Kannada News Lifestyle If you use these formulas in married life, life will be more colorful
Relationship Tips: ದಾಂಪತ್ಯ ಜೀವನದಲ್ಲಿ ಈ ಸೂತ್ರಗಳನ್ನು ಬಳಸಿದರೆ ಲೈಫ್ ಇನ್ನಷ್ಟು ಕಲರ್ ಫುಲ್
ಮದುವೆಯಾದ ವ್ಯಕ್ತಿಗಳ ಅಭಿರುಚಿಗಳು, ಆಸಕ್ತಿಗಳು, ಆಯ್ಕೆಗಳು ಹಾಗೂ ಮನಸ್ಥಿತಿಗಳು ಭಿನ್ನವಾಗಿರುವಾಗ ಜೊತೆಯಾಗಿ ಬದುಕು ನಡೆಸುವುದು ಸುಲಭವಲ್ಲ. ಲವ್ ಮ್ಯಾರೇಜ್ ಆಗಿರಲಿ, ಅರೇಂಜ್ಡ್ ಮ್ಯಾರೇಜ್ ಆಗಿರಲಿ ಇಬ್ಬರಲ್ಲಿ ಹೊಂದಾಣಿಕೆಯೆನ್ನುವುದು ಬಹಳ ಮುಖ್ಯವಾಗಿರುತ್ತದೆ. ಮದುವೆಯಾದ ಬಳಿಕ ತಮ್ಮ ಗಟ್ಟಿಯಾಗಿರಲು ಈ ರಹಸ್ಯಗಳನ್ನು ತಿಳಿದಿದ್ದರೆ ಸಂಸಾರದ ಬಂಡಿಯು ಇನ್ನು ಸುಗಮವಾಗಿ ಸಾಗಲು ಸಾಧ್ಯ
Ad
ದಾಂಪತ್ಯ ಜೀವನದಲ್ಲಿ ಈ ಸೂತ್ರಗಳನ್ನು ಬಳಸಿದರೆ ಲೈಫ್ ಇನ್ನಷ್ಟು ಕಲರ್ ಫುಲ್
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ. ಇಲ್ಲಿ ಪ್ರೀತಿಯ ಜೊತೆಗೆ ಇನ್ನಿತ್ತರ ಅಂಶಗಳು ಸೇರಿದರೇನೇ ಬದುಕು ಚಂದ. ಒಬ್ಬರು ಮತ್ತೊಬ್ಬರ ಕಷ್ಟ ಸುಖಕ್ಕೆ ಸಾಥ್ ನೀಡುತ್ತಾ ಜೊತೆಯಾಗಿ ಬದುಕಬೇಕು. ಆದರೆ ಮದುವೆಯಾದ ವ್ಯಕ್ತಿಗಳ ಅಭಿರುಚಿಗಳು, ಆಸಕ್ತಿಗಳು, ಆಯ್ಕೆಗಳು ಹಾಗೂ ಮನಸ್ಥಿತಿಗಳು ಭಿನ್ನವಾಗಿರುವಾಗ ಜೊತೆಯಾಗಿ ಬದುಕು ನಡೆಸುವುದು ಸುಲಭವಲ್ಲ. ಲವ್ ಮ್ಯಾರೇಜ್ ಆಗಿರಲಿ, ಅರೇಂಜ್ಡ್ ಮ್ಯಾರೇಜ್ ಆಗಿರಲಿ, ಇಬ್ಬರಲ್ಲಿ ಹೊಂದಾಣಿಕೆಯೆನ್ನುವುದು ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ಮದುವೆಯಾದ ಬಳಿಕ ತಮ್ಮ ಸಂಬಂಧ (Relationship)ಗಟ್ಟಿಯಾಗಿರಲು ಈ ರಹಸ್ಯಗಳನ್ನು ತಿಳಿದಿದ್ದರೆ ಸಂಸಾರದ ಬಂಡಿಯು ಇನ್ನು ಸುಗಮವಾಗಿ ಸಾಗಲು ಸಾಧ್ಯ.
ಮದುವೆಯ ನಂತರದಲ್ಲಿ ಗಂಡು ಹೆಣ್ಣಿನ ಜೀವನವು ಬದಲಾಗುತ್ತವೆ. ಸಂಸಾರದ ಬಂಡಿಯು ಸುಗಮವಾಗಿ ಸಾಗಬೇಕಾದರೆ ಪ್ರೀತಿಯ ಜೊತೆಗೆ ತಪ್ಪು ಒಪ್ಪುಗಳನ್ನು ಸಮಾನವಾಗಿ ಸ್ವೀಕರಿಸುವುದು ಬಹಳ ಮುಖ್ಯ. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಗೌರವ ಎನ್ನುವಂತಹದ್ದು ಇರಬೇಕು. ಇಬ್ಬರೂ ಜೊತೆಯಾಗಿ ಕಷ್ಟ ಸುಖಗಳನ್ನು ಹಂಚಿಕೊಂಡು ಸಂಸಾರದ ಬಂಡಿಯನ್ನು ಸಾಗಿಸಬೇಕು. ಮದುವೆಯಾದ ಬಳಿಕ ನಾನು ಎನ್ನುವ ನಾವು ಎನ್ನುವ ಭಾವ ಸಂಸಾರವು ಸರಾಗವಾಗಿ ಸಾಗುತ್ತವೆ.
ಇಬ್ಬರ ನಡುವೆ ಪ್ರೀತಿಯಿರಲಿ: ಯಾವುದೇ ಸಂಬಂಧವಿರಲಿ, ಅಲ್ಲಿ ಪ್ರೀತಿಯೆನ್ನುವುದು ಬಹಳ ಮುಖ್ಯವಾಗಿರುತ್ತದೆ. ಇಬ್ಬರ ನಡುವೆ ಪ್ರೀತಿ ತುಂಬಿದ ಮಾತುಗಳು, ಸಿಹಿ ಮುತ್ತು, ಅಪ್ಪುಗೆ ಇರಲಿ. ಇಬ್ಬರೂ ಕೂಡ ಪ್ರೀತಿಯನ್ನು ತೋರ್ಪಡಿಸುತ್ತಿರುವುದು ಸಂಬಂಧವನ್ನು ಗಟ್ಟಿಯಾಗಿಸುತ್ತವೆ.
ಮುಕ್ತ ಸಂವಹನವಿರಲಿ: ಗಂಡ ಹೆಂಡಿಯರಿಬ್ಬರೂ ಕೂಡ ಮುಕ್ತ ಮಾತುಕತೆಯನ್ನು ನಡೆಸಬೇಕು. ತಮ್ಮಿಬ್ಬರ ಆಸೆ, ಆಕಾಂಕ್ಷೆಗಳು, ಕನಸು, ಗುರಿಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಮುಕ್ತವಾಗಿ ಮಾತನಾಡಿದರೆ ಇಬ್ಬರ ನಡುವೆ ಯಾವುದೇ ಮುಚ್ಚುಮರೆbಇರುವುದಿಲ್ಲ ಹಾಗೂ ರಿಲೇಷನ್ಶಿಪ್ ಗ್ಯಾಪ್ ಕೂಡ ಬರುವುದಿಲ್ಲ.
ಸಂಗಾತಿಯ ಕೆಲಸಗಳಿಗೆ ಇರಲಿ ಮೆಚ್ಚುಗೆ: ಒಬ್ಬರಿಗೊಬ್ಬರು ಮೆಚ್ಚುಗೆ ಸೂಚಿಸುವುದನ್ನು ಮರೆಯಬೇಡಿ. ಇದರಿಂದ ನಿಮ್ಮ ಸಂಗಾತಿಗೆ ನನಗಾಗಿ ನನ್ನ ಒಳ್ಳೆಯ ಕೆಲಸ ಕಾರ್ಯಗಳನ್ನು ಪ್ರೋತ್ಸಾಹಿಸಲು ಒಂದು ಜೀವ ಇದೆ ಎಂದೆನಿಸುತ್ತದೆ. ಒಂದು ಮೆಚ್ಚುಗೆಯಿಂದ ಆತ್ಮವಿಶ್ವಾಸವು ಹೆಚ್ಚಾಗುತ್ತದೆ.
ಇಬ್ಬರಲ್ಲೂ ಇರಬೇಕು ನಂಬಿಕೆ: ಸಂಗಾತಿಗಳ ನಡುವೆ ಪ್ರೀತಿಯ ಜೊತೆ ಜೊತೆಗೆ ನಂಬಿಕೆಯು ಬಹಳ ಮುಖ್ಯವಾಗಿರುತ್ತದೆ. ನಂಬಿಕೆ ಎನ್ನುವುದು ಸಂಬಂಧವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಸಹಕಾರಿಯಾಗುತ್ತದೆ. ಒಬ್ಬರಿಗೆ ಇನ್ನೊಬ್ಬರ ಮೇಲೆ ನಂಬಿಕೆಯಿದ್ದರೆ ಯಾವುದೇ ಸನ್ನಿವೇಶ ಬಂದರೂ ಒಬ್ಬರು ಇನ್ನೊಬ್ಬರನ್ನು ಬಿಟ್ಟುಕೊಡಬಾರದು. ಸಂಬಂಧದಲ್ಲಿ ಇಬ್ಬರೂ ನಿಷ್ಠಾವಂತರಾಗಿದ್ದರೂ ಒಬ್ಬರ ನಂಬಿಕೆಯನ್ನು ಇನ್ನೊಬ್ಬರು ಉಳಿಸಿಕೊಳ್ಳಬೇಕು.
ಹಣಕಾಸಿನ ವಿಚಾರ ಮುಚ್ಚಿಡಬೇಡಿ: ಅರೇಂಜ್ಡ್ ಮ್ಯಾರೇಜ್ ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ ಮುಂದಿನ ಬದುಕಿಗಾಗಿ ಉಳಿತಾಯ ಮಾಡುವುದು ಮುಖ್ಯ. ಇಬ್ಬರೂ ಕೂಡ ಮನೆ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹಣಕಾಸು ನಿರ್ವಹಣೆಯನ್ನು ಮಾಡುವ ಬಗ್ಗೆ ಚರ್ಚಿಸಿ. ಹಣಕಾಸಿಗೆ ಸಂಬಂಧ ಪಟ್ಟಂತೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಾದರೂ ಪರಸ್ಪರರು ಚರ್ಚಿಸಿ ನಿರ್ಧಾರವನು ತೆಗೆದುಕೊಳ್ಳಿ.
ಮನೆಯ ಕೆಲಸಗಳಲ್ಲಿ ಹಂಚಿಕೆ: ಸಂಗಾತಿಗಳಲ್ಲಿ ಇಬ್ಬರೂ ಕೂಡ ದುಡಿಯುವವರಾಗಿದ್ದರೆ ಮನೆಯ ಕೆಲಸಗಳನ್ನು ಹಂಚಿಕೊಂಡರೆ ಒಳ್ಳೆಯದು. ಇದರಿಂದ ನಿಮ್ಮ ಸಂಗಾತಿಯ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದಂತೆ ಆಗುತ್ತದೆ. ಮನೆಯ ಕೆಲಸದಲ್ಲಿ ಹಂಚಿಕೆ ಮಾಡಿಕೊಳ್ಳುವುದರಿಂದ ಇಬ್ಬರ ನಡುವೆ ಹೊಂದಾಣಿಕೆಯು ಬೆಳೆಯುತ್ತದೆ.
ಸಂಗಾತಿಗಾಗಿ ಸಮಯ ಮೀಸಲು: ನಿಮ್ಮ ಸಾಂಸರಿಕ ಜೀವನವು ಸುಖವಾಗಿರಬೇಕಾದರೆ ಸಂಗಾತಿಯ ಜೊತೆಗೆ ಸ್ವಲ್ಪ ಸಮಯ ಕಳೆಯಿರಿ. ಕೆಲಸದಲ್ಲಿ ಎಷ್ಟೇ ಬ್ಯುಸಿಯಿದ್ದರೂ ದಿನದಲ್ಲಿ ಸ್ವಲ್ಪ ಸಮಯವಾದರೂ ಸಂಗಾತಿಯೊಂದಿಗೆ ಇದ್ದು ಆರಾಮದಾಯಕವಾಗಿ ಮಾತನಾಡಿಕೊಳ್ಳಿ.
ಸಂಗಾತಿಯ ಕುಟುಂಬದವರ ಮೇಲೆ ಪ್ರೀತಿ: ಮದುವೆಯಾದ ಬಳಿಕ ಸಂಗಾತಿಗಳು ತಮ್ಮ ತಮ್ಮ ಬದುಕನ್ನು ನೋಡಿಕೊಂಡರೆ ಸಾಲದು. ಸಂಗಾತಿಗಳ ಕುಟುಂಬದವರ ಜೊತೆಗೂ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳಬೇಕಾಗುತ್ತದೆ. ಸಂಗಾತಿಗಳಿಬ್ಬರೂ ದುಡಿಯುವವರಾಗಿದ್ದರೆ ಪಟ್ಟಣದಲ್ಲಿ ವಾಸಿಸುತ್ತಿರುತ್ತಾರೆ. ಈ ವೇಳೆಯಲ್ಲಿ ಒಬ್ಬರು ಇನ್ನೊಬ್ಬರ ಕುಟುಂಬದವರ ಜೊತೆ ಕರೆ ಮಾಡಿ ಯೋಗಕ್ಷಮೆಗಳನ್ನು ವಿಚಾರಿಸುವುದು, ಹಾಗೂ ಅತ್ತೆ ಮಾವಂದಿರ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವುದು, ಸಂಗಾತಿಯ ತಂದೆ ತಾಯಿಯನ್ನು ತನ್ನ ತಂದೆತಾಯಿಯಂತೆ ನೋಡಿಕೊಳ್ಳುವುದು ಸಂಗಾತಿಗಳ ನಡುವಿನ ಪ್ರೀತಿಯನ್ನು ಗಟ್ಟಿಗೊಳಿಸುತ್ತವೆ.
ವಿಷಯಗಳನ್ನು ಮುಚ್ಚಿಡಬೇಡಿ: ಇಬ್ಬರ ಬದುಕಿನ ಹಳೆಯ ವಿಚಾರಗಳು ಏನೇ ಇರಲಿ, ಆದರೆ ಅದನ್ನು ಸಮಯ ಬಂದಾಗ ಸರಿಯೆನಿಸಿದರೆ ಹಂಚಿಕೊಳ್ಳಿ. ಕೆಲವು ವಿಚಾರಗಳನ್ನು ಸಂಗಾತಿಯಿಂದ ಮುಚ್ಚಿಡುವುದರಿಂದ ಸಂಬಂಧಗಳು ಮುರಿಯಬಹುದು. ಹೀಗಾಗಿ ಸಂಗಾತಿಗಳ ನಡುವೆ ಮುಚ್ಚು ಮರೆಯು ಒಳ್ಳೆಯದು. ಹೀಗಾದಾಗ ಸುಳ್ಳಿಗೂ ಕೂಡ ದಾರಿ ಮಾಡಿಕೊಟ್ಟಂತೆ ಆಗುತ್ತದೆ.
ತಪ್ಪು-ಒಪ್ಪುಗಳು ಇರಲಿ: ದಾಂಪತ್ಯದಲ್ಲಿ ಸಂಗಾತಿಗಳಿಬ್ಬರ ಸಣ್ಣ ಪುಟ್ಟ ಮುನಿಸುಗಳು, ಜಗಳಗಳು ಸರ್ವೇ ಸಾಮಾನ್ಯ. ಇಬ್ಬರ ನಡುವೆ ವಾದಗಳು ಆದಾಗ ತಪ್ಪಿದ್ದರೆ ಕ್ಷಮೆ ಕೇಳುವುದು ಒಳ್ಳೆಯದು. ಸಂಬಂಧವನ್ನು ಮುರಿಯುವಷ್ಟರ ಮಟ್ಟಕ್ಕೆ ವಾದವನ್ನು ತೆಗೆದುಕೊಂಡು ಹೋಗಬೇಡಿ. ಸಂಗಾತಿಯು ಕ್ಷಮೆ ಕೇಳಿದರೆ ಕ್ಷಮಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ. ಈ ಎಲ್ಲಾ ಸಲಹೆಗಳನ್ನು ಸಂಸಾರದಲ್ಲಿ ಅಳವಡಿಸಿಕೊಂಡರೆ ಸಂಸಾರವು ಸುಖಸಾಗರವಾಗುವುದರಲ್ಲಿ ಅನುಮಾನವಿಲ್ಲ.