ಟ್ರೆಂಡ್ ಆಗುತ್ತಿದೆ ಹಾಟ್‌ವೈಫಿಂಗ್, ಇದು ದೈಹಿಕ ಸಂಪರ್ಕದ ಹೊಸ ಪ್ರವೃತ್ತಿ

ಭಾರೀ ಟ್ರೆಂಡ್​​ ಆಗುತ್ತಿದೆ ಹಾಟ್‌ವೈಫಿಂಗ್ ಪ್ರವೃತ್ತಿ, ಇದು ಇಬ್ಬರು ದಂಪತಿಗಳು ಒಪ್ಪಿಕೊಂಡು ಇತರರೊಂದಿಗೆ ಸಂಬಂಧವನ್ನು ಹೊಂದುವುದು. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಆ ದಂಪತಿಗಳೇ ತಿಳಿದುಕೊಳ್ಳುವುದು, ಸರಿಯೇ ಅಥವಾ ತಪ್ಪೇ ಎಂಬ ನಿರ್ಧಾರವನ್ನು ಮೊದಲು ಮಾಡಿಕೊಳ್ಳಬೇಕು. ಇದೀಗ ಹಾಟ್‌ವೈಫಿಂಗ್ ಎಂಬುದನ್ನು ಟ್ರೆಂಡ್​​ ಆಗುತ್ತಿದೆ. ಅಷ್ಟಕ್ಕೂ ಹಾಟ್‌ವೈಫಿಂಗ್ ಎಂದರೇನು? ಇದು ಯಾಕಾಗಿ ಟ್ರೆಂಡ್​​ ಆಗುತ್ತಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಟ್ರೆಂಡ್ ಆಗುತ್ತಿದೆ ಹಾಟ್‌ವೈಫಿಂಗ್, ಇದು ದೈಹಿಕ ಸಂಪರ್ಕದ ಹೊಸ ಪ್ರವೃತ್ತಿ
ಸಾಂದರ್ಭಿಕ ಚಿತ್ರ

Updated on: Jun 22, 2025 | 6:52 PM

ಹಾಟ್‌ವೈಫಿಂಗ್ (Hotwifeing) ಎಂಬ ಹೊಸ ಪ್ರವೃತ್ತಿ ಬಂದಿದೆ. ಇದು ದಂಪತಿಗಳ ನಡುವೆ ಹೊಸ ವಿಚಾರವಾಗಿದೆ. ಆದರೆ ಈ ರೀತಿಯ ವಿಚಾರಗಳು ಎಷ್ಟು ಸರಿ ಎಂಬುದನ್ನು ತಜ್ಞರು ತಿಳಿಸಿದ್ದಾರೆ. ಹಾಟ್‌ವೈಫಿಂಗ್ ಒಂದು ಫ್ಯಾಷನ್​​ ಆಗಿ ಬೆಳೆಯುತ್ತಿದೆ. ಇದನ್ನು ಹೆಚ್ಚಿನ ದಂಪತಿಗಳು ಅನುರಿಸುತ್ತಿದ್ದಾರೆ. ಇದು ಸರಿಯೇ, ತಪ್ಪೇ ಎಂಬುದನ್ನು ಅವರೇ ನಿರ್ಧಾರ ಮಾಡಬೇಕು. ಏಕಪತ್ನಿತ್ವ ಪದ್ಧತಿಯನ್ನು ಆಚರಣೆ ಮಾಡದ ವ್ಯಕ್ತಿಗಳು ಈ ಹಾಟ್‌ವೈಫಿಂಗ್ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅಂದರೆ ಒಬ್ಬ ಪತ್ನಿ ಅಲ್ಲದೇ ಬೇರೆಯೊಂದು ಸಂಬಂಧವನ್ನು ಹಾಗೂ ಇತರರೊಂದಿಗೆ ದೈಹಿಕ ಸಂಪರ್ಕ  ಹೊಂದಿರುವ ಜನರು ಈ ಹಾಟ್​​​ವೈಫಿಂಗ್ ಜಾಲದಲ್ಲಿ ಇರುತ್ತಾರೆ. ಇದು ಲೈಂಗಿಕ ಉದ್ದೇಶಕ್ಕಾಗಿ ಮಾತ್ರ. ಕೆಲವರು ಇದರಲ್ಲಿ ದೀರ್ಘವಧಿಗಳವರೆಗೆ ಸಂಬಂಧವನ್ನು ಹೊಂದಿರುತ್ತಾರೆ. ಈ ಬಗ್ಗೆ ಎನ್​​​​ಡಿಟಿವಿ ಹಿಂದಿ ವರದಿ ಮಾಡಿದೆ. ಈ ಬಗ್ಗೆ ತಜ್ಞರ ಅಭಿಪ್ರಾಯವನ್ನು ಕೂಡ ಪಡೆದಿದೆ.

ಹಾಟ್‌ವೈಫಿಂಗ್ ದೈಹಿಕ ಪ್ರವೃತ್ತಿ ಎಂದರೇನು?

ಹಾಟ್‌ವೈಫಿಂಗ್ ಎನ್ನುವುದು ಒಂದು ರೀತಿಯ ಒಮ್ಮತದ ಸಂಬಂಧ, ಹಾಟ್‌ವೈಫ್ ಎಂದು ಕರೆಯಲ್ಪಡುವ ವಿವಾಹಿತ ಮಹಿಳೆ ತನ್ನ ಪತಿಯನ್ನು ಹೊರತುಪಡಿಸಿ ಇತರ ಪುರುಷರೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರುತ್ತಾಳೆ. ಈ ಬಗ್ಗೆ ಅವಳ ಪತಿಗೂ ತಿಳಿದಿರುತ್ತದೆ. ಇದರಲ್ಲಿ ಆಕೆ ಪತಿ ಕೂಡ ಭಾಗವಹಿಸುತ್ತಾರೆ.

ತಜ್ಞರು ಹೇಳೋದೇನು?

ಕೋಲ್ಕತ್ತಾ ಮೂಲದ ಮನೋಚಿಕಿತ್ಸಕಿ ಮಾನಸಿ ಪೊದ್ದಾರ್ ಹೇಳುವ ಪ್ರಕಾರ, ಹಾಟ್‌ವೈಫಿಂಗ್‌ನಲ್ಲಿ, ಪತಿ ತನ್ನ ಪತ್ನಿಯನ್ನು ದೈಹಿಕವಾಗಿ ತೃಪ್ತಿ ಪಡಿಸಲು ಹಾಗೂ ಇದರ ಬಗ್ಗೆ ಕಲಿಯಲು, ಜತೆಗೆ ಅದರ ಅನುಭವ ಪಡೆಯಲು ಈ ರೀತಿ ಭಾಗವಹಿಸಲು ತನ್ನ ಪತ್ನಿಗೆ ಪ್ರಚೋದನೆಯನ್ನು ನೀಡುತ್ತಾನೆ. ಪರಸ್ಪರ ಒಪ್ಪಿಗೆ ಮತ್ತು ನಂಬಿಕೆ ಇದ್ದಾಗ ಮಾತ್ರ ಈ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ. ನಿಮ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಎಂಡಿ ಡಾ. ನೀತು ತಿವಾರಿ ಹೇಳುವ ಪ್ರಕಾರ, ಹಾಟ್‌ವೈಫಿಂಗ್ ಸಂಬಂಧಕ್ಕೆ ಉತ್ಸಾಹ, ನಂಬಿಕೆ ಮತ್ತು ಲೈಂಗಿಕ ಉದ್ವೇಗದ ಅಂಶಗಳನ್ನು ಸೇರಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಊಟದ ನಂತರ ಯೋಗ ಮಾಡಬಹುದೇ?
ಮಳೆಗಾಲದಲ್ಲಿ ಈ ರೀತಿಯ ಬಟ್ಟೆ ಧರಿಸುವುದು ಬೆಸ್ಟ್‌
ಮಾಂಸಕ್ಕೆ ಪರ್ಯಾಯ ಹಲಸಿನ ಗುಜ್ಜೆ, ಸೆಲೆಬ್ರಿಟಿಗಳಿಗೂ ಇದುವೇ ಬೇಕು
ಹಣ, ಯಶಸ್ಸು ಮತ್ತು ಸಂತೋಷಕ್ಕಾಗಿ ಪ್ರತಿ ರಾತ್ರಿ ಮಲಗುವಾಗ ಹೀಗೆ ಮಾಡಿ

ಇದನ್ನೂ ಓದಿ: ಹಳೆಯ DNA ಬಳಸಿ 10,500 ವರ್ಷ ವಯಸ್ಸಿನ ಮಹಿಳೆಯ ಮುಖವನ್ನು ಮರುಸೃಷ್ಟಿಸಿದ ವಿಜ್ಞಾನಿಗಳು

ಹಾಟ್‌ವೈಫಿಂಗ್ ಟ್ರೆಂಡಿಂಗ್:

ರೆಡ್ಡಿಟ್‌ನಲ್ಲಿರುವ ಟಿಕ್‌ಟಾಕ್ ತಪ್ಪೊಪ್ಪಿ ಖಾತೆಯಲ್ಲಿ ದಂಪತಿಗಳು ಹಾಟ್‌ವೈಫಿಂಗ್ ಅನುಭವ ಹೇಗಿರುತ್ತದೆ ಎಂದು ತಮ್ಮೊಳಗೆ ಚರ್ಚಿಸಿದ್ದಾರೆ. ಕೆಲವರು ಇದು ಲೈಂಗಿಕ ಜೀವನ ಮತ್ತು ಭಾವನಾತ್ಮಕ ಬೆಳವಣಿಗೆಗೆ ಒಳ್ಳೆಯದು ಎಂದು ಹೇಳಿದ್ದಾರೆ. ಆದರೆ ಇದನ್ನು ಕೆಲವರು ತಪ್ಪು ಎಂದು ಇದನ್ನು ವಿರೋಧಿಸಿದ್ದಾರೆ. ಕೆಲವರು ತಮ್ಮ ಪತ್ನಿ ಅಥವಾ ಸಂಗಾತಿ ಹಾಟ್​​​ ಹಾಗೂ ರೊಮ್ಯಾಂಟಿಕ್​​ ಆಗಿರುತ್ತಾರೆ. ಅವರವನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ದಂಪತಿ ಮತ್ತು ಕುಟುಂಬ ವೈದ್ಯರಾಗಿರುವ ಪ್ರಿಯಾಂಕಾ ಕಪೂರ್ ಹೇಳುವ ಪ್ರಕಾರ, ಇದು ಕೆಲವೊಂದು ಪುರುಷರ ವೈಯಕ್ತಿಕ ಕ್ರಿಯೆಯಾಗಿದೆ. ಅನೇಕ ಬಾರಿ ಪುರುಷರಲ್ಲಿ ಹಚ್ಚಿನ ದೈಹಿಕ ಸಂಪರ್ಕ ಹೊಂದಿರಬೇಕು ಎಂಬ ಆಸೆ ಇರುತ್ತದೆ. ಅವರ ದೈಹಿಕ ಆಸೆಗಾಗಿ ತನ್ನ ಪತ್ನಿಯಿಂದ ಸುಖ ಸಿಕ್ಕಿಲ್ಲ ಎಂದಾಗ ಈ ರೀತಿ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಿದ್ದಾರೆ.

ಹಾಟ್‌ವೈಫಿಂಗ್ ವೈಯಕ್ತಿಕ ಆಯ್ಕೆಯಾಗಿದೆ. ಅದರಲ್ಲಿ ಸರಿ ತಪ್ಪು ಎನ್ನುವುದು ಬೇರೆ, ಆದರೆ ಅದನ್ನು ಮಾಡುವ ಮೊದಲು ದಂಪತಿಗಳೇ ಯೋಚನೆ ಮಾಡಬೇಕು. ಈ ಬಗ್ಗೆ ತಜ್ಞರ ಸಲಹೆ ಕೂಡ ಪಡೆಯುವುದು ಒಳ್ಳೆಯದು.  ಈ ಬಗ್ಗೆ ಯೋಚನೆ ಮಾಡಿ ಮುಂದುವರಿಯುವುದು ಉತ್ತಮ ಎನ್ನುವುದು ತಜ್ಞರ ಸಲಹೆಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ