ಜೀವನವನ್ನು ಸುಧಾರಿಸಲು ನೀವು ಅಳವಡಿಸಿಕೊಳ್ಳಬೇಕಾದ ಕೆಲವು ಉತ್ತಮ ಅಭ್ಯಾಸಗಳು

ನಕಾರಾತ್ಮಕ ಸ್ವಚರ್ಚೆಯನ್ನು ಬಿಟ್ಟು ಬಿಡುವುದು, ಆತ್ಮಗೌರವವನ್ನು ಅಭ್ಯಾಸ ಮಾಡುವುದು, ಸಕಾರಾತ್ಮಕ ಯೋಚನೆಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ನೀವು ಒಳ್ಳೆಯ ನಡವಳಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮನ್ನು ಮತ್ತು ನಿಮ್ಮ ಜೀವನವನ್ನು ಸುಧಾರಿಸಬಹುದು.

ಜೀವನವನ್ನು ಸುಧಾರಿಸಲು ನೀವು ಅಳವಡಿಸಿಕೊಳ್ಳಬೇಕಾದ ಕೆಲವು ಉತ್ತಮ ಅಭ್ಯಾಸಗಳು
Lifestyle TipsImage Credit source: Entrepreneur
Follow us
| Updated By: ಅಕ್ಷತಾ ವರ್ಕಾಡಿ

Updated on: May 24, 2023 | 5:48 PM

ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಲು, ಆರೋಗ್ಯಕರ ವೈಯಕ್ತಿಕ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಅಥವಾ ಸ್ವಯಂ ಬೆಳವಣಿಗೆಯ ಮೇಲೆ ಗಮನವನ್ನು ಕೇಂದ್ರೀಕರಿಸಲು ನೀವು ಬಯಸುತ್ತೀರಾ, ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸ್ವಯಂ ಸುಧಾರಣೆಯು ಮುಖ್ಯವಾಗಿ ಬೇಕಾಗುತ್ತದೆ. ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ಮತ್ತು ನಡವಳಿಕೆಗಳು ನಮ್ಮ ಜೀವನವನ್ನು ಅಡ್ಡಿಪಡಿಸಬಹುದು ಮತ್ತು ಅದು ನಮ್ಮ ಗುರಿಗಳನ್ನು ಸಾಧಿಸುವುದನ್ನು ತಡೆಯುತ್ತದೆ. ಆದ್ದರಿಂದ ಕೆಲವೊಂದು ಒಳ್ಳೆಯ ನಡವಳಿಕೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಬಹುದು.

ಈ ಕೆಲವು ನಡವಳಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಜೀವನವನ್ನು ಬದಲಾಯಿಸಬಹುದು:

ಸ್ವಯಂ ಸಹಾನುಭೂತಿಯನ್ನು ಅಳವಡಿಸಿಕೊಳ್ಳುವುದು:

ಸ್ವಯಂ ವಿಮರ್ಶೆ ಹಾಗೂ ನಕಾರಾತ್ಮಕ ಮಾತುಗಳನ್ನು ಬಿಟ್ಟುಬಿಡಿ ಮತ್ತು ಅದನ್ನು ಸ್ವ ಸಹಾನುಭೂತಿ ಮತ್ತು ಸಕಾರಾತ್ಮಕ ದೃಢೀಕರಣಗಳೊಂದಿಗೆ ಬದಲಿಸಿಕೊಳ್ಳಿ. ನಿಮ್ಮ ಸಾಮಾರ್ಥ್ಯದಲ್ಲಿ ನಂಬಿಕೆ ಇರಿಸಿ ಹಾಗೂ ದಯೆ ಮತ್ತು ಆಶಾವಾದದೊಂದಿಗೆ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ನಿಮಗೆ ಸಹಾಯಕವಾಗುವ ಆಂತರಿಕ ಶಕ್ತಿಯನ್ನು ಪೋಷಿಸಿ.

ಆಲಸ್ಯದಿಂದ ಮುಕ್ತರಾಗಿ:

ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡುವ ಮೂಲಕ, ಸಾಧಿಸಬಹುದಾದ ಗುರಿಗಳ ಕಡೆಗೆ ನಿರಂತರ ಪ್ರಯತ್ನಗಳನ್ನು ಮಾಡುವ ಮೂಲಕ ಆಲಸ್ಯದ ಹಿಡಿತದಿಂದ ಮುಕ್ತರಾಗಿರಿ. ಪ್ರಸ್ತುತ ಕ್ಷಣವನ್ನು ಸ್ವೀಕರಿಸಿ ಮತ್ತು ನಿಮ್ಮ ಕನಸುಗಳ ಕಡೆಗೆ ಸ್ಥಿರವಾದ ಪ್ರಗತಿಯನ್ನು ಸಾಧಿಸಿ.

ವೈಫಲ್ಯದ ಭಯವನ್ನು ತೊಡೆದುಹಾಕಿ:

ವೈಫಲ್ಯದ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಬದಲಿಸಿ ಮತ್ತು ವೈಫಲ್ಯವು ನಿಮ್ಮ ಬೆಳವಣಿಗೆಗೆ ಹಾಗೂ ಸ್ವಯಂ ಸುಧಾರಣೆಗೆ ಒಂದು ಮೆಟ್ಟಿಲು ಎಂದು ಪರಿಗಣಿಸಿ. ಸವಾಲುಗಳನ್ನು ಸ್ವೀಕರಿಸಿ, ತಪ್ಪುಗಳಿಂದ ಉತ್ತಮವಾದ ಪಾಠವನ್ನು ಕಲಿಯಿರಿ.

ಜನರನ್ನು ಮೆಚ್ಚಿಸುವ ಬದಲು ಸ್ವಯಂ ಪ್ರಾಮಾಣಿಕತೆಗೆ ಆದ್ಯತೆ ನೀಡುವುದು:

ಇತರರಿಂದ ದೃಢೀಕರಣ ಮತ್ತು ಅನುಮೋದನೆಯನ್ನು ನಿರಂತರವಾಗಿ ಪಡೆಯುವ ಅಗತ್ಯವನ್ನು ಬಿಟ್ಟುಬಿಡಿ. ಜನರನ್ನು ಮೆಚ್ಚಿಸುವ ಅಗತ್ಯವಿಲ್ಲ, ನಿಮ್ಮ ಸ್ವಂತ ಅಗತ್ಯಗಳನ್ನು ಗೌರವಿಸಿ ಮತ್ತು ನಿಮಗೆ ನೀವು ಮೊದಲ ಆದ್ಯತೆ ನೀಡಿ. ಹಾಗೂ ಆರೋಗ್ಯಕರ ಗಡಿಗಳನ್ನು ರೂಪಿಸಿ.

ಇತರರಿಗೆ ಹೋಲಿಕೆ ಮಾಡುವುದನ್ನು ಬಿಟ್ಟುಬಿಡಿ:

ನಿಮ್ಮನ್ನು ನೀವು ಇತರೊಂದಿಗೆ ಹೋಲಿಸುವ ಕೆಟ್ಟ ಅಭ್ಯಾಸವನ್ನು ಬಿಟ್ಟಬಿಡಿ. ನಿಮ್ಮ ಸ್ವಂತ ಬೆಳವಣಿಗೆ ಮತ್ತು ಪ್ರಗತಿಯ ಮೇಲೆ ಗಮನವನ್ನು ಕೇಂದ್ರೀಕರಿಸಿ. ಈ ಮೂಲಕ ನಿಮ್ಮ ಸಾಧನೆಗಳ ಕಡೆಗೆ ಮುನ್ನುಗ್ಗಿ.

ಭೂತಕಾಲದ ಬಗ್ಗೆ ಯೋಚನೆ ಬಿಟ್ಟು ಮುಂದಕ್ಕೆ ಸಾಗಿ:

ಕ್ಷಮೆಯನ್ನು ಅಭ್ಯಾಸ ಮಾಡುವ ಮೂಲಕ ಹಿಂದಿನ ಕೆಟ್ಟ ಸಮಯವನ್ನು ಮರೆತುಬಿಡಿ. ಹಿಂದೆ ಮಾಡಿದ ತಪ್ಪುಗಳು, ವಿಷಾದಗಳು ಮತ್ತು ದ್ವೇಷಗಳನ್ನು ಬಿಡಿ. ಪ್ರಸ್ತುತ ಕ್ಷಣದಲ್ಲಿ ಜೀವಿಸಿ, ಉಜ್ವಲ ಭವಿಷ್ಯವನ್ನು ರೂಪಿಸುವತ್ತ ನಿಮ್ಮ ಗಮನವನ್ನು ಕೇಂದ್ರೀಕರಿಸಿ.

ಇದನ್ನೂ ಓದಿ: ತಾಪಮಾನವು 45 ಡಿಗ್ರಿಗಳನ್ನು ದಾಟಿದಾಗ ದೇಹದಲ್ಲಿ ಸಂಭವಿಸಬಹುದಾದ ಬದಲಾವಣೆಗಳು

ಸಕಾರಾತ್ಮಕ ಸಂಬಂಧವನ್ನು ಬೆಳೆಸುವುದು:

ನಿಮ್ಮ ಜೀವನದಲ್ಲಿ ಸಂಬಂಧಗಳನ್ನು ಮೌಲ್ಯಮಾಪನ ಮಾಡಿ ಮತ್ತು ಯೋಗ್ಯವಲ್ಲದ ಸಂಬಂಧವನ್ನು ಬಿಟ್ಟು ಬಿಡಿ. ನಿಮ್ಮ ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವ, ಪ್ರೇರೇಪಿಸುವ ಮತ್ತು ನಿಮ್ಮನ್ನು ಬೆಂಬಲಿಸುವ ಜನರೊಂದಿಗೆ ನೀವು ಇರಿ. ನಿಮ್ಮ ಯೋಗಕ್ಷೇಮವನ್ನು ಪೋಷಿಸುವ ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಳ್ಳಿ.

ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡುವುದು:

ಮನುಷ್ಯ ಅಥವಾ ವಸ್ತು ಯಾವುದೇ ಆಗಿರಲಿ, ನಿಮ್ಮ ಮೌಲ್ಯಗಳೊಂದಿಗೆ ಹೊಂದಿಕೊಳ್ಳುವ ಮತ್ತು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಕೊಡುಗೆ ನೀಡುವ ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡಿ.

ನಿಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು:

ಜೀವನದಲ್ಲಿ ನಿಮ್ಮ ಸ್ವಯಂ ಆರೈಕೆಗೆ ಮೊದಲ ಆದ್ಯತೆ ನೀಡಿ. ನಿಮಗೆ ಶಕ್ತಿ ತುಂಬುವ, ವಿಶ್ರಾಂತಿಯನ್ನು ಉತ್ತೇಜಿಸುವ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವ ಚಟುವಟಿಕೆಗಳ ಮೂಲಕ ನಿಮ್ಮ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಪೋಷಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್