ವಿಶ್ವದಲ್ಲೇ ದುಬಾರಿ ತರಕಾರಿ: ಕೆಜಿಗೆ 85,000 ರೂಪಾಯಿ, ಯಾಕಿಷ್ಟು ಬೆಲೆ?
ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಈ ತರಕಾರಿಯ ಬೆಲೆ ಪ್ರತಿ ಕೆಜಿಗೆ 85,000 ರೂಪಾಯಿಗಳು. ಆದರೆ ಈ ತರಕಾರಿಯನ್ನು ಸಾಮಾನ್ಯವಾಗಿ ಭಾರತದಲ್ಲಿ ಬೆಳೆಸಲಾಗುವುದಿಲ್ಲ.
ನಮ್ಮಲ್ಲಿ ತರಕಾರಿಗಳನ್ನು ಸ್ವಲ್ಪ ಜಾಸ್ತಿ ಬೆಲೆ ಎಂದಾಕ್ಷಣ ದಿನಸಿ ಅಂಗಡಿಯವನಲ್ಲಿ ಚೌಕಾಸಿ ಮಾಡಿ ಮೂವತ್ತು , ನಲುವತ್ತು ರೂಪಾಯಿಗಳಿಗೆ ತರಕಾರಿಗಳನ್ನು ಖರೀದಿಸುವವರೇ ಹೆಚ್ಚು. ಆದರೆ ಇಲ್ಲೊಂದು ತರಕಾರಿಯ ಬೆಲೆ 85,000 ರೂಪಾಯಿ ಎಂದರೆ ನೀವೂ ನಂಬುತ್ತೀರಾ? ಆದರೆ ನಂಬಲೇ ಬೇಕು. ಸಸ್ಯಾಹಾರಕ್ಕಾಗಿ 85,000 ರೂಪಾಯಿಗಳನ್ನು ಖರ್ಚು ಮಾಡುವುದು ಹಾಸ್ಯಾಸ್ಪದ ಎಂದು ನೀವು ಭಾವಿಸಬಹುದು. ಆದರೆ ಇದು ನಿಜ.
ಹೌದು, ಈ ತರಕಾರಿಯ ಹೆಸರು ಹಾಪ್‌ಶೂಟ್ಸ್(Hopshoots) , ಇದು ಯುರೋಪಿಯನ್ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಇದನ್ನು ವಿಶ್ವದ ಅತ್ಯಂತ ದುಬಾರಿ ತರಕಾರಿ(The world’s most expensive vegetable) ಎಂದು ಕರೆಯಲಾಗುತ್ತದೆ. ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಈ ತರಕಾರಿಯ ಬೆಲೆ ಪ್ರತಿ ಕೆಜಿಗೆ 85,000 ರೂಪಾಯಿಗಳು. ಆದರೆ ಈ ತರಕಾರಿಯನ್ನು ಸಾಮಾನ್ಯವಾಗಿ ಭಾರತದಲ್ಲಿ ಬೆಳೆಸಲಾಗುವುದಿಲ್ಲ.
ಹಾಪ್ ಸಸ್ಯದ ಹಸಿರು ಬಳ್ಳಿಗಳಿಂದ ಕೂಡಿದ್ದು, ಇದರ ಹೂವುಗಳನ್ನು ಆಲ್ಕೊಹಾಲ್ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಇದು ಕೇವಲ ಇದರ ಹೂವಿನಿಂದಾಗಿ ಮಾತ್ರ ಇಷ್ಟೊಂದು ದುಬಾರಿಯಾಗಿಲ್ಲ. ಬದಲಾಗಿ ಇದರ ಎಲೆಗಳಿಂದಲೂ ಸಾಕಷ್ಟು ಪ್ರಯೋಜನವನ್ನು ಹೊಂದಿದೆ. ಭಾರತದ ಬೆಲೆಯಲ್ಲಿ ಹೇಳುವುದಾದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ 85,000 ರಿಂದ 1 ಲಕ್ಷ ರೂಪಾಯಿದೆ.
ದಿ ಗಾರ್ಡಿಯನ್ ಪ್ರಕಾರ, ಈ ಸಸ್ಯ ಹಾಗೂ ಅದರ ತರಕಾರಿ ತುಂಬಾ ದುಬಾರಿಯಾಗಿದೆ ಏಕೆಂದರೆ ಅವುಗಳನ್ನು ಬೆಳೆಯುವುದು ಮತ್ತು ಕೊಯ್ಲು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಅಷ್ಟೇ ಶ್ರಮದಾಯಕವಾಗಿದೆ ಎಂದು ತಿಳಿದು ಬಂದಿದೆ. ವರ್ಷಗಳ ಹಿಂದೆಯಷ್ಟೇ ಈ ತರಕಾರಿ ಭಾರತದಲ್ಲಿ ಬೆಳೆಯಲಾಗುತ್ತಿದೆ ಎಂಬ ಸಾಕಷ್ಟು ಸುದ್ದಿಗಳು ವರದಿಯಾಗಿದ್ದು, ಕಾಲ ನಂತರದಲ್ಲಿ ಇದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.
ಇದನ್ನು ಓದಿ: ನೀವು ಥಂಬ್ಸ್ ಅಪ್ ಮಾಡುವಾಗ ನಿಮ್ಮ ಹೆಬ್ಬೆರಳು ಯಾವ ರೀತಿಯಾಗಿದೆ ಎಂದು ತಿಳಿದುಕೊಳ್ಳಿ
ಇದಕ್ಕೆ ನಿದರ್ಶನವೆಂದರೆ, ಔರಂಗಾಬಾದ್ ಜಿಲ್ಲೆಯ ರೈತನೊಬ್ಬ ಪ್ರತಿ ಕೆಜಿಗೆ ಒಂದು ಲಕ್ಷ ರೂಪಾಯಿ ದರದಲ್ಲಿ ಮಾರಾಟ ಮಾಡಿದ್ದಾನೆ ಎಂಬ ಐಎಎಸ್ ಅಧಿಕಾರಿಯೊಬ್ಬರ ಟ್ವಿಟ್ ಮಾಡಿದ್ದು, ದೊಡ್ಡ ಸುದ್ದಿ ಮಾಡಿತ್ತು. ಆದರೆ ಈ ಕುತೂಹಲವನ್ನು ಹುಡುಕಿ ಹೊರಟ ಪತ್ರಕರ್ತರ ತಂಡ ಕೊನೆಗೂ ಈ ದುಬಾರಿ ತರಕಾರಿ ಕಥೆ ಸುಳ್ಳು ಎನ್ನುವುದನ್ನು ಸಾಬೀತುಪಡಿಸಿದೆ. ಆದ್ದರಿಂದ ಭಾರತದಲ್ಲಿ ಈ ಸಸ್ಯವನ್ನು ಬೆಳೆಸುವುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:51 pm, Sun, 27 November 22