ಮಳೆಗಾಲದಲ್ಲಿ ಮಲೆನಾಡಿನ ಪ್ರವಾಸ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

| Updated By: ನಯನಾ ರಾಜೀವ್

Updated on: Jul 21, 2022 | 12:34 PM

ಮಳೆ ಅಬ್ಬರ ಕಡಿಮೆಯಾಗುತ್ತಿದ್ದಂತೆ ಉತ್ತರ ಕರ್ನಾಟಕದ ಮತ್ತು ದಕ್ಷಿಣ ಕರ್ನಾಟಕದ ಜನರು ಮಲೆನಾಡಿನೆಡೆಗೆ ಪ್ರವಾಸಕ್ಕೆ ಹೋಗಲು ಯಾವಾಗಲೂ ಕಾತರಾಗಿರುತ್ತಾರೆ.

ಮಳೆಗಾಲದಲ್ಲಿ ಮಲೆನಾಡಿನ ಪ್ರವಾಸ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
Dr Ravikiran Patwardhan
Follow us on

ಮಳೆ ಅಬ್ಬರ ಕಡಿಮೆಯಾಗುತ್ತಿದ್ದಂತೆ ಉತ್ತರ ಕರ್ನಾಟಕದ ಮತ್ತು ದಕ್ಷಿಣ ಕರ್ನಾಟಕದ ಜನರು ಮಲೆನಾಡಿನೆಡೆಗೆ ಪ್ರವಾಸಕ್ಕೆ ಹೋಗಲು ಯಾವಾಗಲೂ ಕಾತರಾಗಿರುತ್ತಾರೆ. ಮಳೆಗಾಲದ ನೈಸರ್ಗಿಕ ದೃಶ್ಯಗಳು ತುಂಬಿದ ಹೊಳೆ ಕೊಳ್ಳಗಳು ಕೆರೆಗಳು,ಜಲಪಾತಗಳು ಮಲೆನಾಡಿನೆಡೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಈ ರೀತಿಯಾದಂತಹ ಒಂದು ಪರಂಪರೆ ಹಲವು ವರ್ಷಗಳ ಹಿಂದೆ ಡಾ ಶಿವರಾಜಕುಮಾರ ನಟನೆಯ ನಮ್ಮೂರ ಮಂದಾರ ಹೂವೆ ಚಲನಚಿತ್ರದ ನಂತರ ಇದು ಹೆಚ್ಚಾಯಿತು. ಹೀಗೆ ಪ್ರವಾಸಕ್ಕೆ ಬಂದವರ ಕಹಿ ಅನುಭವಗಳು ಹಲವು.

ಮಲೆನಾಡಿನ ಮಳೆಯ ವಾತಾವರಣದಲ್ಲಿ ಪ್ರವಾಸಕ್ಕೆ ಬರುವಾಗ ಕೆಲವೊಂದಿಷ್ಟು ಜಾಗೃತೆಯನ್ನು ತೆಗೆದುಕೊಂಡು ಬರುವುದು ಸೂಕ್ತ, ಮುಖ್ಯವಾಗಿ ಕಾಲಿಗೆ ಸಂಪೂರ್ಣ ಕಾಲನ್ನ ಮುಚ್ಚುವಂತಹ ಬೂಟು ಅವಶ್ಯ.

ಕೆಸರಿನ ಒಳಗೆ ಕಾಲು ಹೋದರು ಕಾಲಿಗೆ ಯಾವುದೇ ರೀತಿಯ ಹುಳಹುಪ್ಪಡಿಗಳು ತಾಗದಂತೆ ಇರುವಂತಹ ಪಾದತ್ರಾಣಗಳು ಮುಖ್ಯ. ಜೊತೆಗೆ ಮೈ,ಕೈಕಾಲನ್ನು ಸಂಪೂರ್ಣವಾಗಿ ಮುಚ್ಚುವಂತಹ ಬಟ್ಟೆಯ ಯೋಜನೆ ಬೇಕು.

ಜೋರಾದಂತಹ ಮಳೆ ಯಾವಾಗಲೂ ಬರಬಹುದು ಎಂಬ ಯೋಚನೆಯಲ್ಲಿ ಅದಕ್ಕೆ ಅವಶ್ಯವಿರುವ ಮಳೆಯ ರೇನ್ ಕೋಟ್​ಗಳನ್ನು ಇಟ್ಟುಕೊಳ್ಳುವುದು ಹೆಚ್ಚು ಸಮಂಜಸ. ಮಳೆಯ ಕಾರಣ ವಿದ್ಯುತ್ ಸಂಪರ್ಕ ಮತ್ತು ಮೊಬೈಲ್ ಸಂಪರ್ಕ ಯಾವಾಗಲೂ ಇಲ್ಲದಂತೆ ಆಗಬಹುದು ಎಂಬ ಯೋಚನೆ ಇರಲಿ.

ಕೆಲವು ಕಂಪನಿಗಳ ದೂರವಾಣಿ ವ್ಯವಸ್ಥೆಗಳು ಎಲ್ಲ ಭಾಗದಲ್ಲಿ ಇನ್ನು ತಲುಪಬೇಕಾಗಿದೆ ಕಾರಣ ಒಂದೇ ಕಂಪನಿಯ ದೂರವಾಣಿ ವ್ಯವಸ್ಥೆಯ ಮೇಲೆ ವಿಶ್ವಾಸವಿಡದೆ ಎರಡು ಕಂಪನಿಯ ದೂರವಾಣಿ ವ್ಯವಸ್ಥೆಗಳನ್ನು ಹೊಂದುವುದು ಸುಲಭದ ಸಂಗತಿ. ತಾವು ವೀಕ್ಷಿಸಲು ಹೋಗುವ ಸ್ಥಳದಿಂದ ಹೊರಡಲು ಕತ್ತಲೆಯಾದಲ್ಲಿ ಸೂಕ್ತವಾದಂತಹ ಬೆಳಕಿನ ವ್ಯವಸ್ಥೆ ತಮ್ಮಲ್ಲಿ ಇರುವುದು ಅವಶ್ಯ. ಬ್ಯಾಟರಿಗಳ ಜೊತೆಗೆ ಕಡ್ಡಿಪಟ್ಟಿಗೆ ಮೇಣದ ಬತ್ತಿಯ ಸಂಗ್ರಹ ತಮ್ಮಲ್ಲಿ ಬೇಕು.

ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ಜಾಗ ಇದ್ದಲ್ಲಿ ಮೂತ್ರ ಮಲ ವಿಸರ್ಜನೆಗೆ ಬೇಡ. ಯಾಕೆಂದರೆ ಇಲ್ಲಿ ಇರುವಂತಹ ಉಂಬಳದಂತಹ ಹುಳಗಳು ಮಳೆಗಾಲದಲ್ಲಿ ಅತಿ ಹೆಚ್ಚಿಗೆ ಇರುವುದರಿಂದ ಇದರ ಕಚ್ಚುವಿಕೆಯಿಂದ ರಕ್ತಸ್ರಾವ ಉಂಟಾಗಿ ಪ್ರವಾಸಿಗರು ದೊಡ್ಡ ತೊಂದರೆಗೆ, ಗಾಬರಿಗೆ ಒಳಗಾಗುವ ಸಂದರ್ಭಗಳು ಎದುರಾಗಬಹುದು . ಉಂಬಳದ ತೊಂದರೆಗೆ ತಂಬಾಕಿನ ಎಲೆ,ಉಂಬಳದಿದಾಗುವ ರಕ್ತಸ್ರಾವ ತಡೆಯಲು ಪಟಕದ ಪುಡಿ ಅವಶ್ಯ ಸಂಗ್ರಹದಲ್ಲಿ ಇರಲಿ.

ಇನ್ನೂ ಆಹಾರದ ಬಗ್ಗೆ ವಿಶೇಷ ಗಮನವಿರಲಿ.ಶುಚಿತ್ವ ಇರುವ ಹೊಟೆಲಳನ್ನು ಆರಿಸಿಕೊಳ್ಳಿ,ಅಥವಾ ಪಾರಂಪರಿಕ ಮಲೆನಾಡಿನ ಖಾನಾವಳಿ ಊಟದ ವ್ಯವಸ್ಥೆ ಬಗ್ಗೆ ಯೋಚಿಸಿ.

ಮಲೆನಾಡಿನ ಪಾರಂಪರಿಕ ತಂಬುಳಿ,ಚಕ್ಕೆಪೊಳಜ, ಕಟ್ನೆಸಾರು,ಹಸಿ,ಕುಡಿಯುವ ಸಾರು, ಕುಡಿಯುವ ಮಜ್ಜಿಗೆ, ಅಪ್ಪೆಹುಳಿ ಸವಿಯಲು ಮರೆಯಬೇಡಿ.ಬೆಳಗಿನ ಉಪಾಹಾರಕ್ಕೆ ತೆಳ್ಳವು, ಮೊಗಕಾಯಿ ದೋಸೆ ರುಚಿ ನೋಡಿ, ಆದರೂ ಮಳೆವಾತಾವರಣ ಇರುವುದರಿಂದ ಬಿಸಿ ಬಿಸಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಿ.

ಪ್ರವಾಸಿ ತಾಣಗಳಲ್ಲಿಯ ವ್ಯವಸ್ಥೆ ಗಳಿಗಿಂತ ಹತ್ತಿರವಿರುವ ಊರು,ನಗರದ ಆಹಾರದ ವ್ಯವಸ್ಥೆಗಳನ್ನು ಅವಲಂಬಿಸಿ.ಕುಡಿಯುವನೀರು ತಮ್ಮ ಜೋತೆಯಲ್ಲಿ ಇಡುವದು ಮರೆಯುವುದು ಬೇಡ.( ಡಾ. ರವಿಕಿರಣ ಪಟವರ್ಧನ ಶಿರಸಿ, ಆಯುರ್ವೇದ ವೈದ್ಯರು)