Important Days in June 2026: ಜೂನ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ

ಪ್ರತಿ ತಿಂಗಳು ಸಹ ವಿವಿಧ ಉದ್ದೇಶಗಳನ್ನಿಟ್ಟುಕೊಂಡು ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ಮಾನ್ಸೂನ್‌ ಋತುವಿನ ಆರಂಭವನ್ನು ಸೂಚಿಸುವ ವರ್ಷದ ಆರನೇ ತಿಂಗಳಾದ ಜೂನ್‌ನಲ್ಲೂ ಸಾಮಾಜಿಕ, ಆರೋಗ್ಯ, ಪರಿಸರ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಾಕಷ್ಟು ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಈ ದಿನಾಚರಣೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

Important Days in June 2026: ಜೂನ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ
ಜೂನ್ ಕ್ಯಾಲೆಂಡರ್
Image Credit source: Getty Images

Updated on: May 28, 2026 | 6:54 PM

ವರ್ಷದ ಆರನೇ ತಿಂಗಳಾದ ಜೂನ್ (June)  ಮಾನ್ಸೂನ್‌ ಋತುವಿನ ಆರಂಭವನ್ನು ಸೂಚಿಸುವ ತಿಂಗಳು. ಅಲ್ಲದೆ ಇದು ಅನೇಕ ಪ್ರಮುಖ ದಿನಗಳು ಮತ್ತು ಜಾಗತಿಕ ಆಚರಣೆಗಳಿಂದ ತುಂಬಿರುವ ತಿಂಗಳು. ಹೌದು ತಿಂಗಳಿನಲ್ಲಿ ಸಾಮಾಜಿಕ, ಆರೋಗ್ಯ, ಪರಿಸರ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನದಿಂದ ಹಿಡಿದು ಅಂತಾರಾಷ್ಟ್ರೀಯ ಯೋಗ ದಿನದವರೆಗೆ ಜೂನ್‌ ತಿಂಗಳಲ್ಲಿ ಯಾವೆಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಜೂನ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ದಿನಾಚರಣೆಗಳ ಪಟ್ಟಿ:

  • ಜೂನ್ 1 – ವಿಶ್ವ ಹಾಲು ದಿನ
  • ಜೂನ್ 1 – ಜಾಗತಿಕ ಪೋಷಕರ ದಿನ
  • ಜೂನ್ 2 – ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನ
  • ಜೂನ್ 3 – ವಿಶ್ವ ಬೈಸಿಕಲ್ ದಿನ
  • ಜೂನ್ 5 – ವಿಶ್ವ ಪರಿಸರ ದಿನ
  • ಜೂನ್ 7 – ವಿಶ್ವ ಆಹಾರ ಸುರಕ್ಷತಾ ದಿನ
  • ಜೂನ್ 8 – ವಿಶ್ವ ಸಾಗರ ದಿನ
  • ಜೂನ್ 8 – ವಿಶ್ವ ಮಿದುಳಿನ ಗೆಡ್ಡೆ ದಿನ
  • ಜೂನ್ 8 – ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನ
  • ಜೂನ್ 12 – ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ
  • ಜೂನ್ 14 – ವಿಶ್ವ ರಕ್ತದಾನಿಗಳ ದಿನ
  • ಜೂನ್ 15 – ಜಾಗತಿಕ ಪವನ ದಿನ
  • ಜೂನ್ 15 – ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ
  • ಜೂನ್ 18 – ಅಂತರರಾಷ್ಟ್ರೀಯ ಪಿಕ್ನಿಕ್ ದಿನ
  • ಜೂನ್ 20 – ವಿಶ್ವ ನಿರಾಶ್ರಿತರ ದಿನ
  • ಜೂನ್ 21 – ಅಂತರರಾಷ್ಟ್ರೀಯ ಯೋಗ ದಿನ
  • ಜೂನ್ 21 – ವಿಶ್ವ ಸಂಗೀತ
  • ಜೂನ್ 21 – ವಿಶ್ವ ಹೈಡ್ರೋಗ್ರಫಿ ದಿನ
  • ಜೂನ್ 21 – ತಂದೆಯಂದಿರ  ದಿನ
  • ಜೂನ್ 22 – ವಿಶ್ವ ಮಳೆಕಾಡು ದಿನ
  • ಜೂನ್ 23 – ಅಂತರರಾಷ್ಟ್ರೀಯ ಒಲಿಂಪಿಕ್ ದಿನ
  • ಜೂನ್ 23 – ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನ
  • ಜೂನ್ 23 – ಅಂತರರಾಷ್ಟ್ರೀಯ ವಿಧವೆಯರ ದಿನ
  • ಜೂನ್ 26 – ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ
  • ಜೂನ್ 29 – ರಾಷ್ಟ್ರೀಯ ಅಂಕಿಅಂಶ ದಿನ
  • ಜೂನ್ 29 – ಅಂತರರಾಷ್ಟ್ರೀಯ ಉಷ್ಣವಲಯದ ದಿನ
  • ಜೂನ್ 30 – ವಿಶ್ವ ಕ್ಷುದ್ರಗ್ರಹ ದಿನ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us