ನಿದ್ರಾಹೀನತೆಯು ಗಂಭೀರವಾದ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಯಾಕೆಂದರೆ ಕಳಪೆ ನಿದ್ದೆ ನಿಮ್ಮಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗೆ ಮೂಲ ಕಾರಣವಾಗಿದೆ. ನೀವು ಅಲ್ಪಾವಧಿಯ ನಿದ್ರಾಹೀನತೆಯನ್ನು ಹೊಂದಿದ್ದರೆ, ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳದೆಯೇ ಆಹಾರವು ನೈಸರ್ಗಿಕವಾಗಿ ನಿದ್ರೆಯನ್ನು ಹೇಗೆ ಉಂಟುಮಾಡುತ್ತದೆ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. “ಮೆಗ್ನೀಸಿಯಮ್, ಕ್ಯಾಲ್ಸಿಯಂ, ಸತು ಮತ್ತು ಕೆಲವು ಬಿ ಜೀವಸತ್ವಗಳಂತಹ ಅಗತ್ಯ ಪೋಷಕಾಂಶಗಳು ನಿದ್ರಾಹೀನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ. ಕಡಿಮೆ ಮಟ್ಟದ ಮೆಲಟೋನಿನ್ ಮತ್ತು ಸಿರೊಟೋನಿನ್ ನಿದ್ರಾಹೀನತೆ ಕಾರಣವಾಗಬಹುದು” ಎಂದು ತಜ್ಞರು ಹೇಳುತ್ತಾರೆ.
ಬೆಚ್ಚಗಿನ ಹಾಲು:
ಹಾಲಿನಲ್ಲಿರುವ ಸಂಯುಕ್ತಗಳಾದ ಟ್ರಿಪ್ಟೊಫಾನ್ ಮತ್ತು ಮೆಲಟೋನಿನ್ ನಿದ್ರಾಹೀನತೆ ಸಮಸ್ಯೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮಲಗುವ ಬೆಚ್ಚಗಿನ ಹಾಲು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
ಬಾರ್ಲಿ ಹುಲ್ಲಿನ ಪುಡಿ:
ಕ್ಯಾಲ್ಸಿಯಂ, ಟ್ರಿಪ್ಟೊಫಾನ್, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸೇರಿದಂತೆ ಹಲವಾರು ನಿದ್ರೆ-ಉತ್ತೇಜಿಸುವ ಸಂಯುಕ್ತಗಳು ಬಾರ್ಲಿ ಹುಲ್ಲಿನ ಪುಡಿಯಲ್ಲಿ ಸಮೃದ್ಧವಾಗಿದೆ ಎಂದು ಪೌಷ್ಟಿಕತಜ್ಞರು ಶಿಫಾರಸು ಮಾಡುತ್ತಾರೆ.
ವಾಲ್‌ನಟ್ಸ್:
ವಾಲ್‌ನಟ್ಸ್ ತಿನ್ನುವುದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಲವ್ನೀತ್ ಬಾತ್ರಾ ಸಲಹೆ ನೀಡುತ್ತಾರೆ. ಏಕೆಂದರೆ ಅವುಗಳು ಮೆಲಟೋನಿನ್‌ನ ಅತ್ಯುತ್ತಮ ಆಹಾರ ಮೂಲಗಳಲ್ಲಿ ಒಂದಾಗಿದೆ.
ಹುರಿದ ಕುಂಬಳಕಾಯಿ ಬೀಜಗಳು:
ಕುಂಬಳಕಾಯಿ ಬೀಜಗಳು ಟ್ರಿಪ್ಟೊಫಾನ್‌ನ ನೈಸರ್ಗಿಕ ಮೂಲವಾಗಿದೆ, ಇದು ನಿದ್ರೆಯನ್ನು ಉತ್ತೇಜಿಸುವ ಅಮೈನೋ ಆಮ್ಲವಾಗಿದೆ. “ಕುಂಬಳಕಾಯಿ ಬೀಜಗಳಲ್ಲಿನ ಸತು, ತಾಮ್ರ ಮತ್ತು ಸೆಲೆನಿಯಮ್ ನಿದ್ರೆಯ ಅವಧಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು” ಎಂದು ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಶೌಚಾಲಯದಲ್ಲಿ ಸ್ಮಾರ್ಟ್ ಫೋನ್ ಬಳಸುತ್ತಿದ್ದೀರಾ? ಹಾಗಿದ್ದರೆ ಈ ಸಮಸ್ಯೆ ನಿಮ್ಮಲ್ಲೂ ಕಂಡುಬರಬಹುದು
ಬಾಳೆಹಣ್ಣು:
ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್, ಟ್ರಿಪ್ಟೊಫಾನ್, ವಿಟಮಿನ್ ಬಿ 6, ಕಾರ್ಬೋಹೈಡ್ರೇಟ್ಗಳು ಮತ್ತು ಪೊಟ್ಯಾಸಿಯಮ್ಗಳಂತಹ ನಿದ್ರೆಯನ್ನು ಉತ್ತೇಜಿಸುವ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ, ಇವೆಲ್ಲವೂ ಸುಧಾರಿತ ನಿದ್ರೆಗೆ ಸಂಬಂಧಿಸಿವೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ನೆನೆಸಿದ ಕಾಮಕಸ್ತೂರಿ ಬೀಜ:
ಟ್ರಿಪ್ಟೊಫಾನ್‌ನಲ್ಲಿ ಸಮೃದ್ಧವಾಗಿರುವ ಕಾಮಕಸ್ತೂರಿ ಬೀಜ ಅಮೈನೋ ಆಮ್ಲವನ್ನು ಹೊಂದಿದ್ದು ಅದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವ ಮೂಲಕ ನಿದ್ರೆಯ ಮಾದರಿಯನ್ನು ನಿಯಂತ್ರಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: