AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationships Tips: ನಿಮ್ಮ ವೃತಿ ಜೀವನದೊಂದಿಗೆ ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವುದು ಹೇಗೆ?

ಈ ಕೆಳಗಿನ ಐದು ಸಲಹೆಗಳು ನಿಮ್ಮ ಜೀವನದಲ್ಲಿ ರೂಢಿಸಿಕೊಳ್ಳಿ. ಇದರಿಂದಾಗಿ ನೀವು ನಿಮ್ಮ ವೃತಿ ಜೀವನದೊಂದಿಗೆ ವೈಯಕ್ತಿಕ ಜೀವನವನ್ನು ಆರೋಗ್ಯಕರವಾಗಿ ಸರಿದೂಗಿಸಬಹುದಾಗಿದೆ.

Relationships Tips: ನಿಮ್ಮ ವೃತಿ ಜೀವನದೊಂದಿಗೆ ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವುದು ಹೇಗೆ?
Relationships TipsImage Credit source: HealthShots
TV9 Web
| Edited By: |

Updated on: Nov 27, 2022 | 7:21 PM

Share

ಇಂದಿನ ಬದಲಾದ ಜೀವನಶೈಲಿಯಿಂದಾಗಿ ನೀವು ನಿಮ್ಮ ವೈಯಕ್ತಿಕ ಜೀವನಕ್ಕೆ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲವೇ? ಇದರಿಂದಾಗಿ ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿದಿಯಾ? ಹಾಗಿದ್ದರೆ ಇದನ್ನು ಓದಿ. ಈ ಕೆಳಗಿನ ಐದು ಸಲಹೆಗಳು ನಿಮ್ಮ ಜೀವನದಲ್ಲಿ ರೂಢಿಸಿಕೊಳ್ಳಿ. ಇದರಿಂದಾಗಿ ನೀವು ನಿಮ್ಮ ವೃತಿ ಜೀವನದೊಂದಿಗೆ ವೈಯಕ್ತಿಕ ಜೀವನವನ್ನು ಆರೋಗ್ಯಕರವಾಗಿ ಸರಿದೂಗಿಸಬಹುದಾಗಿದೆ.

1. ಮುಕ್ತ ಮಾತುಕತೆ:

ನಿಮಗೆ ಯಾವುದೇ ಸಮಸ್ಯೆಗಳೂ ಎದುರಾದರೂ ಕೂಡ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ನಿಮ್ಮ ಸಮಸ್ಯೆ ಎನೆಂದು ಅವರೊಂದಿಗೆ ತಿಳಿಸಿ. ಪರಸ್ಪರ ಇಬ್ಬರೂ ಸಮಯ ಮೀಸಲಿಟ್ಟು ವ್ಯವಹರಿಸುವುದರಿಂದ ನಿಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಬರಲು ಸಾಧ್ಯವಿಲ್ಲ. ಜೊತೆಗೆ ನಿಮ್ಮ ವೃತ್ತಿ ಬದುಕಿನ ಜೊತೆಗೆ ವೈಯಕ್ತಿಕ ಬದುಕನ್ನು ಸರಿದೂಗಿಸಿಕೊಂಡು ಹೋಗಬಹುದು.

2. ಆರೋಗ್ಯಕರ ಸಂಬಂಧದ ಬಗ್ಗೆ ಗಮನಹರಸಿ:

ನೀವೂ ನಿಮ್ಮ ಒತ್ತಡ ಜೀವನದೊಂದಿಗೆ ನಿಮ್ಮ ಸಂಗಾತಿಯೊಂದಿಗೆ ಆರೋಗ್ಯಕರ ಸಂಬಂಧವನ್ನು ಉಳಿಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಆದ್ದರಿಂದ ಅವರೊಂದಿಗೆ ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಸಮಯ ಮೀಸಲಿಡಿ. ಊಟದ ಸಮಯದಲ್ಲಿ ಒಟ್ಟಿಗೆ ಕಾಲ ಕಳೆಯಿರಿ ಹಾಗೂ ನಿಮ್ಮ ಸಂಗಾತಿಯೊಂದಿಗಿರುವಾಗ ಸೆಲ್ ಫೋನ್‌, ಲ್ಯಾಪ್ ಟಾಪ್ ಬಳಸುವುದನ್ನು ಕಡಿಮೆ ಮಾಡಿ.

3. ನಿಮ್ಮ ಸಂಗಾತಿಯ ಗುರಿ ಎನು ಎಂಬುದನ್ನು ತಿಳಿದುಕೊಳ್ಳಿ:

ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ರೀತಿಯ ಗುರಿಯನ್ನು ಹೊಂದಿರುತ್ತಾರೆ. ಅದನ್ನು ನೆರವೇರಿಸಲು ಸಾಕಷ್ಟು ಕಷ್ಟ ಪಡುತ್ತಿರುತ್ತಾರೆ. ಆದ್ದರಿಂದ ನಿಮ್ಮ ಸಂಗಾತಿಯ ಆಸೆಗಳೇನು? ಅವರ ಗುರಿಗಳೇನು? ಎಂಬುದನ್ನು ತಿಳಿದುಕೊಂಡು ನೀವು ಜೊತೆಯಾಗಿ ನಿಲ್ಲುವುದು ಅತ್ಯಂತ ಅಗತ್ಯವಾಗಿದೆ.

4 ನಿಮ್ಮ ಸಂಗಾತಿಯ ಬಗ್ಗೆ ತಿಳಿದುಕೊಳ್ಳಿ:

ಅವರು ಯಾವ ಮನಸ್ಥಿತಿಯಲ್ಲಿದ್ದಾರೆ? ಅವರು ಚಿಂತೆ, ಆತಂಕ ಹಾಗೂ ಒತ್ತಡದ ಬದುಕು ನಡೆಸುತ್ತಿದಾರಾ? ಹೀಗೆ ಅವರ ಬಗ್ಗೆ ತಿಳಿದುಕೊಳ್ಳಿ. ಕೆಲಸವು ಕಾರ್ಯನಿರತವಾಗಿದ್ದಾಗ, ಸಮಯವು ಹೆಚ್ಚು ವೇಗವಾಗಿ ಹಾದುಹೋಗುತ್ತದೆ. ಒಂದು ಹೆಜ್ಜೆ ಹಿಂತಿರುಗಿ ಮತ್ತು ಭಾವನಾತ್ಮಕವಾಗಿ ನಿಮ್ಮ ಸಂಗಾತಿಯೊಂದಿಗೆ ಪರಿಶೀಲಿಸಿ. ನಿಮ್ಮಿಬ್ಬರು ಹೇಗೆ ಹೆಚ್ಚು ಸಂಪರ್ಕ ಹೊಂದಬಹುದು ಎಂಬುದರ ಕುರಿತು ಮಾತನಾಡಿ.

5. ಪ್ರೀತಿ:

ಪರಸ್ಪರ ಪ್ರೀತಿ, ನಂಬಿಕೆ ನಿಮ್ಮ ಸಂಬಂಧಕ್ಕೆ ಅಡಿಪಾಯವಿದ್ದಂತೆ. ಆದ್ದರಿಂದ ಅಡಿಪಾಯವನ್ನು ಗಟ್ಟಿಗೊಳಿಸುವುದು ನಿಮ್ಮ ಕರ್ತವ್ಯವಾಗಿದೆ. ಒಟ್ಟಿಗೆ ಸಮಯ ಕಳೆಯುವ ಉದ್ದೇಶದಿಂದ ವಿಹಾರಕ್ಕೆ ಹೋಗುವುದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಚಿಕ್ಕದಾದರೂ ಅರ್ಥಪೂರ್ಣವಾದ ಮಾರ್ಗವಾಗಿದೆ. ಅವರಿಗೆ ಸಣ್ಣ ಹೊಗಳಿಕೆಯನ್ನು ನೀಡುವುದು ಅಥವಾ ನೀವು ಅವರನ್ನು ನೀವು ಎಷ್ಟು ಇಷ್ಟಪಡುತ್ತೀರಿ ಎಂಬುದನ್ನು ಅವರಿಗೆ ಆಗಾಗ ತಿಳಿಸಿ. ಇದು ನಿಮ್ಮ ವೃತಿ ಜೀವನದೊಂದಿಗೆ ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಲು ಸಹಾಯಕವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು