ಕೂದಲು ಆರೋಗ್ಯಕರವಾಗಿರಲು ಸಮತೋಲಿತ ಆಹಾರ ಸೇವನೆ ಎಷ್ಟು ಮುಖ್ಯವೋ ಅದೇ ರೀತಿ ಕೂದಲಿನ ಆರೈಕೆಯೂ ಅಷ್ಟೇ ಮುಖ್ಯ. ನಿಮ್ಮ ಕೂದಲನ್ನು ಬಲವಾಗಿ, ದಟ್ಟವಾಗಿ ಮತ್ತು ಆರೋಗ್ಯರವಾಗಿಡಲು ಬಯಸಿದರೆ ಕೂದಲಿನ ಆರೈಕೆಗೆ ಸಂಬಂಧಿಸಿದ ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ವಿಶೇಷ ಗಮನ ಹರಿಸಬೇಕು. ಕೂದಲಿನ ಆರೈಕೆಯಲ್ಲಿ ಕೂದಲು ಬಾಚಿಕೊಳ್ಳುವುದು ಕೂಡಾ ಒಂದು ಪ್ರಮುಖ ಹಂತವಾಗಿದೆ. ನೀವು ಕೂದಲನ್ನು ಸರಿಯಾಗಿ ಬಾಚಿಕೊಳ್ಳದಿದ್ದರೆ, ಕೂದಲ ಬೇರುಗಳು ದುರ್ಬಲಗೊಂಡು ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮತ್ತು ಕೂದಲು ವೇಗವಾಗಿ ಒಡೆದುಹೋಗಲು ಆರಂಭಿಸುತ್ತದೆ. ಇಂತಹ ಅನೇಕ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ಕೂದಲನ್ನು ಸರಿಯಾಗಿ ಬಾಚಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಕನಿಷ್ಠ ಪಕ್ಷ ದಿನಕ್ಕೆ ಎಷ್ಟು ಬಾರಿ ಕೂದಲನ್ನು ಬಾಚಿಕೊಳ್ಳಬೇಕು, ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಕೂದಲು ಆರೋಗ್ಯಕರವಾಗಿರಲು ಮತ್ತು ಉತ್ತಮವಾಗಿರಲು ಪ್ರತಿನಿತ್ಯ ಕೂದನ್ನು ಬಾಚಿಕೊಳ್ಳುವುದು ಮುಖ್ಯ. ಕೂದಲು ಬಾಚುವುದರಿಂದ ಕೂದಲಿನ ಬುಡದಲ್ಲಿನ ರಕ್ತ ಸಂಚಾರ ಹೆಚ್ಚುತ್ತದೆ, ಕೂದಲು ಬಲವಾಗಿರುತ್ತದೆ ಮತ್ತು ಇದು ಕೂದಲಿನಲ್ಲಿ ಸಿಕ್ಕನ್ನು ಉಂಟುಮಾಡುವುದಿಲ್ಲ. ಹಾಗೂ ಇದು ಕೂದಲಿನ ಹೊಳಪನ್ನು ಕೂಡಾ ಹೆಚ್ಚಿಸುತ್ತದೆ. ಹೀಗಿರುವಾಗ ದಿನಕ್ಕೆ ಎಷ್ಟು ಬಾರಿ ಕೂದಲನ್ನು ಬಾಚಿಕೊಂಡರೆ ಸೂಕ್ತ ಎಂಬ ಪ್ರಶ್ನೆ ಹೆಚ್ಚಿನವರ ಮನದಲ್ಲಿ ಮೂಡುತ್ತದೆ. ಕೂದಲು ದಟ್ಟವಾಗಿ ಮತ್ತು ಆರೋಗ್ಯಕರವಾಗಿರಲು ದಿನಕ್ಕೆ ಕನಿಷ್ಠ ಪಕ್ಷ ಎರಡು ಬಾರಿಯಾದರು ಬಾಚಿಕೊಳ್ಳಬೇಕು. ಬೆಳಗ್ಗೆ ಒಂದು ಬಾರಿ ಕೂದಲು ಬಾಚಿದರೆ ಇನ್ನೊಂದು ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಕೂದಲನ್ನು ಬಾಚಿಕೊಳ್ಳಬೇಕು. ಇದಲ್ಲದೆ ಕೂದಲಿ ಉದ್ದಕ್ಕೆ ಅನುಗುಣವಾಗಿ ನೀವು ದಿನದ ಇತರ ಸಮಯದಲ್ಲಿಯೂ ಸಹ ಕೂದಲನ್ನು ಬಾಚಿಕೊಳ್ಳಬಹುದು. ತುಂಬಾ ಉದ್ದವಿರುವ ಕೂದಲು ಸುಲಭವಾಗಿ ಸಿಕ್ಕು ಕಟ್ಟಿಕೊಳ್ಳುತ್ತವೆ. ಆದ್ದರಿಂದ ಈ ಸಮಸ್ಯೆಯನ್ನು ತಪ್ಪಿಸಲು ದಿನಕ್ಕೆ ಕನಿಷ್ಠ 3 ಬಾರಿಯಾದರು ಕೂದಲು ಬಾಚಿಕೊಳ್ಳುವುದು ಅವಶ್ಯಕ. ಇದು ಕೂದಲು ಉದುರುವುದು ಮತ್ತು ದುರ್ಬಲಗೊಳ್ಳುವುದನ್ನು ತಪ್ಪಿಸುತ್ತದೆ.
ಇದನ್ನೂ ಓದಿ: ಆಯುರ್ವೇದದ ಪ್ರಕಾರ ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: