Kannada News Lifestyle Make the festival even more special by conveying these loving wishes to your brothers and sisters Lifestyle News MDA
Raksha Badhan Wishes: ನಿಮ್ಮ ಸಹೋದರ ಮತ್ತು ಸಹೋದರಿಯರಿಗೆ ಈ ಪ್ರೀತಿಯ ಶುಭಾಶಯಗಳನ್ನು ತಿಳಿಸುವ ಮೂಲಕ ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಿ
ಪ್ರತಿ ವರ್ಷ ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಈ ಬಾರಿ ರಕ್ಷಾಬಂಧನ ಹಬ್ಬವನ್ನು ಆಗಸ್ಟ್ 30 ರಂದು ಆಚರಿಸಲಾಗುತ್ತಿದೆ. ಸಹೋದರ ಮತ್ತು ಸೋದರಿಯ ಭಾಂದವ್ಯದ ಸಂಕೇತವಾಗಿರುವ ಈ ಹಬ್ಬವು ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದಿರುವ ಹಬ್ಬಗಳಲ್ಲಿ ಒಂದಾಗಿದೆ. ಈ ಪವಿತ್ರ ಹಬ್ಬದಂದು ನಿಮ್ಮ ಸಹೋದರ ಸಹೋದರಿಯರಿಗೆ ಈ ಕೆಲವು ವಿಶೇಷವಾದ ಶುಭಾಶಯಗಳನ್ನು ಕಳುಹಿಸುವ ಮೂಲಕ ರಕ್ಷಾಬಂಧನ ಹಬ್ಬದ ಶುಭ ಹಾರೈಕೆಗಳನ್ನು ತಿಳಿಸಬಹುದು.
ಹಿಂದೂ ಧರ್ಮದಲ್ಲಿ ಪ್ರತಿಯೊಂದ ಹಬ್ಬವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಅದರಂತೆ ಸಹೋದರ ಸೋದರಿಯರ ಪ್ರೀತಿ ಮತ್ತು ಬಾಂಧವ್ಯದ ಸಂಕೇತವಾಗಿರುವ ರಕ್ಷಾಬಂಧನಹಬ್ಬವೂ ಕೂಡಾ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ರಕ್ಷಾಬಂಧನ ಹಬ್ಬವನ್ನು ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಸುದಿನ ಸಹೋದರಿ ತನ್ನ ಸಹೋದರ ಕೈಗೆ ರಕ್ಷಾಸೂತ್ರವನ್ನು ಕಟ್ಟಿ ಆರತಿ ಬೆಳಗಿ, ಸಹೋದರನ ಯಶಸ್ಸು ಮತ್ತು ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾಳೆ. ಹಾಗೂ ಸಹೋದರತನ್ನ ಸಹೋದರಿಗೆ ಶ್ರೀರಕ್ಷೆಯನ್ನು ನೀಡುವ ಭರವಸೆಯನ್ನು ನೀಡುತ್ತಾನೆ. ಆದರೆ ನಿಮ್ಮ ಸಹೋದರ ಅಥವಾ ನೀವು ಕೆಲಸದ ಕಾರಣದಿಂದ ಮನೆಯಿಂದ ದೂರವಿದ್ದಾರೆ, ಈ ಬಾರಿ ರಕ್ಷಾಬಂಧನವನ್ನು ಹೇಗೆ ಆಚರಿಸಲಿ ಎಂದು ಯೋಚನೆ ಮಾಡುತ್ತಿದ್ದೀರಾ, ಈ ಕೆಲವೊಂದು ಅರ್ಥಪೂರ್ಣ ಸಂದೇಶವಿರುವ ರಕ್ಷಾಬಂಧನ ಹಬ್ಬದ ಶುಭಾಶಯಗಳನ್ನು ತಿಳಿಸುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಿ.
ರಕ್ಷಾಬಂಧನ ಹಬ್ಬದ ಶುಭಾಶಯಗಳು:
ಸಾಸಿವೆ ಕಾಳಷ್ಟು ನನಗೆ ನೋವಾಗದ ಹಾಗೆ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಜೀವ ಎಂದರೆ ಅದು ನನ್ನ ಸಹೋದರ. ಈ ನನ್ನ ಮುದ್ದು ಸಹೋದರನಿಗೆ ರಕ್ಷಾಬಂಧನ ಹಬ್ಬದ ಶುಭಾಶಯಗಳು.
ರಕ್ಷಾ ಬಂಧನ ಹಬ್ಬದ ಹಾರ್ಧಿಕ ಶುಭಾಶಯಗಳು. ನನ್ನ ಕೊನೆಯ ಉಸಿರು ಇರುವ ತನಕ ನಿಮ್ಮ ಮೇಲಿನ ಪ್ರೀತಿ ಮಮತೆ ಕಡಿಮೆಯಾಗದು. ನಿನ್ನ ಸಂತೋಷವೇ ನನ್ನ ಸಂತೋಷ ಮುದ್ದು ತಂಗಿ.
ನನ್ನೆಲ್ಲ ಕಷ್ಟದಲ್ಲಿ ಜೊತೆಯಾಗಿ, ಬೆನ್ನೆಲುಬಾಗಿ ಜೀವನದಲ್ಲಿ ಎಲ್ಲೂ ಎಡವದಂತೆ ಗುರುವಿನ ಸ್ಥಾನದಲ್ಲಿ ನಿಂತು ಬದುಕಿನ ದಾರಿಯನ್ನು ತೋರಿದ ನನ್ನ ಮುದ್ದಿನ ಅಣ್ಣನಿಗೆ ರಕ್ಷಾಬಂಧನದ ಶುಭಾಶಯಗಳು.
ನನ್ನ ಜೀವನದಲ್ಲಿ ಬೆಲೆಕಟ್ಟಲಾದಗ ಅಮೂಲ್ಯ ರತ್ನವಾಗಿರುವ ನನ್ನ ತಂಗಿಗೆ ರಕ್ಷಾಬಂಧನ ಹಬ್ಬದ ಶುಭಾಯಗಳು.
ಅಣ್ಣ ಎಂದರೆ ಧೈರ್ಯ, ಅಣ್ಣ ಎಂದರೆ ದಾರಿ ದೀಪ, ಅಣ್ಣ ಎಂದರೆ ಶ್ರೀರಕ್ಷೆ ಅಕ್ಕರೆಯ ಅಣ್ಣನಿಗೆ ಪ್ರೀತಿಯ ತಂಗಿಯಿಂದ ರಕ್ಷಾಬಂಧನದ ಶುಭ ಹಾರೈಕೆಗಳು.
ಅಗಣಿತ ಭಾರದ ಪ್ರೀತಿಯನ್ನು ಹೊತ್ತು ತರುವ ಈ ರಕ್ಷಾಬಂಧನ ನಿನ್ನ ಬದುಕಿನಲ್ಲಿ ಸದಾ ಸುಖ ಸಮೃದ್ಧಿಯನ್ನು ನೆಲೆಸುವಂತೆ ಮಾಡಲಿ: ರಕ್ಷಾಬಂಧನದ ಪ್ರೀತಿಯ ಶುಭಹಾರೈಕೆಗಳು.
ಸೂರ್ಯನಂತೆ ಬೆಳಗುತ್ತಿರು, ಹೂವಿನಂತೆ ಕಂಪು ಬೀರುತ್ತಾ ಇರು, ಸದಾ ಕಾಲ ಸುಖವಾಗಿರು. ಈ ನಿನ್ನ ಸಹೋದರಿಯ ಕಡೆಯಿಂದ ರಕ್ಷಾ ಬಂಧನದ ಶುಭಹಾರೈಕೆಗಳು.
ಪ್ರೀತಿಯ ಸಹೋದರಿ, ಮೊದಲನೆಯದಾಗಿ ರಕ್ಷಾಬಂಧನದ ಶುಭಾಶಯಗಳು. ನಿನಗಾಗಿ, ನಿನ್ನ ಜೀವನದ ಪ್ರತಿಯೊಂದು ಸುಖ ದುಃಖದಲ್ಲೂ ಈ ನಿನ್ನ ಸಹೋದರ ಸದಾಕಾಲ ನಿನ್ನ ಜೊತೆಗಿರುವ.
ರಕ್ಷಾಬಂಧನ ಹಬ್ಬದ ಹಾರ್ಧಿಕ ಶುಭಾಶಯಗಳು, ನಿಮ್ಮ ಎಲ್ಲಾ ಆಸೆ ಮತ್ತು ಕನಸುಗಳು ನನಸಾಗಲಿ ಎಂದು ನಾನು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ.
ತಾಯಿಯಂತೆ ನನ್ನ ಬಗ್ಗೆ ಕಾಳಜಿ ಕಾಳಜಿ ವಹಿಸುವ, ಗುರುವಿನಂತೆ ತಿದ್ದಿ ಬುದ್ಧಿ ಹೇಳುವ ನಿಶ್ಕಲ್ಮಶ ಪ್ರೀತಿಯನ್ನು ತೋರುವ, ಸದಾ ನನ್ನ ಏಳಿಗೆಯನ್ನೇ ಬಯಸುವ ನನ್ನ ಮುದ್ದಿನ ಸಹೋದರಿಗೆ ರಕ್ಷಾ ಬಂಧನ ಹಬ್ಬದ ಶುಭ ಹಾರೈಕೆಗಳು.
ತಂದೆಯಂತೆ ಬುದ್ಧಿ ಹೇಳುವ, ಅಮ್ಮನಂತೆ ಮಮತೆ ನೀಡುವ, ನನ್ನ ಬದುಕಿನ ಉತ್ತಮ ಸ್ನೇಹಿತನಾಗಿರುವ ನನ್ನ ಅಣ್ಣನಿಗೆ ರಕ್ಷಾಬಂಧನದ ಶುಭಾಶಯಗಳು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: