Plastic Chair Cleaning Tips: ಕಪ್ಪು ಬಣ್ಣಕ್ಕೆ ತಿರುಗಿದ ಪ್ಲಾಸ್ಟಿಕ್‌ ಕುರ್ಚಿಗಳನ್ನು ಸ್ವಚ್ಛಗೊಳಿಸಲು ಈ ಸಲಹೆಯನ್ನು ಅನುಸರಿಸಿ

ಬಹುತೇಕ ಎಲ್ಲರ ಮನೆಗಳಲ್ಲೂ ಪ್ಲಾಸ್ಟಿಕ್‌ ಕುರ್ಚಿಗಳು ಇದ್ದೇ ಇರುತ್ತದೆ. ಇವುಗಳ ನಿರಂತರ ಬಳಕೆಯಿಂದಾಗಿ ಕೆಲವೇ ಸಮಯಗಳಲ್ಲಿ ಈ ಕುರ್ಚಿಗಳು ಹೊಳಪನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಅದರಲ್ಲೂ ಬಿಳಿ ಬಣ್ಣದ ಕುರ್ಚಿಗಳು ಕಲೆಗಳಿಂದ ತುಂಬಿ ಕಪ್ಪಾಗಿಬಿಡುತ್ತವೆ. ಹೆಚ್ಚಿನವರು ಬಣ್ಣ ಮಾಸಿ ಹೋದ ಚೇರ್‌ಗಳನ್ನು ಎಸೆದುಬಿಡುತ್ತಾರೆ. ಹೀಗೆ ಎಸೆಯುವ ಬದಲು ಕೆಲವೊಂದು ಮನೆಮದ್ದುಗಳ ಸಹಾಯದಿಂದ ಕೊಳೆಯಾಗಿರುವ ಕುರ್ಚಿಗಳನ್ನು ಹೊಸದಾಗಿ ಕಾಣುವಂತೆ ಮಾಡಬಹುದು.

Plastic Chair Cleaning Tips: ಕಪ್ಪು ಬಣ್ಣಕ್ಕೆ ತಿರುಗಿದ ಪ್ಲಾಸ್ಟಿಕ್‌ ಕುರ್ಚಿಗಳನ್ನು ಸ್ವಚ್ಛಗೊಳಿಸಲು ಈ ಸಲಹೆಯನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 24, 2026 | 7:09 PM

ಬಹುತೇಕ ಪ್ರತಿಯೊಂದು ಮನೆಯಲ್ಲೂ ಪ್ಲಾಸ್ಟಿಕ್ ಕುರ್ಚಿಗಳು (Plastic Chair) ಇದ್ದೇ ಇರುತ್ತವೆ.  ಅಗ್ಗವಾಗಿರುವ ಈ ಚೇರ್‌ಗಳು ಆರಾಮದಾಯಕವೂ ಹೌದು. ಅದಕ್ಕಾಗಿ ಹೆಚ್ಚಿನವರು ಪ್ಲಾಸ್ಟಿಕ್‌ ಚೇರ್‌ಗಳನ್ನೇ ಹೆಚ್ಚು ಬಳಕೆ ಮಾಡ್ತಾರೆ. ಆದರೆ ನಿರಂತರ ಬಳಕೆಯಿಂದ ಪ್ಲಾಸ್ಟಿಕ್‌ ಕುರ್ಚಿಗಳ ಬಣ್ಣ ಮಾಸಿ ಹೋಗುತ್ತವೆ. ಹೌದು ಧೂಳು, ಬಿಸಿಲು, ಬೆವರು ಇವೆಲ್ಲದರ ಕಾರಣದಿಂದ ಕಾಲ ಕ್ರಮೇಣ ಹೊಳಪನ್ನು ಕಳೆದುಕೊಳ್ಳುತ್ತವೆ. ಅದರಲ್ಲೂ ಬಿಳಿ ಬಣ್ಣದ ಪ್ಲಾಸ್ಟಿಕ್‌ ಚೇರ್‌ಗಳು ಅಲ್ಪಾವಧಿಯಲ್ಲಿಯೇ ಅವುಗಳ ಮೂಲ ಹೊಳಪನ್ನು ಕಳೆದುಕೊಳ್ಳುತ್ತವೆ. ಎಷ್ಟೇ ಕ್ಲೀನ್‌ ಮಾಡಿದ್ರೂ ಈ ಕೊಳೆ ಹೋಗಲ್ಲ ಅನ್ನೋ ಕಾರಣಕ್ಕೆ ಅನೇಕರು ಅವುಗಳನ್ನು ಬಿಸಾಕು ಹೊಸ ಚೇರ್‌ಗಳನ್ನು ಖರೀದಿಸುತ್ತಾರೆ. ಹೀಗೆ ಚೇರ್‌ಗಳನ್ನು ಬಿಸಾಕುವ ಬದಲು ಮನೆಯಲ್ಲಿಯೇ ಲಭ್ಯವಿರುವ ಈ ಕೆಲವೊಂದು ವಸ್ತುಗಳ ಸಹಾಯದಿಂದ ಹೊಳಪನ್ನು ಕಳೆದುಕೊಂಡ ಚೇರ್‌ಗಳನ್ನು ಹೊಸದಾಗಿ ಕಾಣುವಂತೆ ಮಾಡಬಹುದು. ‌

ಕಪ್ಪಾದ ಪ್ಲಾಸ್ಟಿಕ್‌ ಕುರ್ಚಿಗಳನ್ನು ಸ್ವಚ್ಛಗೊಳಿಸಲು ಈ ಸಲಹೆಯನ್ನು ಅನುಸರಿಸಿ:

ಅಡಿಗೆ ಸೋಡಾ ಬಳಕೆ:

ಕೊಳೆಯಾದ ಬಿಳಿ ಬಣ್ಣದ ಪ್ಲಾಸ್ಟಿಕ್‌ ಕುರ್ಚಿಗಳನ್ನು ಹೊಸದಾಗಿ ಕಾಣುವಂತೆ ಮಾಡಲು ನೀವು ಈ ಅಡಿಗೆ ಸೋಡಾ ಪರಿಹಾರವನ್ನು ಪ್ರಯತ್ನಿಸಿ. ಅಡಿಗೆ ಸೋಡಾ ಸೌಮ್ಯವಾದ ಅಪಘರ್ಷಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಒಂದು ಬಟ್ಟಲಿನಲ್ಲಿ 3-4 ಟೀ ಚಮಚ ಅಡಿಗೆ ಸೋಡಾವನ್ನು ಹಾಕಿ, ಸ್ವಲ್ಪ ನೀರು ಸೇರಿಸಿ ಮತ್ತು ದಪ್ಪ ಪೇಸ್ಟ್ ಅನ್ನು ರೂಪಿಸಿ. ಈ ಪೇಸ್ಟ್ ಅನ್ನು ಚೇರ್‌ ಮೇಲೆ ಸಮವಾಗಿ ಅನ್ವಯಿಸಿ, ನಂತರ 10 ರಿಂದ 15 ನಿಮಿಷಗಳ ಕಾಲ ಬಿಡಿ. ವೃತ್ತಾಕಾರದ ಚಲನೆಯಲ್ಲಿ ಮೃದುವಾದ ಬ್ರಷ್ ಅಥವಾ ಸ್ಪಾಂಜ್‌ನ ಸಹಾಯದಿಂದ ನಿಧಾನವಾಗಿ ಸ್ಕ್ರಬ್ ಮಾಡಿ. ಶುದ್ಧ ನೀರಿನಿಂದ ತೊಳೆಯಿರಿ, ನಂತರ ಒಣ ಬಟ್ಟೆಯಿಂದ ಒರಸಿ ಒಣಗಿಸಿ. ಹೀಗೆ ಮಾಡುವುದರಿಂದ ನಿಮಿಷದಲ್ಲೇ ಕಲೆಗಳೆಲ್ಲಾ ಮಾಯವಾಗುತ್ತದೆ.

ವಿನೆಗರ್ ಬಳಕೆ:

ಕುರ್ಚಿಯ ಕಳೆದು ಹೋದ ಹೊಳಪನ್ನು ಮರಳಿ ಪಡೆಯಲು ನೀವು ವಿನೆಗರ್‌ ಸಹ ಬಳಸಬಹುದು.  ಹೌದು ಕುರ್ಚಿಯಲ್ಲಿ ಕಪ್ಪು-ಹಸಿರು ಕಲೆಗಳು (ಶಿಲೀಂಧ್ರ) ಅಥವಾ ಅಹಿತಕರ ವಾಸನೆ ಇದ್ದರೆ, ವಿನೆಗರ್ ಅದ್ಭುತವಾಗಿ ಕೆಲಸ ಮಾಡುತ್ತದೆ. ಸ್ಪ್ರೇ ಬಾಟಲಿಯಲ್ಲಿ ಬಿಳಿ ವಿನೆಗರ್ ಮತ್ತು ನೀರನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ. ಇಡೀ ಕುರ್ಚಿಯ ಮೇಲೆ ಸಿಂಪಡಿಸಿ. ಅದನ್ನು 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಮೃದುವಾದ ಬಟ್ಟೆ ಅಥವಾ ಬ್ರಷ್‌ನಿಂದ ಸ್ಕ್ರಬ್ ಮಾಡಿ, ನಂತರ ನೀರಿನಿಂದ ತೊಳೆದು ಒಣಗಿಸಿ.

ಇದನ್ನೂ ಓದಿ: ಮನೆಯಲ್ಲಿರುವ ಒಂದು ವಸ್ತುವಿನಿಂದ ಜಿಡ್ಡುಗಟ್ಟಿದ ಗ್ಯಾಸ್‌ ಸ್ಟೌವ್‌ಕ್ಷಣದಲ್ಲೇ ಕ್ಲೀನ್‌ ಮಾಡ್ಬೋದು

ನಿಂಬೆ ಮತ್ತು ಉಪ್ಪು:

ನಿಮ್ಮ ಮನೆಯಲ್ಲಿರುವ ಬಿಳಿ ಬಣ್ಣದ ಕುರ್ಚಿ ಹಳದಿ ಅಥವಾ ಕಪ್ಪು ಬಣ್ಣಕ್ಕೆ ತಿರುಗಿದ್ದರೆ,  ಅದನ್ನು ಸ್ವಚ್ಛಗೊಳಿಸಲು ಈ ನಿಂಬೆ ಮತ್ತು ಉಪ್ಪಿನ ಟ್ರಿಕ್ ಸಾಕಷ್ಟು ಉಪಯುಕ್ತವಾಗಿರುತ್ತದೆ. ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದಕ್ಕೆ ಸ್ವಲ್ಪ ಉಪ್ಪನ್ನು ಹಚ್ಚಿ. ಕಲೆ ಇರುವ ಜಾಗಕ್ಕೆ ನಿಧಾನವಾಗಿ ಉಜ್ಜಿ. 5-10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ನಿಂಬೆ ಆಮ್ಲ ಮತ್ತು ಉಪ್ಪು ಸೇರಿ ಹಳೆಯ ಕಲೆಗಳನ್ನು ತೆಗೆದುಹಾಕುತ್ತದೆ.

ನಿಮ್ಮ ಕುರ್ಚಿಯನ್ನು ಕ್ಲೀನ್‌ ಮಾಡಲು ತುಂಬಾ ಗಟ್ಟಿಯಾದ ವೈರ್ ಬ್ರಷ್ ಬಳಸುವುದನ್ನು ತಪ್ಪಿಸಿ. ಇದು ಪ್ಲಾಸ್ಟಿಕ್ ಚೇರ್‌ ಮೇಲ್ಮೈಯಲ್ಲಿ ಸಣ್ಣ ಗೀರುಗಳನ್ನು ಉಂಟುಮಾಡಬಹುದು.ಈ ಗೀರುಗಳಿಂದ ಕುರ್ಚಿ ಮೇಲೆ  ಧೂಳು ಮತ್ತು ಕೊಳಕು ಹೆಚ್ಚು ಸುಲಭವಾಗಿ ಸಂಗ್ರಹವಾಗುತ್ತದೆ. ಆದ್ದರಿಂದ ಮೃದುವಾದ ಸ್ಪಾಂಜ್, ಬಟ್ಟೆ ಅಥವಾ ಮೃದುವಾದ ಬ್ರಷ್‌ಗಳನ್ನು ಚೇರ್‌  ಸ್ವಚ್ಛಗೊಳಿಸಲು ಉತ್ತಮ ಆಯ್ಕೆಯಾಗಿದೆ. ಅದೇ ರೀತಿ, ಕಠಿಣ ರಾಸಾಯನಿಕಗಳು ಅಥವಾ ಬ್ಲೀಚ್ ಅನ್ನು ಪದೇ ಪದೇ ಬಳಸುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us