Online Food Order: ನೀವು ಫುಡ್ ಆರ್ಡರ್ ಮಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ
ನಿಮ್ಮ ಸಮಯ, ವೆಚ್ಚವನ್ನು ಉಳಿಸುವುದರ ಜೊತೆಗೆ ಅತ್ಯಂತ ಸುಲಭವಾಗಿ ನಿಮಗೆ ಬೇಕಾಗಿರುವ ನೆಚ್ಚಿನ ಆಹಾರವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದ್ದರಿಂದ ಇಂದು ಸಾಕಷ್ಟು ಜನರು ಇದರ ಮೇಲೆಯೇ ಅವಲಂಬಿತರಾಗಿದ್ದಾರೆ.
ಇಂದಿನ ಬದಲಾದ ಜೀವನಶೈಲಿಯಿಂದಾಗಿ ಮನೆಯಲ್ಲಿಯೇ ಆಹಾರ ತಯಾರಿಸುವುದ್ದಕಿಂತ ಹೆಚ್ಚಾಗಿ ಹೊರಗಡೆಯಿಂದಾನೇ ಆಹಾರಗಳನ್ನು ಆರ್ಡರ್ ಮಾಡುವ ಅಭ್ಯಾಸಗಳೇ ಹೆಚ್ಚಾಗಿ ಬಿಟ್ಟಿದೆ. ಇದು ತ್ವರಿತವಾಗಿ ಮನೆ ಬಾಗಿಲಿಗೆ ತಲುಪುವುದರಿಂದ ಸುಲಭವಾಗಿ ಬಗೆ ಬಗೆಯ ಆಹಾರಗಳನ್ನು ಸವಿಯಬಹುದು. ಆದರೆ ನೀವು ಪ್ರತಿ ಬಾರಿ ಫುಡ್ ಆರ್ಡರ್ ಮಾಡುವ ಮುನ್ನ ಈ ಕೆಳಗಿನ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳಿ. ಆನ್ಲೈನ್ ಫುಡ್ ಆರ್ಡರ್ ನಿಮ್ಮ ಸಮಯ, ವೆಚ್ಚವನ್ನು ಉಳಿಸುವುದರ ಜೊತೆಗೆ ಅತ್ಯಂತ ಸುಲಭವಾಗಿ ನಿಮಗೆ ಬೇಕಾಗಿರುವ ನೆಚ್ಚಿನ ಆಹಾರವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದ್ದರಿಂದ ಇಂದು ಸಾಕಷ್ಟು ಜನರು ಇದರ ಮೇಲೆಯೇ ಅವಲಂಬಿತರಾಗಿದ್ದಾರೆ.
ನಿಮ್ಮ ಸಂಗಾತಿ ತುಂಬಾ ದಿನಗಳ ಬಳಿಕ ಅಡುಗೆ ಮಾಡಲು ಮನಸಿಲ್ಲ, ಹೊರಗಡೆಯಿಂದ ಆರ್ಡರ್ ಮಾಡೋಣ ಎಂದು ಹೇಳಿದಾಗ ನೀವು ಗಮನಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.
ಎಷ್ಟು ಪ್ರಮಾಣದ ಆಹಾರ ಬೇಕು?: ಪ್ರಾರಂಭದಲ್ಲಿ ನೀವು ಎಷ್ಟು ಜನರಿದ್ದೀರಿ, ಆಹಾರವನ್ನು ಖರೀದಿಸುವಾಗ ಎಷ್ಟು ಪ್ರಮಾಣದ ಆಹಾರ ಬೇಕು ಎಂಬುದನ್ನು ಮೊದಲು ಯೋಚಿಸಬೇಕು. ಸಾಕಷ್ಟು ಜನರು ಹೊರಗಡೆಯಿಂದ ಖರೀದಿಸುವಾಗ ಫುಡ್ ಆರ್ಡರ್ ಅಪ್ ನಲ್ಲಿ ಆಕರ್ಷಕವಾಗಿ ಕಾಣುವ ಎಲ್ಲವನ್ನು ಖರೀದಿಸುವ ಅಭ್ಯಾಸ ಇದೆ. ಇದ್ದರಿಂದಾಗಿ ಸಾಕಷ್ಟು ಆಹಾರಗಳನ್ನು ಬಿಸಾಡುವ ಸನ್ನಿವೇಶ ಬರಬಹುದು. ಆದ್ದರಿಂದ ನೀವು ಸಾಮಾನ್ಯವಾಗಿ ಎಷ್ಟು ಜನ ಇದ್ದೀರಿ, ಎಷ್ಟು ಪ್ರಮಾಣದ ಆಹಾರವನ್ನು ಖರೀದಿಸುತ್ತೀರಿ ಎಂಬುದು ಕೂಡ ಮೊದಲೇ ಯೋಚಿಸಬೇಕು. ನಿಮ್ಮ ಆಯ್ಕೆಗಳು ಯಾವತ್ತೂ ಓವರ್ಲೋಡ್ ಆಗದಿರಲಿ.
ನಿಮ್ಮ ನೆಚ್ಚಿನ ಫುಡ್ ಮೊದಲೇ ಆಯ್ಕೆ ಮಾಡಿ ಇಡಿ: ಸಾಮಾನ್ಯವಾಗಿ ಫುಡ್ ಆರ್ಡರ್ ಅಪ್ ತೆರೆದ ಕೂಡಲೇ ನೀವು ಸ್ಕ್ರೋಲ್ ಮಾಡುದಿದ್ದಂತೆ ಸಾಕಷ್ಟು ಬಗೆ ಬಗೆಯ ಆಹಾರಗಳು ನಿಮಗೆ ಲಭ್ಯವಿರುತ್ತದೆ. ಆ ಸಂದರ್ಭದಲ್ಲಿ ನಿಮಗೆ ಆಯ್ಕೆಯ ಬಗ್ಗೆ ಸಾಕಷ್ಟು ಗೊಂದಲ ಉಂಟಾಗುವುದು ಸಾಮಾನ್ಯ. ಆದ್ದರಿಂದ ಮೊದಲೇ ನಿಮ್ಮ ನೆಚ್ಚಿನ ಫುಡ್ ಆಯ್ಕೆ ಮಾಡಿ. ಇದ್ದರಿಂದ ಕಡಿಮೆ ಸಮಯದಲ್ಲಿ ಅತ್ಯಂತ ವೇಗವಾಗಿ ನಿಮ್ಮ ನೆಚ್ಚಿನ ಆಹಾರವನ್ನು ಪಡೆಯಬಹುದು.
ನಿದ್ದೆಯ ನಂತರದ ಕೆಲವೊಂದಿಷ್ಟು ಸಮಯ ಯಾವುದೇ ಫುಡ್ ಆರ್ಡರ್ ಮಾಡದಿರಿ: ಹೌದು, ನೀವು ನಿದ್ದೆಯಿಂದ ಎದ್ದ ತಕ್ಷಣ ಫುಡ್ ಆರ್ಡರ್ ಮಾಡುವ ಸರಿಯಾದ ಸಮಯವಲ್ಲ. ಯಾಕೆಂದರೆ ನಿದ್ದೆಯಿಂದ ಎದ್ದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಆಹಾರಗಳನ್ನು ಸೇವಿಸಬೇಕು ಹಾಗೂ ತಿಂಡಿಯ ಮೇಲಿನ ಬಯಕೆಗಳು ಹೆಚ್ಚಿರುತ್ತದೆ. ಆದ್ದರಿಂದ ಅಂತಹ ಸಮಯದಲ್ಲಿ ನೀವು ಆನ್ಲೈನ್ ಫುಡ್ ಆರ್ಡರ್ ಮಾಡಿದರೆ ಓವರ್ಲೋಡ್ ಆಗುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬಿಸಾಕುವ ಸಾಧ್ಯತೆ ಹೆಚ್ಚಿದೆ.
ಇದನ್ನು ಓದಿ: ನೆಂಟರಿಷ್ಟರ ಮಾತು ಪಕ್ಕಕ್ಕಿರಲಿ, ಜವಾಬ್ದಾರಿಯೊಂದು ನೆನಪಿರಲಿ, ಮದುವೆಯ ಖುಷಿಯೊಂದೇ ಎದುರಿರಲಿ
ಇಂದು ಸಮಾಜದಲ್ಲಿ ಅದೆಷ್ಟೋ ಬಡ ಕುಟುಂಬಗಳು ಒಂದು ಹೊತ್ತಿನ ತುತ್ತಿಗಾಗಿ ಕಷ್ಟಪಡುತ್ತಿರುವ ನಿದರ್ಶನಗಳನ್ನು ಕಾಣಬಹುದು. ಆದ್ದರಿಂದ ನೀವು ಆಯ್ಕೆ ಮಾಡುವ ಆಹಾರದ ಪ್ರಮಾಣಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:29 am, Tue, 22 November 22