ತಾಪಮಾನ ಏರಿಕೆಯಾಗುತ್ತಿದ್ದಂತೆ, ನಿಮ್ಮ ಪ್ರವೃತ್ತಿಯು ಚರ್ಮವನ್ನು ರಕ್ಷಿಸಿ ಪೋಷಿಸುವ ಮಾರ್ಗಗಳ ಕಡೆಗೆ ನಿಮ್ಮನ್ನು ಪ್ರೇರೇಪಿಸುತ್ತದೆ. ಬಿಸಿಯಿಂದ ಚರ್ಮವು ತುಂಬಾ ಒಣಗುತ್ತದೆ ಅದಲ್ಲದೆ ಇವು ಚರ್ಮದ ಕಿರಿಕಿರಿಗೆ ಕಾರಣವಾಗಬಹುದು. ಹಾಗಾದರೆ ಈ ಸಮಸ್ಯೆಗಳಿಗೆ ಪರಿಹಾರವೇನು? ಇದನ್ನು ಎದುರಿಸುವುದು ಹೇಗೆ? ಇವೆಲ್ಲದಕ್ಕೂ ಇಲ್ಲಿದೆ ಸಲಹೆಗಳು! ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುವ ಮಾರ್ಗಗಳನ್ನು ನೀವು ತಿಳಿದುಕೊಳ್ಳಲೇಬೇಕು. ಆಧುನಿಕ ಚರ್ಮದ ಆರೈಕೆಯ ಬಗ್ಗೆ ಮಾತನಾಡುವಾಗ, ಹೈಲುರೊನಿಕ್ ಆಮ್ಲ, ವಿಟಮಿನ್ ಸಿ ಮತ್ತು ರೆಟಿನಾಲ್ ನಂತಹ ಅಲಂಕಾರಿಕ ಪದಾರ್ಥಗಳನ್ನು ಹೊಂದಿರುವ ಅತ್ಯಾಧುನಿಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ತುಂಬಿ ತುಳುಕುತ್ತಿವೆ. ಒಜಿ ಬೇಸಿಕ್ಸ್ ನಿಂದ ಇತ್ತೀಚಿನ ಟ್ರೆಂಡ್ ಗಳವರೆಗೆ ಸೌಂದರ್ಯ ಜಗತ್ತಿನಲ್ಲಿ ಯಾವಾಗಲೂ ಏನಾದರೂ ಹೊಸದು ಜನರಿಗೆ ಪರಿಚಯವಾಗುತ್ತಲೇ ಇರುತ್ತದೆ. ಮತ್ತು ಇದೀಗ ಬೇಸಿಗೆ ಕಾಲದಲ್ಲಿ ಚರ್ಮದ ಆರೈಕೆ ಬಗ್ಗೆ ತಿಳಿಯೋಣ.
ಕಾಸ್ಮೆಟಿಕ್ ಚರ್ಮರೋಗ ತಜ್ಞೆ ಮತ್ತು ಬೆಂಗಳೂರಿನ ಕಾಸ್ಮೋಡರ್ಮಾ ಕ್ಲಿನಿಕ್ಸ್ ಸ್ಥಾಪಕ ಡಾ.ಚೈತ್ರಾ ವಿ ಆನಂದ್ ಅವರು ಎಚ್ಟಿ ಲೈಫ್ಸ್ಟೈಲ್ನೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಸುಡುವ ಬೇಸಿಗೆಯಲ್ಲಿ ಹೊಳೆಯುವ ಮೈ ಬಣ್ಣವನ್ನು ಪಡೆಯಲು ಇಲ್ಲಿವೆ ಆರು ಅಗತ್ಯ ಮಾರ್ಗಗಳು.
ಮೊದಲನೆಯದಾಗಿ, ಸನ್ಸ್ಕ್ರೀನ್ಗಳನ್ನು ಹಚ್ಚುವುದು ತುಂಬಾ ಮುಖ್ಯ. ನೇರಳಾತೀತ ವಿಕಿರಣವನ್ನು ಹೀರಿಕೊಳ್ಳದಂತೆ ತಡೆಯುವ ಮೂಲಕ ಚರ್ಮವನ್ನು ರಕ್ಷಿಸಲು ಸನ್ಸ್ಕ್ರೀನ್ಗಳು ಅತ್ಯಗತ್ಯ. ಯುವಿ ವಿಕಿರಣವು ಚರ್ಮದ ಹಾನಿಗೆ ಕಾರಣವಾಗಬಹುದು, ಹಾಗಾಗಿ ಇದು ಸೂರ್ಯನ ಶಾಖದಿಂದ ಸುರಕ್ಷಿತವಾಗಿರಲು ಸನ್ಸ್ಕ್ರೀನ್ ಪ್ರಮುಖ ಸಾಧನವಾಗಿದೆ. ಮಾರುಕಟ್ಟೆಯಲ್ಲಿ ಸನ್ಸ್ಕ್ರೀನ್ ಬ್ರಾಂಡ್ಗಳು ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (ಎಸ್ಪಿಎಫ್) ಅನ್ನು ಬಳಸಿಕೊಂಡು ಸೂರ್ಯನ ಬಿಸಿಲಿಗೆ ಪ್ರಾಥಮಿಕ ಕಾರಣವಾದ ನೇರಳಾತೀತ ಬಿ (ಯುವಿಬಿ) ಕಿರಣಗಳನ್ನು ಈ ಉತ್ಪನ್ನವು ಎಷ್ಟು ಚೆನ್ನಾಗಿ ತಡೆಯಬಹುದು ಎಂಬುದನ್ನು ಸೂಚಿಸುತ್ತದೆ. ಹೆಚ್ಚಿನ ಎಸ್ಪಿಎಫ್ ಸಂಖ್ಯೆಗಳು ಯುವಿಬಿ ಕಿರಣಗಳಿಂದ ಹೆಚ್ಚಿನ ರಕ್ಷಣೆಯನ್ನು ನೀಡುತ್ತವೆ. ಉದಾಹರಣೆಗೆ, 30 ಎಸ್ಪಿಎಫ್ ಹೊಂದಿರುವ ಸನ್ಸ್ಕ್ರೀನ್ ಸರಿಸುಮಾರು 97% ಯುವಿಬಿ ಕಿರಣಗಳನ್ನು ನಿರ್ಬಂಧಿಸುತ್ತದೆ, ಜೊತೆಗೆ 50 ರ ಎಸ್ಪಿಎಫ್ ಸುಮಾರು 98% ಯುವಿಬಿ ಕಿರಣಗಳನ್ನು ನಿರ್ಬಂಧಿಸುತ್ತದೆ.
ಓರಲ್ ಹೈಲುರೋನಿಕ್ ಆಮ್ಲವು ಕ್ಯಾಪ್ಸುಲ್ಗಳಾಗಿವೆ, ಮಾತ್ರೆಗಳು ಅಥವಾ ದ್ರವಗಳ ರೂಪದಲ್ಲಿ ಹೈಲುರೊನಿಕ್ ಆಮ್ಲಗಳ ಸೇವನೆ ಮಾಡಬಹುದು ಎಂದು ಸೂಚಿಸಲಾಗುತ್ತದೆ. ಹೈಲುರೊನಿಕ್ ಆಮ್ಲವನ್ನು ಸಮಕಾಲೀನ ಸೌಂದರ್ಯವರ್ಧಕಗಳು ಮತ್ತು ಚರ್ಮದ ಫಿಲ್ಲರ್ ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದ್ದರೂ, ಇದು ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಗಳಿಸಿದೆ. ಈ ಹೈಲುರೊನಿಕ್ ಆಮ್ಲವನ್ನು ತೆಗೆದುಕೊಳ್ಳುವುದರಿಂದ ವಯಸ್ಸಾದ ಹಾಗೇ ಕಾಣುವ ನಿಮ್ಮ ಚರ್ಮದ ಸುಕ್ಕು ಕಡಿಮೆಯಾಗುವುದು ಮತ್ತು ಹೆಚ್ಚಿನ ಚರ್ಮದ ಆರ್ದ್ರತೆಯಂತಹ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಅಸ್ಟಾಕ್ಸಾಂಥಿನ್ ಬಲವಾದ ಉತ್ಕರ್ಷಣ ನಿರೋಧಕವಾಗಿದ್ದು, ಅದರ ಸಂಭಾವ್ಯ ಚರ್ಮದ ಪ್ರಯೋಜನಗಳಿಂದಾಗಿ ಇದು ಎಲ್ಲರ ಗಮನ ಸೆಳೆದಿದೆ. ಅಸ್ಟಾಕ್ಸಾಂಥಿನ್ ಅನ್ನು ಹೆಚ್ಚಾಗಿ ಆಹಾರ ಪೂರಕವಾಗಿ ಬಳಸಲಾಗುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಹಲವಾರು ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಸಮಕಾಲಿಕ ಅಂಶವಾಗಿ ಬಳಸಲಾಗುತ್ತಿದೆ. ಅಸ್ಟಾಕ್ಸಾಂಥಿನ್ ಚರ್ಮದ ಜಲಸಂಚಯನ ಮತ್ತು ತೇವಾಂಶವನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ಟ್ರಾನ್ಸೆಪ್ಡರ್ಮಲ್ ವಾಟರ್ ಲಾಸ್ (ಟಿಇಡಬ್ಲ್ಯುಎಲ್) ಅನ್ನು ಕಡಿಮೆ ಮಾಡುವ ಮೂಲಕ ಚರ್ಮದ ನೈಸರ್ಗಿಕ ತಡೆಗೋಡೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಚರ್ಮವನ್ನು ತೇವಾಂಶ ವಾಗಿರಿಸುತ್ತದೆ. ಇದರ ಅತ್ಯಂತ ಪ್ರಮುಖ ಮತ್ತು ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಪರಿಣಾಮವೆಂದರೆ ಯುವಿ ರಕ್ಷಣೆ, ಇದು ಬೇಸಿಗೆಯ ತಿಂಗಳುಗಳಲ್ಲಿ ಚರ್ಮದ ಸ್ನೇಹಿತನಾಗಿದೆ.
ಮತ್ತೊಂದು ಪ್ರಮುಖ ವಿಧಾನವೆಂದರೆ ಮಾಯಿಶ್ಚರೈಸರ್ ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳುವುದು. ಇದು ಚರ್ಮವನ್ನು ತೇವಾಂಶದಿಂದ ಇರಿಸಿಕೊಳ್ಳುತ್ತದೆ. ತಾಪಮಾನ ಹೆಚ್ಚಾದಾಗ, ನಮ್ಮ ಚರ್ಮವು ಬೇಗನೆ ತೇವಾಂಶವನ್ನು ಕಳೆದುಕೊಳ್ಳುವುದರಿಂದ ಇದನ್ನು ಎದುರಿಸಲು, ಚರ್ಮಕ್ಕೆ ಪೋಷಣೆ ನೀಡಲು ಈ ರೀತಿಯ ಉತ್ಪನ್ನಗಳನ್ನು ಬಳಸುವುದು ಮುಖ್ಯ. ಕೆಲವು ಚುಚ್ಚುಮದ್ದುಗಳು ಕೂಡ ಚರ್ಮದ ತೇವಾಂಶವನ್ನು ತ್ವರಿತವಾಗಿ ಪುನಃ ಪಡೆಯಲು ಸಹಾಯ ಮಾಡುತ್ತದೆ. ಚರ್ಮದ ಸಡಿಲತೆಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಮುಖ, ಕುತ್ತಿಗೆ, ಕೈ, ತೋಳು, ಮೊಣಕಾಲು ಮತ್ತು ಕಿಬ್ಬೊಟ್ಟೆಯ ಪ್ರದೇಶದ ಮೇಲೆ ಇಂತಹ ಚಿಕಿತ್ಸೆಗಳನ್ನು ಮಾಡಬಹುದಾಗಿದೆ ಆದರೆ ನಿಮ್ಮ ವೈದ್ಯರ ಸಲಹೆ ಅಗತ್ಯ.
ನೀವು ಜೈವಿಕ ಚಿಕಿತ್ಸೆಯನ್ನು ಪ್ರಯತ್ನಿಸಬಹುದು. ಬಯೋಟೆಕ್ನಾಲಜಿಯಲ್ಲಿ ನಿಮ್ಮ ದೇಹದ ನೈಸರ್ಗಿಕ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುವ ಚಿಕಿತ್ಸೆ ದೊರೆಯುತ್ತದೆ. ಇದು ನಿಮಗೆ ಚರ್ಮಕ್ಕೆ ಯೌವನದ ಮತ್ತು ಪ್ರಕಾಶಮಾನವಾದ ಹೊಳಪನ್ನು ನೀಡುತ್ತದೆ. ಪ್ರೊಫಿಲೋ ಶ್ರೇಣಿಯ ಉತ್ಪನ್ನಗಳಂತೆ, ಅತ್ಯಾಧುನಿಕ ಹೈಲುರೊನಿಕ್ ಆಮ್ಲ ಆಧಾರಿತ ಚುಚ್ಚುಮದ್ದಿನ ಚಿಕಿತ್ಸೆಯು ಚರ್ಮದ ಆರ್ದ್ರತೆಯನ್ನು ಹೆಚ್ಚಿಸುವ ಮೂಲಕ, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುವ ಮೂಲಕ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ.
ಇತ್ತೀಚಿಗೆ ಜನಪ್ರಿಯತೆಯನ್ನು ಗಳಿಸುತ್ತಿರುವ ಮತ್ತೊಂದು ಚಿಕಿತ್ಸೆಯೆಂದರೆ ಹೈಡ್ರಾಫೇಷಿಯಲ್. ಈ ಚಿಕಿತ್ಸೆಯು ಅದ್ಭುತ ಫಲಿತಾಂಶಗಳನ್ನು ನೀಡಲು ಶುದ್ಧೀಕರಣ, ಎಕ್ಸ್ಫೋಲಿಯೇಷನ್, ಹೊರತೆಗೆಯುವಿಕೆ, ಜಲಸಂಚಯನ ಮತ್ತು ಉತ್ಕರ್ಷಣ ನಿರೋಧಕ ರಕ್ಷಣೆಯನ್ನು ಪಡೆಯಬಹುದಾಗಿದೆ. ಏಕಕಾಲದಲ್ಲಿ ಮಾಯಿಶ್ಚರೈಸಿಂಗ್ ಸೀರಮ್ಗಳನ್ನು ನೀಡುವುದರಿಂದ ಕಲ್ಮಶಗಳು ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ, ಈ ಚಿಕಿತ್ಸೆಯು ನಿಮ್ಮ ಚರ್ಮವು ಅರ್ಹವಾದ ಟಿಎಲ್ಸಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತದೆ. ರಂಧ್ರಗಳನ್ನು ನಿರ್ವಾತಗೊಳಿಸಲು ಮತ್ತು ನಿಮ್ಮ ಚರ್ಮವನ್ನು ಆಳವಾಗಿ ಹೈಡ್ರೇಟ್ ಮಾಡಲು, ಚರ್ಮದ ಆರೈಕೆಗೆ ತ್ವರಿತ ಮತ್ತು ಶಕ್ತಿಯುತ ಪರಿಹಾರವನ್ನು ಹುಡುಕುವ ಯಾರಿಗಾದರೂ ಹೈಡ್ರಾಫೇಷಿಯಲ್ಗಳು ಪರಿಪೂರ್ಣ ಆಯ್ಕೆಯಾಗಿದೆ.
ನಿಮ್ಮ ಅಗತ್ಯಗಳು ಮತ್ತು ಕ್ರಿಯಾತ್ಮಕ ಜೀವನಶೈಲಿಗೆ ಸರಿಹೊಂದುವಂತೆ ಪರಿಪೂರ್ಣ ಚರ್ಮದ ಆರೈಕೆ ಚಿಕಿತ್ಸೆಯನ್ನು ಆರಿಸಿಕೊಳ್ಳಿ. ಅನೇಕ ಆಯ್ಕೆಗಳು ಲಭ್ಯವಿರುವುದರಿಂದ, ಈ ಬೇಸಿಗೆಯಲ್ಲಿ ನೀವು ಸುಂದರವಾಗಿ ಕಾಣಲು ನಿಮಗೆ ಸಹಾಯ ಮಾಡುವ ಪರಿಪೂರ್ಣ ಚರ್ಮದ ಆರೈಕೆಗೆ ಆಯ್ಕೆ ನಿಮ್ಮದು. ನಿಮ್ಮ ಚರ್ಮದ ಕಾಳಜಿ ನೀವೇ ಮಾಡಿಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:15 pm, Thu, 25 May 23