AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಯಲ್ಲಿ ಶೂಗಳು ನೆನೆದಿವೆಯೇ? ಈ ಸಲಹೆ ಪಾಲಿಸಿ ಶೂಗಳು ಬೇಗನೆ ಒಣಗುತ್ತವೆ

ಮಳೆಯಲ್ಲಿ ಶೂ ಒಣಗಿಸುವುದೇ ಒಂದು ದೊಡ್ಡ ಸಾಹಸ, ಮಳೆಗೆ ಒಮ್ಮೆ ಒದ್ದೆಯಾದರೆ ಮತ್ತೆ ಅದು ಒಣಗಳು ಎರಡು ಮೂರು ದಿನ ಬೇಕು. ಅದರ ಜತೆಗೆ ಕೆಟ್ಟ ವಾಸನೆ ಕೂಡ ಬರುತ್ತದೆ. ಅದಕ್ಕಾಗಿ ಈ ಸಲಹೆಗಳನ್ನು ಪಾಲಿಸಿದ್ರೆ ಬೇಗ ಶೂ ಒಣಗಿಸಬಹುದು, ವಾಸನೆಯಿಂದ ಮುಕ್ತಿಯನ್ನು ಪಡೆಯಬಹುದು. ಅದಕ್ಕಾಗಿ ಏನು ಮಾಡಬೇಕು. ಇಲ್ಲಿದೆ ನೋಡಿ ಶಶಾಂಕ್ ಅಲ್ಶಿ ಸಲಹೆ.

ಮಳೆಯಲ್ಲಿ ಶೂಗಳು ನೆನೆದಿವೆಯೇ? ಈ ಸಲಹೆ ಪಾಲಿಸಿ ಶೂಗಳು ಬೇಗನೆ ಒಣಗುತ್ತವೆ
ವೈರಲ್​​ ಪೋಸ್ಟ್​
ಮಾಲಾಶ್ರೀ ಅಂಚನ್​
| Edited By: |

Updated on: Aug 15, 2025 | 5:05 PM

Share

ಈ ಮಳೆಗೆ ಶೂ (dry shoes) ಹಾಕುವುದೇ ಒಂದು ದೊಡ್ಡ ತಲೆನೋವು, ಆದರೆ ಆಫೀಸ್​​, ಸ್ಕೂಲ್​​​​ಗೆ ಹೋಗುವಾಗ ಶೂ ಹಾಕಲೇಬೇಕು, ಬೇರೆ ದಾರಿಯೇ ಇಲ್ಲ. ಮಳೆಗೆ ಶೂ ಹಾಕಿಕೊಂಡು ಹೋದ್ರೆ, ಅದು ತಕ್ಷಣಕ್ಕೆ ಒಣಗುವುದಿಲ್ಲ. ಜತೆಗೆ ಕೆಟ್ಟ ವಾಸನೆಯನ್ನು ಸಹ ಬರಲು ಪ್ರಾರಂಭಿಸುತ್ತವೆ. ಆದರೆ ಇದಕ್ಕೆ ಒಂದು ಸುಲಭ ಪರಿಹಾರವನ್ನು ಫ್ಯಾಷನ್​​​​​​​ ಸಲಹೆಗಾರ ಶಶಾಂಕ್ ಅಲ್ಶಿ ಅವರು ತನ್ನ ಇನ್ಸ್ಟಾಗ್ರಾಮ್​​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನೀವು ನಿಮ್ಮ ಬೂಟುಗಳನ್ನು ಬೇಗನೆ ಒಣಗಿಸುವುದು ಮಾತ್ರವಲ್ಲದೆ, ವಾಸನೆಯನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ಹೇಳಿದ್ದಾರೆ ನೋಡಿ.

ಬೂಟುಗಳು ಒದ್ದೆಯಾದರೆ ಹೀಗೆ ಮಾಡಿ

ಮೊದಲು ಇನ್ಸೋಲ್ ತೆಗೆದುಹಾಕಿ:

ಶೂ ಒಳಗಿನಿಂದ ಇನ್ಸೋಲ್ ಅನ್ನು ತಕ್ಷಣ ತೆಗೆದುಹಾಕಿ. ಇನ್ಸೋಲ್ ಕೊಳಕಾಗಿದ್ದರೆ, ಅದನ್ನು ಉಗುರು ಬೆಚ್ಚಗಿನ ನೀರು ಮತ್ತು ಸೋಪಿನಿಂದ ನಿಧಾನವಾಗಿ ಸ್ವಚ್ಛಗೊಳಿಸಿ ಮತ್ತು ಪ್ರತ್ಯೇಕವಾಗಿ ಒಣಗಲು ಬಿಡಿ. ಹೀಗೆ ಮಾಡುವುದರಿಂದ ಶೂಗಳು ಬೇಗನೆ ಒಣಗುತ್ತವೆ ಮತ್ತು ತೇವಾಂಶ ಕಡಿಮೆಯಾಗುತ್ತದೆ.

ಇದನ್ನೂ ಓದಿ
Image
ಮೂಸಂಬಿ ಜ್ಯೂಸ್ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ನೋಡಿ
Image
ಭಾರತದ ಯಾವ ರಾಜ್ಯದಲ್ಲಿ ನಾಯಿ ಕಡಿತದ ಪ್ರಕರಣ ಹೆಚ್ಚಿದೆ?
Image
ಬಾರ್ಲಿ ನೀರು ಆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ
Image
ಮೆದುಳು ನಿಷ್ಕ್ರಿಯಗೊಂಡ ಒಬ್ಬ ವ್ಯಕ್ತಿ 8 ಮಂದಿಯ ಜೀವ ಉಳಿಸಬಹುದು!

ಹಳೆಯ ನ್ಯೂಸ್​​​ ಪೇಪರ್ ಬಳಸಿ:

ಹಳೆಯ ವೃತ್ತಪತ್ರಿಕೆಗಳನ್ನು ಹರಿದು, ಅವುಗಳನ್ನು ಉಂಡೆಯಾಗಿ ಮಾಡಿ, ನಂತರ ನಿಮ್ಮ ಬೂಟುಗಳ ಒಳಗೆ ತುಂಬಿಸಿ. ವೃತ್ತಪತ್ರಿಕೆಗಳು ನೀರನ್ನು ಬೇಗನೆ ಹೀರಿಕೊಳ್ಳುತ್ತವೆ ಮತ್ತು ಬೂಟುಗಳನ್ನು ಒಳಗಿನಿಂದ ಒಣಗಿಸಲು ಸಹಾಯ ಮಾಡುತ್ತದೆ.

ಪೇಪರ್ ಬದಲಾಯಿಸಿ:

ಶೂಗಳು ತುಂಬಾ ಒದ್ದೆಯಾಗಿದ್ದರೆ, ನೀವು ವೃತ್ತಪತ್ರಿಕೆಯನ್ನು 2 ರಿಂದ 3 ಬಾರಿ ಬದಲಾಯಿಸಬಹುದು. ತಾಜಾ ವೃತ್ತಪತ್ರಿಕೆ ಮತ್ತೆ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ವೇಗವಾಗಿ ಒಣಗಳು ಸಹಾಯ ಮಾಡುತ್ತದೆ.

ಇಲ್ಲಿದೆ ಪೋಸ್ಟ್ :

View this post on Instagram

A post shared by Shashank Alshi (@alshihacks)

ಕಾಫಿ ಪುಡಿ ಬಳಸಿ:

ಶೂಗಳು ಕೆಟ್ಟ ವಾಸನೆ ಬರುತ್ತಿದ್ದರೆ, ಸ್ವಲ್ಪ ಕಾಫಿ ಪುಡಿಯನ್ನು ಟಿಶ್ಯೂ ಕಾಗದದಲ್ಲಿ ಹಾಕಿ ನಿಮ್ಮ ಶೂಗಳ ಒಳಗೆ ಇರಿಸಿ. ಕಾಫಿಯ ವಾಸನೆಯು ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಶೂಗಳು ತಾಜಾವಾಗಿರುತ್ತವೆ.

ಇದನ್ನೂ ಓದಿ: ಬೆಕ್ಕು, ಇಲಿ; ಈ ಚಿತ್ರದಲ್ಲಿ ನೀವು ಗಮನಿಸುವ ಮೊದಲ ಅಂಶ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಹೇಳಬಲ್ಲದು

ಈ ವಿಷಯಗಳು ಕೂಡ ನೆನಪಿರಲಿ :

  • ಮಳೆಗಾಲದಲ್ಲಿ, ಪ್ರತಿ 1-2 ವಾರಗಳಿಗೊಮ್ಮೆ ನಿಮ್ಮ ಬೂಟುಗಳನ್ನು ತೊಳೆಯಿರಿ. ಇದು ಧೂಳು, ಕೊಳಕು ಮತ್ತು ಬ್ಯಾಕ್ಟೀರಿಯಾಗಳು ಅವುಗಳಲ್ಲಿ ಸಂಗ್ರಹವಾಗುವುದನ್ನು ತಡೆಯುತ್ತದೆ, ವಾಸನೆಯ ಸಮಸ್ಯೆಯೂ ಇರುವುದಿಲ್ಲ.
  • ಬೂಟುಗಳನ್ನು ಒಣಗಲು ದೀರ್ಘಕಾಲ ನೇರ ಸೂರ್ಯನ ಬೆಳಕಿನಲ್ಲಿ ಇಡಬೇಡಿ. ಹಾಗೆ ಮಾಡುವುದರಿಂದ ಅವುಗಳ ಬಣ್ಣ ಮತ್ತು ಗುಣಮಟ್ಟ ಹಾಳಾಗಬಹುದು. ಸೌಮ್ಯವಾದ ಸೂರ್ಯನ ಬೆಳಕು ಅಥವಾ ಗಾಳಿ ಇರುವ ಸ್ಥಳದಲ್ಲಿ ಅವುಗಳನ್ನು ಇರಿಸಿ.
  • ಈ ಸುಲಭವಾದ ಮನೆ ಸಲಹೆಗಳ ಸಹಾಯದಿಂದ, ನೀವು ನಿಮ್ಮ ಒದ್ದೆಯಾದ ಬೂಟುಗಳನ್ನು 2 ರಿಂದ 3 ಗಂಟೆಗಳಲ್ಲಿ ಒಣಗಿಸಬಹುದು ಹಾಗೂ ದೀರ್ಘಕಾಲದವರೆಗೆ ಅವುಗಳನ್ನು ಉತ್ತಮ ಸ್ಥಿತಿಯಲ್ಲಿ ಇಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ