
ಆಹಾರ ಪ್ರಿಯರಿಗಂತೂ ತಿನ್ನುವುದೆಂದರೆ ಇಷ್ಟನೇ. ಆದರಲ್ಲಿಯು ವೈರಂಟಿ ಆಹಾರಗಳನ್ನು ತಂದು ಮುಂದೆ ಇಟ್ಟರೆ ಬೇಡ ಎನ್ನಲು ಮನಸ್ಸು ಬರುವುದಿಲ್ಲ. ಭಾರತದಲ್ಲಿ ವಿವಿಧ ರುಚಿಗಳನ್ನೊಳಗೊಂಡ ಅಡುಗೆಗಳಿದ್ದು, ರುಚಿಕರವಾಗಿದ್ದು ಆಹಾರ ಪ್ರಿಯರಂತೂ ಇಷ್ಟ ಪಟ್ಟೆ ಸವಿಯುತ್ತಾರೆ. ಎಲ್ಲರಿಗೂ ಗೊತ್ತಿರುವಂತೆ ಭಾರತೀಯ ಹೆಚ್ಚು ಮಸಾಲೆ ಪ್ರಿಯರು. ಹೀಗಾಗಿ ಇಲ್ಲಿನ ಆಹಾರಗಳು ಮಸಾಲೆಭರಿತವಾಗಿರುತ್ತದೆ. ಮಸಾಲೆಯುಕ್ತ ಈ ಭಾರತೀಯರ ಈ ಅಡುಗೆಗಳು ವಿದೇಶಿಗರಿಗೆ ಬಲು ಪ್ರಿಯವಂತೆ. ಭಾರತದ ಕೆಲವು ಆಹಾರಗಳು ವಿದೇಶದಲ್ಲಿ ಬಾರಿ ಬೇಡಿಕೆಯನ್ನು ಹೊಂದಿದ್ದು, ಈ ಕೆಲವು ಅಡುಗೆಗಳನ್ನು ಖರೀದಿಸಿ ಸವಿಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
* ಬಿರಿಯಾನಿ : ನಾನ್ ವೆಜ್ ಇಷ್ಟ ಪಡುವವರು ಈ ಬಿರಿಯಾನಿಯು ಫೇವರಿಟ್ ಡಿಶ್ ಆಗಿರುತ್ತದೆ. ಘಮ್ ಎನಿಸುವ ಮಸಾಲೆ ಹಾಕಿ ಮಾಡುವ ಈ ಬಿರಿಯಾನಿಯು ವಿದೇಶದಲ್ಲಿ ಜನಪ್ರಿಯತೆಯನ್ನ ಗಳಿಸಿಕೊಂಡಿದೆ.ಭಾರತದಲ್ಲಿ ವಿವಿಧ ಬಗೆಯ ಬಿರಿಯಾನಿಗಳು ಲಭ್ಯವಿದ್ದು, ಆದರೆ ವಿದೇಶದಲ್ಲಿ ಈ ಇಂಡಿಯನ್ ಬಿರಿಯಾನಿಯು ಸಿಕ್ಕಾಪಟ್ಟೆ ಫೇಮಸ್ ಆಗಿದೆ.
* ತಂದೂರಿ ಚಿಕನ್ : ಚಿಕನ್ ಗೆ ಮಸಾಲೆಗಳನ್ನು ಹಾಕಿ ಗ್ರಿಲ್ ಮಾಡಲಾಗುತ್ತದೆ. ನೋಡುವುದಕ್ಕೆ ಆಕರ್ಷಕವಾಗಿದ್ದು, ಘಮ್ ಎನಿಸುವ ಮಸಾಲೆಗಳಿಂದ ಬಾಯಲ್ಲಿ ನೀರೂರಿಸುವ ಈ ತಂದೂರಿ ಚಿಕನ್ ಭಾರತೀಯ ಎಲ್ಲಾ ಹೋಟೆಲ್ ಗಳಲ್ಲಿ ದೊರೆಯುತ್ತದೆ. ವಿದೇಶಿಗರು ಕೂಡ ಈ ತಂದೂರಿ ಚಿಕನ್ ಇಷ್ಟ ಪಡುತ್ತಾರೆ. ಹೀಗಾಗಿ ಈ ತಂದೂರಿ ಚಿಕನ್ ಬೇರೆ ದೇಶಗಳಲ್ಲಿ ಜನಪ್ರಿಯವಾಗಿದೆ.
* ಚಾಟ್ : ಸಂಜೆಯಾದರೆ ಭಾರತದಲ್ಲಿ ಬೀದಿ ಬೀದಿಗಳಲ್ಲಿ ಚಾಟ್ ಅಂಗಡಿಗಳು ಕಾಣ ಸಿಗುತ್ತವೆ. ಇಲ್ಲಿ ವಿವಿಧ ಬಗೆಯ ರುಚಿಕರವಾದ ಚಾಟ್ ಗಳು ದೊರೆಯುತ್ತದೆ. ಭಾರತದಲ್ಲಿರುವ ಚಾಟ್ ಗಳ ರುಚಿಯು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಆದರೆ ಈ ಚಾಟ್ ವಿದೇಶಿಗರಿಗೆ ಪ್ರಿಯ ಎಂದರೆ ನೀವು ನಂಬಲೇಬೇಕು. ಹೀಗಾಗಿ ವಿದೇಶದಲ್ಲಿಯು ಭಾರತೀಯ ಚಾಟ್ ಗಳಿಗೆ ಬಾರಿ ಬೇಡಿಕೆಯಿದೆ.
* ಸಮೋಸ : ಸಂಜೆಯ ಟೀ ಕಾಫಿ ಜೊತೆಗೆ ಸಮೋಸ ಕೊಟ್ಟರೆ ಭಾರತೀಯರು ಬೇಡ ಎನ್ನುವುದೇ ಇಲ್ಲ. ಆದರೆ ವಿದೇಶದಲ್ಲಿ ಭಾರತದ ಈ ಕರಿದ ತಿಂಡಿ ಸಮೋಸ ತುಂಬಾನೇ ಫೇಮಸ್ ಆಗಿದೆ. ಆಲೂಗಡ್ಡೆಯ ಪಲ್ಯದೊಂದಿಗೆ ಮಸಾಲೆ ಘಮವು ಮತ್ತೆ ಮತ್ತೆ ತಿನ್ನುವಂತೆ ಮಾಡುತ್ತಾರೆ. ಎಣ್ಣೆಯಲ್ಲಿ ಕರಿದ ಈ ಸಮೋಸವು ರುಚಿಕರವಾಗಿದ್ದು ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾದ ತಿನಿಸಾಗಿದೆ.
* ದೋಸೆ : ಭಾರತೀಯ ಬೆಳಗ್ಗಿನ ತಿಂಡಿಗೆ ದೋಸೆಯಿದ್ದರೆ ಹೊಟ್ಟೆ ಗಟ್ಟಿಯಾಗುತ್ತದೆ. ವೈರಂಟಿ ದೋಸೆಗಳು ಭಾರತದಲ್ಲಿ ಲಭ್ಯವಿದ್ದು , ಚಟ್ನಿ ಹಾಗೂ ಸಾಂಬಾರ್ ಜೊತೆಗೆ ಈ ದೋಸೆ ಸವಿಯುತ್ತಿದ್ದರೆ ನಾಲಿಗೆಗೆ ಖುಷಿಯೋ ಖುಷಿ. ಭಾರತೀಯರು ಇಷ್ಟ ಪಟ್ಟು ಸೇವಿಸುವ ಈ ದೋಸೆಯನ್ನು ವಿದೇಶಿಗರಿಗೂ ಇಷ್ಟವಂತೆ. ಹೀಗಾಗಿ ವಿದೇಶದಲ್ಲಿ ಈ ದೋಸೆಯು ತುಂಬಾನೇ ಜನಪ್ರಿಯತೆಯನ್ನು ಗಳಿಸಿಕೊಂಡಿದೆ.
ಇದನ್ನೂ ಓದಿ: ಮುಖದ ಕಾಂತಿ ಹೆಚ್ಚಲು ಮೊಸರು ಬಳಸುವುದು ಹೇಗೆ?
* ಬಟರ್ ಚಿಕನ್ : ಪಂಜಾಬಿನ ಜನಪ್ರಿಯ ಗ್ರೇವಿಯಾಗಿರುವ ಬಟರ್ ಚಿಕನ್ ಅನ್ನು ತಿಂದವರೇ ಇದರ ರುಚಿ ಬಲ್ಲರು. ಚಪಾತಿ, ನಾನ್, ರೋಟಿ ಜೊತೆಗೆ ಈ ಬಟರ್ ಚಿಕನ್ ಕಾಂಬಿನೇಶನ್ ವಾವ್ ಎನ್ನುವಂತೆ ಇರುತ್ತದೆ. ಭಾರತೀಯರು ಇಷ್ಟ ಪಟ್ಟು ಸವಿಯುವ ಈ ಬಟರ್ ಚಿಕನ್ ವಿದೇಶಿಗರಿಗಂತೂ ಬಲು ಪ್ರಿಯ. ಹೀಗಾಗಿ ಪಂಜಾಬಿನ ಈ ಬಟರ್ ಚಿಕನ್ ವಿದೇಶದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದೆ.
* ದಾಲ್ ಮಖನಿ : ಈ ದಾಲ್ ಮಖನಿ ಸಸ್ಯಹಾರಿಗಳ ಫೇವರಿಟ್ ಡಿಶ್ ಎಂದರೆ ತಪ್ಪಾಗಲ್ಲ. ಉದ್ದಿನ ಬೇಳೆಯಲ್ಲಿ ಮಾಡುವ ಈ ದಾಲ್ ಮಖನಿ ಎಂಬ ಅನ್ನ, ಚಪಾತಿ, ರೋಟಿಯ ಸವಿದರೆ ರುಚಿಯು ಮತ್ತಷ್ಟು ಹೆಚ್ಚಾಗುತ್ತದೆ. ಉತ್ತರ ಭಾರತದ ಅಡುಗೆಯಲ್ಲಿ ಈ ದಾಲ್ ಮಖನಿ ಇದ್ದೆ ಇರುತ್ತದೆ. ಸ್ವಾದಿಷ್ಟವಾದ ಈ ದಾಲ್ ಮಖನಿಯಿ ವಿದೇಶದಲ್ಲಿಯು ಜನಪ್ರಿಯವಾಗಿರುವ ಭಾರತೀಯ ಆಹಾರಗಳಲ್ಲಿ ಒಂದಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ