Sign In

By signing in or creating an account, you agree with Associated Broadcasting Company's Terms & Conditions and Privacy Policy.

Pista Kulfi: ಈ ರಕ್ಷಾಬಂಧನದಂದು ನಿಮ್ಮ ಅಣ್ಣನಿಗೆ ಮನೆಯಲ್ಲಿಯೇ ಪಿಸ್ತಾ ಕುಲ್ಫಿ ತಯಾರಿಸಿ

ಇನ್ನೇನು ರಕ್ಷಾಬಂಧನ ಹಬ್ಬ ಸಮೀಪದಲ್ಲಿದೆ. ಈ ಶುಭ ದಿನದಂದು ಸಹೋದರನಿಗೆ ಏನದರೂ ವಿಶೇಷವಾದ ಸಿಹಿ ತಿನಿಸನ್ನು ಮನೆಯಲ್ಲಿಯೇ ತಯಾರಿಸಬೇಕೆಂಬ ಯೋಜನೆಯಲ್ಲಿದ್ದರೆ, ನೀವು ಸುಲಭವಾಗಿ ಪಿಸ್ತಾ ಕುಲ್ಫಿ ಮಾಡಬಹುದು. ಕಡಿಮೆ ಸಾಮಾಗ್ರಿಗಳು ಮತ್ತು ಕಡಿಮೆ ಸಮಯದಲ್ಲಿ ಈ ಒಂದು ಸಿಹಿಯನ್ನು ಮಾಡಬಹುದು. ಹಾಗಿದ್ದರೆ ಪಿಸ್ತಾ ಕುಲ್ಫಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.

Pista Kulfi: ಈ ರಕ್ಷಾಬಂಧನದಂದು ನಿಮ್ಮ ಅಣ್ಣನಿಗೆ ಮನೆಯಲ್ಲಿಯೇ ಪಿಸ್ತಾ ಕುಲ್ಫಿ ತಯಾರಿಸಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 23, 2023 | 5:32 PM

ರಕ್ಷಾ ಬಂಧನ (Rakshabandhan) ಹಬ್ಬವು ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಒಂದು ಹಬ್ಬವಾಗಿದೆ. ಈ ವರ್ಷ ರಕ್ಷಾ ಬಂಧನವನ್ನು ಆಗಸ್ಟ್ 30 ರಂದು ಆಚರಿಸಲಾಗುತ್ತದೆ. ಈ ಹಬ್ಬವು ಸಹೋದರ ಮತ್ತು ಸೋದರಿಯ ಬಂಧವನ್ನು ಸಾರುವ ಹಬ್ಬವಾಗಿದೆ. ಈ ದಿನ ಸಹೋದರಿಯು ತನ್ನ ಸಹೋದರನಿಗೆ ರಕ್ಷೆಯನ್ನು ಕಟ್ಟುತ್ತಾಳೆ. ಹಾಗೂ ಸಹೋದರ ತನ್ನ ಸಹೋದರಿಗೆ ಆಶಿರ್ವಾದ ನೀಡಿ, ಜೀವನಪರ್ಯಂತ ನಿನ್ನ ರಕ್ಷಣೆ ಮಾಡುತ್ತೇನೆ ಎಂದು ಭರವಸೆ ನೀಡುತ್ತಾನೆ. ಈ ಬಾರಿಯ ರಕ್ಷಾ ಬಂಧನ ಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದು ಬಯಸಿದರೆ, ಹಾಗೂ ಸಹೋದರನಿಗೆ ಏನಾದರೂ ವಿಶೇಷವಾದುದನ್ನು ನೀಡಲು ಬಯಸಿದರೆ, ನೀವು ಮನೆಯಲ್ಲಿ ನಿಮ್ಮ ಕೈಯಾರೆ ಸಿಹಿಯನ್ನು ತಯಾರಿಸಬಹುದು. ಆದರೆ ಸಿಹಿ ತಿನಿಸನ್ನು ತಯಾರಿಸಲು ಸಾಕಷ್ಟು ಸಮಯವಿಲ್ಲ ಎಂದು ನೀವು ಭಾವಿಸಿದರೆ, ಅದರ ಬಗ್ಗೆ ನೀವು ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ ನೀವು ಕಡಿಮೆ ಸಮಯದಲ್ಲಿ ರುಚಿಕರವಾದ ಪಿಸ್ತಾ ಕುಲ್ಫಿ ತಯಾರಿಸಬಹುದು. ಹಾಗಿದ್ದರೆ ಪಿಸ್ತಾ ಕುಲ್ಫಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಪಿಸ್ತಾ ಕುಲ್ಫಿ ಮಾಡಲು ಬೇಕಾಗುವ ಸಾಮಾಗ್ರಿಗಳು:

• ಕೆನೆಭರಿತ ಹಾಲು 1 ಲೀಟರ್

• ಸಕ್ಕರೆ 1/2 ಕಪ್

• ಕೇಸರಿ ದಳ 1 ಟೀಸ್ಪೂನ್

• ಹಸಿರು ಏಲಕ್ಕಿ 4 ರಿಂದ 5

• ಸಣ್ಣಗೆ ಕತ್ತರಿಸಿದ ಪಿಸ್ತಾ ಮತ್ತು ಬಾದಮಿ

ಇದನ್ನೂ ಓದಿ:  ನಿಮ್ಮ ಸಹೋದರ-ಸಹೋದರಿಯರಿಗೆ ನೀಡಲು ಅತ್ಯುತ್ತಮ ಉಡುಗೊರೆ ಇಲ್ಲಿದೆ ನೋಡಿ

ಪಿಸ್ತಾ ಕುಲ್ಫಿ ತಯಾರಿಸುವುದು ಹೇಗೆ:

ಕುಲ್ಫಿ ಮಾಡಲು ಮೊದಲು ಒಂದು ಪಾತ್ರೆಯಲ್ಲಿ ಒಂದು ಲೀಟರ್ ಹಾಲನ್ನು ಕುದಿಸಿ. ಹಾಲು ಪಾತ್ರೆಯಲ್ಲಿ ಅರ್ಧದಷ್ಟು ಕಡಿಮೆಯಾಗುವವರೆಗೆ ಅದನ್ನು ಕುದಿಸಿ. ಅದು ದಪ್ಪವಾದಾಗ ಅದರ ಬಣ್ಣವೂ ಬದಲಾಗಲು ಪ್ರಾರಂಭಿಸುತ್ತದೆ. ಹಾಲು ಗಟ್ಟಿಯಾದಾಗ ಅದಕ್ಕೆ ಸಕ್ಕರೆ ಮತ್ತು ಕೇಸರಿ ದಳಗಳನ್ನು ಸೇರಿಸಿ ಮತ್ತು 4 ರಿಂದ 5 ನಿಮಿಷಗಳ ಕಾಲ ಬೇಯಿಸಿ. ಹಾಲು ಚೆನ್ನಾಗಿ ಬೆಂದ ಬಳಿಕ ಆ ಹಾಲಿನ ಮಿಶ್ರಣಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ ಗ್ಯಾಸ್ ಆಫ್ ಮಾಡಿ. ಅದರೊಂದಿಗೆ ಕತ್ತರಿಸಿದ ಬಾದಮ್ ಮತ್ತು ಪಿಸ್ತಾವನ್ನು ಸೇರಿಸಿ. ಇದಾದ ನಂತರ ಹಾಲನ್ನು ತಣ್ಣಗಾಗಿಸಿ, ಬಳಿಕ ಅದನ್ನು ಕುಲ್ಫಿ ಅಚ್ಚಿನಲ್ಲಿ ಹಾಕಿ, ನಂತರ ಫ್ರಿಜ್ ನಲ್ಲಿ ಇರಿಸಿ. ಅದನ್ನು ಫ್ರಿಜ್ ನಲ್ಲಿ ರಾತ್ರಿಯಿಂದ ಬೆಳಗಿನವರೆಗೂ ಇರಿಸಬಹುದು ಅಥವಾ 4 ರಿಂದ 5 ಗಂಟೆಗಳ ಕಾಲ ಅದನ್ನು ಇರಿಸಬಹುದು. ಚೆನ್ನಾಗಿ ಸೆಟ್ ಆದ ಬಳಿಕ ಹೊರತೆಗೆದು ಸರ್ವ್ ಮಾಡಿ. ನಿಮಗೆ ಬೇಕಿದ್ದರೆ ಕುಲ್ಫಿ ಮೇಲೆ ಪಿಸ್ತಾ ಇಟ್ಟು ಅಲಂಕರಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ