
ಚಿನ್ನ (gold), ಉಕ್ಕು, ಕಬ್ಬಿಣ (iron) ಸೇರಿದಂತೆ ಖನಿಜ (mineral) ಅದಿರುಗಳನ್ನು (ore) ಭೂಮಿಯಿಂದ (earth) ಹೊರ ತೆಗೆಯುವ ಸಲುವಾಗಿ ಅಪಾಯಕಾರಿ ಸ್ಫೋಟಕಗಳನ್ನು (explosive) ಬಳಸಿ ಭೂಮಿಯನ್ನು ಆಳವಾಗಿ ಅಗೆಯುವ ಮೂಲಕ ಗಣಿಗಾರಿಕೆಯನ್ನು ಮಾಡುತ್ತಾರೆ. ಈ ಗಣಿಗಾರಿಕೆ (mining) ಅಪಾಯಕಾರಿ ಉದ್ಯಮವಾಗಿದ್ದು, ಇದರಿಂದ ಪರಿಸರ (environment) ಹಾಗೂ ಜೀವಸಂಕುಲದ (biodiversity) ಮೇಲೆ ಸಾಕಷ್ಟು ಹಾನಿ (damage) ಮತ್ತು ಅಪಾಯ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಈ ಸ್ಫೋಟಕಗಳ ಜೊತೆಗೆ ಭೂಮಿಯ ಒಡಲಲ್ಲಿ ಅಡಗಿರುವ ನೆಲಬಾಂಬ್‌ಗಳಂತಹ ಯುದ್ಧಕಾಲದ ಅವಶೇಷಗಳ ಅಸ್ತಿತ್ವವು ಜೀವ ಸಂಕುಲಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಇದು ಸುರಕ್ಷತೆ ಮತ್ತು ಆರೋಗ್ಯ ಎರಡಕ್ಕೂ ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಗಣಿಗಾರಿಕೆಯಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟುವ ಸಲುವಾಗಿ ಹಾಗೂ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್ 04 ರಂದು ಅಂತಾರಾಷ್ಟ್ರೀಯ ಗಣಿ ಜಾಗೃತಿ ದಿನವನ್ನು (International Mine Awareness Day) ಆಚರಣೆ ಮಾಡಲಾಗುತ್ತದೆ. ಈ ವಿಶೇಷ ದಿನದ ಇತಿಹಾಸವನ್ನು ತಿಳಿಯಿರಿ.
ನೆಲಬಾಂಬ್‌ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಗಣಿ ಕಾರ್ಯಾಚರಣೆ ಮತ್ತು ಅವುಗಳ ನಿರ್ಮೂಲನೆಗಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಡಿಸೆಂಬರ್ 8, 2005 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಘೋಷಿಸಿತು ಅಂತರಾಷ್ಟ್ರೀಯ ಗಣಿ ಜಾಗೃತಿ ದಿನದ ಆಚರಣೆಯನ್ನು ಘೋಷಿಸಿತು. ಮೊದಲ ಬಾರಿಗೆ ಈ ದಿನವನ್ನು ಏಪ್ರಿಲ್ 4, 2006 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಏಪ್ರಿಲ್ 04 ರಂದು ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಅಪಾಯಕಾರಿ ಗಣಿಗಳು ಮತ್ತು ಯುದ್ಧ ಸ್ಫೋಟಕ ಅವಶೇಷಗಳು ಜನರ ಸುರಕ್ಷತೆ, ಆರೋಗ್ಯ ಮತ್ತು ಜೀವನಕ್ಕೆ ಗಂಭೀರ ಬೆದರಿಕೆಯನ್ನುಂಟುಮಾಡುವ ಅಂಶಗಳಾಗಿವೆ. ಈ ಅಂಶಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: ಪುರುಷರಿಗೆ ಈ ಬೇಸಿಗೆಯಲ್ಲಿ ಯಾವ ಅಂಡರ್‌ವೇರ್ ಉತ್ತಮ? ಒಳ ಉಡುಪಿನ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡದಿರಿ
ಪ್ರತಿ ವರ್ಷ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ (UN) ಪ್ರಧಾನ ಕಚೇರಿಯಲ್ಲಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಗಣಿಗಳು, ಯುದ್ಧದ ಸ್ಫೋಟಕ ಅವಶೇಷಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಮಲ್ಟಿಮೀಡಿಯಾ ಪ್ರದರ್ಶನವನ್ನು ಆಯೋಜಿಸುತ್ತದೆ. ಮತ್ತು ಗಣಿಗಳು, ಸ್ಫೋಟಕಗಳು ಜೀವ ಸಂಕುಲದ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುವ ದೇಶಗಳಲ್ಲಿ ರಾಷ್ಟ್ರೀಯ ಗಣಿ-ಕ್ರಿಯೆ ಸಾಮರ್ಥ್ಯವನ್ನು ಸ್ಥಾಪಿಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶವನ್ನು ಕೂಡಾ ಹೊಂದಿದೆ. ಅಪಾಯಕಾರಿ ಸ್ಫೋಟಕಗಳು ಈ ಪ್ರಪಂಚದಾದ್ಯಂತದ ಜನ ಸಮುದಾಯಗಳಿಗೆ ಒಡ್ಡುವ ಅಪಾಯಗಳನ್ನು ಎತ್ತಿ ತೋರಿಸುವ ಮೂಲಕ, ಗಣಿ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳು ಮತ್ತು ಹೆಚ್ಚಿನ ಜಾಗರೂಕತೆಯನ್ನು ಉತ್ತೇಜಿಸುವ ಮಹತ್ವವನ್ನೂ ಹೊಂದಿದೆ.
ಹೀಗೆ ನೆಲಬಾಂಬ್‌ಗಳು ಮತ್ತು ಯುದ್ಧದ ಸ್ಫೋಟಕ ಅವಶೇಷಗಳನ್ನು ತೆಗೆದುಹಾಕಲು ಹಾಗೂ ಗಣಿಗಾರಿಕೆಯ ಅಪಾಯಗಳನ್ನು ಕಡಿಮೆ ಮಾಡಿಸುವ ಮೂಲಕ, ಅಂತರಾಷ್ಟ್ರೀಯ ಗಣಿ ಜಾಗೃತಿ ದಿನವು ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಶಾಂತಿಯನ್ನು ನಿರ್ಮಿಸಲು ಕೊಡುಗೆ ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ