Honeymoon Destinations: ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಹಾಲಿಡೇ ಕಳೆಯಲು ಈ ತಾಣಗಳಿಗೆ ಭೇಟಿ ನೀಡಿ
ಮದುವೆಯ ಸೀಸನ್ ಪ್ರಾರಂಭವಾಗಿದೆ. ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ದಂಪತಿಗಳು ಮಧುಚಂದ್ರಕ್ಕಾಗಿ ಸುಂದರ ತಾಣಗಳನ್ನು ಹುಡುಕುತ್ತಿದ್ದರೆ, ಇಲ್ಲಿದೆ ನಿಮಗೆ ಸಂಪೂರ್ಣ ಮಾಹಿತಿ.
ಮದುವೆಯ ಸೀಸನ್ ಪ್ರಾರಂಭವಾಗಿದೆ. ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ದಂಪತಿಗಳು ಮಧುಚಂದ್ರಕ್ಕಾಗಿ ಸುಂದರ ತಾಣಗಳನ್ನು ಹುಡುಕುತ್ತಿದ್ದರೆ, ಇಲ್ಲಿದೆ ನಿಮಗೆ ಸಂಪೂರ್ಣ ಮಾಹಿತಿ. ನೀವು ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಹಾಲಿಡೇ ಕಳೆಯಲು ವಿಶ್ವದ ಪ್ರಸಿದ್ಧ ಹನಿಮೂನ್ ತಾಣಗಳಿಗೆ ಭೇಟಿ ನೀಡಿ. ಜೊತೆಗೆ ನಿಮ್ಮ ವೈವಾಹಿಕ ಜೀವನವನ್ನು ಸುಂದರವಾಗಿ ಪ್ರಾರಂಭಿಸಿ.
ವಿಶ್ವದಲ್ಲಿ ಭೇಟಿ ನೀಡಲು ಟಾಪ್ ಹನಿಮೂನ್ ತಾಣಗಳು ಇಲ್ಲಿವೆ:
ಉದಯಪುರ, ಭಾರತ:
ಉದಯಪುರದ ಬಗ್ಗೆ ಮಾತನಾಡುವಾಗ ನಿಮ್ಮ ನೆನಪಿಗೆ ಬರುವ ಪದ ರಾಯಲ್ಟಿ . ಉದಯಪುರದಲ್ಲಿ ಶಾಂತಿಯುತ ಸರೋವರಗಳು, ಬೆರಗುಗೊಳಿಸುವ ಉದ್ಯಾನಗಳು ಮತ್ತು ಅದ್ಭುತವಾದ ಐಷಾರಾಮಿ ಹೋಟೆಲ್‌ಗಳು ನಿಮಗೆ ಉತ್ತಮವಾಗಿ ನಿಮ್ಮ ಸಂಗಾತಿಯೊಂದಿಗೆ ಸುಂದರಕ್ಷಣವನ್ನು ಕಳೆಯಬಹುದಾಗಿದೆ
ಟಹೀಟಿ, ಫ್ರೆಂಚ್ ಪಾಲಿನೇಷ್ಯಾ:
ಇದು ಫ್ರೆಂಚ್ ಪಾಲಿನೇಷ್ಯಾದ ಅತಿದೊಡ್ಡ ದ್ವೀಪವಾಗಿದೆ ಮತ್ತು ಬೀಚ್ ಇಷ್ಟಪಡುವವರಿಗೆ ಮಧುಚಂದ್ರಕ್ಕೆ ಇದು ಉತ್ತಮ ಸ್ಥಳವಾಗಿದೆ. ನೀವು ಟಹೀಟಿಯಲ್ಲಿ ಕಪ್ಪು ಮರಳಿನ ಕಡಲತೀರಗಳು, ರುಚಿಕರ ತಿನಿಸು, ಸೂರ್ಯಾಸ್ತಗಳು ಮುಂತಾದವುಗಳೊಂದಿಗೆ ಸುಂದರಕ್ಷಣವನ್ನು ಕಳೆಯಬಹುದಾಗಿದೆ.
ಫ್ಲಾರೆನ್ಸ್, ಇಟಲಿ:
ಫ್ಲಾರೆನ್ಸ್ ತನ್ನ ಕಲೆ, ಇತಿಹಾಸ ಮತ್ತು ಇಟಾಲಿಯನ್ ಆಹಾರಗಳಿಂದಲೇ ಹೆಸರುವಾಸಿಯಾಗಿದೆ. ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ದಂಪತಿಗಳು ಮಧುಚಂದ್ರಕ್ಕಾಗಿ ಸುಂದರ ತಾಣಗಳನ್ನು ಹುಡುಕುತ್ತಿದ್ದರೆ ಈ ತಾಣ ಒಂದು ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ಆಗ್ರಾಕ್ಕೆ ಭೇಟಿ ನೀಡಿದರೆ ತಾಜ್ ಮಹಲ್ ಮಾತ್ರ ಅಲ್ಲ, ಈ ತಾಣಗಳಿಗೂ ಭೇಟಿ ನೀಡಿ
ಮಾಲ್ಡೀವ್ಸ್ :
ಮಧುಚಂದ್ರದ ಅತ್ಯಂತ ಸಾಮಾನ್ಯ ತಾಣವಾದ ಮಾಲ್ಡೀವ್ಸ್ ಸಾವಿರಾರು ದ್ವೀಪಗಳನ್ನು ಒಳಗೊಂಡಿದೆ. ಪ್ರತಿಯೊಂದು ದ್ವೀಪವು ಐಷಾರಾಮಿ ರೆಸಾರ್ಟ್‌ಗಳನ್ನು ಹೊಂದಿದ್ದು, ಅಲ್ಲಿ ನೀವು ಜಲ ಕ್ರೀಡೆಗಳು ಮತ್ತು ವಿಶೇಷ ಆಹಾರಗಳೊಂದಿಗೆ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಬಹುದು.
ಸ್ಯಾಂಟೊರಿನಿ, ಗ್ರೀಸ್:
ಗ್ರೀಸ್‌ನಲ್ಲಿರುವ ಸ್ಯಾಂಟೊರಿನಿಯು ತನ್ನ ರೋಮ್ಯಾಂಟಿಕ್ ಹೋಟೆಲ್‌ಗಳು, ಸುಂದರವಾದ ಸೂರ್ಯಾಸ್ತ ವೀಕ್ಷಣೆಗಳಿಗೆ ಹೆಸರುವಾಸಿಯಾಗಿದೆ, ಈ ಸ್ಥಳವು ಮಧುಚಂದ್ರದ ದಂಪತಿಗಳಿಗೆ ಹೇಳಿ ಮಾಡಿಸಿದಂತಿದೆ. ಓಯಾದಲ್ಲಿನ ಕ್ಲಿಫ್‌ಸೈಡ್ ರೆಸ್ಟೋರೆಂಟ್‌ಗಳಲ್ಲಿ ವೈನ್‌ನೊಂದಿಗೆ, ರುಚಿಕರ ಭೋಜನವನ್ನು ಆನಂದಿಸಿ. ಜೊತೆಗೆ ನೀವು ಸಮುದ್ರವನ್ನು ಅನ್ವೇಷಿಸಲು ಕ್ಯಾಟಮರನ್ ಕ್ರೂಸ್ನಲ್ಲಿಯೂ ಪ್ರಯಾಣ ಬೆಳೆಸಬಹುದು.
ಪ್ಯಾರಿಸ್, ಫ್ರಾನ್ಸ್:
ನೀವು ಶಾಂತವಾಗಿರುವುದಕ್ಕಿಂತ ಹೆಚ್ಚು ಗದ್ದಲದ ನಗರ ಜೀವನವನ್ನು ಪ್ರೀತಿಸುತ್ತಿದ್ದರೆ, ನಿಮ್ಮ ಹನಿಮೂನ್‌ನಲ್ಲಿ ಪ್ಯಾರಿಸ್‌ಗೆ ಭೇಟಿ ನೀಡಿ. ನಗರದ ಐಷಾರಾಮಿ ಜೀವನದ ಜೊತೆಗೆ ಪ್ರವಾಸಿ ಆಕರ್ಷಣೆಗಳಾದ ಟ್ಯುಲೆರೀಸ್ ಗಾರ್ಡನ್ಸ್, ಲೌವ್ರೆ, ಐಫೆಲ್ ಟವರ್ ಮತ್ತು ಹೆಚ್ಚಿನವುಗಳು ನಿಮಗೆ ಮನರಂಜನೆಯ ಭಾಗವಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: