ಖಗೋಳಶಾಸ್ತ್ರಜ್ಞ ಜಯಂತ್‌ ನಾರ್ಲಿಕರ್‌ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುವುದರ ಹಿಂದಿದೆ ಆಸಕ್ತಿದಾಯಕ ಕಥೆ

ಹಿರಿಯ ಖಗೋಳಶಾಸ್ತ್ರಜ್ಞ, ಪ್ರಸಿದ್ಧ ಬರಹಗಾರ ಜಯಂತ್‌ ನಾರ್ಲಿಕರ್‌ ಮಂಗಳವಾರ (ಮೇ 20) ಬೆಳಿಗ್ಗೆ ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ಡಾ. ನಾರ್ಲಿಕರ್‌ ಬಹರಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ತಮ್ಮ ಮರಾಠಿ ವೈಜ್ಞಾನಿಕ ಕಾದಂಬರಿಗಳಿಗೆ ಹೆಸರುವಾಸಿಯಾದ ಇವರು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುವುದರ ಹಿಂದೆಯೂ ಒಂದು ಇಂಟರೆಸ್ಟಿಂಗ್‌ ಕಥೆಯಿದೆ. ಅದೇನೆಂಬುದನ್ನು ನೋಡೋಣ ಬನ್ನಿ.

ಖಗೋಳಶಾಸ್ತ್ರಜ್ಞ ಜಯಂತ್‌ ನಾರ್ಲಿಕರ್‌ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುವುದರ ಹಿಂದಿದೆ ಆಸಕ್ತಿದಾಯಕ ಕಥೆ
ಜಯಂತ್‌ ನಾರ್ಲಿಕರ್

Updated on: May 20, 2025 | 1:22 PM

ವಿಜ್ಞಾನ (Science) ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು, ಹೊಸ ಹೊಸ ಆವಿಷ್ಕಾರಗಳನ್ನು ಜಗತ್ತಿಗೆ ಪರಿಚಯಿಸಿದ ಖಗೋಳಶಾಸ್ತ್ರಜ್ಞ (Astrophysicist)  ಜಯಂತ್‌ ನಾರ್ಲಿಕರ್ (Jayant Narlikar)  ಇಂದು (ಮೇ 20)  ಪುಣೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಖಗೋಳಶಾಸ್ತ್ರಜ್ಞ ಮಾತ್ರವಲ್ಲದೆ ಇವರು ಬರಹಗಾರರಾಗಿಯೂ ಗುರುತಿಸಿಕೊಂಡವರು. ಬರಹಗಳ ಮೂಲಕ ಸಂಕೀರ್ಣವಾದ ವೈಜ್ಞಾನಿಕ ವಿಷಯಗಳನ್ನು ಸರಳ, ಸುಂದರ ಭಾಷೆಯಲ್ಲಿ ಪ್ರಸ್ತುತಪಡಿಸುವ ಅವರ ಶೈಲಿ ತುಂಬಾನೇ ವಿಶಿಷ್ಟವಾಗಿತ್ತು. ಖಗೋಳಶಾಸ್ತ್ರಜ್ಞನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಇವರು ಸಾಹಿತ್ಯ  ಕ್ಷೇತ್ರಕ್ಕೆ ಕಾಲಿಡುವುದರ ಹಿಂದೆಯೂ ಒಂದು ಕಾರಣವಿತ್ತಂತೆ. ಆ ಕಥೆ ಏನೆಂಬುದನ್ನು ತಿಳಿಯೋಣ ಬನ್ನಿ.

ಖಗೋಳಶಾಸ್ತ್ರಜ್ಞ  ಜಯಂತ್‌ ನಾರ್ಲಿಕರ್ ಬರಹಗಾರರಾಗುವುದ ಹಿಂದಿನ ಆಸಕ್ತಿದಾಯಕ ಕಥೆ:

ಜಯಂತ್‌ ನಾರ್ಲಿಕರ್ ಅವರಿಗೆ ತಮ್ಮ ವಿಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಬೇಕೆನ್ನುವ ವಿಶೇಷ ಬಯಕೆಯಿತ್ತು ಜೊತೆಗೆ ಅವರಿಗೆ ಮಕ್ಕಳಲ್ಲಿ ವಿಜ್ಞಾನದ ಅರಿವನ್ನು ಮೂಡಿಸಬೇಕು, ವಿಜ್ಞಾನ ಕಬ್ಬಿಣದ ಕಡಲೆಕಾಯಿಯಲ್ಲ ಎಂಬುದನ್ನು ತಿಳಿಸಬೇಕು ಎಂಬ ಉದ್ದೇಶದಿಂದ  ವಿಜ್ಞಾನದ ವಿಷಯಗಳನ್ನು ಸಂಕೀರ್ಣವಾದ ಭಾಷೆಯಲ್ಲಿ ಕಲಿಸುವ ಬದಲು, ಎಲ್ಲರೂ ಅರ್ಥ ಮಾಡಿಕೊಳ್ಳಲು ಸುಲಭವಾದ ಭಾಷೆಯಲ್ಲಿ ಕಲಿಸಲು ಅವರು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟರು.

ಖಗೋಳಶಾಸ್ತ್ರದಲ್ಲಿ ತುಂಬಾನೇ ಆಸಕ್ತಿಯನ್ನು ಹೊಂದಿದ್ದ ಡಾ. ನಾರ್ಲಿಕರ್ ತಮ್ಮ ಬರಹಗಳ ಮೂಲಕವೇ ವಿಜ್ಞಾನದ ಈ ವಿಷಯಗಳನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಸರಳ ಮತ್ತು ಸುಲಭ ಭಾಷೆಯಲ್ಲಿ ಅರ್ಥ ಮಾಡಿಸುವಂತೆ ಮಾಡಿದರು. ವಿಜ್ಞಾನವು ಸಂಕೀರ್ಣವಲ್ಲ ಬದಲಿಗೆ ಸರಳವಾಗಿದೆ ಎಂಬುದನ್ನು ಎಲ್ಲರಿಗೂ ತಮ್ಮ ಬರಹಗಳ ಮೂಲಕ ಮನದಟ್ಟು ಮಾಡಿದರು.

ಇದನ್ನೂ ಓದಿ
ಸಂಸ್ಥೆಗಳ ಏಳಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಅಪಾರ
ವೈದ್ಯರು ಬಿಳಿ, ವಕೀಲರು ಕಪ್ಪು ಕೋಟು ಧರಿಸೋದೇಕೆ ಗೊತ್ತಾ?
Video: ಐಸ್ ಆಪಲ್ ಮಿಲ್ಕ್‌ಶೇಕ್ ಎಂದಾದರೂ ಟೇಸ್ಟ್​​​​ ಮಾಡಿದ್ದೀರಾ?
ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡ ಪ್ರಾಣಿ ಯಾವುದು?

ವಿಜ್ಞಾನದ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಲುವುದು ಮತ್ತು ಜನರಲ್ಲಿ ವಿಜ್ಞಾನದ ಬಗ್ಗೆ ಒಲವನ್ನು ಮೂಡಿಸುವುದು ಅವರ ಬರವಣಿಗೆಯ ಉದ್ದೇಶವಾಗಿತ್ತು. ದಿ ಗಿಫ್ಟ್‌ ಆಫ್‌ ದಿ ಯಕ್ಷಸ್‌, ಬ್ಲ್ಯಾಕ್‌ ಹೋಲ್‌, ಗಂಗಾಧರಪಂತ್ಸ್‌ ಪಾಣಿಪತ್‌, ಕಾಮೆಟ್‌, ರಿಟರ್ನ್ಸ್‌, ಇನ್ವಿಸಿಬಲ್‌ ಕ್ರಿಯೇಷನ್‌, ದಿ ಲಾಸ್ಟ್‌ ಆಪ್ಷನ್‌ ಇವೆಲ್ಲಾ ಡಾ. ನಾರ್ಲಿಕರ್ ಅವರ ಪ್ರಮುಖ  ವೈಜ್ಞಾನಿಕ ಕಾದಂಬರಿಗಳಾಗಿವೆ.  ಇವರು ವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಪಾರವಾದ ಕೊಡುಗೆಗಳಿಗೆ ಪದ್ಮಭೂಷಣ, ಮಹಾರಾಷ್ಟ್ರ ಭೂಷಣ, ಪದ್ಮವಿಭೂಷಣ ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಇದನ್ನೂ ಓದಿ: ವೈದ್ಯರು ಬಿಳಿ, ವಕೀಲರು ಕಪ್ಪು ಕೋಟು ಧರಿಸೋದೇಕೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ

ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ:

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಭಾರತಕ್ಕೆ ಹಿಂದಿರುಗಿದ ನಂತರ, ಡಾ. ಜಯಂತ್ ನಾರ್ಲಿಕರ್ 1972 ಮತ್ತು 1989 ರ ನಡುವೆ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ನಲ್ಲಿ ಕೆಲಸ ಮಾಡಿದರು. ಈ ಅವಧಿಯಲ್ಲಿ, ಅವರು 1988 ರಲ್ಲಿ IUCAA ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು ನಂತರ ಅದರ ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಡಾ. ನಾರ್ಲಿಕರ್ ಅವರು ವಿಶ್ವವಿಜ್ಞಾನಕ್ಕೆ ನೀಡಿದ ವಿಶೇಷ ಕೊಡುಗೆಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲೂ ಮುಂದಿದ್ದರು:

ವೈಜ್ಞಾನಿಕ ಸಂಶೋಧನೆಯ ಜೊತೆಗೆ, ಅವರು ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರು ವಿಜ್ಞಾನದ ವಿಷಯದ ಬಗ್ಗೆ ಅನೇಕ ಪುಸ್ತಕಗಳು ಮತ್ತು ಲೇಖನಗಳನ್ನು ಬರೆದಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ