AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pressure Cooker: ಪ್ರೆಶರ್ ಕುಕ್ಕರ್​ನಲ್ಲಿ ಅನ್ನ ಮಾಡುತ್ತೀರಾ? ಈ ಅಂಶಗಳ ಬಗ್ಗೆ ತಿಳಿದುಕೊಂಡಿರಿ

ಕೆಲವರು ಕುಕ್ಕರ್​ ಬಗ್ಗೆ ಅನುಮಾನ ತಾಳಲು ಕಾರಣ ಅದರಿಂದ ಆರೋಗ್ಯಕ್ಕೆ ಏನಾದರೂ ಹಾನಿಯಾಗಬಹುದೇ ಎಂಬುದು. ಆ ಅನುಮಾನ ನಿಮ್ಮಲ್ಲೂ ಇದ್ದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ.

Pressure Cooker: ಪ್ರೆಶರ್ ಕುಕ್ಕರ್​ನಲ್ಲಿ ಅನ್ನ ಮಾಡುತ್ತೀರಾ? ಈ ಅಂಶಗಳ ಬಗ್ಗೆ ತಿಳಿದುಕೊಂಡಿರಿ
ಸಂಗ್ರಹ ಚಿತ್ರ
TV9 Web
| Edited By: |

Updated on: Sep 06, 2021 | 7:03 AM

Share

ಹಿಂದೆಲ್ಲಾ ಅಡುಗೆ ಮಾಡುವುದೆಂದರೆ ಇದ್ದಿಲು, ಕಟ್ಟಿಗೆ ಒಲೆ ಬಳಸುವುದೇ ಸಾಮಾನ್ಯವಾಗಿತ್ತು. ಆದರೆ, ಕಾಲ ಬದಲಾಗುತ್ತಾ ಹೋದಂತೆ ಹೊಸ ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಂಡು ಆಧುನಿಕತೆಗೆ ಒಗ್ಗಿಕೊಂಡ ಕಾರಣ ಈಗ ಕಟ್ಟಿಗೆ ಒಲೆ ಬಲು ಅಪರೂಪ ಎಂಬಂತಾಗಿದೆ. ಈಗೆಲ್ಲಾ ಅಡುಗೆ ಮನೆಗಳಲ್ಲಿ ಎಲ್​ಪಿಜಿ, ಸೋಲಾರ್​ ಸ್ಟೌವ್‌, ಎಲೆಕ್ಟ್ರಿಕ್​ ಸ್ಟೌವ್‌​ಗಳದ್ದೇ ದರ್ಬಾರ್ ಶುರುವಾಗಿದೆ. ಇದೆಲ್ಲದರ ಜತೆ ಕುಕ್ಕರ್​ ಕೂಡಾ ಸಾಮಾನ್ಯವಾಗಿ ಹೋಗಿರುವುದರಿಂದ ಅಡುಗೆಯ ಶೈಲಿಯೂ ಬದಲಾಗಿದೆ. ಪ್ರೆಶರ್ ಕುಕ್ಕರ್‌ ಈಗ ಬಹುತೇಕ ಎಲ್ಲರ ಮನೆಯಲ್ಲೂ ಲಭ್ಯವಿದೆ. ಕೆಲವರು ಅದನ್ನು ತುರ್ತು ಸಂದರ್ಭಕ್ಕೆ ಬಳಸಿಕೊಂಡರೆ ಹೆಚ್ಚಿನವರು ನಿತ್ಯ ಬಳಸುತ್ತಾರೆ. ಅನ್ನ ಮಾಡುವುದಕ್ಕೆ ಬೇಕೇ ಬೇಕು ಎಂಬಂತಾಗಿರುವ ಈ ಪ್ರೆಶರ್​ ಕುಕ್ಕರ್ ಬಗ್ಗೆ ಕೆಲವು ಮಾಹಿತಿ ಇಲ್ಲಿ ಲಭ್ಯವಿದೆ.

ಪ್ರೆಶರ್​ ಕುಕ್ಕರ್ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಅಭಿಪ್ರಾಯವಿದೆ. ಕೆಲವರು ಇಂದಿಗೂ ಅವುಗಳನ್ನು ಅನುಮಾನಿಸಲು ಕಾರಣ ಅದು ಎಷ್ಟು ಸುರಕ್ಷಿತ ಎಂಬ ಗೊಂದಲ. ಆದರೆ, ಇಂದು ಮಾರುಕಟ್ಟೆಯಲ್ಲಿ ಆ ಗೊಂದಲವನ್ನು ಪರಿಹರಿಸಲೆಂದೇ ಸಾಕಷ್ಟು ಅತ್ಯಾಧುನಿಕ ಮಾದರಿಯ ಕುಕ್ಕರ್​ಗಳು ಬಂದಿವೆ. ಇನ್ನು ಕೆಲವರು ಕುಕ್ಕರ್​ ಬಗ್ಗೆ ಅನುಮಾನ ತಾಳಲು ಕಾರಣ ಅದರಿಂದ ಆರೋಗ್ಯಕ್ಕೆ ಏನಾದರೂ ಹಾನಿಯಾಗಬಹುದೇ ಎಂಬುದು. ಆ ಅನುಮಾನ ನಿಮ್ಮಲ್ಲೂ ಇದ್ದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ.

1. ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದರೆ, ಅದು ಹೆಚ್ಚು ಸತ್ವವನ್ನು ಉಳಿಸಿಕೊಳ್ಳುತ್ತದೆ. ಇದರಿಂದ ಹೊಟ್ಟೆ ತುಂಬ ಹೊತ್ತು ತುಂಬಿರುತ್ತದೆ. ಇದು ನಿಮ್ಮನ್ನು ದೀರ್ಘಕಾಲದವರೆಗೆ ಹಸಿವಿನಿಂದ ದೂರವಿರಿಸುತ್ತದೆ. ಈ ಕಾರಣದಿಂದ ಹಸಿವು ಕಡಿಮೆಯಾಗುತ್ತದೆ 2. ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದಾಗ. ಅಕ್ಕಿ ಹೆಚ್ಚಾಗಿ ಕುದಿಯುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೊರೆ ಕಡಿಮೆಯಾಗುತ್ತದೆ 3. ಅಕ್ಕಿಯನ್ನು ಬೇಯಿಸಲು ಪ್ರೆಶರ್ ಕುಕ್ಕರ್ ಅಥವಾ ರೈಸ್ ಕುಕ್ಕರ್ ಬಳಸಿದರೆ ಅದರಲ್ಲಿರುವ ಪೋಷಕಾಂಶಗಳು ಅನ್ನದಲ್ಲಿ ಉಳಿಯುತ್ತದೆ. ಅಕ್ಕಿಯನ್ನು ಹಾಗೆಯೇ ಕುದಿಸಿ ಅದರಲ್ಲಿರುವ ನೀರು ತೆಗೆದಾಗ ಪೋಷಕಾಂಶಗಳು ಹೋಗುತ್ತವೆ 4. ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಹೆಚ್ಚಿನ ಶಾಖ ಮತ್ತು ಅಧಿಕ ಒತ್ತಡದೊಂದಿಗೆ ಬೇಯಿಸಿದಾಗ ಅದರಲ್ಲಿ ಯಾವುದೇ ಬ್ಯಾಕ್ಟೀರಿಯಾ ಇರುವುದಿಲ್ಲ ಅವುಗಳನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ 5. ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದಾಗ ಕೆಲಸ ವೇಗವಾಗಿ ಪೂರ್ಣಗೊಳ್ಳುತ್ತದೆ. ಹಾಗೆಯೇ ಗ್ಯಾಸ್ ಹೆಚ್ಚು ವ್ಯರ್ಥವಾಗುವುದಿಲ್ಲ. ಇದು ನಿಮಗೆ ಸಮಯ ಮತ್ತು ಇಂಧನ ಎರಡನ್ನೂ ಉಳಿಸುತ್ತದೆ

ಇದನ್ನೂ ಓದಿ: Electric Cooker: ಕರೆಂಟ್ ಕುಕ್ಕರ್​ನಲ್ಲಿ ಅಕ್ಕಿ ಬೇಯಿಸುತ್ತಿದ್ದೀರಾ? ನಿಮ್ಮೆಲ್ಲರನ್ನು ಎಚ್ಚರಿಸುವ ಆಘಾತಕಾರಿ ವಿಷಯವೊಂದು ಬಯಲಾಗಿದೆ 

Coconut Oil: ತೆಂಗಿನ ಎಣ್ಣೆಯ ಬಳಕೆಯಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀವು ಪಡೆಯಬಹುದು

(Know the benefits of making rice in pressure cooker)

Follow Us
TV9 Web
TV9 Web

TV9 Kannada

Read More
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?