Illusion Personality Test : ಮೊಸಳೆ ಹಾಗೂ ದೋಣಿ ? ಈ ಚಿತ್ರದಲ್ಲಿ ನೀವು ಮೊದಲು ಕಂಡದ್ದೇನು? ಇದುವೇ ಹೇಳುತ್ತೆ ವ್ಯಕ್ತಿತ್ವ

ಸೋಶಿಯಲ್ ಮೀಡಿಯಾದಲ್ಲಿ ಆಸಕ್ತಿದಾಯಕ ಆಫ್ಟಿಕಲ್ ಇಲ್ಯೂಷನ್‌, ವ್ಯಕ್ತಿತ್ವ ಪರೀಕ್ಷೆ ಸಂಬಂಧಿಸಿದ ಫೋಟೋಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಇದೇ ರೀತಿಯ ವ್ಯಕ್ತಿತ್ವ ಪರೀಕ್ಷೆಯ ಚಿತ್ರ ವೈರಲ್‌ ಆಗಿದ್ದು, ಈ ಫೋಟೋದಿಂದ ನಿಮ್ಮ ವ್ಯಕ್ತಿತ್ವ ತಿಳಿಯಬಹುದು ಎಂದರೆ ನಿಜಕ್ಕೂ ಅಚ್ಚರಿ ಎನಿಸಬಹುದು. ಆದರೆ ಈ ಚಿತ್ರದಲ್ಲಿ ದೋಣಿ ಹಾಗೂ ಮೊಸಳೆಯನ್ನು ಕಾಣಬಹುದು, ಇದೆರಡರಲ್ಲಿ ಮೊದಲು ನೀವು ಏನನ್ನೂ ನೋಡುತ್ತೀರಿ ಎನ್ನುವುದು ವ್ಯಕ್ತಿತ್ವ ಬಹಿರಂಗ ಪಡಿಸುತ್ತದೆ, ಈ ಕುರಿತಾದ ಮಾಹಿತಿ ಇಲ್ಲಿದೆ.

Illusion Personality Test : ಮೊಸಳೆ ಹಾಗೂ ದೋಣಿ ? ಈ ಚಿತ್ರದಲ್ಲಿ ನೀವು ಮೊದಲು ಕಂಡದ್ದೇನು? ಇದುವೇ ಹೇಳುತ್ತೆ ವ್ಯಕ್ತಿತ್ವ
ವೈರಲ್​ ಪೋಸ್ಟ್​
Edited By:

Updated on: Apr 03, 2025 | 10:05 AM

ಒಬ್ಬ ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ನಮಗೆ ಕೆಲವೊಮ್ಮೆ ಇಡೀ ಜೀವಮಾನವಿದ್ದರೂ ಕೂಡ ಸಾಕಾಗುವುದಿಲ್ಲ. ಎಷ್ಟೇ ಚೆನ್ನಾಗಿ ಅರ್ಥ ಮಾಡಿಕೊಂಡರೂ ವ್ಯಕ್ತಿಯ ಸ್ಪಷ್ಟ ವ್ಯಕ್ತಿತ್ವ (personality) ತಿಳಿಯಲು ಅಸಾಧ್ಯವಾಗುತ್ತದೆ. ಹೌದು ಸಮಯ ಸಂದರ್ಭಕ್ಕೆ ಅನುಗುಣವಾಗಿ ವ್ಯಕ್ತಿಯೂ ಒಂದೊಂದು ರೀತಿ ನಡವಳಿಕೆಯನ್ನು ತೋರಿಸುತ್ತಿರುತ್ತಾನೆ. ಆದರೆ, ಕೆಲವು ವ್ಯಕ್ತಿತ್ವ ಪರೀಕ್ಷೆಗಳಿಂದ (Exam) ವ್ಯಕ್ತಿಯಲ್ಲಿನ ನಿಗೂಢ ಗುಣಲಕ್ಷಣಗಳ ಬಗ್ಗೆ ತಕ್ಕ ಮಟ್ಟಿಗೆ ತಿಳಿದುಕೊಳ್ಳಬಹುದು. ಇದೀಗ ವೈರಲ್ ಆಗಿರುವ ಆಫ್ಟಿಕಲ್ ಇಲ್ಯೂಷನ್ (optical illusion) ಚಿತ್ರದಲ್ಲಿ ಮೊದಲು ದೋಣಿ (boat) ಅಥವಾ ಮೊಸಳೆ (crocodile) ಕಂಡರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ ಎಂದು ನಿರ್ಣಯಿಸಬಹುದು.

* ಮೊದಲು ದೋಣಿ ಕಂಡರೆ : ಈ ಚಿತ್ರ ನೋಡಿದಾಗ ಮೊದಲು ನೀವು ಸಮುದ್ರದಲ್ಲಿ ತೇಲುತ್ತಿರುವ ದೋಣಿಯನ್ನು ಕಂಡರೆ, ಈ ವ್ಯಕ್ತಿಗಳು ಸಣ್ಣ ಪುಟ್ಟ ವಿಷಯವನ್ನು ಗೌರವಿಸುವ ವ್ಯಕ್ತಿಗಳಾಗಿರುತ್ತಾರೆ. ಎಲ್ಲರೊಂದಿಗೆ ಬೆರೆಯುವುದಕ್ಕಿಂತ ಹೆಚ್ಚಾಗಿ ಏಕಾಂಗಿಯಾಗಿ ಸಮಯ ಕಳೆಯುವ ಇಷ್ಟ ಪಡುತ್ತಾರೆ. ಕೆಲವೇ ಕೆಲವು ಸ್ನೇಹಿತರನ್ನೂ ಹೊಂದಿದ್ದು ಸಂಬಂಧಗಳಿಗೆ ಹೆಚ್ಚು ಆದ್ಯತೆ ನೀಡುವ ವ್ಯಕ್ತಿಗಳಿರುವರು. ಸೃಜನಶೀಲರಾಗಿದ್ದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಾವಿರ ಬಾರಿ ಯೋಚಿಸುತ್ತಾರೆ.

ಇದನ್ನೂ ಓದಿ: ಮೆಟ್ಟಿಲು ಹತ್ತುವಾಗ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ?

ಇದನ್ನೂ ಓದಿ
ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು?
ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
ಬೇಸಿಗೆಯ ದಾಹ ನೀಗಿಸಲು ಎಳನೀರು ಕುಲುಕ್ಕಿ ಶರ್ಬತ್‌ ಒಮ್ಮೆ ಟ್ರೈ ಮಾಡಿ…
ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು

* ಮೊದಲು ಮೊಸಳೆಯನ್ನು ಕಂಡರೆ : ಈ ಚಿತ್ರದಲ್ಲಿ ನೀವು ಮೊದಲು ಮೊಸಳೆಯನ್ನು ಗುರುತಿಸಿದರೆ, ಶಾಂತಿಯುತ ಜೀವನವನ್ನು ನಡೆಸಲು ಇಷ್ಟ . ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಎದುರಾಗುವ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಸಲೀಸಾಗಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಇವರಲ್ಲಿ ತಾಳ್ಮೆ ಹಾಗೂ ಏಕಾಗ್ರತೆ ಕೊರತೆಯಿರುತ್ತದೆ. ತನ್ನ ಸುತ್ತಮುತ್ತಲಿನವರ ಒತ್ತಡವು ಜವಾಬ್ದಾರಿಯನ್ನು ಸ್ವೀಕರಿಸುವಂತೆ ಮಾಡುತ್ತದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ