AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿರುವ ಈ ಒಂದು ವಸ್ತುವಿನಿಂದ ಜಿಡ್ಡುಗಟ್ಟಿದ ಗ್ಯಾಸ್‌ ಸ್ಟೌವ್‌ನ ಕ್ಷಣದಲ್ಲೇ ಕ್ಲೀನ್‌ ಮಾಡ್ಬೋದು

ಗ್ಯಾಸ್‌ ಸ್ಟೌವ್‌ ಅಡುಗೆ ಮನೆಯಲ್ಲಿ ಅತಿ ಹೆಚ್ಚು ಬಳಸಲ್ಪಡುವ ವಸ್ತು. ಹೌದು ಬಿಸಿನೀರು ಕಾಯಿಸುವುದರಿಂದ ಹಿಡಿದು ಅಡುಗೆ ವರೆಗೆ ಗ್ಯಾಸ್‌ನಲ್ಲೇ ಮಾಡಲಾಗುತ್ತದೆ. ಹೀಗೆ ಅಡುಗೆ ಮಾಡುವಾಗ ಎಣ್ಣೆ, ಹಾಲು, ಗ್ರೇವಿ ಚೆಲ್ಲಿ ಗ್ಯಾಸ್‌ ಸ್ಟೌವ್‌ ಜಿಡ್ಡುಕಟ್ಟಿಬಿಡುತ್ತದೆ. ಮತ್ತು ಸಂಗ್ರಹವಾಗುವ ಕೊಳೆಯಿಂದಾಗಿ ಗ್ಯಾಸ್‌ ಸ್ಟೌವ್‌ ಹಳೆಯದರಂತೆ ಕಾಣುತ್ತದೆ. ಹೀಗಿರುವಾಗ ಇದನ್ನು ಕ್ಲೀನ್‌ ಮಾಡಲು ದುಬಾರಿ ಕ್ಲೀನರ್‌ಗಳು ಬೇಕಾಗಿಲ್ಲ, ಅಡುಗೆ ಮನೆಯಲ್ಲಿಯೇ ಲಭ್ಯವಿರುವ ಈ ಒಂದಷ್ಟು ವಸ್ತುಗಳ ಸಹಾಯದಿಂದ ಫಟಾಫಟ್‌ ಅಂತ ಗ್ಯಾಸ್‌ ಸ್ಟೌವ್‌ ಕ್ಲೀನ್‌ ಮಾಡ್ಬೋದು.

ಮನೆಯಲ್ಲಿರುವ ಈ ಒಂದು ವಸ್ತುವಿನಿಂದ ಜಿಡ್ಡುಗಟ್ಟಿದ ಗ್ಯಾಸ್‌ ಸ್ಟೌವ್‌ನ ಕ್ಷಣದಲ್ಲೇ ಕ್ಲೀನ್‌ ಮಾಡ್ಬೋದು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 19, 2026 | 7:25 PM

Share

ಅಡುಗೆಮನೆಯಲ್ಲಿ ಅತೀ ಅಗತ್ಯವಾದ ಮತ್ತು ಅತೀ ಹೆಚ್ಚು ಬಳಸಲ್ಪಡುವ ವಸ್ತುವೆಂದರೆ ಅದು ಗ್ಯಾಸ್ ಸ್ಟೌವ್ (gas stove). ದಿನನಿತ್ಯ ಅಡುಗೆ ಮಾಡುವ ಕಾರಣ ಎಷ್ಟೇ ಸಲ ಕ್ಲೀನ್‌ ಮಾಡಿದ್ರೂ ಗ್ಯಾಸ್‌ ಸ್ಟೌವ್‌ ಕೊಳೆಯಾಗಿ ಬಿಡುತ್ತದೆ. ಹೌದು ಎಣ್ಣೆ, ಮಸಾಲೆ ಬಿದ್ದು, ಹಾಲು ಉಕ್ಕಿ ಗ್ಯಾಸ್‌ ಸ್ಟೌವ್‌ ಬೇಗನೆ ಕೊಳೆಯಾಗಿಡುತ್ತದೆ ಮತ್ತು ಜಿಡ್ಡುಗಟ್ಟಿಬಿಡುತ್ತದೆ. ಇದನ್ನು ಸ್ವಚ್ಛಗೊಳಿಸಲು ಹೆಚ್ಚನವರು ದುಬಾರಿ ಕ್ಲೀನರ್‌ಗಳ ಮೊರೆ ಹೋಗ್ತಾರೆ. ಈ ರಾಸಾಯನಿಕಯುಕ್ತ ಕ್ಲೀನರ್‌ಗಳಿಗೆ ದುಡ್ಡು ಖರ್ಚು ಮಾಡುವ ಬದಲು ಅಡುಗೆಮನೆಯಲ್ಲಿಯೇ ಲಭ್ಯವಿರುವ ಈ ಕೆಲವು ವಸ್ತುಗಳಿಂದ ಗ್ಯಾಸ್‌ ಸ್ಟೌವ್‌ನಲ್ಲಿ ಅಂಟಿದ ಜಿಡ್ಡನ್ನು ಸುಲಭವಾಗಿ ತೆಗೆದುಹಾಕಬಹುದು.

ಜಿಡ್ಡುಗಟ್ಟಿದ ಗ್ಯಾಸ್ ಸ್ಟೌವ್‌ ಕ್ಲೀನ್‌ ಮಾಡಲು ಇಲ್ಲಿದೆ ಸರಳ ಉಪಾಯ:

ಬೇಕಿಂಗ್ ಸೋಡಾ ಮತ್ತು ವಿನೆಗರ್:

ಗ್ಯಾಸ್ ಸ್ಟೌವ್ ಸ್ವಚ್ಛಗೊಳಿಸಲು ನೀವು ಬೇಕಿಂಗ್ ಸೋಡಾ ಮತ್ತು ಬಿಳಿ ವಿನೆಗರ್ ಬಳಸಬಹುದು. ಮೊದಲು, ಗ್ಯಾಸ್ ರೆಗ್ಯುಲೇಟರ್ ಅನ್ನು ಆಫ್ ಮಾಡಿ ಮತ್ತು ಬರ್ನರ್‌ಗಳನ್ನು ತೆಗೆದು ಪಕ್ಕಕ್ಕಿಡಿ.  ಸ್ಟೌವ್ ಮೇಲ್ಮೈ ಮೇಲೆ ಪದರದಲ್ಲಿ ಅಡಿಗೆ ಸೋಡಾವನ್ನು ಸಿಂಪಡಿಸಿ. ಅದಕ್ಕೆ ಸ್ವಲ್ಪ ಬಿಳಿ ವಿನೆಗರ್ ಸೇರಿಸಿ. ಈ ಮಿಶ್ರಣವು ತಕ್ಷಣವೇ ಗುಳ್ಳೆಗಳಾಗಿ ಬದಲಾಗುತ್ತದೆ ಮತ್ತು ನೊರೆ ಬರಲು ಆರಂಭಿಸುತ್ತದೆ. ಈ ಫೋಮ್ ಅಥವಾ ನೊರೆ ಸ್ಟೌವ್ ಮೇಲೆ ಸಂಗ್ರಹವಾಗಿರುವ ಗ್ರೀಸ್ ಮತ್ತು ಎಣ್ಣೆಯ ಕಲೆಗಳನ್ನು ಮೃದುಗೊಳಿಸುತ್ತದೆ. 10 ನಿಮಿಷಗಳ ನಂತರ, ಹಳೆಯ ಟೂತ್ ಬ್ರಷ್ ಅಥವಾ ಸ್ಪಂಜಿನಿಂದ ನಿಧಾನವಾಗಿ ಉಜ್ಜಿ ಮತ್ತು ಒದ್ದೆಯಾದ ಬಟ್ಟೆಯಿಂದ ಒರೆಸಿ. ಇದು ಗ್ರೀಸ್ ಅನ್ನು ಸುಲಭವಾಗಿ ತೆಗೆದುಹಾಕುತ್ತದೆ. ಗ್ಯಾಸ್‌ ಸ್ಟೌವ್‌ ಹೊಸದರಂತೆ ಕಾಣುವಂತೆ ಮಾಡುತ್ತದೆ.

ನಿಂಬೆ ಮತ್ತು ಉಪ್ಪು:

ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಸ್ಲೈಸ್ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ. ಉಪ್ಪುಸಹಿತ ನಿಂಬೆ ಹೋಳನ್ನು ಗ್ಯಾಸ್‌ ಸ್ಟೌವ್‌ ಮೇಲೆ ಉಜ್ಜಿ, ನಿಂಬೆಯಲ್ಲಿರುವ ಆಮ್ಲೀಯ ಅಂಶ ಮತ್ತು ಉಪ್ಪಿನ ಅಪಘರ್ಷಕ ಶಕ್ತಿಯು ಸ್ಟೌವ್‌ ಮೇಲೆ ಅಂಟಿರುವ ದಪ್ಪನೆಯ ಗ್ರೀಸ್ ಪದರವನ್ನು ಸಡಿಲಗೊಳಿಸುತ್ತದೆ. ನಂತರ ಅದನ್ನು ಒದ್ದೆಯಾದ ಬಟ್ಟೆಯಿಂದ ಸ್ವಚ್ಛಗೊಳಿಸಿ, ಇದರಿಂದ ಕೊಳೆಯೆಲ್ಲಾ ಮಾಯವಾಗುತ್ತದೆ. ಇದೇ ವಿಧಾನವನ್ನು ಓವನ್‌ ಕ್ಲೀನ್‌ ಮಾಡಲು ಕೂಡ ಬಳಸಬಹುದು.

ಇದನ್ನೂ ಓದಿ: ಇವುಗಳ ಸಹಾಯದಿಂದ ತುಕ್ಕು ಹಿಡಿದ ಕಬ್ಬಿಣ, ಸ್ಟೀಲ್‌ ವಸ್ತುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು

ಬಿಸಿನೀರು ಮತ್ತು ಡಿಶ್‌ವಾಶ್‌ ಲಿಕ್ವಿಡ್:

ಸ್ಟೌವ್‌ನ ಸಣ್ಣ ಭಾಗಗಳಾದ ಗ್ರೇಟ್‌ಗಳು ಮತ್ತು ಬರ್ನರ್ ರಿಂಗ್‌ಗಳನ್ನು ಸ್ವಚ್ಛಗೊಳಿಸಲು ಬಿಸಿನೀರು ತುಂಬಾ ಪರಿಣಾಮಕಾರಿಯಾಗಿದೆ. ಒಂದು ಬಕೆಟ್ ಬಿಸಿ ನೀರಿಗೆ  ಕೆಲವು ಹನಿ ಪಾತ್ರೆ ಡಿಶ್‌ವಾಶ್‌ ಲಿಕ್ವಿಡ್  ಹಾಕಿ ಮಿಶ್ರಣ ಮಾಡಿ. ಬರ್ನರ್ ರಿಂಗ್‌ಗಳು ಮತ್ತು ಗ್ರೇಟ್‌ಗಳಂತಹ ಸಣ್ಣ ಭಾಗಗಳನ್ನು 15 ನಿಮಿಷಗಳ ಕಾಲ ಅದರಲ್ಲಿ ನೆನೆಸಿ.  ನಂತರ, ಬ್ರಷ್ ಸಹಾಯದಿಂದ ಚೆನ್ನಾಗಿ ಸ್ಕ್ರಬ್‌ ಮಾಡಿ ಸ್ವಚ್ಛಗೊಳಿಸಿ.

ಗ್ಯಾಸ್ ಸ್ಟೌವ್ ಸ್ವಚ್ಛಗೊಳಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

  • ಒಲೆ ತಣ್ಣಗಾದಾಗ ಮಾತ್ರ ಅದನ್ನು ಸ್ವಚ್ಛಗೊಳಿಸಿ.
  • ನೇರವಾಗಿ ಗ್ಯಾಸ್‌ ಸ್ಟೌವ್‌ ಮೇಲೆ ನೀರು ಹಾಕಬೇಡಿ, ಒದ್ದೆ ಬಟ್ಟೆ ಅಥವಾ ಸ್ಪಾಂಜ್‌ನಿಂದ ಸ್ವಚ್ಛಗೊಳಿಸಿ.
  • ಸ್ಟೀಲ್ ಸ್ಕ್ರಬ್ಬರ್‌ಗಳನ್ನು ಬಳಸಬೇಡಿ, ಅದರ ಬದಲು ಸ್ಪಾಂಜ್‌ ಅಥವಾ ಹಳೆಯ ಟೂತ್‌ಬ್ರಷ್‌ ಬಳಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?