಸಲು ಕಲಿಸಿಕೊಡುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್
ಮಕ್ಕಳು ಆರೋಗ್ಯಕರ ರೀತಿಯಲ್ಲಿ ಕೋಪವನ್ನು ವ್ಯಕ್ತಪಡಿಸಲು ಕಲಿಸಿಕೊಡುವುದು ಹೇಗೆ ಎಂದು ಮನೋವಿಜ್ಞಾನಿ ಡಾ ಜಾಜ್ಮಿನ್ ಮೆಕಾಯ್ ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳು ಇಲ್ಲಿವೆ ನೋಡಿ.
ಸಾಂಕೇತಿಕ ಚಿತ್ರ
Follow us on
ಕೆಲವು ಮಕ್ಕಳು ಮೌನ ಸ್ವಭಾವದಾಗಿರುತ್ತಾರೆ. ಅದಾಗ್ಯೂ ಕೆಲವರು ಮುಟ್ಟಿದ್ದಕ್ಕೆಲ್ಲಾ ಕೋಪಗೊಳ್ಳುತ್ತಾರೆ. ಇಂಥ ಮಕ್ಕಳನ್ನು ಪೋಷಕರು ಹಿಂಸಾತ್ಮಕವಾಗಿ ಹತೋಟಿಗೆ ತರುವ ಬದಲು ಆರೋಗ್ಯಕರ ರೀತಿಯಲ್ಲಿ ಕೋಪವನ್ನು ವ್ಯಕ್ತಪಡಿವುದು ಹೇಗೆ ಎಂದು ಹೇಳಿಕೊಡುವುದು ಅವಶ್ಯಕವಾಗಿದೆ. ಇದಕ್ಕೂ ಮುನ್ನ ಮಕ್ಕಳು ಯಾವ ಕಾರಣಗಳಿಗೆ ಕೋಪಗೊಳ್ಳುತ್ತಾರೆ ಎಂದು ತಿಳಿದುಕೊಳ್ಳೋಣ. ಮನೋವಿಜ್ಞಾನಿ ಡಾ ಜಾಜ್ಮಿನ್ ಮೆಕಾಯ್ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಕ್ಕಳು ಸಾಮಾನ್ಯವಾಗಿ ಮೂರು ಕಾರಣಗಳಿಂದ ಕೋಪವನ್ನು ವ್ಯಕ್ತಪಡಿಸಲು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ಮನೋವಿಜ್ಞಾನಿ ಡಾ ಜಾಜ್ಮಿನ್ ಮೆಕಾಯ್ ಅವರು ಹೇಳಿದ ಮಕ್ಕಳ ಮೂರು ವರ್ತನೆಗಳು ಈ ಕೆಳಗಿನಂತಿವೆ.
ತಮ್ಮ ಕೋಪವನ್ನು ವ್ಯಕ್ತಪಡಿಸಲು ಪದಗಳಲ್ಲಿ ಏನು ಹೇಳಬೇಕೆಂದು ಅವರಿಗೆ ತಿಳಿದಿಲ್ಲ.
ತಮ್ಮ ಮಾತುಗಳು ತಮ್ಮನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಕಷ್ಟು ಅರ್ಥವನ್ನು ಹೊಂದಿಲ್ಲ ಎಂದು ಅವರು ಭಾವಿಸುತ್ತಾರೆ.
ಅವರು ದೈಹಿಕ ಪ್ರಚೋದನೆಯಿಂದ ವರ್ತಿಸುತ್ತಾರೆ ಮತ್ತು ಆಕ್ರಮಣಕಾರಿಯಾಗುತ್ತಾರೆ.
ಪೋಷಕರು ಮಕ್ಕಳನ್ನು ಕೋಪಿಸಿಕೊಳ್ಳಬೇಡಿ ಎಂದು ಹೇಳುವ ಬದಲು ಅವರು ಕೋಪವನ್ನು ಸರಿಯಾದ ಮತ್ತು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸಲು ನಾವು ಅವರಿಗೆ ಕಲಿಸಬೇಕು ಎಂದು ಡಾ.ಜಾಜ್ಮಿನ್ ಮೆಕಾಯ್ ಹೇಳುತ್ತಾರೆ. ಆರೋಗ್ಯಕರವಾಗಿ ಕೋಪವನ್ನು ವ್ಯಕ್ತಪಡಿಸಲು ಜಾಜ್ಮಿನ್ ಅವರು ನೀಡಿದ ಸಲಹೆಗಳು ಈ ಕೆಳಗಿನಂತಿವೆ:
ಮಕ್ಕಳಿಗೆ ಕೋಪವನ್ನು ಹೊರಹಾಕಲು ಕಲಿಸಬಹುದಾದ ಹಲವಾರು ಆರೋಗ್ಯಕರ ಮಾರ್ಗಗಳಿವೆ. ಮಕ್ಕಳನ್ನು ನೃತ್ಯ ಮಾಡಲು ಬಿಡುವುದು, ಒಳಾಂಗಣದಲ್ಲಿ ಅಥವಾ ಹೊರಾಂಗಣದಲ್ಲಿ ಆಡಲು ಬಿಡಬೇಕು, ಆಳವಾದ ಉಸಿರನ್ನು ತೆಗೆದುಕೊಳ್ಳಲು ಬಿಡಬೇಕು, ಅವರಿಗೆ ವಿಶ್ರಾಂತಿಯನ್ನು ನೀಡಬೇಕು. ಆ ಮೂಲಕ ಮಕ್ಕಳು ತಮ್ಮ ಒತ್ತಡದಿಂದ ಹೊರಬರಲು ಸಹಾಯ ಮಾಡಬೇಕು.
ಕೋಪ ಸೇರಿದಂತೆ ಭಾವನೆಗಳ ಬಗ್ಗೆ ಮಕ್ಕಳ ಪುಸ್ತಕಗಳನ್ನು ಪರಿಚಯಿಸಿ. “ಮುಂಗೋಪಿ ಮಂಕಿ” ಮತ್ತು “ರೋರಿಂಗ್ ಮ್ಯಾಡ್ ರಿಲೇ” ಅದ್ಭುತವಾಗಿದೆ. ಹೆಚ್ಚಿನ ಶಿಫಾರಸುಗಳಿಗಾಗಿ ನನ್ನ YouTube ವೀಡಿಯೋ “ಕೋಪ ನಿರ್ವಹಣೆಯ ಕುರಿತು ಮಕ್ಕಳ ಪುಸ್ತಕ ಸಂಗ್ರಹ” ಮತ್ತು “ಭಾವನೆಗಳ ಕುರಿತು ಮಕ್ಕಳ ಪುಸ್ತಕ ಸಂಗ್ರಹ” ಅನ್ನು ಪರಿಶೀಲಿಸಿ ಎಂದು ಜಾಜ್ಮಿನ್ ಹೇಳಿದ್ದಾರೆ.
ಅಂಬೆಗಾಲಿಡುವ ವರ್ಷಗಳಲ್ಲಿ ನಿಮ್ಮ ಮಗುವಿಗೆ ಕೋಪವನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸಲು ಸಹಾಯಕವಾಗುವ ಪದಗಳನ್ನು ಕಳುಹಿಸಿಕೊಡಬೇಕು. ದಯವಿಟ್ಟು, ಬೇಡ ಧನ್ಯವಾದಗಳು, ನನಗೆ ಇಷ್ಟವಿಲ್ಲ ಇತ್ಯಾದಿ ಪದಗಳನ್ನು ಕಲಿಸಿಕೊಡಬೇಕು.