ವಿಮಾನದ ಯಾವ ಸೀಟಲ್ಲಿ ಕೂರೋದು ಸೇಫ್; ಈ ಬಗ್ಗೆ FAA ವರದಿ ಏನು ಹೇಳುತ್ತೆ?
ವಿಮಾನಗಳನ್ನು ಸುರಕ್ಷಿತ ಸಾರಿಗೆ ಸಾಧನವೆಂದು ಪರಿಗಣಿಸಲಾಗಿದೆ. ಆದರೆ ನಿನ್ನೆ ನಡೆದ ವಿಮಾನ ಅಪಘಾತದ ನಂತರ, ಅನೇಕ ಜನರು ವಿಮಾನಗಳಲ್ಲಿ ಪ್ರಯಾಣಿಸುವ ಬಗ್ಗೆ ತುಂಬಾ ಭಯಭೀತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿಮಾನದಲ್ಲಿ ಯಾವ ಸೀಟು ಸುರಕ್ಷಿತ, ವಿಮಾನ ಪ್ರಯಾಣಕ್ಕೂ ಮೊದಲು ಯಾವ ಸೀಟನ್ನು ಆಯ್ಕೆ ಮಾಡಿದರೆ ಉತ್ತಮ, ಒಂದು ವೇಳೆ ಅವಘಡಗಳು ಸಂಭವಿಸಿದರೆ, ಯಾವ ಸೀಟಲ್ಲಿ ಕೂರುವುದರಿಂದ ಬದುಕುಳಿಯುವ ಸಾಧ್ಯತೆ ಇರುತ್ತದೆ ಗೊತ್ತಾ? ಈ ಬಗ್ಗೆ ವರದಿಗಳು ಏನು ಹೇಳುತ್ತೆ ಎಂಬುದನ್ನು ನೋಡಿ.

ಇತರೆ ಸಾರಿಗೆ ವಿಧಾನಗಳಿಗೆ ಹೋಲಿಸಿದರೆ ವಿಮಾನ ಪ್ರಯಾಣವನ್ನು (air travel) ಸುರಕ್ಷಿತ ಸಾರಿಗೆ ವಿಧಾನವೆಂದು ಪರಿಗಣಿಸಲಾಗುತ್ತದೆ. ಆದರೆ ಗುರುವಾರ (ಮೇ. 12) ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪೈಲಟ್, ಸಿಬ್ಬಂದಿಗಳು ಸೇರಿದಂತೆ 242 ಮಂದಿ ಪೈಕಿ ಪವಾಡದಂತೆ ಒಬ್ಬನೇ ಒಬ್ಬ ಪ್ರಯಾಣಿಕ ಬದುಕಿ ಬಂದಿದ್ದಾರೆ. ಸೀಟ್ ನಂಬರ್ 11A ನಲ್ಲಿ ಕುಳಿತಿದ್ದ ಈ ಪ್ರಯಾಣಿಕ ತುರ್ತು ನಿರ್ಗಮನ ಬಾಗಿಲನ್ನು ತೆರೆದು ಹಾರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೆಲ್ಲಾ ನೋಡಿದಾಗ ವಿಮಾನದ ಯಾವ ಸೀಟಲ್ಲಿ ( Which seat is safest on a flight) ಕೂಳಿತರೆ ಸೇಫ್, ಒಂದು ವೇಳೆ ಅಪಘಾತ ಸಂಭವಿಸಿತು ಎಂದಾದರೆ ಯಾವ ಸೀಟಲ್ಲಿ ಕುಳಿತ್ರೆ ಪ್ರಾಣಾಪಾಯದಿಂದ ಪಾರಾಗ್ಬೋದು ಎಂಬ ಪ್ರಶ್ನೆ ಹಲವರಲ್ಲಿ ಮೂಡಿರುತ್ತೆ ಅಲ್ವಾ. ಹಾಗಿದ್ರೆ ಫ್ಲೈಟಲ್ಲಿ ಯಾವ ಸೀಟ್ ತುಂಬಾನೇ ಸೇಫ್ ಅನ್ನೋದನ್ನು ತಿಳಿಯಿರಿ.
ವಿಮಾನದಲ್ಲಿ ಯಾವ ಸೀಟ್ ತುಂಬಾನೇ ಸೇಫ್ ಗೊತ್ತಾ?
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನೀಡಿದ ಮಾಹಿತಿಯ ಪ್ರಕಾರ ವಿಮಾನ ಮುಂಭಾಗದಲ್ಲಿ ಕುಳಿತುಕೊಳ್ಳುವುದಕ್ಕಿಂತೂ ವಿಮಾನದ ಹಿಂಭಾಗದಲ್ಲಿ ಕುಳಿತುಕೊಳ್ಳುವುದು ಹೆಚ್ಚು ಸೇಫ್. ಏನಾದ್ರೂ ಅಪಘಾತ ಸಂಭವಿಸಿದರೆ ಮುಂಭಾಗಕ್ಕಿಂತ ಹಿಂಬದಿಯಲ್ಲಿ ಕುಳಿತರೆ ಬದುಕುವ ಸಾಧ್ಯತೆ ಹೆಚ್ಚು ಎಂದು ಈ ವರದಿ ತಿಳಿಸಿದೆ.
ಮಾಹಿತಿಗಳ ಪ್ರಕಾರ, ವಿಮಾನದ ರೆಕ್ಕೆಯ ಬಳಿ ಇರುವ ಸೀಟ್‌ಗಳು ತುರ್ತು ನಿರ್ಗಮನಗಳನ್ನು ಹೊಂದಿರುತ್ತವೆ. ಈ ಸೀಟ್‌ಗಳಲ್ಲಿ ಕೂರುವುದು ಕೂಡಾ ತುಂಬಾನೇ ಸೇಫ್. ಹೌದು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಇಲ್ಲಿಂದ ಹೊರಬರುವುದು ತುಂಬಾನೇ ಸುಲಭ. ಮಧ್ಯದ ಸೀಟುಗಳು ಕೂಡಾ ತುಂಬಾನೇ ಸುಕ್ಷಿತವಾಗಿದೆ. ಒಂದು ವೇಳೆ ವಿಮಾನದಲ್ಲಿ ಅಪಘಾತ ಸಂಭವಿಸಿದಾಗ, ಮಧ್ಯದ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಎರಡೂ ಬದಿಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ಬೆಂಬಲವಿರುತ್ತದೆ. ಇದರಿಂದಾಗಿ, ಅವರ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.
ವಿಂಗ್ ಸೀಟುಗಳು ತುರ್ತು ದ್ವಾರಕ್ಕೆ ಹತ್ತಿರದಲ್ಲಿವೆ, ಇದರಿಂದಾಗಿ ಇಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ಬದುಕುಳಿಯುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ. ಇನ್ನೂ ನಿರ್ಗಮನ ಸಾಲಿನಲ್ಲಿರುವ ಆಸನಗಳನ್ನು ಸಹ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ತುರ್ತು ಲ್ಯಾಂಡಿಂಗ್ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ, ಈ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಬದುಕುಳಿಯುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ. ಆದರೆ ಕಿಟಕಿ ಪಕ್ಕದ ಸೀಟನ್ನು ಯಾವುದೇ ರೀತಿಯಲ್ಲಿ ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅಪಘಾತ ಸಂಭವಿಸಿದಾಗ ಅಲ್ಲಿ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆಯಿರುತ್ತದೆ.
ಇದನ್ನೂ ಓದಿ: ಗರ್ಭಿಣಿಯರು ಎಲ್ಲಾದ್ರೂ ಪ್ರಯಾಣಿಸುವಾಗ ಈ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಲೇಬೇಕು
ಕೆಲವು ಅಧ್ಯಯನಗಳು ವಿಮಾನದಲ್ಲಿ ಮಧ್ಯದ ಸೀಟು ಮತ್ತು ಹಿಂದಿನ ಸೀಟುಗಳನ್ನು ಸುರಕ್ಷಿತವೆಂದು ಕಂಡುಕೊಂಡಿವೆ. ವಿಮಾನದ ಹಿಂಭಾಗದ ಮೂರನೇ ಸ್ಥಾನದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ಆಸನಗಳು ಸುರಕ್ಷಿತವಾಗಿವೆ ಮತ್ತು ಇಲ್ಲಿ ಕುಳಿತಿರುವವರು ಅಪಘಾತಗಳು ಸಂಭವಿಸಿದಾಗ ಬದುಕುಳಿಯುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುತ್ತದೆ. ವಿಮಾನ ಅಪಘಾತಕ್ಕೀಡಾದಾಗ, ವಿಮಾನದ ಮುಂಭಾಗಕ್ಕೆ ಹೆಚ್ಚು ಪರಿಣಾಮ ಬೀರುತ್ತದೆ. ಇಲ್ಲಿ ಕುಳಿತುಕೊಳ್ಳುವ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.
ಅಧ್ಯಯನಗಳು ಕಂಡುಕೊಂಡ ಅಂಶಗಳ ಪ್ರಕಾರ ವಿಮಾನ ಹಿಂಭಾಗದಲ್ಲಿ ಕುಳಿತವರು ಬದುಕುಳಿಯುವ ಸಾಧ್ಯತೆ ಹೆಚ್ಚು ಸುಮಾರು 69%, ಮಧ್ಯದಲ್ಲಿ ಅಥವಾ ವಿಮಾನದ ರೆಕ್ಕೆಗಳ ಭಾಗದಲ್ಲಿ ಕುಳಿತಿರುವ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ 59% ಇರುತ್ತದೆ ಮತ್ತು ಮುಂಭಾಗದಲ್ಲಿ ಕುಳಿತಿರುವ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಕೇವಲ 49% ಮಾತ್ರ.
ಇದರರ್ಥ ಅಪಘಾತ ಸಂಭವಿಸಿದಾಗ, ಹಿಂದಿನ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಹೆಚ್ಚು. ಆದಾಗ್ಯೂ, ವಿಮಾನ ಅಪಘಾತದ ನಂತರ ಬದುಕುಳಿಯುವ ಸಾಧ್ಯತೆಗಳು ಅಪಘಾತದ ಪ್ರಕಾರ, ಪ್ರಮಾಣವನ್ನು ಅವಲಂಬಿಸಿರುತ್ತದೆ ಎಂದು ಅಧ್ಯಯನಗಳು ಹೇಳಿವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ