Kitchen Tips in Kannada : ಶುಂಠಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡುವುದೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಬೇಸಿಗೆಯಲ್ಲಿ ತರಕಾರಿಗಳು ಬೇಗನೇ ಹಾಳಾಗುತ್ತವೆ. ಈ ಋತುವಿನಲ್ಲಿ ತರಕಾರಿಗಳು ಹಾಳಾಗುವುದನ್ನು ತಡೆಗಟ್ಟಲು, ಅವುಗಳನ್ನು ರೆಫ್ರಿಜರೇಟರ್ನಲ್ಲಿ ಶೇಖರಿಸಿಡಲಾಗುತ್ತದೆ. ಆದರೆ ಈ ಶುಂಠಿಯನ್ನು ಎಷ್ಟೇ ಜಾಗರೂಕವಾಗಿ ಸಂಗ್ರಹಿಸಿಟ್ಟರೂ ಬೇಗನೆ ಒಣಗುತ್ತದೆ, ಇಲ್ಲಿದಿದ್ದರೆ ಕೊಳೆತುಹೋಗುತ್ತದೆ. ಒಣಗಿದ ಶುಂಠಿಯನ್ನು ಆಹಾರ ಪದಾರ್ಥಗಳಿಗೆ ಬಳಸಿದರೂ ರುಚಿಯನ್ನು ಹೊಂದಿರುವುದಿಲ್ಲ. ಆಹಾರದಲ್ಲಿ ರುಚಿಯನ್ನು ಹೆಚ್ಚಿಸುವ ಈ ಶುಂಠಿ ತಾಜಾವಾಗಿ ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು.
ಭಾರತೀಯರ ಅಡುಗೆ ಮನೆಯಲ್ಲಿ ಶುಂಠಿಯಿರಲೇಬೇಕು. ಪ್ರತಿಯೊಂದು ಆಹಾರ ಪದಾರ್ಥಗಳನ್ನು ತಯಾರಿಸುವಾಗಲೂ ಘಮ್ ಎನಿಸುವ ಶುಂಠಿಯನ್ನು ಬಳಸುತ್ತಾರೆ. ಹೀಗಾಗಿ ಆಹಾರಕ್ಕೆ ಮತ್ತಷ್ಟು ರುಚಿಯನ್ನು ಈ ಶುಂಠಿಯು ನೀಡುತ್ತದೆ. ಅದಲ್ಲದೇ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಈ ಶುಂಠಿ ಉತ್ತಮವಾದ ಮನೆ ಮದ್ದಾಗಿದೆ. ಆದರೆ ರಣ ಬಿಸಿಲಿಗೆ ಈ ಶುಂಠಿಯು ಬೇಗನೇ ಹಾಳಾಗುವ ಕಾರಣ, ಇದನ್ನು ತಾಜಾವಾಗಿಡುವುದಕ್ಕೆ ಕೆಲವು ಸಲಹೆಗಳನ್ನು ಅನುಸರಿಸಿದರೆ ಉತ್ತಮ.
ಶುಂಠಿಯನ್ನು ತಾಜಾವಾಗಿ ಸಂಗ್ರಹಿಸಿಡಲು ಇಲ್ಲಿವೆ ಕೆಲ ಸಲಹೆಗಳು
- ಮಾರುಕಟ್ಟೆಯಲ್ಲಿ ತಂದ ಶುಂಠಿಯನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಇಡಬಾರದು. ಬೇಗನೇ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಶುಂಠಿಯನ್ನು ಟಿಶ್ಯೂನಿಂದ ಒರೆಸಿ ಮತ್ತು ಹತ್ತಿ ಬಟ್ಟೆಯಲ್ಲಿ ಸುತ್ತಿಟ್ಟರೆ ತಾಜಾವಾಗಿರುತ್ತದೆ.
- ಶುಂಠಿಯನ್ನು ತಾಜಾವಾಗಿಡಲು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಗಾಜಿನ ಬಾಟಲಿಯನ್ನು ತೆಗೆದುಕೊಂಡು ಅದಕ್ಕೆ ವಿನೆಗರ್ ಹಾಕಬೇಕು. ಈಗಾಗಲೇ ಕತ್ತರಿಸಿಟ್ಟ ಶುಂಠಿಯನ್ನು ಈ ಬಾಟಲಿಗೆ ಹಾಕಿಟ್ಟರೆ ಒಂದು ತಿಂಗಳವರೆಗೆ ಶುಂಠಿಯು ಹಾಳಾಗುವುದಿಲ್ಲ.
- ಶುಂಠಿ ಪೇಸ್ಟ್ ಮಾಡಿಟ್ಟರೆ ಬೇಗನೇ ಕೆಡುವುದಿಲ್ಲ. ಶುಂಠಿ ಪೇಸ್ಟನ್ನು ರೆಫ್ರಿಜರೇಟರ್ನಲ್ಲಿ ಒಂದು ತಿಂಗಳು ಸಂಗ್ರಹಿಸಬಹುದು.
- ಶುಂಠಿಯು ಹೆಚ್ಚು ದಿನಗಳ ಕಾಲ ಬಾಳಿಕೆ ಬರಬೇಕಾದರೆ ಬಿಸಿಲಿನಲ್ಲಿ ಒಣಗಿಸಬೇಕು. ಚೆನ್ನಾಗಿ ಆರಿದ ನಂತರ ನುಣ್ಣಗೆ ಶುಂಠಿಯನ್ನು ಪುಡಿ ಮಾಡಿ ಸಂಗ್ರಹಿಟ್ಟರೆ ಕೆಡುವುದಿಲ್ಲ.
- ಶುಂಠಿಯನ್ನು ತುಂಡು ತುಂಡುಗಳಾಗಿ ಕತ್ತರಿಸಿ ಜಿಪ್ ಇರುವ ಲಾಕ್ ಬ್ಯಾಗ್‌ನಲ್ಲಿ ಹಾಕಿಟ್ಟರೆ ಕನಿಷ್ಠ ಮೂರು ವಾರಗಳವರೆಗೆ ಕೆಡುವುದಿಲ್ಲ, ತಾಜಾವಾಗಿರುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ