Sign In

By signing in or creating an account, you agree with Associated Broadcasting Company's Terms & Conditions and Privacy Policy.

Marriage Preparation Tips: ಮದುವೆ ತಯಾರಿಯ ವೇಳೆ ಒತ್ತಡ ಅನುಭವಿಸಬೇಡಿ? ವಧು – ವರರು ಈ ಟಿಪ್ಸ್ ಪಾಲಿಸಿ

ಮದುವೆ ಎನ್ನುವ ಎರಡಕ್ಷರ ಎರಡು ಕುಟುಂಬಗಳ ನಡುವಿನ ಬೆಸುಗೆ, ಎರಡು ಮನಸ್ಸುಗಳ ಮಿಲನ. ಪ್ರತಿಯೊಂದು ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಎಲ್ಲಾ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹೆಣ್ಣಾದವಳು ಗಂಡನ ಮನೆಯ ಸಂಪ್ರದಾಯಗಳಿಗೆ ಒಗ್ಗಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೆಲವು ದಿನಗಳ ಮುಂಚೆಯೇ ಮಾನಸಿಕವಾಗಿ ತಯಾರಿ ನಡೆಸಬಹುದು. ಆದರೆ ಮದುವೆಯ ತಯಾರಿ ನಡೆಯುತ್ತಿದ್ದಂತೆ ವಧು ವರರು ಒತ್ತಡವನ್ನು ಅನುಭವಿಸುತ್ತಾರೆ. ಸಮಯ ಮಿತಿಯೊಂದಿಗೆ ನೀರಿಕ್ಷೆಗಳು ಕೂಡ ಕಾರಣವಾಗಿರುತ್ತದೆ. ಮದುವೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಈ ಕೆಲವು ಟಿಪ್ಸ್ ಗಳನ್ನು ಪಾಲಿಸಿ ಮದುವೆಯ ಸಿದ್ಧತೆಯನ್ನು ಮಾಡಿಕೊಳ್ಳಿ.

Marriage Preparation Tips: ಮದುವೆ ತಯಾರಿಯ ವೇಳೆ ಒತ್ತಡ ಅನುಭವಿಸಬೇಡಿ? ವಧು - ವರರು ಈ ಟಿಪ್ಸ್ ಪಾಲಿಸಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 06, 2024 | 5:49 PM

ಮದುವೆಯೆನ್ನುವುದು ಎಲ್ಲರ ಜೀವನದಲ್ಲಿ ಒಮ್ಮೆ ಘಟಿಸುವಂತಹ ಸುಂದರವಾದ ಅಧ್ಯಾಯ. ಹೀಗಾಗಿ ಪ್ರತಿಯೊಬ್ಬರು ತಮ್ಮ ಮದುವೆಯ ಕುರಿತು ನಾನಾ ಬಗೆಯ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಈ ಕಾರಣಕ್ಕಾಗಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್, ದುಬಾರಿ ಬೆಲೆಯ ಬಟ್ಟೆಗಳ ಆಯ್ಕೆ ಹೀಗೆ ಮದುವೆ ತಯಾರಿಯು ಜೋರಾಗಿಯೇ ನಡೆಯುತ್ತಿರುತ್ತದೆ. ಆದರೆ ಕೆಲವೊಮ್ಮೆ ವಧು ವರರು ತಮ್ಮ ಮದುವೆಯ ತಯಾರಿಯ ನಡುವೆ ಒತ್ತಡವನ್ನು ಅನುಭವಿಸುವುದಿದೆ. ಹೀಗಾಗಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡು ಒತ್ತಡವನ್ನು ತಪ್ಪಿಸುವುದು ತುಂಬಾನೇ ಸುಲಭ.

ವಿವಾಹ ಪೂರ್ವತಯಾರಿ ವೇಳೆ ಈ ಅಂಶಗಳು ನೆನಪಿನಲ್ಲಿರಲಿ:

  1. ಪರಿಣಾಮಕಾರಿ ಸಂವಹನವಿರಲಿ : ಮದುವೆಯಾಗುವ ಸಂಗಾತಿಯೊಂದಿಗೆ ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಬೆಳೆಸಿಕೊಳ್ಳಿ. ಮದುವೆಯ ಬಗ್ಗೆ ಯಾವ ರೀತಿ ಪ್ಲಾನ್ ಮಾಡಿಕೊಂಡಿದ್ದೀರಿ ಎನ್ನುವುದನ್ನು ಚರ್ಚಿಸಿ. ಈ ವೇಳೆಯಲ್ಲಿ ನಿರೀಕ್ಷೆಗಳು ಹಾಗೂ ಆದ್ಯತೆಗಳ ಬಗ್ಗೆ ಗಮನ ಕೊಡಿ.
  2. ಜವಾಬ್ದಾರಿಗಳ ಹಂಚಿಕೆಯಿರಲಿ : ವಧುವಾಗಲಿ ವರನಾಗಲಿ ಸಂಪೂರ್ಣ ಮದುವೆಗೆ ಸಂಬಂಧ ಪಟ್ಟ ಕೆಲಸಗಳನ್ನೆಲ್ಲಾ ಒಬ್ಬರೇ ತಮ್ಮೆಲ್ಲರಿಗೂ ಹೆಗಲ ಮೇಲೆ ಹಾಕಿಕೊಳ್ಳಬೇಡಿ. ಆತ್ಮೀಯ ಸ್ನೇಹಿತರು, ಕುಟುಂಬ ಸದಸ್ಯರಿಗೆ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಒತ್ತಡದಿಂದ ಮುಕ್ತರಾಗುವುದನ್ನು ಕಲಿಯಿರಿ.
  3. ಅಂದುಕೊಂಡಂತೆ ಆಗಬೇಕು ಎನ್ನುವ ನಿರೀಕ್ಷೆ ಬೇಡ : ಎಲ್ಲರೂ ಕೂಡ ತಮ್ಮ ಮದುವೆಯು ತಾವು ಅಂದುಕೊಂಡಂತೆ ನಡೆಯಲಿ ಎಂದುಕೊಳ್ಳುತ್ತಾರೆ. ಆದರೆ ಸನ್ನಿವೇಶಗಳು, ಎರಡು ಕುಟುಂಬಗಳ ನಡುವೆ ಮಾತುಕಥೆಗಳು ನಡೆದಾಗ ನಿರೀಕ್ಷೆಯಂತೆ ನಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಿ.
  4. ವಿರಾಮ ತೆಗೆದುಕೊಳ್ಳಿ : ವಿರಾಮವಿಲ್ಲದೇ ಕೆಲಸ ಮಾಡುವುದರಿಂದ ಮದುವೆಯ ದಿನ ನಿಮ್ಮ ಮುಖದಲ್ಲಿ ಆಯಾಸ ಸುಸ್ತು ಕಾಣಬಹುದು. ವಿವಾಹದ ಪೂರ್ವ ತಯಾರಿಯ ನಡುವೆಯೇ ವಿಶ್ರಾಂತಿಯು ಅಗತ್ಯವಾಗಿ ಬೇಕಾಗುತ್ತದೆ.
  5. ಬಜೆಟ್ ನಿರ್ವಹಣೆಯ ಬಗ್ಗೆ ಗಮನವಿರಲಿ : ಯಾವುದೇ ಸಮಾರಂಭದಲ್ಲಿ ಹಣದ ನಿರ್ವಹಣೆ ಬಹಳ ಮುಖ್ಯ. ಮದುವೆಯಂತಹ ಕಾರ್ಯಕ್ರಮಗಳಲ್ಲಿ ದೊಡ್ಡ ಮಟ್ಟದ ಬಜೆಟ್ ಆಗಿರುವ ಕಾರಣ ಆಯಾಯ ಕೆಲಸಕ್ಕೆ ಇಂತಿಷ್ಟು ಹಣವನ್ನು ಎತ್ತಿಟ್ಟು ಹಣಕಾಸಿನ ಒತ್ತಡವನ್ನು ನಿಭಾಯಿಸಿಕೊಳ್ಳಿ. ಈ ರೀತಿ ಯೋಜನೆ ರೂಪಿಸಿಕೊಳ್ಳುವುದರಿಂದ ಅತಿಯಾಗಿ ಖರ್ಚು ಆಗದಂತೆ ತಡೆಯಬಹುದಾಗಿದೆ.
  6. ಸ್ವ-ಆರೈಕೆಯತ್ತ ಗಮನ ನೀಡಿ : ಮದುವೆಯ ತಯಾರಿಯ ನಡುವೆ ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಗಮನ ಕೊಡಿ. ನಿಯಮಿತ ವ್ಯಾಯಾಮವನ್ನು ಅಳವಡಿಸಿಕೊಳ್ಳಿ, ಸಾಕಷ್ಟು ನಿದ್ರೆ ಹಾಗೂ ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯು ಒತ್ತಡವನ್ನು ಪರಿಣಾಮಕಾರಿ ನಿರ್ವಹಿಸುವಂತೆ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ