Beauty Tips: ಚರ್ಮದ ಹಾನಿ ತಡೆಯಲು ಏನು ಮಾಡಬೇಕು? ಯಾವ ರೀತಿಯ ಉತ್ಪನ್ನಗಳನ್ನು ಬಳಸಬಾರದು? ಇಲ್ಲಿದೆ ಮಾಹಿತಿ
ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಹಾನಿಕಾರಕ ಉತ್ಪನ್ನಗಳನ್ನು ತ್ವಚೆಗೆ ಬಳಸುವುದನ್ನು ತಪ್ಪಿಸಬೇಕು. ಏಕೆಂದರೆ ನಾವು ತಿಳಿಯದೆಯೇ ಉಪಯೋಗಿಸುವುದರಿಂದ ಚರ್ಮಕ್ಕೆ ಹಾನಿಯಾಗುವುದಲ್ಲದೆ, ಸುಕ್ಕುಗಟ್ಟುವುದು, ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗಬಹುದು. ಈ ಬಗ್ಗೆ ತಜ್ಞರು ಕೆಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಇನ್ನಷ್ಟು ಮಾಹಿತಿ ಇಲ್ಲಿದೆ.
ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ, ನಿಮಗೆ ನೀವು ಬಳಸುವ ಉತ್ಪನ್ನಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಏಕೆಂದರೆ ಕೆಲವು ಹಾನಿಕಾರಕ ಅಂಶಗಳಿರುವ ಉತ್ಪನ್ನಗಳಿಂದ ನಮ್ಮ ಚರ್ಮ ಹದಗೆಡುತ್ತದೆ. ಹಾಗಾಗಿ ನಿಮಗೆ ಅವುಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯವಾಗಿದೆ. ವಿಶೇಷವಾಗಿ ಸೂಕ್ಷ್ಮ ಚರ್ಮವನ್ನು ಹೊಂದಿದ್ದವರು ಆದಷ್ಟು ಚರ್ಮದ ಬಗ್ಗೆ ಕಾಳಜಿ ಮಾಡಬೇಕಾಗುತ್ತದೆ. ಅಲ್ಲದೆ ಕೆಲವು ಉತ್ಪನ್ನಗಳಲ್ಲಿ ಕಠಿಣ ಸುಗಂಧ ದ್ರವ್ಯಗಳು, ಪ್ಯಾರಾಬೆನ್ಗಳು ಮತ್ತು ಸಲ್ಫೇಟ್ಗಳು ಸೇರಿರುತ್ತದೆ. ಇದರಿಂದ ಉಂಟಾಗುವ ಚರ್ಮದ ಸಮಸ್ಯೆಗಳೊಂದಿಗೆ ಕೆಲವರು ಹೆಣಗಾಡುತ್ತಿದ್ದಾರೆ ಏಕೆಂದರೆ ನಿಮ್ಮ ಚರ್ಮದ ಗುಣಮಟ್ಟವನ್ನು ಸುಧಾರಿಸಲು ಭರವಸೆ ನೀಡುವ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದರೂ, ಎಲ್ಲವೂ ಸಮಾನವಾಗಿರುವುದಿಲ್ಲ ಅಲ್ಲದೆ ಕೆಲವು ಹಾನಿಕಾರಕವೂ ಆಗಿರಬಹುದು ಹಾಗಾಗಿ ನಿಮ್ಮ ಆಯ್ಕೆ ತುಂಬಾ ಮುಖ್ಯವಾಗಿರುತ್ತದೆ.
ಈ ಬಗ್ಗೆ ಹಲವಾರು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಇಲ್ಲಿದೆ ಮಾಹಿತಿ:
ಎಚ್ಟಿ ಲೈಫ್ ಸ್ಟೈಲ್ ನೀಡಿದ ಸಂದರ್ಶನದಲ್ಲಿ, ಕ್ಲಿನಿಕಲ್ ಕಾಸ್ಮೆಟಾಲಜಿಸ್ಟ್, ವೈದ್ಯಕೀಯ ಮುಖ್ಯಸ್ಥ ಮತ್ತು ಲ್ಯೂಯರ್ ಸೌಂದರ್ಯಶಾಸ್ತ್ರದ ಸಂಸ್ಥಾಪಕ ಡಾ. ದೇಬೆಶಿ ಭಟ್ಟಾಚಾರ್ಜಿ, ಹೈಡ್ರೋಕ್ವಿನೋನ್ ಮತ್ತು ಸ್ಟೀರಾಯ್ಡ್ ಆಧಾರಿತ ಕ್ರೀಮ್ ಗಳಲ್ಲಿ ಚರ್ಮಕ್ಕೆ ಹೊಳಪುಗೊಳಿಸುವ ಅಂಶಗಳಿವೆ. ಇನ್ನು ಕೆಲವು ನಮಗೆ ತಿಳಿಯದಿರುವುದನ್ನು ನಮೂದಿಸಲಾಗುತ್ತದೆ. ಹಾಗಾಗಿ ಇದನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಅಡಿಯಲ್ಲಿ ಮಾತ್ರ ಬಳಸಬೇಕು. “ಚರ್ಮವನ್ನು ಹೊಳಪುಗೊಳಿಸುವ ಉತ್ಪನ್ನಗಳಲ್ಲಿ ಹೈಡ್ರೋಕ್ವಿನೋನ್ ಜನಪ್ರಿಯ ಘಟಕಾಂಶವಾಗಿದೆ. ಆದರೆ ಇದನ್ನು ದೀರ್ಘಕಾಲದ ವರೆಗೆ ಬಳಸುವುದರಿಂದ ಚರ್ಮ ತನ್ನ ಮೂಲ ಗಟ್ಟಿತನವನ್ನು ಕಳೆದುಕೊಂಡು ಸೂಕ್ಷ್ಮಗೊಳ್ಳುತ್ತದೆ. ಸ್ಟಿರಾಯ್ಡ್ ಆಧಾರಿತ ಕ್ರೀಮ್ಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಬಳಸಿದಾಗ, ಇದೇ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಚರ್ಮದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮಗಳನ್ನು ತಪ್ಪಿಸಲು ಈ ಉತ್ಪನ್ನಗಳನ್ನು ವೈದ್ಯರ ಬಳಿ ವಿಚಾರಿಸಿ ಬಳಸುವುದು ಮುಖ್ಯ.
ಚರ್ಮದ ಆರೈಕೆ ಬಗ್ಗೆ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದು, ಹಾನಿಕಾರಕ ಅಂಶಗಳ ಬಗ್ಗೆ ತಿಳಿಸಿದ್ದಾರೆ. “ಪಾದರಸ ಚರ್ಮದ ಸೂಕ್ಷ್ಮತೆ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ಸಮಸ್ಯೆಗಳನ್ನು ತಪ್ಪಿಸಲು, ಪಾದರಸ ಅಥವಾ ಇತರ ಹಾನಿಕಾರಕ ಪದಾರ್ಥಗಳನ್ನು ಒಳಗೊಂಡಿದೆಯಾ? ಎಂದು ಯಾವಾಗಲೂ ಲೇಬಲ್ ಪರಿಶೀಲಿಸುವುದು ಉತ್ತಮ.ಇದ್ದಲ್ಲಿ ಅಂತಹ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸುವುದು ಒಳ್ಳೆಯದು. ಚರ್ಮದ ಆರೈಕೆ ಉತ್ಪನ್ನಗಳಲ್ಲಿ ತಿಳಿದಿರಬೇಕಾದ ಇತರ ಎರಡು ಪದಾರ್ಥಗಳಾಗಿವೆ ಅವು ಸಿಲಿಕೋನ್ ಮತ್ತು ಎಸ್ ಎಲ್ ಎಸ್ . ಸಿಲಿಕಾನ್ ಚರ್ಮದ ರಂಧ್ರಗಳನ್ನು ಮುಚ್ಚಬಹುದು ಮತ್ತು ಉಸಿರಾಡದಂತೆ ತಡೆಯಬಹುದು. ಎಸ್ಎಲ್ಎಸ್ ಚರ್ಮಕ್ಕೆ ಕಠಿಣವಾಗಿದ್ದು ಮತ್ತು ಚರ್ಮ ಒಣಗುವಂತೆ ಮಾಡುತ್ತದೆ. ವಿಶೇಷವಾಗಿ ಸೂಕ್ಷ್ಮ ಚರ್ಮವನ್ನು ಹೊಂದಿರುವವರಿಗೆ. ಈ ಸಮಸ್ಯೆಗಳನ್ನು ತಪ್ಪಿಸಲು, ನಿಮ್ಮ ತ್ವಚೆಗೆ ಸೂಕ್ತವಾದ ಉತ್ಪನ್ನಗಳನ್ನು ಬಳಸಬೇಕು” ಎಂದಿದ್ದಾರೆ.
ಇದನ್ನೂ ಓದಿ: ಬೇಸಿಗೆಯ ಸ್ಟೇಕೇಶನ್ ಪಾರ್ಟಿಗೆ ಹೀಗೆ ಪ್ಲಾನ್ ಮಾಡಿ
ನಮ್ಮ ಚರ್ಮದ ನೈಸರ್ಗಿಕ ಸೌಂದರ್ಯವನ್ನು ರಕ್ಷಿಸಲು ಸೌಮ್ಯವಾಗಿರುವ ಮತ್ತು ಅತ್ಯಧಿಕ ಪೋಷಣೆ ನೀಡುವ ಉತ್ಪನ್ನಗಳನ್ನು ಆಯ್ಕೆ ಮಾಡಬೇಕು ಎಂದು ಡಾ. ದೇಬಶಿ ಭಟ್ಟಾಚಾರ್ಜಿ ಹೇಳಿದ್ದಾರೆ. “ಆಲ್ಕೋಹಾಲ್ ಆಧಾರಿತ ಉತ್ಪನ್ನಗಳನ್ನು ಚರ್ಮದ ಆರೈಕೆ ಮಾಡಲು ಬಳ ಸುವುದನ್ನು ತಪ್ಪಿಸುವುದು ಸಹ ಮುಖ್ಯವಾಗಿದೆ ಏಕೆಂದರೆ ಅವು ಚರ್ಮವನ್ನು ಒಣಗಿಸುವುದಲ್ಲದೆ, ಕಿರಿಕಿರಿ ಉಂಟುಮಾಡಬಹುದು. ಅಂತೆಯೇ, ಕಠಿಣ ಎಕ್ಸ್ಫೋಲಿಯಂಟ್ಗಳು ಅಥವಾ ಸ್ಕ್ರಬ್ಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಒಟ್ಟಾರೆಯಾಗಿ, ನಾವು ಬಳಸುವ ಚರ್ಮದ ಆರೈಕೆ ಉತ್ಪನ್ನಗಳಲ್ಲಿನ ಪದಾರ್ಥಗಳ ಬಗ್ಗೆ ಗಮನ ಹರಿಸುವುದು ಮತ್ತು ಚರ್ಮದ ಸೂಕ್ಷ್ಮತೆ, ಕಿರಿಕಿರಿ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಹಾನಿಕಾರಕ ಪದಾರ್ಥಗಳನ್ನು ತಪ್ಪಿಸುವುದು ಬಹಳ ಮುಖ್ಯ. ಸಂದೇಹವಿದ್ದಾಗ, ಚರ್ಮರೋಗ ತಜ್ಞರು ಅಥವಾ ಇತರ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ. ಅವರಿಗೆ ನಮ್ಮ ಚರ್ಮದ ಬಗ್ಗೆ ಮತ್ತು ಯಾವುದನ್ನು ಬಳಸಬೇಕು ಎಂಬುದರ ಬಗ್ಗೆ ಗೊತ್ತಿರುತ್ತದೆ. ನಾವು ಬಳಸುವ ಉತ್ಪನ್ನಗಳು ಮತ್ತು ಅವುಗಳಲ್ಲಿರುವ ಪದಾರ್ಥಗಳ ಬಗ್ಗೆ ಜಾಗರೂಕರಾಗಿರುವ ಮೂಲಕ, ನಮ್ಮ ಚರ್ಮವು ಆರೋಗ್ಯಕರವಾಗಿರುವನಂತೆ ನೋಡಿಕೊಳ್ಳ ಬೇಕು.
ಚರ್ಮ ಮತ್ತು ಕೂದಲಿನ ತಜ್ಞೆ, ಡಾ.ಸ್ತುತಿ ಖರೆ ಶುಕ್ಲಾ, “ಚರ್ಮದ ಆರೈಕೆ ಮಾಡುವ ಉತ್ಪನ್ನಗಳಲ್ಲಿ ಅತ್ಯಂತ ಸಾಮಾನ್ಯ ಹಾನಿಕಾರಕ ಪದಾರ್ಥಗಳಲ್ಲಿ ಪ್ಯಾರಾಬೆನ್ಸ್ ಕೂಡ ಒಂದು” ಎಂದಿದ್ದಾರೆ. ಈ ಸಂರಕ್ಷಕಗಳನ್ನು ಬ್ಯಾಕ್ಟೀರಿಯಾ ಮತ್ತು ಹೆಚ್ಚಿನ ಬೆಳವಣಿಗೆಯನ್ನು ತಡೆಯಲು ಬಳಸಲಾಗುತ್ತದೆ, ಪ್ಯಾರಾಬೆನ್ ಗಳನ್ನು ಮಾಯಿಶ್ಚರೈಸರ್ ಗಳಿಂದ ಹಿಡಿದು ಮೇಕಪ್ ವರೆಗೆ ಎಲ್ಲದರಲ್ಲೂ ಕಾಣಬಹುದು, ಆದ್ದರಿಂದ ಘಟಕಾಂಶ ಲೇಬಲ್ ಗಳನ್ನು ಎಚ್ಚರಿಕೆಯಿಂದ ಓದುವುದು ಮತ್ತು ಪ್ಯಾರಾಬೆನ್ ಗಳಿಂದ ಮುಕ್ತವಾದ ಉತ್ಪನ್ನಗಳನ್ನು ಆರಿಸಿಕೊಳ್ಳುವುದು ಒಳ್ಳೆಯದು. ಚರ್ಮದ ಆರೈಕೆ ಉತ್ಪನ್ನಗಳಲ್ಲಿ ತಪ್ಪಿಸಬೇಕಾದ ಮತ್ತೊಂದು ಅಂಶವೆಂದರೆ ಸೋಡಿಯಂ ಲಾರಿಲ್ ಸಲ್ಫೇಟ್ (ಎಸ್ಎಲ್ಎಸ್). ಈ ಕಠಿಣ ಡಿಟರ್ಜೆಂಟ್ ಅನ್ನು ಹೆಚ್ಚಾಗಿ ಲೇಥರ್ ಅನ್ನು ರಚಿಸಲು ಕ್ಲೆನ್ಸರ್ಗಳು ಮತ್ತು ಶಾಂಪೂಗಳಲ್ಲಿ ಬಳಸಲಾಗುತ್ತದೆ. ಇದು ಚರ್ಮದ ಕಿರಿಕಿರಿ ಮತ್ತು ಶುಷ್ಕತೆಗೆ ಕಾರಣವಾಗಬಹುದು. ಹಾನಿಕಾರಕ ಚರ್ಮದ ಆರೈಕೆ ಪದಾರ್ಥಗಳ ವಿಷಯಕ್ಕೆ ಬಂದಾಗ ಸಂಶ್ಲೇಷಿತ ಸುಗಂಧ ದ್ರವ್ಯಗಳು ಸಹ ಒಳ್ಳೆಯದಲ್ಲ. ಈ ಸುಗಂಧ ದ್ರವ್ಯಗಳನ್ನು ಹೆಚ್ಚಾಗಿ ರಾಸಾಯನಿಕಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ” ಎಂದು ಹೇಳಿದ್ದಾರೆ
“ಸುಗಂಧ-ಮುಕ್ತ ಅಥವಾ ನೈಸರ್ಗಿಕ ಆಧಾರಿತ ಪರಿಮಳಗಳನ್ನು ಬಳಸಿರುವ ಉತ್ಪನ್ನಗಳನ್ನು ಬಳಸುವುದು ಒಳ್ಳೆಯದು. ಫಾರ್ಮಾಲ್ಡಿಹೈಡ್ ಒಂದು ಸಂರಕ್ಷಕವಾಗಿದ್ದು, ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಗಟ್ಟಲು ಕೆಲವೊಮ್ಮೆ ಚರ್ಮದ ಆರೈಕೆ ಮಾಡುವ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದು ಕ್ಯಾನ್ಸರ್ ಕಾರಕವಾಗಿದೆ ಮತ್ತು ಚರ್ಮದ ಕಿರಿಕಿರಿ ಮತ್ತು ಅಲರ್ಜಿಗಳಿಗೆ ಕಾರಣವಾಗಬಹುದು. ಥಾಲೇಟ್ಗಳು ರಾಸಾಯನಿಕಗಳ ಮತ್ತೊಂದು ಗುಂಪಾಗಿದ್ದು, ಇದನ್ನು ಹೆಚ್ಚಾಗಿ ಸುಗಂಧ ದ್ರವ್ಯಗಳಲ್ಲಿ ಬಳಸಲಾಗುತ್ತದೆ” ಎಂದಿದ್ದಾರೆ. ಹಾಗಾಗಿ ನೈಸರ್ಗಿಕ ಮತ್ತು ಸಾವಯವ ಪದಾರ್ಥಗಳಿಂದ ತಯಾರಿಸಿದ ಉತ್ಪನ್ನಗಳನ್ನು ಬಳಸುವುದು ಒಳ್ಳೆಯದು. ಏಕೆಂದರೆ ಇವು ಹೆಚ್ಚಾಗಿ ಚರ್ಮದ ಮೇಲೆ ಯಾವುದೇ ಹಾನಿಯಾಗದೆ, ಮೃದುವಾಗಿರುತ್ತವೆ ಮತ್ತು ಕಿರಿಕಿರಿ ಅಥವಾ ಒಣಚರ್ಮವಾಗದಂತೆ ನೋಡಿಕೊಳ್ಳುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: