ಬೆಂಗಳೂರು, ಮಾರ್ಚ್ 18, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರಾ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವ್ಯಾಘಾತ, ಕರಣ : ಬವ, ಸೂರ್ಯೋದಯ – 06 – 39 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:41 – 17:12, ಯಮಘಂಡ ಕಾಲ 09:40 – 11:10, ಗುಳಿಕ ಕಾಲ 12:41 – 14:11.
ಮೇಷ ರಾಶಿ: ನಿಮ್ಮವರಿಂದ ಉಂಟಾದ ಬಿಕ್ಕಟ್ಟನ್ನು ಬಗೆಹರಿಸುವ ಉಪಾಯ ತಿಳಿಯದು. ಇನ್ನೊಬ್ಬರ ಕೈಗೊಂಬೆಯಾಗಬೇಕಾದೀತು. ಸೌಂದರ್ಯದ ಬಗ್ಗೆ ಅಧಿಕ ಕಾಳಜಿ ಇರುವುದು. ನಿಮ್ಮ ಕೌಶಲವನ್ನು ಕರಗತ ಮಾಡಿಕೊಳ್ಳುವ ಪ್ರಯತ್ನ ಸಫಲವಾಗುವುದು. ನಿಮ್ಮ ಮಾತುಗಳನ್ನು ನೀವು ಪರೀಕ್ಷಿಸಿಕೊಳ್ಳುವುದು ಉತ್ತಮ. ಸಿಟ್ಟಿನಿಂದ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡು ಸಂಕಟಪಡುವಿರಿ. ಹೊಸ ವಸ್ತ್ರಗಳನ್ನು ಧರಿಸುವಿರಿ. ಸೇವೆ ಮಾಡಲು ನಾಯಕನೇ ಆಗಬೇಕಿಲ್ಲ, ಸೇವಕನಾದರೂ ಸಾಕು. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು. ಹತ್ತಿರದವರನ್ನು ನೋಡಿಕೊಳ್ಳುವ ಜವಾಬ್ದಾರಿ ಬರಬಹುದು. ಇಂದು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ರಹಸ್ಯದಿಂದ ಇಂದಿನ ಕೆಲಸವನ್ನು ಮಾಡುವಿರಿ. ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗಬಹುದು. ನಿಮ್ಮ ಮೌನವು ಹಲವಾರ ಅನುಮಾನಕ್ಕೆ ಕಾರಣವಾಗಬಹುದು.
ವೃಷಭ ರಾಶಿ: ಖಾಸಗಿ ಉದ್ಯಮದಿಂದ ಗೊಂದಲ ಸೃಷ್ಟಿ. ಆತುರ ಪಡದೇ ಸಮಾಧಾನ ಚಿತ್ತದಿಂದ ಕಾರ್ಯವನ್ನು ಮಾಡಲು ಪ್ರಯತ್ನಿಸಿ. ಮಕ್ಕಳಿಗೆ ನೀವು ಕೊಟ್ಟ ಸ್ವಾತಂತ್ರ್ಯ ಅತಿಯಾದೀತು. ನಿಮ್ಮ ವಿದ್ಯೆಯ ಬಗ್ಗೆ ನಿಮಗೇ ಅಸೂಯೆ ಉಂಟಾಗಬಹುದು. ಸಿಗಬೇಕಾದ ಯೋಜನೆ ಕೈ ತಪ್ಪುವುದು. ದಾಯಾದಿಗಳು ನಿಮ್ಮ ಸಂಕಷ್ಟವನ್ನು ಎದುರು ನೋಡುತ್ತ ಇರಬಹುದು. ಸಲ್ಲದ ಮಾತುಗಳನ್ನಾಡಿ ಶತ್ರುಗಳನ್ನು ಪ್ರಬಲವಾಗಿಸುವಿರಿ. ಎಲ್ಲ ವಿಚಾರಗಳನ್ನೂ ನೀವು ನಿರಾಧಾರವಾಗಿ ತಳ್ಳಿಹಾಕುವಿರಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಉದ್ಯಮವನ್ನು ಉನ್ನತ ದರ್ಜೆಗೆ ಏರಿಸುವ ಪ್ರಯತ್ನ ಸಾಗಲಿದೆ. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ಸಣ್ಣ ವಿಚಾರವೂ ಕೂಡ ಮಾತಿನ ಕಾರಣ ದೊಡ್ಡದಾಗಬಹುದು. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಲಾರಿರಿ. ಹೊಸತನ್ನು ನಿಮ್ಮದಾಗಿಸಿಕೊಳ್ಳುವ ಕಡೆ ಗಮನ ಅಧಿಕ. ಕಳೆದುಹೋದ ವ್ಯಕ್ತಿಗಳನ್ನು ಮತ್ತೆ ಪಡೆಯುವ ಪ್ರಯತ್ನ ಬೇಡ.
ಮಿಥುನ ರಾಶಿ: ಅನಿರೀಕ್ಷಿತವಾಗಿ ಬಂದ ಸಂಪತ್ತು ನಿಮ್ಮ ಮನಸ್ಸನ್ನು ಕೆಡಿಸುವುದು. ಇದರಿಂದ ಹಣದ ವ್ಯವಹಾರದಲ್ಲಿ ಒತ್ತಡವು ಅಧಿಕವಾಗಬಹುದು. ಮೇಲಧಿಕಾರಿಗಳ ಗುರಿಯನ್ನು ತಲುಪಲು ಶ್ರಮವು ಹೆಚ್ಚಾಗಬಹುದು. ಆಭರಣದ ಬಗ್ಗೆ ಮೋಹ ಉಂಟಾಗುವುದು. ದಿನನಿತ್ಯದ ಕಾರ್ಯವನ್ನು ಬೇಗ ಮಾಡಬೇಕು ಎಂದರೂ ಆಗದು. ಒಂದಕ್ಕೊಂದು ಸೇರಿಕೊಳ್ಳುವುದು. ಹಿರಿಯರಿಗೆ ಅಗೌರವದ ಮಾತುಗಳನ್ನು ಆಡಬೇಕಾದೀತು. ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ವಿಫಲರಾಗುವಿರಿ. ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎನಿಸುವುದು. ನಿಮ್ಮ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ಅಪಾಯದ ಮುನ್ಸೂಚನೆಯನ್ನು ಅರಿಯುವುದು ಕಷ್ಟ. ಕಲಾವಿದರಿಗೆ ಅನಿರೀಕ್ಷಿತ ಗೌರವವು ಪ್ರಾಪ್ತವಾಗಬಹುದು. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದೇಯಿರುವುದು. ನಿಮ್ಮ ನಿರ್ಧಾರಕ್ಕೆ ಮನೆಯಿಂದ ನಿಮಗೆ ಬೆಂಬಲವಿರುವುದು. ಇಂದು ಹಣವನ್ನು ಹೊಂದಿಸುವುದು ಚಿಂತೆಯಾಗಬಹುದು.
ಕರ್ಕಾಟಕ ರಾಶಿ: ಜೀವನದ ಬಗ್ಗೆ ಬೇಸರದ ಭಾವ ಹಾದು ಹೋಗಬಹುದು. ಯಾವುದಾದರೂ ಸಾಮಾಜಿಕ ಸಮೂಹ ಚಟುವಟಿಕೆಗಳಲ್ಲಿ ಭಾಗವಹಿಸಿ. ಇನ್ನೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ಸರಿ ಕಾಣದು. ಸಂಗಾತಿಯ ಆಯ್ಕೆಯು ಗೊಂದಲವಾಗಿರುವುದು. ಇಂದು ನಿಮ್ಮ ಬಳಿ ಸಾಮಾಜಿಕ ಕಳಕಳಿಯಿರುವ ಜನರು ಬರುವರು. ಇನ್ನು ಬಾರದು ಎಂದುಕೊಂಡ ಹಣವು ಇಂದು ನಿಮ್ಮ ಕೈ ಸೇರುವುದು. ಸಾಲ ಕೊಟ್ಟವರಿಗೆ ಸಮಾಧಾನವಾಗುವಂತೆ ನಡೆದುಕೊಳ್ಳಿ. ತಂದೆಯ ಕಾರ್ಯಕ್ಕೆ ನಿಮ್ಮ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ಹಳೆಯ ಪ್ರೀತಿಯು ನೆನಪಾಗಿ ಮೌನವಾಗುವಿರಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ನವದಂಪತಿಗಳಿಗೆ ವಿಶೇಷ ಆತಿಥ್ಯ. ಎಲ್ಲರ ದೃಷ್ಟಿಯಲ್ಲಿ ಸ್ವಾರ್ಥಿಯಂತೆ ಕಾಣಿಸುವಿರಿ. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡುವಿರಿ. ಪುಣ್ಯ ಕ್ಷೇತ್ರದ ಭೇಟಿಯಿಂದ ಸಮಾಧಾನ. ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ.
ಸಿಂಹ ರಾಶಿ: ಎಂದೋ ಮಾಡಿದ ಸಹಾಯವನ್ನು ಸಹೋದ್ಯೋಗಿಗಳು ಮರಳಿ ಕೊಡಬಹುದು. ಇಂದು ಯಾರಿಗೋ ಸಹಾಯ ಮಾಡಲು ಹೋಗಿ ವಂಚಿತರಾಗುವಿರಿ. ಮೂರ್ಖರಂತೆ ವರ್ತಿಸುವುದು ಬೇಡ. ಸ್ತ್ರೀಯರಿಗೆ ಮೇಲಧಿಕಾರಿಗಳ ಮಾತು ಬೇಸರ ತರಿಸಬಹುದು. ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ದಿನಚರಿಯನ್ನು ಬದಲಿಸಿಕೊಳ್ಳಬೇಕು ಎಂದನಿಸಬಹುದು. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಪುನಃ ಪ್ರಸ್ತಾಪಿಸಬಹುದು. ಬೇರೆಯವರ ಮನೆಯಲ್ಲಿ ಭೋಜನ ಮಾಡುವಿರಿ. ಬೆಳೆಯ ಮಾರಾಟದಲ್ಲಿ ಅಲ್ಪ ಲಾಭ. ನಿಮ್ಮ ನಿರ್ಮಾಣವು ನಿಮಗೆ ಹೆಮ್ಮೆ ಎನಿಸೀತು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ಕೆಲವರ ಮಾತಿಗೆ ಉತ್ತರವನ್ನು ಕೊಡುವುದು ಇಷ್ಟವಾಗದು.
ಕನ್ಯಾ ರಾಶಿ: ಹೊಸ ಗೆಳೆತನ ಉದ್ಯಮಕ್ಕೆ ದಿಕ್ಕಿ ತೋರಿಸುವುದು. ಇಂದು ಯಾವುದೇ ವಿವಾದಿತ ಮಾತುಗಳನ್ನು ಆಡದಂತೆ ಎಚ್ಚರ ವಹಿಸಿ. ಅನಾರೋಗ್ಯಕ್ಕೆ ವೈದ್ಯರ ಭೇಟಿಯಾಗಬೇಕಾದೀತು. ಸಹೋದರನ ಮಾತು ನಿಮಗೆ ಜೀರ್ಣಮಾಡಿಕೊಳ್ಳುವುದು ಕಷ್ಟವಾಗಿ ಸಿಟ್ಟಾಗುವಿರಿ. ಉದ್ಯಮಕ್ಕೆ ಬೇಕಾದ ಕಾನೂನಿನ ವಿಚಾರವನ್ನು ಚರ್ಚಿಸುವಿರಿ. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ಹೂಡಿಕೆಯನ್ನು ಬೇರೆಯವರ ಹೆಸರಿನಲ್ಲಿ ಮಾಡುವಿರಿ. ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವಿರು. ಕಳೆದು ಹೋದ ಪ್ರೇಮವನ್ನು ಮತ್ತೆ ಯಾರಾದರೂ ನೆನಪಿಸುವರು. ತಪ್ಪನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರಿಸುವಿರಿ. ಹಣಕಾಸು ಸಂಸ್ಥೆಯ ಪ್ರತಿನಿಧಿಯಾಗಿ ಲಾಭ ಪಡೆಯುವಿರಿ. ಇಂದು ನೀವು ಸಮಯವನ್ನು ಮಾಡಿಕೊಂಡು ಕುಟುಂಬದ ಜೊತೆ ಸೌಹಾರ್ದತೆ ಉಂಟಾಗುವುದು. ಇತರರ ಜೊತೆ ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ.
ತುಲಾ ರಾಶಿ: ನಿಮ್ಮ ಸಿಟ್ಟಿನ ಮುಖವನ್ನು ಸಾರ್ವಜನಿಕವಾಗಿ ತೋರಿಸುವುದು ಬೇಡ. ನಿಮ್ಮ ಉದ್ಯಮದ ಹಲವು ಮುಖಗಳು ಇತರಿಗೆ ಪರಿಚಯ ಆಗಬಹುದು. ಒಪ್ಪಿಕೊಂಡ ಕಾರ್ಯಕ್ಕೆ ಹಣದ ಮೂಲವು ಕೊರತೆಯಾಗಬಹುದು. ವಿಶ್ವಸ್ಥರ ಸಲಹೆಯನ್ನು ಪಡೆದುಕೊಳ್ಳಿ. ಕೆಲವು ನಿರಾಶೆಯನ್ನು ಮೆಟ್ಟಿನಿಲ್ಲುವ ಧೈರ್ಯ ತೋರಬೇಕು. ನಿಮ್ಮ ಅಂತಸ್ಸಾಕ್ಷಿಗೆ ಸತ್ಯವನ್ನು ಹೇಳುವ ಧೈರ್ಯ ಬರುವುದು. ವಿದೇಶದಿಂದ ಆಹ್ವಾನವು ಬರಬಹುದು. ಆತುರದ ಪ್ರಯಾಣವನ್ನು ಇಂದು ಮಾಡಬೇಡಿ. ಒತ್ತಾಯದಿಂದ ಸ್ನೇಹಿತರ ಮನೆಗೆ ಹೋಗುವಿರಿ. ಮನೆಯಲ್ಲಿ ತೋರಿಸಿದ ಸಂಗಾತಿಯನ್ನು ಒಪ್ಪಿಕೊಳ್ಳುವಿರಿ. ಬಂಧುಗಳಿಗಾಗಿ ಇಂದಿನ ಸಮಯವನ್ನು ಕೊಡುವಿರಿ. ಅಶುಭ ವಾರ್ತೆಯಿಂದ ಏನನ್ನು ಮಾಡಲೂ ದಿಕ್ಕು ತೋರದು. ಕಳೆದುಕೊಂಡಾಗ ಸಿಗುವ ಖುಷಿ, ಪಡೆದಾಗ ಇರದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ.
ವೃಶ್ಚಿಕ ರಾಶಿ: ಆಪ್ತರೇ ನಿಮ್ಮ ವಿರದ್ಧವಾಗಿ ಮಾತನಾಡಬಹುದು, ಕೃತಿಯನ್ನು ತೋರಿಸಬಹುದು. ಕಿವಿಮಾತಿನಿಂದ ಅದನ್ನು ನಿಲ್ಲಿಸಿ. ಅಪರಿಚಿತರನ್ನು ಕೇವಲ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವಿರಿ. ನಿಮ್ಮ ಔದಾರ್ಯವು ನಿಮ್ಮವರಿಗೆ ಸರಿ ಕಾಣದು. ಇಂದಿನ ಸೋಲಿನಿಂದ ಪಾಠ ಕಲಿಯುವಿರಿ. ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ಇಲ್ಲದ ತಪ್ಪನ್ನು ಒಪ್ಪಿಕೊಳ್ಳುವ ಸಂದರ್ಭ ಬರಬಹುದು. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ನೀವು ಮಾಡುವ ಕಾರ್ಯದಲ್ಲಿ ಧೈರ್ಯವು ಹೆಚ್ಚಿರುವುದು. ದಾಂಪತ್ಯದಲ್ಲಿ ಹೊಂದಾಣಿಕೆ ಅವಶ್ಯಕತೆ ಅಧಿಕವಾಗಿ ಇರಲಿದೆ. ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತನ್ನು ಕಳೆದುಕೊಳ್ಳುವಿರಿ. ಅಧಿಕಾರಿಗಳಿಗೆ ದಾಖಲೆಗಳನ್ನು ಒದಗಿಸಬೇಕಾಗುವುದು. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ ಮೇಲೆ ಬರಲಿದೆ. ಸಿಟ್ಟಿನಿಂದ ಅಂತಃಪ್ರಜ್ಞೆ ದೂರಾಗಬಹುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.
ಧನು ರಾಶಿ: ಫಲವಿರದ ಮರಕ್ಕೆ ಎಷ್ಟೇ ಕಲ್ಲು ಹೊಡೆದರೂ ಏನೂ ಸಿಗದು. ಕಲ್ಲೂ ಶ್ರಮ ಎರಡೂ ವ್ಯರ್ಥ. ಹಳೆಯ ವಸ್ತುಗಳ ದುರಸ್ತಿಯ ಕೆಲಸವನ್ನು ಮಾಡುವಿರಿ. ಅಧಿಕ ಖರ್ಚೂ ಆಗಬಹುದು. ಹಳೆಯ ಸ್ಥಾನ ಮರಳಿಬರುವ ಸೂಚನೆ ಇರಲಿದೆ. ಹೊಸದಾಗಿ ಆರಂಭಿಸಿದ ಉದ್ಯಮದ ಫಲವು ಒಂದೊಂದಾಗಿಯೇ ಸಿಗುವುದು ನಿಮಗೆ ಸಂತೋಷವನ್ನು ಕೊಡುವುದು. ಅತಿಯಾದ ಕೋಪದಿಂದ ಎಲ್ಲ ಕೆಲಸವು ವ್ಯತ್ಯಾಸವಾಗಬಹುದು. ನೀವು ಮಾಡಿಕೊಂಡ ಎಡವಟ್ಟಿನಿಂದ ಅವಕಾಶದಿಂದ ವಂಚಿತರಾಗಬೇಕಾಗುವುದು. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ ಬೇಡ. ಹೊಸ ಉದ್ಯೋಗದಲ್ಲಿ ಆರಂಭದ ಭಯವನ್ನು ಆದಷ್ಟು ಬೇಗ ತೆಗದುಹಾಕಿದರೆ ಒಳ್ಳೆಯದು. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ತಪ್ಪುಗಳನ್ನು ಸರಿಮಾಡಿಕೊಳ್ಳುವ ಮನಃಸ್ಥಿತಿ ಬರುತ್ತದೆ. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮುಕ್ತ ಮನಸ್ಸಿನಿಂದ ಮಾತನಾಡುವಿರಿ.
ಮಕರ ರಾಶಿ: ದೈಹಿಕ ಶ್ರಮದಿಂದಾಗಿ ಬೇಗ ವಿಶ್ರಾಂತಿಯನ್ನು ಬಯಸುವಿರಿ. ನೀವು ಸರ್ಕಾರದ ಕಡೆಯಿಂದ ಆಗಬೇಕಾದ ಕಾರ್ಯವನ್ನು ಮಾಡಲು ಓಡಾಟ ಮಾಡುವಿರಿ. ಆತುರದಲ್ಲಿ ವಾಹನ ಚಾಲನೆಯಿಂದ ತೊಂದರೆಯಾದೀತು. ಇಂದು ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ಯಾರದೋ ಅಪರಿಚಿತರ ಸಂಪರ್ಕವನ್ನು ಮಾಡಬೇಕಾದೀತು. ಸ್ನೇಹಿತರಿಂದ ಆರ್ಥಿಕತೆಗೆ ಸಹಾಯವು ಸಿಗುವುದು. ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ನೂತನ ಗೃಹಕ್ಕೆ ಹೋಗುವ ಸಂಕಲ್ಪವನ್ನು ಮಾಡುವಿರಿ. ನಿಮಗಾದ ನೋವಿನಿಂದ ಪಾಠ ಸಿಗಲಿದೆ. ಹಿತಶತ್ರುಗಳಿಂದ ತೊಂದರೆ ಎದುರಾದೀತು. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ. ಹಿರಿಯರಿಂದ ಆದ ದೋಷವನ್ನು ಸರಿ ಮಾಡಿಕೊಳ್ಳುವಿರಿ. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ. ಸಂಬಂಧದಲ್ಲಿ ಒಡಕು ಬರಬಹುದು. ವ್ಯವಹಾರವು ಸರಿಯಾಗಿ ಇರಲಿ. ಇಂದು ಯಾರನ್ನೂ ಸುಲಭವಾಗಿ ನಂಬಲಾರಿರಿ.
ಕುಂಭ ರಾಶಿ: ಇಂದಿನ ನಿಮ್ಮ ಕಾರ್ಯವನ್ನು ಅನ್ಯರು ಪರಿಶೀಲಿಸುವ ಕಾರಣ ತಪ್ಪಾಗದಂತೆ ಎಚ್ಚರ ವಹಿಸಿ ಮಾಡಬೇಕಾಗುವುದು. ಮಂಗಲ ಕಾರ್ಯಕ್ಕೆ ಹೊರಟ ನೀವು ಶುಭ ಕಾಲವನ್ನು ನೋಡಿ ಹೊರಡಿ. ದೀರ್ಘಪ್ರಯಾಣವಾದರೂ ಆಯಾಸವನ್ನು ದೂರಮಾಡೀತು. ಉದ್ಯಮದಲ್ಲಿ ಅಧಿಕ ಚಿಂತೆಯು ಇರಲಿದ್ದು ಪ್ರಯತ್ನವು ಅಧಿಕವಾಗಿ ಇರುವುದು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ. ಮನೆಯಲ್ಲಿ ಹಿಂದಿನ ಘಟನೆಯೇ ಮರುಕಳಿಸಲಿದ್ದು ಸಣ್ಣ ವಾಗ್ವಾದವೂ ನಡೆಯಬಹುದು. ಸಹನಾಮೂರ್ತಿಯಂತೆ ಇದ್ದರೆ ಬೀಳುವ ಪೆಟ್ಟೂ ಮೆತ್ತಗಾಗಬಹುದು. ತಂತ್ರಜ್ಞರು ವಹಿಸಿಕೊಂಡ ಕಾರ್ಯದ ಗಡುವುದು ಸಮೀಪಿಸಿದ್ದು, ತುರ್ತು ಕಾರ್ಯವನ್ನು ಮಾಡಬೇಕಿದೆ. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ಸುತ್ತಲಿನ ವಾತಾವರಣದಿಂದ ಮನಸ್ಸು ಕೆಡುವ ಸಾಧ್ಯತೆ ಹೆಚ್ಚು. ವಾಹನದಿಂದ ಬಿದ್ದು ಪೆಟ್ಟಾಗಬಹುದು. ದುರ್ಬಲರ ಜೊತೆ ಸಂಘರ್ಷ ಬೇಡ.
ಮೀನ ರಾಶಿ: ಇಂದು ಹೊಸ ಉದ್ಯೋಗದ ಅನ್ವೇಷಣೆಯಲ್ಲಿ ಇರುವಿರಿ. ನಿಮ್ಮ ವಿರುದ್ಧವಾಗಿ ಮಾತನಾಡುವುದು ನಿಮಗೆ ಇಷ್ಟವಾಗದು. ಸಿಟ್ಟಾಗುವ ಸಾಧ್ಯತೆ ಇದೆ. ಯಾರದ್ದಾರೂ ಸೆಳೆತಕ್ಕೆ ಸಿಗುವ ಸಾಧ್ಯತೆ ಇದೆ. ದೂರದಲ್ಲಿ ಇದ್ದ ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ಇರುವುದು. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು. ತಮಾಷೆಯಾಗಿ ಶುರುವಾದ ಮಾತು ಕಲಹದಲ್ಲಿಯೋ ದ್ವೇಷದಲ್ಲಿಯೋ ಮುಕ್ತಯವಾಗಲಿದೆ. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಯಾವದೇ ಸಂದರ್ಭದಲ್ಲಿಯೂ ಗಾಬರಿಯಾಗದೇ ಸಮಯಪ್ರಜ್ಞೆಯಿಂದ ಮುನ್ನಡೆಯಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗವುವುದು. ಹಣದ ಹರಿವು ಸಾಧಾರಣವಾಗಿ ಇರಲಿದೆ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಆಗಬಹುದು. ದೇಹದ ಯಾವುದಾದರೂ ಭಾಗದಲ್ಲಿ ಪ್ರಾಣಾಂತಿಕ ನೋವು ಕಾಣಿಸಿಜತು. ಉಗುಳಲಾಗದ, ನುಂಗಲಾಗದ ತುತ್ತನ್ನು ಬಾಯಲ್ಲಿ ಇಟ್ಟುಕೊಳ್ಳಬೇಕಾಗುವುದು.
-ಲೋಹಿತ ಹೆಬ್ಬಾರ್-8762924271 (what’s app only)