International Yoga Day 2024 Wishes : ನಿಮ್ಮ ಪ್ರೀತಿ ಪಾತ್ರರಿಗೆ ಅಂತಾರಾಷ್ಟ್ರೀಯ ಯೋಗ ದಿನದಂದು ಹೀಗೆ ಶುಭಾಶಯ ತಿಳಿಸಿ
ದೈಹಿಕ ಹಾಗೂ ಮಾನಸಿಕ ಆರೋಗ್ಯವು ಉತ್ತಮವಾಗಿರಲು ಯೋಗವು ಬಲು ಪ್ರಯೋಜನಕಾರಿ. ಹೀಗಾಗಿ ಪ್ರತಿವರ್ಷ ಜೂನ್ 21ಕ್ಕೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿಕೊಂಡು ಬರಲಾಗುತ್ತದೆ. ಈ ಬಾರಿಯ ಯೋಗ ದಿನದಂದು ನಿಮ್ಮ ಗೆಳೆಯರು, ಪ್ರೀತಿಪಾತ್ರರಿಗೆ ಶುಭ ಕೋರಲು ಶುಭಾಶಯಗಳು ಇಲ್ಲಿವೆ.
ಯೋಗ ಬಲ್ಲವನಿಗೆ ರೋಗವಿಲ್ಲ ಎನ್ನುವ ಮಾತಿದೆ. ಈ ಮಾತಿನಂತೆ ದಿನನಿತ್ಯ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 2015ರಿಂದ ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಈ ದಿನವು ಯೋಗದ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರುವ ಉದ್ದೇಶವನ್ನು ಹೊಂದಿದೆ. ಈ ಬಾರಿ ಹತ್ತನೇಯ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ನೀವು ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶಗಳನ್ನು ಕಳುಹಿಸುವ ಮೂಲಕ ಶುಭಾಶಯಗಳನ್ನು ಕೋರಿ ಅರ್ಥಪೂರ್ಣವಾಗಿ ಈ ದಿನವನ್ನು ಆಚರಿಸಬಹುದು.
- ಯೋಗವು ಒಂದು ಬೆಳಕು, ಅದು ಒಮ್ಮೆ ಬೆಳಗಿದರೆ ಎಂದಿಗೂ ನಿಮ್ಮನ್ನು ಕತ್ತಲಲ್ಲಿರಲು ಬಿಡುವುದಿಲ್ಲ. ಎಲ್ಲರಿಗೂ ವಿಶ್ವ ಯೋಗ ದಿನದ ಶುಭಾಶಯಗಳು.
- ಯೋಗದಿಂದ ಮನಸ್ಸು ಉಲ್ಲಾಸವಾಗುತ್ತದೆ, ದೇಹಕ್ಕೆ ಚೈತನ್ಯವು ದೊರೆಯುತ್ತದೆ. ಈ ಮಹತ್ವದ ದಿನದಂದು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
- ಯೋಗವು ಖರ್ಚಿಲ್ಲದೆ ನಿಮಗೆ ಉತ್ತಮ ಆರೋಗ್ಯವನ್ನು ತರುತ್ತದೆ. ಹೀಗಾಗಿ ಆಸನಗಳನ್ನು ಮಾಡಿ ಆರೋಗ್ಯವನ್ನು ಕಾಪಾಡಿ, ನಿಮಗೂ ನಿಮ್ಮ ಕುಟುಂಬಕ್ಕೂ ವಿಶ್ವ ಯೋಗ ದಿನದ ಶುಭಾಶಯಗಳು.
- ದಿನನಿತ್ಯ ಯೋಗ ಮಾಡಿ ಆರೋಗ್ಯ ವೃದ್ಧಿಸಿ, ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
- ನಿಮ್ಮ ಬದುಕಿಗೆ ಮತ್ತಷ್ಟು ವರ್ಷಗಳನ್ನು ಕೂಡಿಸಲು ಮತ್ತು ನಿಮ್ಮ ಭವಿಷ್ಯಕ್ಕೆ ಸುಂದರ ಬದುಕನ್ನು ನೀಡಲು ನಿತ್ಯ ಯೋಗ ಮಾಡುವ ಅಭ್ಯಾಸವಿರಲಿ. ಈ ವಿಶೇಷ ದಿನದಂದು ನಿಮಗೂ ನಿಮ್ಮ ಕುಟುಂಬಕ್ಕೂ ವಿಶ್ವ ಯೋಗ ದಿನದ ಹಾರ್ಥಿಕ ಶುಭಾಶಯಗಳು.
- ಎಲ್ಲರಿಗೂ ವಿಶ್ವ ಯೋಗ ದಿನದ ಶುಭಾಶಯಗಳು, ನೀವು ಜೀವನದ ಚಿಂತೆಗಳನ್ನು ತೊಡೆಯಲು ಬಯಸಿದರೆ ದಿನನಿತ್ಯ ಯೋಗ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
- ಜೀವನದಲ್ಲಿ ಸಂತೋಷ ಮತ್ತು ಆರೋಗ್ಯದ ಜೊತೆಗೆ ಸ್ನೇಹಿತರಾಗಲು ಬಯಸಿದರೆ ನಿತ್ಯ ಯೋಗ ಮತ್ತು ಧ್ಯಾನವನ್ನು ಮಾಡಿ. ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:39 pm, Tue, 18 June 24