ಹದಿಹರೆಯದವರು ತಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ? ಸಲಹೆಗಳು ಇಲ್ಲಿವೆ

ಕೋಪವು ಎಲ್ಲರೂ ಕಾಲಕಾಲಕ್ಕೆ ಅನುಭವಿಸುವ ಸಾಮಾನ್ಯ ಭಾವನೆಯಾಗಿದೆ. ಅದರಲ್ಲೂ ಹದಿಹರೆಯದವರು ಹೆಚ್ಚಾಗಿ ಕೋಪ ಮಾಡಿಕೊಳ್ಳುತ್ತಿರುತ್ತಾರೆ. ಅವರ ಈ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕೆಲವೊಂದು ಸಲಹೆಗಳು ಇಲ್ಲಿವೆ.

ಹದಿಹರೆಯದವರು ತಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ? ಸಲಹೆಗಳು ಇಲ್ಲಿವೆ
ಹದಿಹರೆಯದವರಲ್ಲಿ ಕೋಪ Image Credit source: HealthShots
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: May 24, 2023 | 3:13 PM

ನೀವು ಅನುಭವಿಸುವ ಹಲವಾರು ಭಾವನೆಗಳಲ್ಲಿ ಕೋಪವೂ ಒಂದು. ನಿಮಗೆ ಕಿರಿಕಿರಿ ಉಂಟುಮಾಡುವ ವಿಷಯಗಳು ಅಥವಾ ಕ್ರಿಯೆಗಳ ಬಗ್ಗೆ ಕೋಪಗೊಳ್ಳುವುದು ಮಾನವನ ಸಹಜ ಪ್ರವೃತ್ತಿಯಾಗಿದೆ. ಅದರಲ್ಲೂ ಹದಿಹರೆಯದವರಿಗೆ ತಾಳ್ಮೆಯ ಕೊರತೆಯಿದೆ. ಅವರು ಸಣ್ಣ ಸಣ್ಣ ವಿಷಯಕ್ಕೂ ಕೋಪಗೊಳ್ಳುತ್ತಿರುತ್ತಾರೆ. ಹದಿಹರೆಯದವರು ಕಿರಿಕಿರಿಗೊಂಡಾಗ, ಅವರ ದೇಹವು ಪ್ರೌಢಾವಸ್ಥೆಯ ಕಾರಣದಿಂದಾಗಿ ನಿರಂತರ ಹಾರ್ಮೋನು ಬದಲಾವಣೆಗಳಿಗೆ ಒಳಗಾಗುವುದರಿಂದ, ಅವರು ಯಾವುದೇ ಪ್ರಚೋದನೆಯಿಲ್ಲದೆಯೂ ಸಹ ತುಂಬಾ ಕೋಪಗೊಳ್ಳುತ್ತಾರೆ. ಕೋಪವು ಸಾಮಾನ್ಯ ಪ್ರತಿಕ್ರಿಯೆ ಮತ್ತು ಭಾವನೆಯಾಗಿದೆ. ಆದ್ದರಿಂದ ಕೋಪವನ್ನು ಹೋಗಲಾಡಿಸಲು ಸಾಧ್ಯವಿಲ್ಲ, ಆದರೆ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು.

ಕೋಪ ನಿರ್ವಹಣೆಯ ತಂತ್ರಗಳು:

ನಿಮ್ಮ ಕೋಪವನ್ನು ವಿಶ್ಲೇಷಿಸಿ:

ನಿರ್ದಿಷ್ಟ ವ್ಯಕ್ತಿಯ ಕಾರಣದಿಂದ ಅಥವಾ ಸನ್ನಿವೇಶದ ಕಾರಣದಿಂದ ನೀವು ಕೋಪಗೊಳ್ಳದಿದ್ದರೂ ಸಹ ಕೋಪದ ಭಾವನೆಗಳು ಬೆಳೆಯಬಹುದು. ಆತಂಕ, ಹಸಿವು, ದುಃಖ, ದಣಿವು ಮತ್ತು ಭಯ ಇವೆಲ್ಲವೂ ಕೆಲವೊಮ್ಮೆ ಪ್ರತ್ಯೇಕ ಭಾವನೆಗಳಾಗಿದ್ದರೂ ಸಹ ಕೋಪದಂತೆ ಭಾಸವಾಗುತ್ತದೆ. ನೀವು ಕೋಪಗೊಳ್ಳುತ್ತಿರುವುದನ್ನು ಗಮನಿಸಿದಾಗ, ನೀವು ನಿಜವಾಗಿಯೂ ಏನನ್ನು ಅನುಭವಿಸುತ್ತಿದ್ದೀರಿ ಎಂಬುದನ್ನು ಲೆಕ್ಕಾಚಾರ ಮಾಡಿ, ನೀವು ಸರಿಯಾಗಿ ತಿಂದಿದ್ದೀರಾ, ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ್ದೀರಾ ಈ ಎಲ್ಲಾ ವಿಷಯಗಳನ್ನು ಚೆನ್ನಾಗಿ ವಿಶ್ಲೇಷಿಸಿ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕಲಿತುಕೊಳ್ಳಿ.

ಸಕಾರಾತ್ಮಕವಾಗಿ ಯೋಚಿಸಿ:

ಕೋಪದಲ್ಲಿ ನಿಮ್ಮ ಆಲೋಚನೆಗಳನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಇದು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಆದ್ದರಿಂದ ನೀವು ಕೋಪಗೊಳ್ಳಲು ಪ್ರಾರಂಭಿಸಿದಾಗ ಧನಾತ್ಮಕವಾಗಿ ಯೋಚಿಸುವುದು ಮುಖ್ಯ. ನೀವು ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ಪಾಕೆಟ್ ಡೈರಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವ ಮೂಲಕ ನೀವು ಕೋಪಗೊಳ್ಳಲು ಪ್ರಾರಂಭಿಸಿದಾಗ ಅದನ್ನು ಡೈರಿಯಲ್ಲಿ ಉಲ್ಲೇಖಿಸಿ ನಿಮ್ಮನ್ನು ನೀವು ಶಾಂತಗೊಳಿಸಬಹುದು.

ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ:

ನಿಮ್ಮ ಕೋಪವು ನಿಮ್ಮ ಕೈಮೀರಿ ಹೋಗುತ್ತಿದ್ದರೆ, ನೀವು ದೈಹಿಕವಾಗಿ ವಿಶ್ರಾಂತಿಯನ್ನು ಪಡೆದುಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ನಿಮ್ಮ ದೇಹವು ವಿಶ್ರಾಂತಿಯನ್ನು ಪಡೆದಾಗ ನೀವು ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಬಹುದು. ನೀವು ಧ್ಯಾನ ಮಾಡುವ ಮೂಲಕ ವಿಶ್ರಾಂತಿಯನ್ನು ಪಡೆಯುವುದು, ಮನಸ್ಸನ್ನು ಶಾಂತಚಿತ್ತವನ್ನಾಗಿರಿಸುವುದು ಮಾತ್ರವಲ್ಲದೆ ಕೋಪವನ್ನು ಕೂಡಾ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಇದನ್ನೂ ಓದಿ: ನಿಮ್ಮ ಮಕ್ಕಳು ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದಾರೆಯೇ? ಹಾಗಿದ್ದರೆ ಈ ಸಮಸ್ಯೆಗಳು ಖಂಡಿತಾ ಕಾಡಬಹುದು

ದೈಹಿಕ ವ್ಯಾಯಾಮ ಮಾಡಿ:

ವ್ಯಾಯಾಮವನ್ನು ಮಾಡಿದ ನಂತರ ನಾವು ಭಾವನಾತ್ಮಕ ಶಾಂತತೆಯನ್ನು ಅನುಭವಿಸುತ್ತೇವೆ. ವ್ಯಾಯಾಮವು ಎಂಡಾರ್ಫಿನ್ ಎಂಬ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ನೀವು ಪ್ರತಿನಿತ್ಯ ವ್ಯಾಯಾಮ ಮಾಡುವಾಗ, ಅದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿ ಮಾಡುತ್ತದೆ.

ಸಂಗೀತವನ್ನು ಆಲಿಸಿ:

ಒಳ್ಳೆಯ ಸಂಗೀತ ನಿಮ್ಮ ಕೋಪ ಮತ್ತು ನಿಮ್ಮ ಮನಸ್ಸು ಎರಡನ್ನೂ ಶಾಂತಗೊಳಿಸುತ್ತದೆ. ಸಂಗೀತವು ವಿಶ್ರಾಂತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ನೀವು ಕೋಪಗೊಂಡಾಗ ಆ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸಂಗೀತವನ್ನು ಆಲಿಸಿ. ನಿಮಗೆ ಉತ್ತಮವೆನಿಸುವ ಸಂಗೀತವನ್ನು ಕೇಳುವ ಮೂಲಕ ಮನಸ್ಸನ್ನು ನಿರಾಳ ಮಾಡಿಕೊಳ್ಳಬಹುದು.

ಯಾವಾಗ ಸಹಾಯ ಪಡೆಯಬೇಕೆಂದು ತಿಳಿಯಿರಿ:

ನೀವು ಯಾವಾಗಲೂ ಕೋಪಗೊಳ್ಳುವುದಕ್ಕಿಂತ ಹೆಚ್ಚು ಕೋಪಗೊಂಡಿದ್ದರೆ, ನೀವು ಕೋಪದ ಸಮಸ್ಯೆಯಿಂದ ಬಳಲುತ್ತಿರಬಹುದು. ಅಲ್ಲದೆ ನೀವು ಕೋಪದಿಂದ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದರೆ, ನಿಮ್ಮ ಕೋಪವನ್ನು ಉತ್ತಮವಾಗಿ ನಿರ್ವಹಿಸಲು ನಿಮಗೆ ಮನೋವೈದ್ಯರ ಸಹಾಯ ಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಆರೋಗ್ಯ ತಜ್ಞರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು  ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ