AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಬಳಸುವ ಮೆಣಸಿನ ಪುಡಿಯ ಶುದ್ಧತೆ ತಿಳಿಯಲು ಇಲ್ಲಿದೆ ಮಾರ್ಗ

ಮಾರುಕಟ್ಟೆಯಲ್ಲಿ ಸಿಗುವ ಮೆಣಸಿನ ಪುಡಿಯಲ್ಲಿ ಕಲಬೆರಕೆ ಇರುವುದು ನಿಮಗೆ ಗೊತ್ತೇ? ಅದರ ಶುದ್ಧತೆ ತಿಳಿಯಲು ಇಲ್ಲಿದೆ ಮಾರ್ಗ

TV9 Web
| Updated By: ವಿವೇಕ ಬಿರಾದಾರ|

Updated on: Sep 14, 2022 | 8:30 AM

Share
ಭಾರತೀಯ ಅಡುಗೆಗಳಲ್ಲಿ ಬಳಸುವ ಪದಾರ್ಥಗಳಲ್ಲಿ ಮೆಣಸಿನಕಾಯಿಯೂ ಒಂದು. ಒಣ ಕೆಂಪು ಮೆಣಸಿನಕಾಯಿಯಿಂದ ಮಾಡಿದ ಮೆಣಸಿನ ಪುಡಿಯನ್ನು ಬಹುತೇಕ ಎಲ್ಲಾ ರೀತಿಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮೆಣಸಿನ ಪುಡಿಯಲ್ಲಿ ಕಲಬೆರಕೆ ಇರುವುದು ಗೊತ್ತೇ?

How you can check adulterated chili power at home here is the tips

1 / 5
ಇಂದು ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲಾ ಕೆಂಪು ಮೆಣಸಿನಕಾಯಿ ಪ್ಯಾಕೆಟ್‌ಗಳಲ್ಲಿ ಇಟ್ಟಿಗೆ ಪುಡಿ, ಟಾಲ್ಕಂ ಪೌಡರ್ ಮತ್ತು ಇತರ ವಿಷಕಾರಿ ವಸ್ತುಗಳನ್ನು ಬೆರೆಸಲಾಗುತ್ತದೆ. ಅಂತಹ ಉತ್ಪನ್ನಗಳನ್ನು ಬರಿಗಣ್ಣಿನಿಂದ ತಕ್ಷಣವೇ ಕಂಡುಹಿಡಿಯಲಾಗುವುದಿಲ್ಲ. ಇಂತಹ ಕಲಬೆರಕೆ ಆಹಾರಗಳಿಂದ ಆರೋಗ್ಯಕ್ಕೆ ಅಪಾರ ಹಾನಿಯಾಗುತ್ತದೆ.

How you can check adulterated chili power at home here is the tips

2 / 5
How you can check adulterated chili power at home here is the tips

ಅದಕ್ಕಾಗಿಯೇ ನೀವು ಬಳಸುತ್ತಿರುವ ಮೆಣಸಿನ ಪುಡಿ ಶುದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಇತ್ತೀಚೆಗೆ ಎಫ್‌ಎಸ್‌ಎಸ್‌ಎಐ ಕೆಂಪು ಮೆಣಸಿನ ಪುಡಿಯ ಶುದ್ಧತೆಯನ್ನು ಪರಿಶೀಲಿಸುವ ಪ್ರಕ್ರಿಯೆಯ ಕುರಿತು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.

3 / 5
How you can check adulterated chili power at home here is the tips

ಮೆಣಸಿನ ಪುಡಿಯನ್ನು ತೆಗೆದುಕೊಂಡು ಅಂಗೈಗೆ ಮೃದುವಾಗಿ ಉಜ್ಜಿಕೊಳ್ಳಿ, ಆಗ ನಿಮ್ಮ ಕೈಗೆ ಒರಟು ಒರಟಾಗಿ ಭಾಸವಾಗುತ್ತಿದ್ದರೆ ಅದರಲ್ಲಿ ಮರಳು ಅಥವಾ ಇಟ್ಟಿಗೆ ಪುಡಿಯನ್ನು ಬೆರೆಸಲಾಗಿದೆ ಎಂದು ತಿಳಿಯಬಹುದು.

4 / 5
How you can check adulterated chili power at home here is the tips

ಕಲಬೆರಕೆಯಾಗದ ಮೆಣಸಿನ ಪುಡಿ ಸಾಮಾನ್ಯವಾಗಿ ನೀರಿನಲ್ಲಿ ಕರಗುತ್ತದೆ. ಕರಗದಿದ್ದರೆ ಮೆಣಸಿನ ಪುಡಿಗೆ ಸೋಪ್ ಪೌಡರ್ ಅಥವಾ ಡಿಟರ್ಜೆಂಟ್ ಪೌಡರ್ ಹಾಕಿದ್ದಾರೆ ಎಂದರ್ಥ. ಈ ರೀತಿಯ ಮೆಣಸಿನ ಪುಡಿಯನ್ನು ಆಹಾರದಲ್ಲಿ ಬಳಸಬಾರದು.

5 / 5