International Day of the Tropics 2022: ಪ್ರತೀ ವರ್ಷ ಜೂನ್ 29ರಂದು ಈ ದಿನವನ್ನು ಆಚರಿಸಲಾಗುತ್ತದೆ. ಈ ನೆಪದಲ್ಲಿ ಉಷ್ಣವಲಯದ ಪ್ರದೇಶಗಳು ಎದುರಿಸುತ್ತಿರುವ ಸಮಸ್ಯೆ ಸವಾಲುಗಳ ಬಗ್ಗೆ ಚರ್ಚಿಸಲಾಗುತ್ತದೆ. ಕರ್ನಾಟಕದಲ್ಲಿ ಉತ್ತರ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಕರ್ಕಾಟಕ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ಸಮಭಾಜಕದ ಸುತ್ತಮುತ್ತಲಿನ ಪ್ರದೇಶಗಳು ಉಷ್ಣವಲಯದ ಪ್ರದೇಶಗಳು. ಉಷ್ಣವಲಯದ ಪ್ರದೇಶವು ನೇರ ಸೂರ್ಯನ ಬೆಳಕನ್ನು ಪಡೆಯುತ್ತದೆ, ಇದು ಅತ್ಯಂತ ಬೆಚ್ಚಗಿರುತ್ತದೆ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಈ ಪ್ರದೇಶದಲ್ಲಿ ಮಳೆಯೂ ಬೀಳುತ್ತದೆ. ಹಾಗಾಗಿಯೇ ಆರ್ದ್ರ ವಾತಾವರಣ ಇಲ್ಲಿರಲು ಕಾರಣ. ಶೇ. 40 ರಷ್ಟು ಜನಸಂಖ್ಯೆ ಮತ್ತು ಶೇ. 80 ರಷ್ಟು ಜೀವವೈವಿಧ್ಯವನ್ನು ಈ ಪ್ರದೇಶಗಳು ಹೊಂದಿವೆ. ಈ ವರ್ಷದ ಈ ದಿನದ ಥೀಮ್, ಉಷ್ಣವಲಯದ ಪ್ರದೇಶಗಳ ಮಹತ್ವ ಮತ್ತು ಅವುಗಳು ಎದುರಿಸುತ್ತಿರುವ ಸಮಾಜೋಆರ್ಥಿಕ ಸವಾಲುಗಳು.
ಆಸ್ಟ್ರೇಲಿಯಾದ ಜೇಮ್ಸ್ ಕ್ರೂಕ್ ವಿಶ್ವವಿದ್ಯಾಲಯವು 11 ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಜೂನ್ 29, 2014 ರಂದು ಉಷ್ಣವಲಯದ ವರದಿಯನ್ನು ಸಲ್ಲಿಸಿತ್ತು. ಉಷ್ಣವಲಯದ ಜನಜೀವನದಲ್ಲಿ ಸುಧಾರಣೆ ಸಾಧ್ಯವೇ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಈ ಸಂಶೋಧನೆಯ ಉದ್ದೇಶವಾಗಿತ್ತು. 2050 ರ ವೇಳೆಗೆ ಉಷ್ಣವಲಯದ ಜನಸಂಖ್ಯೆಯು ಶೇ. 40 ರಿಂದ ಶೇ. 50ಕ್ಕೆ ಏರಬಹುದು ಎಂದು ಅಂದಾಜಿಸಲಾಗಿತ್ತು.
ಇದನ್ನೂ ಓದಿ : National Wine Day: ಮೈಲ್ಸ್ ವೈನ್ ಮಾಯಾ ವೈನ್ ಮತ್ತು ಕಾರೇಹಣ್ಣಿನ ಮಧು ವೈಎನ್
ಸ್ಟೇಟ್ ಆಫ್ ದಿ ಟ್ರಾಪಿಕ್ಸ್ ವರದಿಯು, ಆರ್ಥಿಕ ಪ್ರಗತಿಗೋಸ್ಕರ ಅರಣ್ಯನಾಶ ಹೆಚ್ಚುತ್ತಿದೆ. ಅನೇಕ ಸಸ್ಯ, ಪ್ರಾಣಿಪ್ರಬೇಧಗಳ ನಾಶವುಂಟಾಗುತ್ತಿದೆ ಎಂದು ಹೇಳಿತ್ತು. ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಈ ವರದಿಯನ್ನು ಗಮನಿಸಿ, ಜೂನ್ 14, 2016 ರಂದು ನಿರ್ಣಯವನ್ನು ಅಂಗೀಕರಿಸಿ ಜೂನ್ 29 ಅನ್ನು ಉಷ್ಣವಲಯಗಳ ಅಂತಾರಾಷ್ಟ್ರೀಯ ದಿನವೆಂದು ಘೋಷಿಸಿತು.
ಹವಾಮಾನದ ದೃಷ್ಟಿಯಿಂದ ನೋಡಿದರೆ, ಉಷ್ಣವಲಯದಲ್ಲಿ ಭೂಮಿಯ ಉಳಿದ ಭಾಗಗಳಿಗಿಂತ ಹೆಚ್ಚು ಮತ್ತು ನೇರವಾದ ಸೂರ್ಯನ ಬೆಳಕು ಬೀಳುತ್ತದೆ. ಆದ್ದರಿಂದ ಸಾಮಾನ್ಯವಾಗಿ ಈ ಪ್ರದೇಶ ಬಿಸಿಯಾಗಿರುತ್ತದೆ ಮತ್ತೆ ಅಷ್ಟೇ ಪ್ರಮಾಣದಲ್ಲಿ ಮಳೆ ಬೀಳುವುದರಿಂದ ತೇವವೂ ಆಗಿರುತ್ತದೆ.
ಇದನ್ನೂ ಓದಿ : Global Running Day 2022 : ನಿಮ್ಮ ಕಾಲುಗಳೇ ದೇಹದ ಇನ್ನೊಂದು ಹೃದಯ
ಈ ಹಿನ್ನೆಲೆಯಲ್ಲಿ ವಿವಿಧ ಸಂಸ್ಥೆಗಳು ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕೋಸ್ಕರ, ವಿಚಾರ ಸಂಕಿರಣ, ಉಪನ್ಯಾಸ ಚರ್ಚೆಗಳನ್ನು ಹಮ್ಮಿಕೊಂಡಿರುತ್ತವೆ. ಈ ದಿನ ಇಂದಿಗಷ್ಟೇ ಸೀಮಿತವಾಗದೆ ಸದಾ ಈ ಬಗ್ಗೆ ಹೆಚ್ಚು ಚರ್ಚಿಸಬೇಕು ಪರಿಸರದ ಕುರಿತು ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎನ್ನುತ್ತಾರೆ ಪರಿಸರವಾದಿಗಳು.