AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮಳೆಗಾಲದಲ್ಲಿ ನಿಮ್ಮ ಆರೋಗ್ಯಕ್ಕೆ ಅಗತ್ಯವಿರುವ 5 ಕಾಲೋಚಿತ ಹಣ್ಣಿನ ರಸಗಳ ಬಗ್ಗೆ ನಿಮಗೆ ತಿಳಿದಿದೆಯಾ?

ಹಣ್ಣಿನ ರಸಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೈಸರ್ಗಿಕ ಮಾರ್ಗವಾಗಿದೆ. ಮಾನ್ಸೂನ್ ನಲ್ಲಿ ನಿಮ್ಮ ಆರೋಗ್ಯಕ್ಕೆ ಸೂಕ್ತವಾದ 5 ಆರೋಗ್ಯಕರ ಹಣ್ಣಿನ ರಸಗಳ ಬಗೆಗಿನ ಮಾಹಿತಿ ಇಲ್ಲಿವೆ.

ಈ ಮಳೆಗಾಲದಲ್ಲಿ ನಿಮ್ಮ ಆರೋಗ್ಯಕ್ಕೆ ಅಗತ್ಯವಿರುವ 5 ಕಾಲೋಚಿತ ಹಣ್ಣಿನ ರಸಗಳ ಬಗ್ಗೆ ನಿಮಗೆ ತಿಳಿದಿದೆಯಾ?
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Jun 30, 2023 | 6:24 PM

Share

ಸುಡುವ ಬೇಸಿಗೆಯ ನಂತರ ಬರುವ ಆರಂಭಿಕ ಮಳೆಯು ಯಾವಾಗಲೂ ಆಹ್ಲಾದಕರವಾಗಿರುತ್ತದೆ. ಆದರೆ ಮಳೆಯಿಂದ ತೇವಗೊಂಡ ಸುತ್ತಮುತ್ತಲಿನ ಪ್ರದೇಶಗಳು ಮತ್ತು ತೇವಾಂಶದ ಮೇಲ್ಮೈಗಳೊಂದಿಗೆ ವಾತಾವರಣದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಈ ತೇವಾಂಶದ ಸಂಗ್ರಹವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದಲ್ಲದೆ ಸೋಂಕು, ಅಲರ್ಜಿ ಮತ್ತು ನೀರಿನಿಂದ ಹರಡುವ ರೋಗಗಳಲ್ಲಿ ತೀವ್ರ ಏರಿಕೆ ಕಂಡುಬರುವುದು ಸಾಮಾನ್ಯವಾಗಿದೆ. ಹಾಗಾಗಿ ಮಳೆಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಈ ಎಲ್ಲಾ ರೀತಿಯ ಸೋಂಕುಗಳಿಂದ ರಕ್ಷಿಸಿಕೊಳ್ಳಲು ಇರುವ ಉತ್ತಮ ಮಾರ್ಗವೆಂದರೆ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಸಲಹೆಗಳು.

ಹಣ್ಣಿನ ರಸಗಳು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೈಸರ್ಗಿಕ ಮಾರ್ಗವಾಗಿದೆ. ಮಾನ್ಸೂನ್ ನಲ್ಲಿ ನಿಮ್ಮ ಆರೋಗ್ಯಕ್ಕೆ ಸೂಕ್ತವಾದ 5 ಆರೋಗ್ಯಕರ ಹಣ್ಣಿನ ರಸಗಳ ಬಗೆಗಿನ ಮಾಹಿತಿ ಇಲ್ಲಿವೆ.

ದಾಳಿಂಬೆ ರಸ: 

ದಾಳಿಂಬೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಜೀರ್ಣಾಂಗವ್ಯೂಹದ ಉರಿಯೂತದ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಅವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದನ್ನು ಸುಲಭವಾಗಿ ಮಾಡುವುದು ಹೇಗೆ? ಇಲ್ಲಿದೆ ಮಾಡುವ ವಿಧಾನದ ಬಗೆಗಿನ ಮಾಹಿತಿ.

ಬೇಕಾಗುವ ಸಾಮಾಗ್ರಿಗಳು:

  • 2 ದೊಡ್ಡ ದಾಳಿಂಬೆ
  • ಚಿಟಿಕೆ ಕಪ್ಪು ಉಪ್ಪು (ಐಚ್ಛಿಕ)

ಮಾಡುವ ವಿಧಾನ:

ದಾಳಿಂಬೆ ಹಣ್ಣುಗಳನ್ನು ತೊಳೆದು ನಾಲ್ಕು ಭಾಗಗಳಾಗಿ ಕತ್ತರಿಸಿ, ಒಂದು ದೊಡ್ಡ ಬಟ್ಟಲು ಅಥವಾ ಸಮತಟ್ಟಾದ ತಟ್ಟೆಯಲ್ಲಿ ಚೆನ್ನಾಗಿ ಬಿಡಿಸಿಕೊಂಡು ನಿಮಗೆ ಬೇಕಾದಲ್ಲಿ ಉಪ್ಪು ಮತ್ತು ಸ್ವಲ್ಪ ಸಕ್ಕರೆಯನ್ನು ಸೇರಿಸಿಕೊಳ್ಳಿ. ಬೇಡವಾದಲ್ಲಿ ಹಾಗೆಯೇ ಕುಡಿಯಬಹುದು. ನಿಮಗೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳಿ. ಈ ಹಣ್ಣಿನ ಬೀಜಗಳು ಮೃದುವಾದ ಮಿಶ್ರಣದಲ್ಲಿ ಸೇರಿಕೊಳ್ಳುವುದರಿಂದ ಕುಡಿಯುವುದಕ್ಕೂ ಮುದ ಕೊಡುತ್ತದೆ. ಅದೆಲ್ಲದರ ಜೊತೆಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ದಾಳಿಂಬೆ ಬೀಜಗಳನ್ನು ಶಿಫಾರಸು ಮಾಡಲಾಗುತ್ತದೆ ಆದ್ದರಿಂದ, ನೀವು ನಯವಾದ ರಸವನ್ನು ಪಡೆಯಲು ಬಯಸಿದರೆ ಅದನ್ನು ಸ್ವಲ್ಪ ಹೆಚ್ಚು ಸಮಯ ಮಿಕ್ಸಿಯಲ್ಲಿ ಮಿಶ್ರಣ ಮಾಡಲು ಬಿಡಿ.

ಇದನ್ನೂ ಓದಿ: ಉತ್ತಮ ನಿದ್ರೆಗೆ ಸಹಾಯ ಮಾಡುವ 6 ಆಹಾರಗಳು

ಜಾಮೂನು (ನೇರಳೆ ಹಣ್ಣು) ಹಣ್ಣಿನ ರಸ:

ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಮಧುಮೇಹವನ್ನು ಕಡಿಮೆ ಮಾಡಲು ಜಾಮೂನು ಹಣ್ಣುಗಳು ಅತ್ಯುತ್ತಮ ಪರಿಹಾರವಾಗಿದೆ. ಅವು ಕಬ್ಬಿಣ, ಫೋಲೇಟ್, ಪೊಟ್ಯಾಸಿಯಮ್ ಮತ್ತು ಜೀವಸತ್ವಗಳಂತಹ ಸಮೃದ್ಧ ಪೋಷಕಾಂಶಗಳಿಂದ ತುಂಬಿವೆ.

ಬೇಕಾಗುವ ಸಾಮಾಗ್ರಿಗಳು:

  • 250 ಗ್ರಾಂ ಜಾಮೂನ್ ತೊಳೆದು ಬೀಜ ಬಿಸಾಡಬೇಕು
  • ಅಗತ್ಯಕ್ಕೆ ತಕ್ಕಷ್ಟು ತಂಪಾದ ನೀರು
  • 1 ಟೇಬಲ್ ಚಮಚ ಜೇನು ತುಪ್ಪ
  • ಚಿಟಿಕೆ ಕರಿಮೆಣಸಿನ ಪುಡಿ ಮತ್ತು ಉಪ್ಪು
  • ನಿಂಬೆ ರಸ

ಮಾಡುವ ವಿಧಾನ:

ನಿಮ್ಮ ಮಿಕ್ಸರ್ ಗೆ ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಸೇರಿಸಿ. ನಯವಾದ ಪೇಸ್ಟ್ ಆಗುವವರೆಗೆ ಮಿಶ್ರಣ ಮಾಡಿ ಮತ್ತು ಇದರ ರುಚಿ ಸರಿಯಾಗಲು ಎಲ್ಲವನ್ನೂ ಸಮ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಇದು ಕಾಲೋಚಿತ ಹಣ್ಣಾದ್ದರಿಂದ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೇಳಿ ಮಾಡಿಸಿದ ಹಣ್ಣಾಗಿದೆ.

ಪಪ್ಪಾಯಿ ಹಣ್ಣಿನ ರಸ:

ಪಪ್ಪಾಯಿಯಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಜೊತೆಗೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬೇಕಾಗುವ ಸಾಮಾಗ್ರಿಗಳು:

  • ಪಪ್ಪಾಯಿ
  • ಸಕ್ಕರೆ
  • ನಿಂಬೆ ರಸ
  • ನೀರು

ಮಾಡುವ ವಿಧಾನ:

ಮೇಲೆ ಹೇಳಿರುವ ಎಲ್ಲ ಪದಾರ್ಥಗಳನ್ನು ಜ್ಯೂಸರ್ ನಲ್ಲಿ ಹಾಕಿಕೊಳ್ಳಿ ಮತ್ತು ನಯವಾಗುವವರೆಗೆ ಮಿಶ್ರಣ ಮಾಡಿ. “ಕಡಿಮೆ ತ್ಯಾಜ್ಯ, ಹೆಚ್ಚು ರಸ” ಎಂಬ ಮಾತಿಗೆ ಈ ಹಣ್ಣು ಸೂಕ್ತವಾಗಿದೆ. ಮಾಡಿದ ಹಣ್ಣಿನ ರಸವನ್ನು ಒಂದು ಲೋಟಕ್ಕೆ ಹಾಕಿ ಸರ್ವ್ ಮಾಡಿ.

ಆಪಲ್ ಜ್ಯೂಸ್

ಸೇಬು ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹವು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೊತೆಗೆ ಅವು ತೂಕ ನಷ್ಟಕ್ಕೂ ಸಹಾಯ ಮಾಡುತ್ತವೆ. ಮಧುಮೇಹದ ಅಪಾಯವನ್ನು ಕಡಿಮೆ ಮಾಡಿ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಬೇಕಾಗುವ ಸಾಮಾಗ್ರಿಗಳು:

  • ಸೇಬು
  • ಸಕ್ಕರೆ
  • ಉಪ್ಪು
  • ತುರಿದ ಶುಂಠಿ

ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಸೇರಿಸಿ, ಹೊರತೆಗೆದ ರಸವನ್ನು ಒಂದು ಲೋಟದಲ್ಲಿ ಸಂಗ್ರಹಿಸಿ ಬಳಿಕ ತಕ್ಷಣ ಸರ್ವ್ ಮಾಡಿ.

ಪ್ಲಮ್ ಜ್ಯೂಸ್:

ಮಲಬದ್ಧತೆಯನ್ನು ನಿವಾರಿಸಲು ಪ್ಲಮ್ ಹಣ್ಣುಗಳು ಉತ್ತಮವಾಗಿವೆ. ನೈಸರ್ಗಿಕವಾಗಿ ಸಿಗುವ ಸಕ್ಕರೆ ಸೋರ್ಬಿಟಾಲ್ ಸೇವಿಸಬಹುದು. ಅವು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಒದಗಿಸುವ ಮೂಲಕ ಕಬ್ಬಿಣದ ಅಂಶವನ್ನು ಹೆಚ್ಚಿಸುತ್ತವೆ, ಜೊತೆಗೆ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತವೆ.

ಬೇಕಾಗುವ ಸಾಮಾಗ್ರಿಗಳು:

  • ಪ್ಲಮ್ (ಡಿಸೀಡ್)
  • ತುರಿದ ಶುಂಠಿ
  • ನೀರು
  • ಚಿಟಿಕೆ ಕಪ್ಪು ಉಪ್ಪು
  • ಅಗತ್ಯವಿರುವಷ್ಟು ಸಕ್ಕರೆ (ಹಣ್ಣು ಎಷ್ಟು ಪಕ್ವವಾಗಿದೆ ಎಂಬುದರ ಆಧಾರದ ಮೇಲೆ)

ಮಾಡುವ ವಿಧಾನ:

ಜ್ಯೂಸರ್ ನಲ್ಲಿ ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ, ನಯವಾಗಿ ಬೀಸಿಕೊಳ್ಳಲು ನಿಧಾನವಾಗಿ ನೀರನ್ನು ಸೇರಿಸಿ. ನಿಮ್ಮ ಮಿಕ್ಸಿ ಹೆಚ್ಚಿನ ಸಾಮರ್ಥ್ಯವಿದ್ದಲ್ಲಿ ಪ್ಲಮ್ ಹಣ್ಣುಗಳನ್ನು ನೀವು ಕತ್ತರಿಸದೆಯೇ ಹಾಕಬಹುದು ಇಲ್ಲವಾದಲ್ಲಿ ಕತ್ತರಿಸಿ ಸೇರಿಸಬಹುದು. ಹಣ್ಣಿನ ರಸಗಳು ಆರೋಗ್ಯಕರವಾಗಿರಲು ಅತ್ಯುತ್ತಮವಾಗಿವೆ. ಜೊತೆಗೆ ಇವುಗಳಲ್ಲಿ ಯಾವುದಾದರೂ ಹಣ್ಣುಗಳನ್ನು ಒಂದು ಅಥವಾ ಎರಡು ದಿನಗಳಿಗೊಮ್ಮೆ ಕುಡಿಯುವುದರಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?