ಟೆಡ್ಡಿಗಳು ಯಾರಿಗೆ ಇಷ್ಟ ಹೇಳಿ. ಮಕ್ಕಳಿಂದ ಹಿಡಿದು ಹುಡುಗಿಯರವರೆಗೂ ಈ ಟೆಡ್ಡಿ ಬೇರ್ ಅನ್ನು ಇಷ್ಟ ಪಡುತ್ತಾರೆ. ಪ್ರೀತಿಪಾತ್ರರ ಹುಟ್ಟುಹಬ್ಬವಿದ್ದಾಗ ಗಿಫ್ಟ್ ಆಗಿ ನೀಡುವ ವಸ್ತುಗಳಲ್ಲಿ ಈ ಟೆಡ್ಡಿ ಬೇರ್ ಕೂಡ ಒಂದು. ಫೆಬ್ರವರಿ ತಿಂಗಳಲ್ಲಿ ಬರುವ ಟೆಡ್ಡಿ ಬೇರ್ ದಿನವನ್ನು ಎಲ್ಲಾ ಪ್ರೇಮಿಗಳು ಕೂಡ ವಿಭಿನ್ನವಾಗಿಯೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ. ಮನ ಮೆಚ್ಚಿದ ಹುಡುಗಿಗೆ ಮುದ್ದು ಮುದ್ದಾದ ಟೆಡ್ಡಿಯನ್ನು ನೀಡಿ ಖುಷಿ ಪಡಿಸುತ್ತಾರೆ. ಪ್ರೀತಿಯ ಸಂಕೇತವಾದ ಟೆಡ್ಡಿಯನ್ನು ಪ್ರಿಯತಮೆಗೆ ನೀಡುವುದರಿಂದ ಇಂಪ್ರೆಸ್ ಆಗುವುದಂತೂ ನಿಜ.
* ಎತ್ತರದ ಟೆಡ್ಡಿ ಬೇರ್ : ಹುಡುಗಿಯರು ದೊಡ್ಡದಾದ ಟೆಡ್ಡಿಗಳನ್ನು ಇಷ್ಟ ಪಡುತ್ತಾರೆ. ಹೆಚ್ಚಿನವರು ತಮ್ಮ ಮಲಗುವ ಕೋಣೆಯಲ್ಲಿ ದೊಡ್ಡ ಗಾತ್ರದ ಟೆಡ್ಡಿಗಳನ್ನು ಇಟ್ಟುಕೊಂಡಿರುತ್ತಾರೆ. ಹೀಗಾಗಿ ಟೆಡ್ಡಿ ಡೇಯಂದು ಪ್ರೇಯಸಿಯ ಮನಸ್ಸು ಗೆಲ್ಲಲು ದೊಡ್ಡ ಗಾತ್ರದ ಅತೀ ಎತ್ತರದ ಟೆಡ್ಡಿಗಳನ್ನು ಆಯ್ಕೆ ಮಾಡಿಕೊಂಡರೆ ಬೆಸ್ಟ್.
* ಚಾಕೊಲೇಟ್ ಬಾರ್ ಕಚ್ಚುತ್ತಿರುವ ಟೆಡ್ಡಿ ಬೇರ್ : ಚಾಕೊಲೇಟ್ ಬಾರ್ ಕಚ್ಚುವ ಈ ಟೆಡ್ಡಿಯನ್ನು ಮನದ ಒಡತಿಗೆ ನೀಡುವುದರಿಂದ ಖುಷಿಯಾಗುತ್ತಾಳೆ.
* ಪಾಂಡಾ ಟೆಡ್ಡಿ: ಪಾಂಡಾ ಟೆಡ್ಡಿಯು ಮುದ್ದಾಗಿರುವ ಕಾರಣ ಈ ಟೆಡ್ಡಿಯನ್ನು ಪ್ರೀತಿಸುವ ವ್ಯಕ್ತಿಗೆ ನೀಡುವುದು ಒಳ್ಳೆಯದು. ಪಾಂಡಾ ಟೆಡ್ಡಿ ನೀಡುವುದರಿಂದ ಪ್ರೇಯಸಿಯ ನಡುವಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.
* ಟೆಡ್ಡಿ ಚಿತ್ರವನ್ನು ಹೊಂದಿರುವ ದಿಂಬುಗಳು: ಟೆಡ್ಡಿಯ ಚಿತ್ರವನ್ನು ಹೊಂದಿರುವ ಪಿಲ್ಲೋವನ್ನು ಉಡುಗೊರೆಯಾಗಿ ನೀಡಿದರೆ ಪ್ರೀತಿಸುವ ಹುಡುಗಿಗೆ ಇನ್ನಷ್ಟು ಹತ್ತಿರವಾಗಬಹುದು. ಈ ಉಡುಗೊರೆಯಿಂದ ಸುಲಭವಾಗಿ ಹುಡುಗಿಯ ಮನಸ್ಸನ್ನು ಗೆಲ್ಲಬಹುದು.
* ಟೆಡ್ಡಿ ಮುದ್ರಿತ ಟೀ ಶರ್ಟ್ : ಟೆಡ್ಡಿ ಡೇಯಂದು ಟೆಡ್ಡಿ ಮುದ್ರಿತವಾಗಿರುವ ಟೀ ಶರ್ಟ್ ಪ್ರೀತಿಸುವ ವ್ಯಕ್ತಿಗೆ ಉಡುಗೊರೆಯಾಗಿ ನೀಡಬಹುದು.
ಇದನ್ನೂ ಓದಿ: ಖಾದ್ಯಗಳ ಪರಿಮಳ ಹೆಚ್ಚಿಸುವ ಓಮದ ಕಾಳಿನಲ್ಲಿ ಅಡಗಿದೆ ಔಷಧೀಯ ಗುಣ
* ಟೆಡ್ಡಿ ವಿನ್ಯಾಸದ ವಸ್ತುಗಳು : ಟೆಡ್ಡಿ ವಿನ್ಯಾಸದ ಚಪ್ಪಲಿಗಳು, ಉಂಗುರಗಳು, ಕೀ ಪಂಚ್ ಗಳನ್ನು ಉಡುಗೊರೆಯಾಗಿ ನೀಡಬಹುದು. ಈ ವಸ್ತುಗಳು ದುಬಾರಿಯಾಗಿಲ್ಲದಿದ್ದರೂ ನಿಮ್ಮ ಪ್ರೀತಿಯ ಸಂಕೇತವಾಗಿದೆ.
* ಸಣ್ಣ ಗಾತ್ರದ ಟೆಡ್ಡಿ ಬೇರ್ ನೊಂದಿಗೆ ಹೂಗುಚ್ಛ ನೀಡಿ : ಸಣ್ಣ ಸಣ್ಣ ಗಾತ್ರದ ಟೆಡ್ಡಿ ಬೇರ್ ಗಳು ನೋಡುವುದಕ್ಕೆ ಮುದ್ದು ಮುದ್ದಾಗಿ ಕಾಣಿಸುತ್ತವೆ. ಈ ಟೆಡ್ಡಿಗಳು ಸಹಜವಾಗಿ ಹುಡುಗಿಯರಿಗೆ ಇಷ್ಟವಾಗುತ್ತದೆ. ಈ ಟೆಡ್ಡಿಗಳೊಂದಿಗೆ ಹೂಗುಚ್ಛ ನೀಡಿ ಟೆಡ್ಡಿ ದಿನವನ್ನು ಆಚರಿಸಿಕೊಳ್ಳಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ