ವಯಾಗ್ರ ಮಾತ್ರೆ ಸೇವಿಸುತ್ತಿದ್ದರೆ ಮರೆವಿನ ಕಾಯಿಲೆಯ ಅಪಾಯದ ಮಟ್ಟ ತೀರಾ ಕಡಿಮೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 09, 2024 | 10:30 AM

alzheimers disease: ಮರೆವಿನ ಕಾಯಿಲೆಯು ಎಲ್ಲರಿಗೂ ಕೂಡ ಇದೆ. ಅಪರೂಪಕ್ಕೊಮ್ಮೆ ಇಟ್ಟ ವಸ್ತುಗಳನ್ನು ಇಟ್ಟ ಜಾಗದಲ್ಲಿ ಬಿಟ್ಟು ಇನ್ನೇಲ್ಲಿಯೋ ಹುಡುಕುತ್ತಿರುತ್ತೇವೆ. ಅತಿಯಾದ ಒತ್ತಡದಲ್ಲಿದ್ದರೆ ಯಾವುದೋ ಯೋಚನೆಯಲ್ಲಿ ಏನನ್ನೊ ಮಾಡುತ್ತಿರುತ್ತೇವೆ. ಕೆಲವೊಮ್ಮೆ ಹೇಳಬೇಕಾಗಿರುವ ವಿಷಯಗಳು ಮರೆತು ಹೋಗುತ್ತವೆ, ಎಷ್ಟು ಯೋಚಿಸಿದರೂ ನೆನಪಿಗೆ ಬರುವುದೇ ಇಲ್ಲ. ಈ ಅನುಭವವು ಒಂದಲ್ಲ ಒಂದು ಬಾರಿ ಎಲ್ಲರಿಗೂ ಕೂಡ ಆಗಿರುತ್ತದೆ. ವಯಸ್ಸಾದ ನಂತರ ಹಿರಿಯರು ಸಹಜವಾಗಿ ಅನೇಕ ವಿಚಾರಗಳನ್ನು ಮರೆತು ಬಿಡುತ್ತಾರೆ. ಈ ಮರೆವಿನ ಸಮಸ್ಯೆಯು ಅತಿಯಾದರೆ ಆಲ್ಝೈಮರ್ ಕಾಯಿಲೆಗೆ ಆಹ್ವಾನ ಕೊಟ್ಟಂತೆ. ಆದರೆ ಪುರುಷರು ಐದು ವರ್ಷಗಳಿಂದ ವಯಾಗ್ರ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಈ ಕಾಯಿಲೆ ಅಪಾಯದ ಮಟ್ಟವು ತೀರಾ ಕಡಿಮೆ ಎನ್ನುವುದು ಬಹಿರಂಗವಾಗಿದೆ.

ವಯಾಗ್ರ ಮಾತ್ರೆ ಸೇವಿಸುತ್ತಿದ್ದರೆ ಮರೆವಿನ ಕಾಯಿಲೆಯ ಅಪಾಯದ ಮಟ್ಟ ತೀರಾ ಕಡಿಮೆ
ಸಾಂದರ್ಭಿಕ ಚಿತ್ರ
Follow us on

ಅತಿಯಾದ ಒತ್ತಡವಿದ್ದಾಗ ಎಲ್ಲರೂ ಕೂಡ ಮರೆಯುವುದು ಸಹಜ. ಈ ಮರೆವಿನ ಸಮಸ್ಯೆಯು ವಿಪರಿತವಾದರೆ ಅದನ್ನು ಆಲ್ಝೈಮರ್ ಕಾಯಿಲೆ ಎನ್ನಲಾಗುತ್ತದೆ. ಈ ಕಾಯಿಲೆಯು 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆಲ್ಝೈಮರ್ ಕಾಯಿಲೆಯಲ್ಲಿ ನೆನಪಿನ ಶಕ್ತಿಯು ಕಡಿಮೆಯಾಗುತ್ತದೆ. ದಿನ ಕಳೆದಂತೆ ವ್ಯಕ್ತಿಯು ತನ್ನ ಸ್ಮರಣೆಯನ್ನು ಕಳೆದುಕೊಳ್ಳುತ್ತಾನೆ. ವ್ಯಕ್ತಿಯ ನಿತ್ಯದ ಚಟುವಟಿಕೆಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಪ್ರಾರಂಭದಲ್ಲಿ ಮರೆವಿನ ಲಕ್ಷಣಗಳು ಕಾಣಿಸಿಕೊಂಡರೂ ನಿರ್ಲಕ್ಷ್ಯ ಮಾಡಿದರೆ ಇದರ ಸ್ವರೂಪದಲ್ಲಿ ಬದಲಾಗುತ್ತದೆ. ಆದರೆ ಈ ಆಲ್ಝೈಮರ್ ಕಾಯಿಲೆಗೆ ಯಾವುದೇ ಚಿಕಿತ್ಸೆಯಿಲ್ಲ.

ಪುರುಷರಲ್ಲಿ ಈ ಕಾಯಿಲೆಯ ಅಪಾಯ ಮಟ್ಟವು ಕಡಿಮೆ

ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ವಯಾಗ್ರ ಮಾತ್ರೆಗಳನ್ನ ತೆಗೆದುಕೊಳ್ಳುತ್ತಾರೆ. ಈ ವಯಾಗ್ರ ಮಾತ್ರೆಗಳು ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಜನನಾಂಗದಲ್ಲಿ ಒತ್ತಡವನ್ನು ಹೆಚ್ಚಿಸಿ ಸಮಸ್ಯೆಯನ್ನು ದೂರ ಮಾಡುತ್ತವೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ತೆಗೆದುಕೊಳ್ಳುವ ಮಾತ್ರೆಯಿಂದಾಗಿ ಪುರುಷರಲ್ಲಿ ಆಲ್ಝೈಮರ್ ಕಾಯಿಲೆಯು ಬರುವ ಸಾಧ್ಯತೆಯೂ ಕಡಿಮೆ ಎನ್ನುವುದು ಬಹಿರಂಗವಾಗಿದೆ. ಈ ನೀಲಿ ಮಾತ್ರೆ ಸೇವಿಸುವ ಪುರುಷರಲ್ಲಿ ಕಾಯಿಲೆಯಿಂದ ಬಳಲುತ್ತಿದ್ದರೂ ನಡವಳಿಕೆಯಲ್ಲಿನ ಬದಲಾವಣೆಗಳು ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಸಂಶೋಧಕರು ನೀಲಿ ಮಾತ್ರೆ ಸೇವನೆಯು ಪುರುಷತ್ವಕ್ಕೆ ಉತ್ತೇಜನಕಾರಿಯಾಗಿದೆ ಎಂದಿದ್ದಾರೆ. ಹೀಗಾಗಿ ಸಂಶೋಧನೆಯ ವೇಳೆಯಲ್ಲಿ 269,725 ಪುರುಷರಿಂದ ವೈದ್ಯಕೀಯ ದಾಖಲೆಗಳನ್ನು ಪಡೆಯಲಾಗಿದೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಆಲ್ಝೈಮರ್ ಕಾಯಿಲೆಯ ಅಪಾಯವು ಸರಾಸರಿ 18 ಪ್ರತಿಶತದಷ್ಟು ಕಡಿಮೆಯಿದೆ ಎಂದು ಬಹಿರಂಗವಾಗಿದೆ.

ಇದನ್ನೂ ಓದಿ: ನೀವು ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದೀರಾ, ಮನೆಯಲ್ಲೇ ಪರಿಹಾರ ಕಂಡುಕೊಳ್ಳಿ

ಈ ರೋಗಬಾರದಂತೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು

ಆಲ್ಝೈಮರ್ ಕಾಯಿಲೆಯು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿರುವ ಕಾರಣ ಮೆದುಳಿನ ಅಸ್ವಸ್ಥತೆ ತಡೆಗಟ್ಟಲು ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಉತ್ತಮ. ಉತ್ತಮ ಆರೋಗ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಈ ಸಮಸ್ಯೆಯನ್ನು ದೂರವಿಡುವಂತೆ ಮಾಡುತ್ತದೆ. ದ್ವಿದಳ ಧಾನ್ಯಗಳಂತಹ ಪ್ರೋಟೀನ್ ಭರಿತ ಆಹಾರ, ಸೊಪ್ಪು ತರಕಾರಿ, ಹಣ್ಣು ಹಂಪಲುಗಳು, ಮೀನು ಸೇರಿದಂತೆ ಆಹಾರವನ್ನು ಸೇವನೆ ಮಾಡುವುದರಿಂದ ಇದರ ಅಪಾಯದ ಮಟ್ಟವನ್ನು ಕಡಿಮೆ ಮಾಡಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:23 am, Fri, 9 February 24